ಲವ್ ಜಹಾದ್ ಆರೋಪವನ್ನು ಆಗಾಗಾ ಕೇಳ್ತಿರುತ್ತೇವೆ. ಈಗ ಮತ್ತೊಂದು ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ ಮಹತ್ವದ ತೀರ್ಪು ನೀಡಿದೆ.ಎಲ್ಲವೂ ಲವ್ ಜಿಹಾದ್ ಆಗಲು ಸಾಧ್ಯವಿಲ್ಲ ಎಂದಿದೆ.
ಲವ್ ಜಿಹಾದ್ ವಿಷ್ಯಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹುಡುಗ ಹಾಗೂ ಹುಡುಗಿ ವಿಭಿನ್ನ ಧರ್ಮಕ್ಕೆ ಸೇರಿದ್ದಾರೆ ಎನ್ನುವ ಕಾರಣಕ್ಕೆ ಆ ಸಂಬಂಧವನ್ನು ಲವ್ ಜಿಹಾದ್ ಎಂದು ಕರೆಯಲು ಸಾಧ್ಯವಿಲ್ಲವೆಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಹೇಳಿದೆ. ಈ ಮೂಲಕ ಮುಸ್ಲಿಂ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಬಂಧನ ಪೂರ್ವ ಜಾಮೀನನ್ನು ಕೋರ್ಟ್ ಮಂಜೂರಿ ಮಾಡಿದೆ.
ನ್ಯಾಯಮೂರ್ತಿ (Justice) ಗಳಾದ ವಿಭಾ ಕಂಕಣವಾಡಿ ಮತ್ತು ಅಭಯ್ ವಾಘವಾಸೆ ಅವರ ವಿಭಾಗೀಯ ಪೀಠ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದಕ್ಕಿಂತ ಮೊದಲು ಔರಂಗಾಬಾದ್‌ನ ಸ್ಥಳೀಯ ನ್ಯಾಯಾಲಯ (Court) ಜಾಮೀನು ನೀಡಲು ನಿರಾಕರಿಸಿತ್ತು.
undefined
ಏನಿದು ಪ್ರಕರಣ : ಮುಸ್ಲಿಂ (Muslim) ಮಹಿಳೆ ಹಾಗೂ ಆಕೆ ಕುಟುಂಬ ತನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಾಗೂ ಸುನ್ನತ್ ಗೆ ಒಳಗಾಗುವಂತೆ ಒತ್ತಾಯ ಮಾಡಿತ್ತು ಎಂದು ಮಹಿಳೆ ಮಾಜಿ ಗೆಳೆಯ ಆರೋಪ ಮಾಡಿದ್ದ. ಮಹಿಳೆ ಹಾಗೂ ಕುಟುಂಬಕ್ಕೆ ನಿರೀಕ್ಷಣಾ ಜಾಮೀನು ನೀಡ್ಬಾರದು ಎಂದು ವ್ಯಕ್ತಿ ವಕೀಲರ ಮೂಲಕ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಲ್ಲದೆ ಇದು ಲವ್ ಜಿಹಾದ್ (Love Jihad) ಎಂದು ಆರೋಪ ಮಾಡಿದ್ದ.
VIRAL VIDEO: ಫೋಟೊ ಕ್ಲಿಕ್ಕಿಸಿ ವೈರಲ್ಲಾದ ಹಿರಿಯ ದಂಪತಿ
ಲವ್ ಜಿಹಾದ್ ಎನ್ನುವ ಪದವನ್ನು, ಹಿಂದೂ (Hindu) ಬಲಪಂಥೀಯ ಸಂಘಟನೆ ಬಳಸುತ್ತದೆ. ಹಿಂದೂ ಮಹಿಳೆಯರಿಗೆ ಆಮಿಷವೊಡ್ಡಿ, ಬಲವಂತವಾಗಿ ಮದುವೆ ಮಾಡಿಕೊಳ್ಳುವ ಜೊತೆಗೆ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂಬ ಆರೋಪ ಮಾಡುವಾಗ ಸಂಘಟನೆ ಲವ್ ಜಿಹಾದ್ ಶಬ್ಧ ಬಳಕೆ ಮಾಡುತ್ತದೆ. ಇಲ್ಲಿ ಆರೋಪ ಮಾಡ್ತಿರುವುದು ಪುರುಷ (Male). ಹಾಗೆಯೇ ಆತ ಮಹಿಳೆ ಜೊತೆ ಸಂಬಂಧ ಹೊಂದಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಹಾಗೆಯೇ ಅವಕಾಶವಿದ್ರೂ ನಾನು ಸಂಬಂಧದಿಂದ ಹೊರಗೆ ಬರಲಿಲ್ಲವೆಂದು ಹೇಳಿದ್ದಾನೆ.
ಕೇವಲ ಹುಡುಗ ಮತ್ತು ಹುಡುಗಿ ವಿಭಿನ್ನ ಧರ್ಮ (Religion) ಗಳಿಗೆ ಸೇರಿದವರಾಗಿರುವುದರಿಂದ, ಅದು ಯಾವುದೇ ಧಾರ್ಮಿಕ ಕೋನವನ್ನು ಹೊಂದಿರುವುದಿಲ್ಲ. ಇದು ಪರಸ್ಪರ ಶುದ್ಧ ಪ್ರೀತಿಯ ವಿಷಯವಾಗಿರಬಹುದು" ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಈಗ ಇದಕ್ಕೆ ಲವ್ ಜಿಹಾದ್ ಬಣ್ಣ ನೀಡಲಾಗುತ್ತದೆ. ಇಬ್ಬರ ಮಧ್ಯೆ ಪ್ರೀತಿಯಿದ್ದ ಸಂದರ್ಭದಲ್ಲಿ ಮತಾಂತರಗೊಳ್ಳಿಸುವ ಪ್ರಯತ್ನ ನಡೆಯುವ ಸಾಧ್ಯತೆ ಕಡಿಮೆ ಎಂದು ಕೋರ್ಟ್ ಹೇಳಿದೆ.
ವಕೀಲರ ಪ್ರಕಾರ, ಮಹಿಳೆ ಹಾಗೂ ಪುರುಷ 2018ರಿಂದ ಸಂಬಂಧದಲ್ಲಿದ್ದಾರೆ. ಪುರುಷ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಆತ ಈ ವಿಷ್ಯವನ್ನು ಮಹಿಳೆಗೆ ಹೇಳಿರಲಿಲ್ಲ. ಜಾತಿ ಗೊತ್ತಾದ್ಮೇಲೆ ಮಹಿಳೆ, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪುರುಷನಿಗೆ ಒತ್ತಾಯ ಮಾಡಿದ್ದಾಳೆ. ಧರ್ಮಕ್ಕೆ ಮತಾಂತರಗೊಂಡ ಮೇಲೆ ನನ್ನನ್ನು ಮದುವೆಯಾಗು ಎಂದಿದ್ದಾಳೆ. ಮಹಿಳೆ ಪಾಲಕರಿಗೆ ವ್ಯಕ್ತಿ ತನ್ನ ಜಾತಿ ಬಗ್ಗೆ ಹೇಳಿದ್ದನಂತೆ. ಅದಕ್ಕೆ ಮಹಿಳೆ ತಂದೆ – ತಾಯಿ ಒಪ್ಪಿಕೊಂಡಿದ್ದರಂತೆ. ಮಗಳನ್ನು ಮನವೊಲಿಸಿದ್ದರಂತೆ.
ಆದ್ರೆ ನಂತ್ರದ ದಿನಗಳಲ್ಲಿ ಸಂಬಂಧ ಹಳಸಿತು. 2022ರಲ್ಲಿ ಮಹಿಳೆ ಹಾಗೂ ಆಕೆ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದ. ಪ್ರಕರಣ ಔರಂಗಾಬಾದ್ ನ ಸ್ಥಳೀಯ ಕೋರ್ಟ್ ಗೆ ಬಂದಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್, ನಿರೀಕ್ಷಣಾ ಜಾಮೀನು ನೀಡಲು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹಾಗೂ ಆಕೆ ಕುಟುಂಬಸ್ಥರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ವಿಶ್ವಾಸವೇ ಇಲ್ಲದಿದ್ದಲ್ಲಿ ಮನುಷ್ಯ ಏನೂ ಸಾಧಿಸಲಾರ, ಅದೂ ಸೆಕ್ಸ್ ಲೈಫ್‌ಗಾದರೂ ಸರಿ!
ವಿಚಾರಣೆ ಕೈಗೆತ್ತಿಕೊಂಡ ಪೀಠ, ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ನಿರೀಕ್ಷಣಾ ಜಾಮೀನು ನೀಡಿದೆ. ಪ್ರಕರಣದ ತನಿಖೆ ಬಹುತೇಕ ಮುಗಿದಿದೆ. ಆದ್ದರಿಂದ ಮಹಿಳೆ ಹಾಗೂ ಕುಟುಂಬ್ಥರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.