ಯಾರ ವಿರೋಧಕ್ಕೂ ಕ್ಯಾರೇ ಅನ್ನದೇ ಮಂಗಳಮುಖಿಯನ್ನು ಮದ್ವೆಯಾದ ವ್ಯಕ್ತಿ: ಲವ್​ ಸ್ಟೋರಿಯೇ ಕುತೂಹಲ

By Suchethana D  |  First Published Oct 1, 2024, 8:35 PM IST

ಆಂಧ್ರದ ಯುವಕನೊಬ್ಬ ತೃತೀಯಲಿಂಗಿಯ ಜೊತೆ ಲವ್​ ಮಾಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ಪ್ರೇಮ ಕಥೆಯೇ ರೋಚಕ
 


ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ವ್ಯಕ್ತಿಯೊಬ್ಬರು ಟ್ರಾನ್ಸ್‌ಜೆಂಡರ್‌ ಮಹಿಳೆಯನ್ನು ಮದುವೆಯಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮೂರು ವರ್ಷಗಳ ಹಿಂದೆ ಭೇಟಿಯಾಗಿ ಈ ಮಹಿಳೆಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಯುವಕ,  ಸಮಾಜದ ಎಲ್ಲಾ ಮಾತುಗಳನ್ನು, ನಿರೀಕ್ಷೆಗಳನ್ನು ಧಿಕ್ಕರಿಸಿ ಪ್ರೀತಿಯನ್ನು ಅಪ್ಪಿಕೊಂಡಿದ್ದಾರೆ. ವಿಸ್ಸನ್ನಪೇಟೆಯ ನಂದು ಎಂಬ ವ್ಯಕ್ತಿ ಮತ್ತು ಏಣಕೂರಿನ ನಿವಾಸಿ ನಕ್ಷತ್ರ ಎಂಬ ತೃತೀಯಲಿಂಗಿ ಮಹಿಳೆ ಮದುವೆಯಾಗುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಮೂಲಕ ಮೂರು ವರ್ಷಗಳ ಪ್ರೀತಿಗೆ ಮದುವೆಯ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.  
 
ಟ್ರಾನ್ಸ್‌ಜೆಂಡರ್‌ ಸಂಘದ ಪ್ರತಿನಿಧಿಗಳ ಸಮ್ಮುಖದಲ್ಲಿ, ನಂದು ಮತ್ತು ನಕ್ಷತ್ರ ಹೂವಿನ ಹಾರ ಬದಲಿಸಿಕೊಳ್ಳುವ ಮೂಲಕ  ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾದರು. “ನಾವಿಬ್ಬರೂ ಸುದೀರ್ಘವಾಗಿ ಚರ್ಚಿಸಿದ ಬಳಿಕವೇ ಮದುವೆಯ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಆದರೆ ನನ್ನ ಕುಟುಂಬ ಸದಸ್ಯರು ನಮ್ಮ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದರು. ನಾನು ತೃತೀಯಲಿಂಗಿ ಸಂಘದ ಸದಸ್ಯರನ್ನು ಭೇಟಿ ಮಾಡಿದೆ. ಅವರ ನೇತೃತ್ವದಿಂದ  ಯಾವುದೇ ಅಡೆತಡೆಗಳಿಲ್ಲದೆ ಮದುವೆ ನಡೆದಿದೆ ಎಂದು ನಂದು ಹೇಳಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ತೃತೀಯಲಿಂಗಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಂಪತಿಯನ್ನು ಮನಃಪೂರ್ವಕವಾಗಿ ಆಶೀರ್ವದಿಸಿದರು.

ಗೆಳೆಯನ ಜೊತೆ ಖ್ಯಾತ ನಟಿಯ ಬೆತ್ತಲು ವಿಡಿಯೋ ವೈರಲ್‌: ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿ
 
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಕ್ಷತ್ರ ಅವರು,  ನಾನು 2015 ರಲ್ಲಿ ಎಂಕೂರ್‌ಗೆ ಬಂದಿದ್ದೆ. ನನಗೆ ಬಾಡಿಗೆ ಮನೆ ಸಿಗಲಿಲ್ಲ. ಜನರು ನನ್ನನ್ನು ಬಹಿಷ್ಕಾರ ಹಾಕಿದರು. ನನ್ನ ವಿರುದ್ಧ  ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಯಿತು ಎಂದು ಕಣ್ಣೀರು ಹಾಕಿದ್ದಾರೆ. “ನಾನು ಸಾಮಾಜಿಕ ಬಹಿಷ್ಕಾರದಿಂದ ಬಳಲಿದ್ದೇನೆ. ನಾನು ಪೊಲೀಸರು ಮತ್ತು ಸಮುದಾಯದ ಜನರೊಂದಿಗೆ ಕೈ ಜೋಡಿಸಿ ವಿನಂತಿಸಿದೆ. ಇಷ್ಟೆಲ್ಲಾ ನೋವಿನ ಬಳಿಕ  ನನಗೆ ಬಾಡಿಗೆ ಮನೆ ಸಿಕ್ಕಿತು. ಸಮಾಜದಲ್ಲಿ ನನ್ನ ನಡತೆ ಚೆನ್ನಾಗಿರುತ್ತದೆ ಎಂದು  ಸಬ್ ಇನ್ಸ್‌ಪೆಕ್ಟರ್ ಅವರಿಗೆ ಸಮುದಾಯದವರು ಭರವಸೆ ನೀಡಿದರು ಎಂದಯ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

Latest Videos

 ನನ್ನ ನಡತೆ ಸರಿಯಿಲ್ಲದಿದ್ದರೆ ಊರಿನಿಂದ ಹೊರಗೆ ಕಳುಹಿಸಲಾಗುವುದು ಎಂದು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ ನಾನು ಯಾವುದೇ ರೀತಿಯ ತೊಂದರೆ ಮಾಡಲಿಲ್ಲ. ನನ್ನ  ನಡವಳಿಕೆ ಮತ್ತು ಸ್ವಭಾವವು ಇಲ್ಲಿಯವರಿಗೆ ಇಷ್ಟವಾಯಿತು ಎಂದರು. ಸ್ಥಳೀಯರು ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಂಡರು ಎಂದರೆ,  ನನ್ನ ವಿರುದ್ಧ ದೂರು ನೀಡಿದ ಕಾಲೋನಿಯ ನಿವಾಸಿಗಳು, ಅಂದಿನಿಂದ ನನ್ನನ್ನು ದೇವತೆಯಂತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ತಮ್ಮ ಪ್ರೀತಿಯ ಕುರಿತು ಮಾತನಾಡಿರುವ ಅವರು,  ನಾನು  ನಂದುವನ್ನು ನಂಬುತ್ತೇನೆ.  ಭವಿಷ್ಯದಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳುತ್ತೇವೆ ಮತ್ತು ಇದೇ ಕಾಲನಿಯಲ್ಲಿ ವಾಸವಾಗುತ್ತೇನೆ ಎಂದಿದ್ದಾರೆ.

ಚೈತ್ರಾ ತೊಳೆದುಬಿಟ್ಟ ಟಾಯ್ಲೆಟ್​ ಕ್ಲೀನ್​ ಮಾಡಿ ಪೇಚಿಗೆ ಸಿಲುಕಿದ ಲಾಯರ್​ ಜಗದೀಶ್​! ರುಬ್ಬಿಸಿಕೊಳ್ಳೋರು ಯಾರು?

https://www.instagram.com/p/DAkoQjzSgOk/?utm_source=ig_web_copy_link

click me!