ಬಾಯ್‌ಫ್ರೆಂಡ್‌ ಮೀಟ್ ಮಾಡೋಕೆ ಬಂದು ಆಕೆಯ ತಾಯಿಯ ಕೈಗೆ ಸಿಕ್ಕಿಬಿದ್ದ ಯುವತಿ!

Published : May 18, 2024, 01:41 PM ISTUpdated : May 18, 2024, 02:25 PM IST
ಬಾಯ್‌ಫ್ರೆಂಡ್‌ ಮೀಟ್ ಮಾಡೋಕೆ ಬಂದು ಆಕೆಯ ತಾಯಿಯ ಕೈಗೆ ಸಿಕ್ಕಿಬಿದ್ದ ಯುವತಿ!

ಸಾರಾಂಶ

ಇವತ್ತಿಗೂ ಹುಡುಗ-ಹುಡುಗಿ ಲವ್ ಮಾಡೋದನ್ನು ಮನೆಯಲ್ಲಿ ಹೇಳೋಕೆ ಹಿಂಜರಿತಾರೆ. ಕದ್ದು ಮುಚ್ಚಿ ಮಾತನಾಡೋದು, ಮೀಟ್ ಆಗೋದು ಮಾಡ್ತಾರೆ. ಹೀಗೆಯೇ ತನ್ನ ಲವರ್‌ನ್ನು ಭೇಟಿಯಾಗಲು ಬಂದ ಹುಡುಗಿಯೊಬ್ಬಳು ಆತನ ತಾಯಿಯ ಕೈಗೇ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಇವತ್ತಿನ ದಿನಗಳಲ್ಲೂ ಲವ್‌ ಮಾಡೋದು ಅಂದ್ರೆ ಸಮಾಜದಲ್ಲಿ ಅವರನ್ನು ನೋಡುವ ದೃಷ್ಟಿಯೇ ಬೇರೆ. ಅದರಲ್ಲೂ ಮನೆ ಮಂದಿಗೆ ಗೊತ್ತಾದ್ರಂತೂ ಕಥೆ ಮುಗೀತು ಅಂತಾನೆ ಅರ್ಥ. ಇಬ್ಬರನ್ನೂ ಬೇರೆ ಮಾಡುವ ವರೆಗೂ ಬಿಡೋದಿಲ್ಲ. ಹೀಗಾಗಿ ಇವತ್ತಿಗೂ ಹುಡುಗ-ಹುಡುಗಿ ಲವ್ ಮಾಡೋದನ್ನು ಮನೆಯಲ್ಲಿ ಹೇಳೋಕೆ ಹಿಂಜರಿತಾರೆ. ಕದ್ದು ಮುಚ್ಚಿ ಮಾತನಾಡೋದು, ಮೀಟ್ ಆಗೋದು ಮಾಡ್ತಾರೆ. ಹೀಗೆಯೇ ತನ್ನ ಲವರ್‌ನ್ನು ಭೇಟಿಯಾಗಲು ಬಂದ ಹುಡುಗಿಯೊಬ್ಬಳು ಆತನ ತಾಯಿಯ ಕೈಗೇ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ವೈರಲ್ ವೀಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿರುವ ಹೆಂಗಸನ್ನು ಜೋರಾಗಿ ಬೈಯುತ್ತಿರುವುದನ್ನು ನೋಡಬಹುದು. ಹೆಂಗಸು, ಯುವತಿಗೆ ಏರುದನಿಯಲ್ಲಿ ಬೈಯುತ್ತಾ ಈಕೆ ನನ್ನ ಮಗನೊಂದಿಗೆ ಸುತ್ತಾಡಲು ಪ್ರಯತ್ನಿಸುತ್ತಿದ್ದಳು ಎಂದು ಬೈಯುತ್ತಾಳೆ. ಯುವತಿ ಹುಡುಗನ ತಾಯಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಆಕೆ ಕೇಳದೆ ಕಿರುಚಾಡುತ್ತಾಳೆ. ಯುವತಿಯ ಸ್ಕೂಟಿಯ ಕೀಯನ್ನು ಎಳೆದು ತೆಗೆಯುತ್ತಾಳೆ. ಮುಖ್ಯ ರಸ್ತೆಯಲ್ಲಿಯೇ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿದ್ದು, ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ದಂಗಾಗಿದ್ದಾರೆ.

ಮನೆಯಲ್ಲಿದ್ದ 1 ಕೋಟಿ ಕದ್ದು ಲವರ್ ಜೊತೆ ಪರಾರಿಯಾದ ಮಗಳು : ತಿಂಗಳ ಬಳಿಕ ದೂರು ನೀಡಿದ ಬೆಂಗಳೂರಿನ ಉದ್ಯಮಿ

ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು, 'ಮನೆಯೊಳಗಿನ ಅವ್ಯವಸ್ಥೆ ಬೀದಿಗೆ ಬಂತು' ಎಂಬ ಶೀರ್ಷಿಕೆ ನೀಡಿದ್ದಾರೆ. ವೈರಲ್ ಆಗಿರುವ ವೀಡಿಯೋ 560,000 ಲೈಕ್ಸ್‌ ಗಳಿಸಿದೆ. ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

'ಇದಕ್ಕಾಗಿಯೇ ಯುವಜನರು ಎಂದೆಂದಿಗೂ ಸಂತೋಷದಿಂದ ಬದುಕಲು ಭಾರತವನ್ನು ತೊರೆಯುತ್ತಾರೆ" ಎಂದು ಒಬ್ಬ ಬಳಕೆದಾರನು ಹೇಳಿದರೆ, ಇನ್ನೊಬ್ಬರು, 'ಮಹಿಳೆಯರು ಜಗಳವಾಡುವುದು ಸಾಮಾನ್ಯವಾಗಿದೆ. ಆದರೆ ಮಹಿಳೆ, ಹುಡುಗಿಯ ಕೂದಲನ್ನು ಎಳೆಯಲಿಲ್ಲ ಎಂಬುದು ಖುಷಿಯ ವಿಚಾರ' ಎಂದಿದ್ದಾರೆ. 

ವಿವಾಹಿತ ಮಹಿಳೆಯ ಬಾಯ್‌ಫ್ರೆಂಡ್‌ನ ಕಿತಾಪತಿ, ಪಾರ್ಸೆಲ್ ಬಾಂಬ್ ಕಳುಹಿಸಿ ಪತಿ-ಮಗಳ ಹತ್ಯೆ!

ಮತ್ತೆ ಕೆಲವರು ಗಂಭೀರ ಜಗಳದ ಮಧ್ಯೆಯೂ ಹಾಸ್ಯದ ಮಾತನಾಡಿದ್ದಾರೆ. 'ಇಬ್ಬರು ಮಹಿಳೆಯರ ಜಗಳದ ಮಧ್ಯೆ ಈ ಹಾಲು ಮಾರುವವನು ಏನು ಮಾಡುತ್ತಿದ್ದಾನೆ' ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. 'ಬಾಯ್‌ಫ್ರೆಂಡ್‌ ಕ್ಯಾಮರಾ ಹಿಂದೆ ಇದ್ದಿರಬಹುದು' ಎಂದು ಕೆಲವು ಬಳಕೆದಾರರು ತಮಾಷೆಯಾಗಿ ತಿಳಿಸಿದ್ದಾರೆ. ಇನ್ನು ಕೆಲವರು, 'ಭಾರತದಲ್ಲಿ ಪೋಷಕರು ಪ್ರೀತಿಯನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನೀವು ಅವರನ್ನು ವಿರೋಧಿಸಿ ಹೋಗುವುದಷ್ಟೇ ದಾರಿಯಾಗಿದೆ' ಎಂದು ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು