ನಟ-ನಿರ್ದೇಶಕ ಉಪೇಂದ್ರ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಇಬ್ಬರೂ ಮಂಗಳೂರಿನವರು, ಮೊದಲಿನಿಂದಲೂ ಆಪ್ತರು. ಜೊತೆಗೆ, ಉಪೇಂದ್ರರ ನಟನೆ ಮತ್ತು ನಿರ್ದೇಶನದ ಹಲವು ಸಿನಿಮಾಗಳಿಗೆ ಗುರುಕಿರಣ್..
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Upendra) ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಅವರಿಗೆ 'ಖಿಲಾಡಿ' ಎಂದಿದ್ದಾರೆ. ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗ ಸಾಕಷ್ಟು ಕಾಮೆಂಟ್‌ಗಳು ಹರಿದುಬರುತ್ತಿವೆ. ಇದೀಗ 25 ವರ್ಷಗಳ ಬಳಿಕ ಮತ್ತೆ ಉಪೇಂದ್ರ ನಟನೆಯ 'A' ಚಿತ್ರವು ರೀರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಇಪ್ಪತೈದು ವರ್ಷಗಳು ಕಳೆದರೂ ಅಂದಿನಂತೆ ಇಂದು ಕೂಡ ಉಪೇಂದ್ರ ನಟನೆ-ನಿರ್ದೇಶನದ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
A ಚಿತ್ರದ ಮರುಬಿಡುಗಡೆ ಸಂಬಂಧ ನಟ, ನಿರ್ದೇಶಕ ಉಪೇಂದ್ರ ಹಲವಾರು ಸಂದರ್ಶನಗಳಲ್ಲಿ ಸದ್ಯ ಮಾತುಕತೆ ನಡೆಸುತ್ತಿದ್ದಾರೆ. ಒಂದು ಸಂದರ್ಶನದಲ್ಲಿ ಉಪ್ಪಿಗೆ ಕೇಳಲಾದ 'ನಿಮ್ಮ ಎ ಚಿತ್ರಕ್ಕೆ ಗುರುಕಿರಣ್ ಅವರೇ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಬುದ್ದಿವಂತ ಖ್ಯಾತಿಯ ನಟ ಉಪೇಂದ್ರ 'ಗುರುಕಿರಣ್ ಅವರು ಹಿರಿಯ ಸಂಗೀತ ನಿರ್ದೇಶಕ ಮನೋಹರ್ ಶಿಷ್ಯರು. ಅವರನ್ನು ನಾನು ಸಾಕಷ್ಟು ಬಾರಿ ಮನೋಹರ್ ಜತೆ ಭೇಟಿಯಾಗಿದ್ದೆ.
ಪವಿತ್ರಾ ಜಯರಾಂ ಸಂಬಂಧಿ ಮಂಡ್ಯದ ಲೋಕೇಶ್ ಚಂದು ಲವ್, ಆತ್ಮಹತ್ಯೆ ಬಗ್ಗೆ ಹೇಳಿದ್ದೇನು?
'ಎ' ಚಿತ್ರ ಮಾಡುವ ಮಾತುಕತೆ ಸಮಯದಲ್ಲಿ ಗುರುಕಿರಣ್ ಅವರು ನನಗೆ ತಾವು ಕಂಪೋಸ್ ಮಾಡಿದ್ದ ಹಲವು ಟ್ಯೂನ್‌ಗಳು ಇದ್ದಂತಹ ಕ್ಯಾಸೆಟ್ ಒಂದನ್ನು ಕೊಟ್ಟು, 'ಸಂಗೀತ ಹಾಗೂ ಸಂಗೀತ ನಿರ್ದೇಶನಕ್ಕೆ ಅವಕಾಶವಿದ್ದರೆ ಹೇಳಿ' ಎಂದಿದ್ದರು. ಆದರೆ, ನಾನು ಅದನ್ನು ನೋಡಿರಲಿಲ್ಲ. ಒಮ್ಮೆ ಸಿನಿಮಾ ಟೇಕ್‌ಅಪ್ ಆಗುವುದು ಪಕ್ಕಾ ಆಗುತ್ತಿದ್ದಂತೆ, ನಾನು 'ಕ್ಯಾಸೆಟ್ ಕೊಟ್ಟಿದ್ರಲ್ಲಾ, ಆ ಗುರುಕಿರಣ್ ಕರೀರಿ' ಎಂದೆ. ಗುರುಕಿರಣ್ ನಮ್ಮ ಪ್ರೊಡಕ್ಷನ್ ಹೌಸ್‌ಗೆ ಬಂದಾಗ ಅವರಿಗೆ ಸಂಗೀತ ನಿರ್ದೇಶನಕ್ಕೆ ಒಂದು ರೂಂ ಮಾಡಿ ಕೊಟ್ಟೆವು. ಅವರು ಹಲವು ಟ್ಯೂನ್ ಮಾಡಿದ್ದರು.
ಡಾ ರಾಜ್ ನೇತೃತ್ವದ ಗೋಕಾಕ್ ಚಳುವಳಿಗೆ ವಿಷ್ಣುವರ್ಧನ್ ಬಂದಿರಲಿವೇ? ರಿಯಲ್ ಸೀಕ್ರೆಟ್ ಏನು?
ಅವುಗಳಲ್ಲಿ ಒಂದು ನಮಗೆಲ್ಲಾ ಇಷ್ಟವಾಗಿ ಬಳಿಕ ಸಿನಿಮಾದಲ್ಲಿ ಬಳಕೆಯಾಗಿರುವ 'ಸುಮ್ ಸುಮ್ನೆ ನಗ್ತಾಳೆ..ಎ..ಎ..ಎ..' ಅದು. ಆ ಟ್ಯೂನ್ ಜತೆಗೆ ಅವರು ಎ, ಎ,ಎ.. ಎಂದು ಸೇರಿದ್ದರು. ಅದು ನಮ್ಮ ಸಿನಿಮಾ ಹೆಸರು ಎಂದು ಗೊತ್ತಿದ್ದ ಅವರು ಅದನ್ನು ಉದ್ದೇಶಪೂರ್ವಕವಾಗಿ ಸೇರಿಸಿ ನಮ್ಮ ಗಮನ ಸೆಳೆದರು. ಅವ್ರು ಭಲೇ ಕಿಲಾಡಿ..' ಎಂದಿದ್ದಾರೆ ಉಪೇಂದ್ರ. ಈ ಮಾತನ್ನು ಉಪೇಂದ್ರ ಅವರು ತಮ್ಮ ಆಪ್ತ ಸ್ನೇಹಿತ ಗುರುಕಿರಣ್ ಅವರನ್ನು ಗೌರವಿಸುತ್ತಲೇ, ಹೊಗಳುತ್ತಲೇ ಹೇಳಿದ್ದಾರೆ. ಇಲ್ಲಿ ಕಿಲಾಡಿ ಎಂಬ ಪದವನ್ನು ಉಪೇಂದ್ರ ಅವರು ಗುರುಕಿರಣ್ 'ಬುದ್ದಿವಂತ' ಎಂಬ ಅರ್ಥದಲ್ಲಿ ಹೇಳಿದ್ದಾರೆ.
ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ 'ತ್ರಿನಯನಿ' ನಟ ಚಂದು ಆತ್ಮಹತ್ಯೆ!
ಹೌದು, ನಟ-ನಿರ್ದೇಶಕ ಉಪೇಂದ್ರ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಇಬ್ಬರೂ ಮಂಗಳೂರಿನವರು, ಮೊದಲಿನಿಂದಲೂ ಆಪ್ತರು. ಜೊತೆಗೆ, ಉಪೇಂದ್ರರ ನಟನೆ ಮತ್ತು ನಿರ್ದೇಶನದ ಹಲವು ಸಿನಿಮಾಗಳಿಗೆ ಗುರುಕಿರಣ್ ಮ್ಯೂಸಿಕ್ ಡೈರೆಕ್ಷನ್ ಮಾಡಿದ್ದಾರೆ. ಹಲವು ಸೂಪರ್ ಹಿಟ್ ಟ್ಯೂನ್‌ಗಳನ್ನು, ಆ ಮೂಲಕ ಹಾಡುಗಳನ್ನು ಗುರುಕಿರಣ್ ಸಿನಿಪ್ರೇಕ್ಷಕರಿಗೆ ಉಪೇಂದ್ರ ಚಿತ್ರಗಳ ಮೂಲಕ ಕೊಟ್ಟಿದ್ದಾರೆ. ಈಗಲೂ ಕೂಡ ಉಪೇಂದ್ರ-ಗುರುಕಿರಣ್ ಜೋಡಿ ಸ್ನೇಹಿತರಾಗಿಯೇ ಇದ್ದಾರೆ. ನಟ ಉಪೇಂದ್ರ ತಮಾಷೆಗೆ 'ಕಿಲಾಡಿ' ಎಂದಿರುವುದನ್ನು ಗುರುಕಿರಣ್ ಕೇಳಿಸಿಕೊಂಡರೆ ಖುಷಿಯಿಂದ ನಗುತ್ತಾರೆ ಹೊರತೂ ನೆಗೆಟಿವ್ ಪ್ರತಿಕ್ರಿಯೆ ಕೊಡಲಾರರು.