
ಭಾರತದಲ್ಲಿ ವಿಚ್ಛೇದನ ಪ್ರಕರಣ (india divorce case)ಹೆಚ್ಚಾಗ್ತಿದೆ. ಅತೀ ಸಣ್ಣ ವಿಷ್ಯಕ್ಕೆ ದಂಪತಿ ಬೇರೆಯಾಗ್ತಿದ್ದಾರೆ. ಒಂದು ಕಡೆ ಅವರನ್ನು ಒಂದು ಮಾಡುವ ಕೆಲಸ ನಡೆಯುತ್ತಿದೆ. ಕೆಲ ಜಡ್ಜ್, ದಂಪತಿಯನ್ನು ತಜ್ಞರ ಬಳಿ ಕಳುಹಿಸಿ ಇಬ್ಬರನ್ನು ಒಂದು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (Chief Justice D.Y Chandrachud) ಸಲಹೆಯೊಂದು ಎಲ್ಲರ ಗಮನ ಸೆಳೆದಿದೆ. ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುವಂತೆ ದಂಪತಿಗೆ ಸಲಹೆ ನೀಡಿದ್ದಾರೆ. ಸುದೀರ್ಘ ಕಾನೂನು ಹೋರಾಟ (legal battle ) ದಿಂದ ವಕೀಲರಿಗೆ ಮಾತ್ರ ಲಾಭವೆಂದು ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ.
ವೈವಾಹಿಕ ವಿವಾದ ಪ್ರಕರಣವನ್ನು ವರ್ಗಾಯಿಸಲು ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುವಂತೆ ದಂಪತಿಗೆ ಹೇಳಿದ್ದಾರೆ. ಸುದೀರ್ಘ ಕಾನೂನು ಹೋರಾಟವು ವಕೀಲರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದವರು ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಮಹಿಳೆಯ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನೆ ಮಾಡಿದರು. ಈ ವೇಳೆ ಮಹಿಳೆ ತಾನು, ಎಂಟೆಕ್ ಪದವಿ ಪಡೆದಿರುವುದಾಗಿ ತಿಳಿಸಿದರು. ಅಮೆರಿಕದ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದೇನೆ ಎಂದು ಮಹಿಳೆ ಹೇಳಿದಾಗ, ಮುಖ್ಯ ನ್ಯಾಯಮೂರ್ತಿಗಳು, ಎಲ್ಲಿ ಕೆಲಸ ಮಾಡುತ್ತಿದ್ದೀರಿ ಎಂಬ ಪ್ರಶ್ನೆ ಕೇಳಿದ್ದಾರೆ. ಸದ್ಯ ನಾನು ಎಲ್ಲಿಯೂ ಕೆಲಸ ಮಾಡ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಇಷ್ಟು ವಿದ್ಯಾಭ್ಯಾಸ ಮಾಡಿ ಕೆಲಸವಿಲ್ಲ ಅಂದ್ರೆ ಹೇಗೆ, ನೀವು ಕೆಲಸ ಹುಡುಕಿಕೊಳ್ಳಿ ಎಂದಿದ್ದಾರೆ.
ವಿದೇಶದಲ್ಲಿ ಕೆಲಸ ಮಾಡ್ತಿದ್ದ ಇಂಜಿನಿಯರ್ ಬದುಕು ಬೀದಿಗೆ ಬಂತು.. ಕಾರಣವಾಗಿದ್ದು ಪತ್ನಿ.!
ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ತೆಗೆದುಕೊಳ್ಳಿ ಎಂದು ಇದೇ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ. ನೀವು ನಿಮ್ಮ ಜೀವನದ 10 ವರ್ಷಗಳನ್ನು ವಿಚ್ಛೇದನ ಪ್ರಕರಣದಲ್ಲಿ ಕಳೆಯುತ್ತೀರಿ. ಈ ಪ್ರಕರಣ ಇನ್ನೂ 10 ವರ್ಷಗಳವರೆಗೆ ನಡೆಯಬಹುದು. ಇದರಿಂದ ವಕೀಲರಿಗೆ ಮಾತ್ರ ಲಾಭವಾಗುತ್ತದೆ. ನೀವು ಏಕೆ ಈ ನಿರ್ಧಾರ ತೆಗೆದುಕೊಳ್ಳಬಾರದು? ನೀವಿಬ್ಬರೂ ಪರಸ್ಪರ ಒಪ್ಪಿಗೆ ವಿಚ್ಛೇದನವನ್ನು ಅರ್ಥಮಾಡಿಕೊಂಡಿಲ್ಲವೇ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಲ್ಲದೆ, ನೀವು ಬೇರೆ ರೀತಿಯಲ್ಲಿ ವಿಚ್ಛೇದನ ಪಡೆಯಲು ಮುಂದಾದ್ರೆ ಕ್ರಿಮಿನಲ್ ದೂರು ಇತ್ಯಾದಿ ಇರುತ್ತದೆ. ಇದರಿಂದ ಪ್ರಕರಣ ಮತ್ತಷ್ಟು ವರ್ಷ ಮುಂದೆ ಹೋಗುತ್ತದೆ. ನೀವು ಪರಸ್ಪರ ಒಪ್ಪಿಗೆ ವಿಚ್ಛೇದನಕ್ಕೆ ಒಪ್ಪಿದರೆ, ನಾವು ಪ್ರಕರಣವನ್ನು ಮುಕ್ತಾಯಗೊಳಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
ಇಬ್ಬರ ಮಧ್ಯೆ ಸಮಸ್ಯೆ ಇತ್ಯರ್ಥವಾಗಿ ಮತ್ತೆ ಒಂದಾಗುತ್ತೀರಿ ಎಂಬ ಭರವಸೆ ಇಲ್ಲ. ನೀವಿಬ್ಬರೂ ಮತ್ತೆ ಒಂದಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ನೀವು ಅವಿದ್ಯಾವಂತರು ಮತ್ತು ಅನಕ್ಷರಸ್ಥರಾಗಿದ್ದರೆ ಅದು ವಿಭಿನ್ನವಾಗಿತ್ತು. ಆದರೆ ನೀವು ವಿದ್ಯಾವಂತರು ಮಾತ್ರವಲ್ಲ, ಉದ್ಯೋಗ ಪಡೆಯುವಷ್ಟು ಅರ್ಹತೆ ಹೊಂದಿದ್ದೀರಿ. ಹಾಗಾಗಿ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಿರಿ ಎಂದು ಮುಖ್ಯ ನ್ಯಾಯಮೂರ್ತಿ ಸಲಹೆ ನೀಡಿದ್ದಾರೆ.
ಅಪ್ಪನ ಪ್ರೀತಿ ಅಪಾರ, ಮಗನಿಗೆ ಐಫೋನ್ 16 ಗಿಫ್ಟ್ ನೀಡಿದ ಸ್ಕ್ರ್ಯಾಪ್ ಮಾರಾಟಗಾರ.!
ಒಪ್ಪಿಗೆ ಮೇರೆಗೆ ವಿಚ್ಛೇದನ : ಮದುವೆಯನ್ನು ಶಾಂತಿಯುತವಾಗಿ ಕೊನೆಗೊಳಿಸುವ ವಿಧಾನವನ್ನು ಒಪ್ಪಿಗೆ ವಿಚ್ಛೇದನ ಎಂದು ಕರೆಯಲಾಗುತ್ತದೆ. ಪತಿ ಮತ್ತು ಹೆಂಡತಿ ಇಬ್ಬರೂ ಒಪ್ಪಿದಾಗ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಾರೆ. ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ಬಿ ಅಡಿಯಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ. ಒಪ್ಪಿಗೆ ವಿಚ್ಛೇದನದಲ್ಲಿ ದಂಪತಿ ವಿಚ್ಛೇದನ ಪಡೆಯಲು ಯಾವುದೇ ನಿರ್ದಿಷ್ಟ ಕಾರಣ ಅಗತ್ಯವಿರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.