Kissing History : ಎಲ್ಲಿಂದ ಶುರುವಾಯ್ತು ಗೊತ್ತಾ ಈ ಮುತ್ತಿನ ಮತ್ತು

By Suvarna NewsFirst Published Dec 27, 2022, 4:24 PM IST
Highlights

ಕಿಸ್ ಎಂದ ತಕ್ಷಣ ನಾವು ಪ್ರೀತಿಯ ಗುಂಗಿಗೆ ಹೋಗ್ತೇವೆ. ಈ ಮುತ್ತಿನ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. ಮುತ್ತು ಆರೋಗ್ಯಕ್ಕೆ ಒಳ್ಳೆಯದು ಎನ್ನುವವರಿದ್ದಾರೆ. ಈ ಮುತ್ತಿನ ಇತಿಹಾಸ ಬಹಳ ವಿಶೇಷವಾಗಿದೆ.  
 

ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನ ಮುತ್ತು. ಜನರು ತಮ್ಮ ಪ್ರೀತಿಯನ್ನು ಮುತ್ತಿಡುವ ಮೂಲಕ ತೋರ್ಪಡಿಸುತ್ತಾರೆ.  ಸಂಗಾತಿಗಳು ತುಟಿಗೆ ಮುತ್ತಿಟ್ಟರೆ, ಆಪ್ತರು ಹಣೆಗೆ ಕಿಸ್ ಕೊಡ್ತಾರೆ. ನಮಗೆಲ್ಲ ಮುತ್ತು ಕೊಟ್ಟು ಅಥವಾ ತೆಗೆದುಕೊಂಡು ಗೊತ್ತು. ಆದ್ರೆ ಈ ಚುಂಬನ ಹುಟ್ಟಿದ್ದು ಎಲ್ಲಿ ಎಂಬುದು ನಿಮಗೆ ಗೊತ್ತಾ?.

ಚುಂಬನ (Kiss)ದ ಆರಂಭ ಸಾಮಾನ್ಯವಾಗಿ ಪ್ರಣಯ (Romance) ಅಥವಾ ಪ್ರೀತಿ (Love) ಯೊಂದಿಗೆ ಸಂಬಂಧಿಸಿದೆ. ಇದು ತುಂಬಾ ಆಸಕ್ತಿದಾಯಕವಾಗಿದೆ. ಈಗ ಸಾರ್ವಜನಿಕ ಪ್ರದೇಶದಲ್ಲೂ ಜನರು ಮುತ್ತಿಡುವುದು ಸಾಮಾನ್ಯವಾಗಿದೆ. ಆದ್ರೆ ಒಂದು ಸಮಯದಲ್ಲಿ ಚುಂಬನವನ್ನು ಕೆಲ ಸರ್ಕಾರಗಳು ಬ್ಯಾನ್ ಮಾಡಿದ್ವು ಎಂಬುದು ಅಚ್ಚರಿ ಮೂಡಿಸುತ್ತದೆ. ಚುಂಬನ ಹೇಗೆ ಶುರುವಾಯ್ತು ಎನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಮನೋವಿಜ್ಞಾನಿಗಳು ವಿಭಿನ್ನ ಸಿದ್ಧಾಂತವನ್ನು ಮಂಡಿಸುತ್ತಾರೆ. ಮುತ್ತು ಶುರುವಾಗಿದ್ದು ಆಕಸ್ಮಿಕವಾಗಿ ಎಂದು ಬಹುತೇಕ ಎಲ್ಲರೂ ಹೇಳುತ್ತಾರೆ. ಆಕಸ್ಮಿಕವಾಗಿ ಕೊಟ್ಟ ಮುತ್ತು ನಂತ್ರ ಎಲ್ಲರಿಗೂ ಇಷ್ಟವಾಗಿದ್ದಿರಬೇಕೆಂದು ಹೇಳಲಾಗುತ್ತದೆ. 

Latest Videos

ಮನುಷ್ಯರ ಆಯಸ್ಸು ತಿನ್ನುತ್ತಿದೆ ಒಂಟಿತನ!

ತಾಯಿ – ಮಗುವಿನಿಂದ ಆರಂಭ : ಮನೋವಿಜ್ಞಾನಿಗಳ ಪ್ರಕಾರ, ಮುತ್ತು ತಾಯಿ ಹಾಗೂ ಮಗುವಿನಿಂದ ಶುರುವಾಗಿರಬಹುದೆಂದು ಅಂದಾಜಿಸುತ್ತಾರೆ. ಪ್ರಾಣಿಗಳು ತಮ್ಮ ಮಕ್ಕಳಿಗೆ ಆಹಾರವನ್ನು ನೇರವಾಗಿ ಬಾಯಿಗೆ ಹಾಕ್ತಿರಲಿಲ್ಲ. ತಾಯಿ ಬಾಯಿಯಿಂದ ಮಗುವಿನ ಬಾಯಿಗೆ ಆಹಾರ ನೀಡಲಾಗ್ತಾಯಿತ್ತು. ಇದನ್ನು ಆಹಾರ ವರ್ಗಾವಣೆ ಎಂದು ಕರೆಯಲಾಗ್ತಿತ್ತು. ತಾಯಿ ಚಿಂಪಾಂಜಿ ತನ್ನ ಮಕ್ಕಳನ್ನು ಮುದ್ದಿಸುತ್ತಾ ಚುಂಬಿಸುತ್ತದೆ. ಹಾಗಾಗಿ ನಾವು ನಮ್ಮ ಪೂರ್ವಜರಿಂದ ಚುಂಬನದ ವ್ಯವಹಾರವನ್ನು ಕಲಿತಿರುವ ಸಾಧ್ಯತೆಯಿದೆ.

ಎರಡನೇ ಸಿದ್ಧಾಂತ : ಮತ್ತೊಂದು ಸಿದ್ಧಾಂತದ ಪ್ರಕಾರ ಮೊದಲ ಮುತ್ತು ಆಕಸ್ಮಿಕವಾಗಿ ನಡೆದಿದೆ ಎನ್ನಲಾಗುತ್ತದೆ. ಟೆಕ್ಸಾಸ್ ಎ & ಎಂ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗವು ಈ ಬಗ್ಗೆ ಒಂದು  ಅಧ್ಯಯನ ನಡೆಸಿದೆ. ವಾಸನೆ ಮೂಸುವಾಗ ಇದ್ದಕ್ಕಿದ್ದಂತೆ ಒಬ್ಬರಿಗೊಬ್ಬರು ಚುಂಬಿಸಿರಬೇಕು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದು ಸತ್ಯವಾಗಿರಬಹುದು. ಯಾಕೆಂದ್ರೆ ಹಿಂದಿನ ಕಾಲದಲ್ಲಿ ಜನರಿಗೆ ಪರಸ್ಪರ ಮೂಸುವ ಅಭ್ಯಾಸವಿತ್ತು. ಕೆಲ ಕಾರ್ಯಕ್ರಮದಲ್ಲಿ ಪರಸ್ಪರ ವಾಸನೆ ತೆಗೆದುಕೊಳ್ತಿದ್ದರು. ಪರಸ್ಪರ ಸ್ಮೆಲ್ ತೆಗೆದುಕೊಳ್ಳುವ ವೇಳೆ ಚುಂಬನವಾಗಿರಬಹುದು. ಇದು ಅವರಿಗೆ ಇಷ್ಟವಾಗಿದೆ. ನಂತ್ರ ಮುತ್ತಿನ ಪ್ರವೃತ್ತಿ ಶುರುವಾಗಿದೆ. 

Parenting Tips : ಮಕ್ಕಳಿಗೆ ಖುಷಿಯಾಗ್ಬೇಕೆಂದ್ರೆ ಹೀಗೆ ಮಾಡಿ ಬರ್ತ್ ಡೇ ಪಾರ್ಟಿ

ಭಾರತದಲ್ಲೇ ಶುರುವಾಯ್ತು ಚುಂಬನ ? : ಹೌದು, ಭಾರತದಲ್ಲಿಯೇ ಚುಂಬನ ಪ್ರವೃತ್ತಿ ಶುರುವಾಯ್ತು ಎಂದೂ ಅಧ್ಯಯನದಲ್ಲಿ ಹೇಳಲಾಗಿದೆ. ಭಾರತಕ್ಕೆ ಬಂದ ಪ್ರಾಚೀನ್ ಗ್ರೀಕ್ ಜನರು ತಮ್ಮ ತವರಿಗೆ ವಾಪಸ್ ಆಗುವ ವೇಳೆ ಈ ಚುಂಬನವನ್ನೂ ಕೊಂಡೊಯ್ದಿದ್ದಾರೆ. ಮಧ್ಯಕಾಲೀನ ಯುರೋಪ್‌ನಲ್ಲಿ ಇದನ್ನು ಶುಭಾಶಯದ ರೀತಿಯಲ್ಲಿ ನೋಡಲಾಗಿದೆ. ಬಡವರು, ಅಧಿಕಾರಿಗಳಿಗೆ ನೀಡ್ತಿದ್ದರು. ಒಂದು ಹುದ್ದೆಯಲ್ಲಿರುವ, ಒಂದೇ ಅಂತಸ್ತಿನ ಜನರು ಹಣೆ ಮೇಲೆ ಹಾಗೂ ತುಟಿಗಳ ಮೇಲೆ  ಮುತ್ತಿಟ್ಟುಕೊಳ್ಳುತ್ತಿದ್ದರಂತೆ. ಸಭೆಯಲ್ಲಿ ಕೆಳ ಸ್ತರದಲ್ಲಿರುವ ವ್ಯಕ್ತಿ, ಮೇಲ್ವಟ್ಟದ ವ್ಯಕ್ತಿಗೆ ಚುಂಬಿಸಬೇಕಾಗಿತ್ತು. ಅದೂ ಬರೀ ಕೈ, ಕಾಲು ಅಥವಾ ಬಟ್ಟೆಗೆ ಚುಂಬಿಸುವ ಅಧಿಕಾರ ಆತನಿಗಿತ್ತು. ದಿನಕಳೆದಂತೆ ಮುತ್ತಿಗೆ ಆಳ ಅರ್ಥ ಬರ್ತಾ ಹೋಯ್ತು. ದೇಹದ ಬೇರೆ ಬೇರೆ ಅಂಗಕ್ಕೆ ಮುತ್ತು ಕೊಡುವ ಕಾರಣ ಬೇರೆಬೇರೆಯಾಗ್ತಾ ಹೋಯ್ತು. ತುಟಿಯ ಮೇಲೆ ಮುತ್ತಿಡುವುದನ್ನು ಪ್ರೀತಿಯೆಂದು ಗುರುತಿಸಲಾಯ್ತು. 

ಅದೇನೇ ಇರಲಿ, ಮುತ್ತಿನ ಬಗ್ಗೆ ಮೊದಲು ಉಲ್ಲೇಖಿಸಿದ್ದು ಫ್ರಾನ್ಸ್. ಸುಮಾರು ಒಂದು ದಶಕದ ಹಿಂದೆ ಈ ದೇಶವು ತನ್ನ ನಿಘಂಟಿನಲ್ಲಿ ಕಿಸ್ ಅನ್ನು ಸೇರಿಸಿದಾಗ ಅದಕ್ಕೆ ಗಲೋಶ್ ಎಂದು ಹೆಸರಿಟ್ಟಿತ್ತು. ಇಲ್ಲದೆ, ಮೊದಲ ಮಹಾಯುದ್ಧದ ವೇಳೆ ಫ್ರಾನ್ಸ್ ನಲ್ಲಿ ಕಾಲ ಕಳೆದಿದ್ದ ಅಮೆರಿಕದ ಸೈನಿಕರು ತಮ್ಮ ರಹಸ್ಯವನ್ನು ತಿಳಿದುಕೊಂಡು ಎಲ್ಲಿ ಇಲ್ಲಿ ಹರಡಿದ್ರು ಎಂಬ ಆರೋಪವನ್ನೂ ಮಾಡಿದೆ. 

ಕೆಲ ದೇಶಗಳು ಮುತ್ತನ್ನು ನಿಷೇಧಿಸಿದ್ದವು. ರೋಮನ್ ಚಕ್ರವರ್ತಿ ಟಿಬೇರಿಯಸ್, ಲಿಪ್ ಕಿಸ್ ಲೈಂಗಿಕ ರೋಗವನ್ನು ಹೆಚ್ಚಿಸುತ್ತದೆ ಎಂದು ಅದನ್ನು ನಿಷೇಧಿಸಿದ್ದ. 17 ನೇ ಶತಮಾನದಲ್ಲಿ ಪ್ರಪಂಚದ ಹೆಚ್ಚಿನ ಭಾಗದಲ್ಲಿ ಪ್ಲೇಗ್‌ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಕೂಡ ಮುತ್ತನ್ನು ನಿಷೇಧಿಸಲಾಗಿತ್ತು. ಬಹುತೇಕರು ತುಟಿಯ ಚುಂಬನವನ್ನು ರೋಮ್ಯಾನ್ಸ್ ಎನ್ನುತ್ತಾರೆ. ಆದ್ರೆ ವಿಶ್ವದ ಎಲ್ಲ ದೇಶಗಳು ಇದನ್ನು ಒಪ್ಪುವುದಿಲ್ಲ. ವಿಶ್ವದ ಕೇವಲ 46ರಷ್ಟು ಜನರು ಮಾತ್ರ ಇದನ್ನು ರೋಮ್ಯಾನ್ಸ್ ಜೊತೆ ಜೋಡಿಸ್ತಾರೆ. ಹಾಗೆ ವಿಶ್ವದ ಕೆಲ ದೇಶಗಳಲ್ಲಿ ಈಗ್ಲೂ ಮುತ್ತನ್ನು ಕೆಟ್ಟದ್ದೆಂದು ಭಾವಿಸ್ತಾರೆ.   
 

click me!