
ಹಿಂದಿ ಬಿಗ್ಬಾಸ್ನ ಓಟಿಟಿ-03 ಖ್ಯಾತಿಯ ಅದ್ನಾನ್ ಶೇಖ್ ಅವರು ತಮ್ಮ ಬಹುಕಾಲದ ಗೆಳತಿ ಜೊತೆ ಕಳೆದ ವಾರ ನಿಖಾ ಮಾಡಿಕೊಂಡರು. ಈಕೆಯ ಹೆಸರನ್ನು ಆಯೇಷಾ ಶೇಖ್ ಎಂದೇ ಹೇಳಲಾಗಿತ್ತು. ಆದರೆ ಮದುವೆಯ ದಿನ ಪತ್ನಿಗೆ ಮಾಸ್ಕ್ ಹಾಕಿಸಿದ್ದ ಅದ್ನಾನ್, ಯಾವುದೇ ಕಾರಣಕ್ಕೂ ಆಕೆಯ ಮುಖವನ್ನು ರಿವೀಲ್ ಮಾಡದಂತೆ ಮಾಧ್ಯಮಗಳಲ್ಲಿ ಹಾಗೂ ಪಾಪರಾಜಿಗಳಿಗೆ ಮನವಿ ಮಾಡಿಕೊಂಡಿದ್ದರು. ತಾವು ಮಾತ್ರ ಫೋಟೋ, ವಿಡಿಯೋಗೆ ಪೋಸ್ ಕೊಟ್ಟಿದ್ದ ಅದ್ನಾನ್, ಪತ್ನಿಗೆ ಮಾಸ್ಕ್ ಹಾಕಿಸಿದ್ದರು. ಎಲ್ಲಿಯೂ ಅವರ ಮುಖ ರಿವೀಲ್ ಮಾಡಲು ಬಿಟ್ಟಿರಲಿಲ್ಲ. ಇದು ಮುಸ್ಲಿಂ ಸಂಪ್ರದಾಯ ಆಗಿರುವ ಹಿನ್ನೆಲೆಯಲ್ಲಿ, ಗೌಪ್ಯತೆಯನ್ನು ಕಾಪಾಡಿ ಎಂದು ಅವರು ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ, ಸೋಷಿಯಲ್ ಮೀಡಿಯಾದಲ್ಲಿಯೂ ಪತ್ನಿಯ ಮುಖ ಕಾಣಿಸದಂತೆ ತೋರಿಸಲಾಗಿತ್ತು. ಆದರೆ ಆಕೆಯ ಹಿಂದಿನ ಫೋಟೋಗಳೆಲ್ಲಾ ಇದರ ಜೊತೆಯೇ ವೈರಲ್ ಆಗುತ್ತಿದ್ದವು.
ಆದರೆ ಅಸಲಿಗೆ ಈಕೆಯ ಹೆಸರು ಆಯೇಷಾ ಖಾನ್ ಅಲ್ಲ, ಬದಲಿಗೆ ರಿಧಿ ಜಾಧವ್ ಎಂಬುದು ಇದೀಗ ತಿಳಿದುಬಂದಿದೆ. ಈ ಶಾಕಿಂಗ್ ವಿಷ್ಯವನ್ನು ಖುದ್ದು ಅದ್ನಾನ್ ಸಹೋದರಿ ರಿವೀಲ್ ಮಾಡಿದ್ದಾರೆ. ಇವರಿಬ್ಬರೂ ಎರಡು ವರ್ಷಗಳ ಡೇಟಿಂಗ್ನಲ್ಲಿ ಇದ್ದರು. ಈಗ ಮದುವೆಯಾಗಿದ್ದಾರೆ. ಮದುವೆಯ ಬಳಿಕ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಅಣ್ಣ, ಮದುವೆಯಾಗುವ ಸಲುವಾಗಿ ರಿದ್ಧಿ ಅವರನ್ನು ಮತಾಂತರ ಮಾಡಿದ್ದು, ಹೆಸರು ಬದಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದಾಗಲೇ ತಮ್ಮ ಮೇಲೆ ಸಹೋದರ ದೌರ್ಜನ್ಯ ನಡೆಸಿರುವುದಾಗಿ ದೂರು ದಾಖಲಿಸಿರುವ ಸಹೋದರಿ ಇಫ್ಫತ್ ಶೇಖ್ ಈಗ ಮತ್ತೊಂದು ಶಾಕಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಅದ್ನಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಂದಹಾಗೆ, ಅದ್ನಾನ್ ಅವರ ವೆಡ್ಡಿಂಗ್ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಇದು ಆಯೇಷಾ ಅವರ ಹೆಸರಿನಲ್ಲಿ ಇದೆಯಾದರೂ, ಇದನ್ನು ಬರೆಸಿದವರು ಅದ್ನಾನ್ ಎಂದಿದ್ದರು ನೆಟ್ಟಿಗರು. ಇದರಲ್ಲಿ 'ಮದುವೆಯ ಸಂದರ್ಭದಲ್ಲಿ ವಧುವಿನ ಫೋಟೋ ಯಾರೂ ಸೆರೆ ಹಿಡಿಯಬಾರದು. ಇದು ತಮ್ಮ ಸಂಪ್ರದಾಯದ ಪ್ರಶ್ನೆ ಎಂದು ಬರೆದಿದ್ದರು. ಮದುವೆಗೆ ಆಹ್ವಾನ ನೀಡಿದ್ದ ಅದ್ನಾನ್ ಮದುಮಗಳ ಫೋಟೋ ಮಾತ್ರ ತೋರಿಸಬೇಡಿ ಎಂದಿದ್ದರು. ಅದರಂತೆಯೇ ಮದುವೆಯ ಸಂಪೂರ್ಣ ಶಾಸ್ತ್ರಗಳು ನಡೆಯುವವರೂ ಮದುಮಗಳಿಗೆ ಮಾಸ್ಕ್ ಹಾಕಿ ಇಡಲಾಗಿತ್ತು.
ಅಂದಹಾಗೆ, ಅದ್ನಾನ್ ಶೇಖ್ ಬಿಗ್ ಬಾಸ್ OTT 3 ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದರು. ಅವರು ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಅವರೊಂದಿಗೆ ಪೈಪೋಟಿ ನೀಡಿದ್ದರು. ಇಬ್ಬರೂ ಆಗಾಗ್ಗೆ ಮನೆಯೊಳಗೆ ಕಚ್ಚಾಡುತ್ತಿದ್ದರು. ಇವರು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೂಡ. ತಮ್ಮ ಚಮತ್ಕಾರಿ ಇನ್‌ಸ್ಟಾಗ್ರಾಮ್ ವೀಡಿಯೊಗಳು ಮತ್ತು ಟ್ರೆಂಡಿಂಗ್ ರೀಲ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು, ಪ್ರಸಿದ್ಧ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ ಗುಂಪು ತಂಡ 07 ರ ಭಾಗವಾಗಿದ್ದಾರೆ. ಇದರಲ್ಲಿ ಫೈಜು ಶೇಖ್, ಹಸ್ನೈನ್ ಖಾನ್, ಶಾದನ್ ಫಾರೂಕಿ ಮತ್ತು ಫೈಜ್ ಬಲೋಚ್ ಇತರರು ಸೇರಿದ್ದಾರೆ. ಏಸ್ ಆಫ್ ಸ್ಪೇಸ್ ಸೀಸನ್ 2 ರಿಯಾಲಿಟಿ ಷೋನಲ್ಲಿಯೂ ಇವರು ಭಾಗವಹಿಸಿದ್ದರು.
ಯಾರ ವಿರೋಧಕ್ಕೂ ಕ್ಯಾರೇ ಅನ್ನದೇ ಮಂಗಳಮುಖಿಯನ್ನು ಮದ್ವೆಯಾದ ವ್ಯಕ್ತಿ: ಲವ್ ಸ್ಟೋರಿಯೇ ಕುತೂಹಲ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.