ಫ್ಯಾಮಿಲಿ ಟೈಂ ಕೊಡೋಕೆ ಆಗ್ತಾಯಿಲ್ವಾ? ಮೊಬೈಲ್‌ಗೆ ಹೇಳಿ ಗುಡ್‌ ಬೈ!

By Suvarna NewsFirst Published Dec 28, 2019, 9:43 AM IST
Highlights

ಮೊಬೈಲ್‌ ಇಲ್ಲದೆ ಜೀವನವೇ ಇಲ್ಲ ಎಂಬ ಕಾಲವಿದು. ಫ್ಯಾಮಿಲಿ ಜೊತೆಗೆ ಖುಷಿಯಾಗಿ ಕಾಲ ಕಳೆಯೋಕೂ ಕೆಲವೊಮ್ಮೆ ಮೊಬೈಲ್‌ ಬಿಡಲ್ಲ. ಗ್ಯಾಜೆಟ್‌ ಮುಕ್ತ ಫ್ಯಾಮಿಲಿ ಟೈಮ್‌ ನಿಮಗೆ ಬೇಕೆ? ಹಾಗಿದ್ದರೆ ಈ ಕೆಳಗಿನ ಇಪ್ಪತ್ತೈದು ಸೂತ್ರಗಳನ್ನು ಪಾಲಿಸಿ.

ಇಂದು ಮೊಬೈಲ್‌ ಅನ್ನು ನೀವಾಗಿಯೇ ಪ್ರಜ್ಞಾಪೂರ್ವಕವಾಗಿ ದೂರವಿಡದೇ ಹೋದರೆ, ಅದು ನಿಮ್ಮನ್ನು ಬಿಡುವುದೇ ಇಲ್ಲ. ಎಲ್ಲಿಯವರೆಗೆ ಅಂದರೆ, ಕುಟುಂಬದ ಜೊತೆಗೆ ನೀವು ಕಳೆಯಬೇಕಾದ ಕಾಲವನ್ನೂ ಅದೇ ನುಂಗಿ ಹಾಕುತ್ತೆ. ಹೀಗಾಗದಿರಲು ನೀವು ಪಾಲಿಸಬೇಕಾದ ಕೆಲವು ಸೂತ್ರಗಳಿಲ್ಲಿವೆ.

- ಮನೆಯ ಕೆಲವು ಭಾಗವನ್ನು ಗ್ಯಾಜೆಟ್‌ ಫ್ರೀ ಆಗಿಸಿ. ಅಥವಾ ಹಾಲ್‌ ಅನ್ನು ಗ್ಯಾಜೆಟ್‌ ಬಳಕೆಗೆ ಮೀಸಲಿಡಿ. ಆಗ ತಾನಾಗಿಯೇ ಉಳಿದ ಭಾಗವೆಲ್ಲ ಡಿಜಿಟಲ್‌ ಫ್ರೀ ಆಗುತ್ತೆ.

- ಹಾಸಿಗೆಗೆ ತೆರಳುವ ವೇಳೆಗೆ ವೈಫೈ, ಮೊಬೈಲ್‌ ಡೇಟಾ ಆಫ್‌ ಮಾಡಿ, ಮುಂಜಾನೆಯವರೆಗೂ ಆನ್‌ ಮಾಡದಿರಿ.

ನಮ್ಮ ಸುತ್ತಲಿರೋರನ್ನು ಸಂತೋಷವಾಗಿಡುವುದು ಹೀಗೆ!

- ಇಮೇಲ್‌ ಚೆಕ್‌ ಮಾಡೋಕೆ, ವಾಟ್ಸ್ಯಾಪ್‌ ಚೆಕ್‌ ಮಾಡಲು, ಫೇಸ್‌ಬುಕ್‌ ನೋಡಲು ನಿದ್ಷ್ಟಿ ಸಮಯವನ್ನು ಮೀಸಲಿಡಿ. ಏನೇ ಆದರೂ ಆ ಸಮಯವನ್ನ ಮುರಿಯದಿರಿ.

- ಪ್ರತಿದಿನವೂ ಇಂತಿಷ್ಟೇ ಹೊತ್ತು ಮಾತ್ರ ಇಂಟರ್‌ನೆಟ್‌ ಬ್ರೌಸಿಂಗ್‌ ಎಂಬ ಮಿತಿಯನ್ನು ಕಲ್ಪಿಸಿ, ಅದನ್ನು ಪಾಲಿಸಿ.

- ನೋಟಿಫಿಕೇಶನ್‌ಗಳನ್ನು ಸಂಪೂರ್ಣ ಬಂದ್‌ ಮಾಡಿ.

- ವಾರದಲ್ಲಿ ಒಂದು ದಿನವನ್ನು ಗ್ಯಾಜೆಟ್‌- ಫ್ರೀ ಡೇ ಎಂದು ಆಚರಿಸಿ. ಅಂದು ಗ್ಯಾಜೆಟ್‌ಗಳೆಲ್ಲ ದೂರವಿರಲಿ.

- ರೇಡಿಯೋದಲ್ಲಿ ಒಳ್ಳೆಯ ಸಂಗೀತ ಕೇಳುವುದು, ಎಂಪಿತ್ರೀ ಕೇಳುವುದನ್ನು ರೂಢಿಸಿಕೊಳ್ಳಿ, ಮಕ್ಕಳಿಗೂ ಕಲಿಸಿ.

- ಮಕ್ಕಳ ಮುಂದೆ ಮೊಬೈಲ್‌ ತೆರೆದು ನೋಡುವ ತುಡಿತವನ್ನು ಹತ್ತಿಕ್ಕಿಕೊಳ್ಳಿ. ತೆರಯಲೇಬೇಡಿ.

- ಮೊಬೈಲ್‌ ತೆರೆದ ಕೂಡಲೇ ಒಳ್ಳೆಯ ಕತೆಗಳ ವೆಬ್‌ಸೈಟ್‌ ತೆರೆದುಕೊಳ್ಳುವಂತೆ ಹೋಮ್‌ಪೇಜ್‌ ಸೆಟ್‌ ಮಾಡಿ. ಮಕ್ಕಳು ಬ್ರೌಸ್‌ ಮಾಡಲು ಹೋಗುವ ಮುನ್ನವೇ ಕತೆಗಳು ಅವರನ್ನು ಸೆಳೆಯಲಿ.

- ನಿಜಕ್ಕೂ ನೀವು ತುಬ ಇಷ್ಟಪಡುವ ಮತ್ತು ಶೈಕ್ಷಣಿಕ ಉದ್ದೇಶದ ಆ್ಯಪ್‌ಗಳನ್ನು ಮಾತ್ರವೇ ಮೊಬೈಲ್‌ನಲ್ಲಿಟ್ಟುಕೊಳ್ಳಿ.

- ಮನೆಯಲ್ಲಿ ಒಳ್ಳೆಯ ಲೈಬ್ರರಿ ಇಟ್ಟುಕೊಳ್ಳಿ ಅಥವಾ ಮೊಬೈಲ್‌ನಲ್ಲೂ ಒಳ್ಳೆಯ ಪಿಡಿಎಫ್‌ಗಳು, ಇಬುಕ್‌ಗಳು ಇರಲಿ. ಮಕ್ಕಳು ಅದನ್ನು ಓದಲಿ.

- ಕಂಪ್ಯೂಟರ್‌ ಗೇಮ್‌ಗಳನ್ನು ವಾರದಲ್ಲಿ ಒಂದು ದಿನ ಮಾತ್ರ ಆಡುವಂತೆ ನಿಗದಿಪಡಿಸಿ. ಮಕ್ಕಳು ಅದಕ್ಕಾಗಿ ಎದುರು ನೋಡುವಂತಾಗಲಿ.

ಪೋಷಕರನ್ನು ಕಳೆದುಕೊಂಡರೆ ಬದುಕು ಬರಡಾಗುತ್ತದೆ, ಬದಲಾಗುತ್ತದೆ

- ಒಳ್ಳೆಯ ಡಾಕ್ಯುಮೆಂಟರಿಗಳು ಇರುವ ವಿಡಿಯೋ ಕಲೆಕ್ಷನ್‌ ನಿಮ್ಮಲ್ಲಿರಲಿ. ಡಿಸ್ಕವರಿ, ನ್ಯಾಷನಲ್‌ ಜಿಯೊಗ್ರಾಫಿಕ್‌ಗಳು ಅಂಥ ವಿಡಿಯೋ ತಂದಿವೆ.

- ಸ್ಕ್ರೀನ್‌ ಟೈನ್‌ ಅನ್ನು ಕುಟುಂಬ ಜೊತೆಯಾಗಿ ಅನುಭವಿಸಿ. ಜೊತೆಯಾಗಿ ಖುಷಿಪಡುವುದರ ಅನುಭವ ಮಕ್ಕಳಿಗೂ ಆಗಲಿ.

- ಟೆಕ್ನಾಲಜಿಯನ್ನು ಒಂದು ಸೃಜನಶೀಲ ಸಂಗತಿಯಾಗಿ ಮಾರ್ಪಡಿಸಿಕೊಳ್ಳಿ. ಅದರಿಂದಲೇ ಕಲಾತ್ಮಕ ವಸ್ತುಗಳನ್ನು ಮಾಡುವುದು ಇತ್ಯಾದಿ ರೂಢಿಸಿಕೊಳ್ಳಿ.

- ಮಕ್ಕಳ ಜೊತೆ ಸೇರಿ ಪುಸ್ತಕ ಬರೆಯಿರಿ, ಕವನ ರಚಿಸಿ. ಮಕ್ಕಳು ಅದಕ್ಕೆ ಚಿತ್ರ ಬರೆಯಲಿ.

- ಹಳೆಯ ಒಂದು ರೋಲ್‌ ಕ್ಯಾಮೆರಾ ತೆಗೆದುಕೊಳ್ಳಿ. 34 ಫೋಟೊ ಮಾತ್ರ ತೆಗೆಯಬಹುದಾದ ಈ ರೋಲ್‌ ಕ್ಯಾಮೆರಾದಲ್ಲಿ ಫೋಟೊ ತೆಗೆಯುವ ಕಲೆಯನ್ನು ಕಲಿಯುವುದು ಚಾಲೆಂಜಿಂಗ್‌.

- ಮನೆ ಕ್ಲೀನಿಂಗ್‌, ಪಾತ್ರೆ ತೊಳೆಯೋದು. ಅಡುಗೆ ಮಾಡೋದು- ಇವನ್ನೆಲ್ಲ ಜೊತೆಯಾಗಿ ಮಾಡಿದಾಗ ತುಂಬ ಫನ್ನಿಯಾಗಿರುತ್ತದೆ.

- ಮನೆಯಲ್ಲಿ ಕೇರಂ, ಚೆಸ್‌, ಟೇಬಲ್‌ ಟೆನ್ನಿಸ್‌ನಂಥ ಆಟಗಳನ್ನು ಜತೆಯಾಗಿ ಆಡಿ.

- ಪೇಪರ್‌ಗಳಲ್ಲಿ ಬರುವ ಕ್ರಾಸ್‌ವರ್ಡ್‌, ಪಝಲ್‌ಗಳನ್ನು ಬಿಡಿಸುವ ಕಲೆಯನ್ನು ಮಕ್ಕಳಿಗೆ ಕಲಿಸಿ.

- ಹಾರ್ಮೋನಿಯಂ, ಕೀಬೋರ್ಡ್‌ನಂತಹ ಯಾವುದಾದರೊಂದು ವಾದ್ಯವನ್ನು ನುಡಿಸುವಿಕೆಯನ್ನು ಇಡೀ ಕುಟುಂಬದವರೆಲ್ಲ ಕಲಿಯುವುದರಿಂದ ಒಳ್ಳೆಯ ಸಮಯ ನಿಮ್ಮ ಪಾಲಿಗೆ ಲಭ್ಯ.

- ಪುಟ್ಟ ನಾಯಿಮರಿ ಅಥವಾ ಬೆಕ್ಕಿನ ಮರಿ ತಂದು ಸಾಕಿಕೊಂಡರೆ ಹೊತ್ತು ಹೋದದ್ದೇ ತಿಳಿಯುವುದಿಲ್ಲ.

ಪಾರ್ಟಿ ಕೊಡೋಕೆ ಬಜೆಟ್‌ ಪ್ರಾಬ್ಲಮ್ಮಾ? ಮನೆಯಲ್ಲೇ ಪಾರ್ಟಿ ಮಾಡೋಕೆ ಇಲ್ಲಿದೆ ಟಿಪ್ಸ್!

- ಪತ್ರ ಬರೆಯುವ ಸಂಸ್ಕೃತಿಯನ್ನು ಮರಳಿ ರೂಢಿಸಿಕೊಳ್ಳಿ. ಪತ್ರಗಳಲ್ಲಿ ಡ್ರಾಯಿಂಗ್‌ಗಳಿರಲಿ.

- ಸುತ್ತಮುತ್ತಲಿನ ಪ್ರಕೃತಿಯನ್ನು ಅಚ್ಚರಿಯ ಕಣ್ಣುಗಳಿಂದ ನೋಡುವ, ಅರ್ಥ ಮಾಡಿಕೊಳ್ಳುವ ಸೈಂಟಿಫಿಕ್‌ ಮನೋಭಾವ ರೂಢಿಸಿಕೊಳ್ಳಿ.

- ಪುಟ್ಟದಾದ ಒಂದು ಗಾರ್ಡನ್‌ ಅನ್ನು ಮನೆಯಲ್ಲಿ ಅಥವಾ ಟೆರೇಸ್‌ನಲ್ಲಾದರೂ ಸರಿ, ರೂಪಿಸಿಕೊಳ್ಳಿ.

click me!