ಗೌತಮ್ಗೆ ಪಾನೀಯದಲ್ಲಿ ಮದ್ಯ ಸೇವಿಸಿ ನೀಡಿದ್ದಾನೆ ಗೆಳೆಯ ಆನಂದ್. ಈಗಲಾದ್ರೂ ಭೂಮಿಕಾಗೆ ಪ್ರೀತಿ ನಿವೇದನೆ ಮಾಡಿಕೊಳ್ತಾನಾ ಗೌತಮ್?
ಇದುವರೆಗೂ ಮನಸ್ಸು ಬಿಚ್ಚಿ ಐ ಲವ್ ಯೂ ಎಂದು ಹೇಳದ ಗೌತಮ್ ಮತ್ತು ಭೂಮಿಕಾ ಜೋಡಿ ಸದ್ಯ ಹನಿಮೂನ್ಗೆ ತೆರಳಿದೆ. ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವನ್ನು ಅವರು ಸವಿಯುತ್ತಿದ್ದಾರೆ. ಸದಾ ಜಗಳವಾಡುತ್ತಲೇ ಮದುವೆಯಾಗಿ, ಇದೀಗ ಒಬ್ಬರನ್ನೊಬ್ಬರು ಸಕತ್ ಲವ್ ಮಾಡ್ತಿರೋ ಜೋಡಿ ಇದು. ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ. ಇದೀಗ ಈ ಜೋಡಿ ಹನಿಮೂನ್ಗೆ ಹೋಗಲು ರೆಡಿಯಾಗಿದೆ. ನಾಚಿಕೊಳ್ಳುತ್ತಲೇ ಮಧುಚಂದ್ರಕ್ಕೆ ಹೋಗಿದ್ದಾರೆ. ಇದೇ ವೇಳೆ ಮದುವೆಯಾಗಿ ಇಷ್ಟು ದಿನವಾದರೂ, ಭೂಮಿಕಾರಿಗೆ ತಾನು ಏನೂ ಗಿಫ್ಟ್ ಕೊಟ್ಟಿಲ್ಲ ಎಂದು ಅಜ್ಜಿಯ ಬಳಿ ಹೇಳಿಕೊಂಡ ಗೌತಮ್, ಚಿಕ್ಕಮಗಳೂರಿನಲ್ಲಿರುವ ಎಸ್ಟೇಟ್ ಅನ್ನು ಭೂಮಿಕಾ ಹೆಸರಿಗೆ ಬರೆದು ಕೊಟ್ಟಿದ್ದಾನೆ.
ಇತ್ತ ಈ ಜೋಡಿ ಹೀಗೆ ಪ್ರೀತಿಯ ವಿಷಯ ಹೇಳುವುದೇ ಇಲ್ಲ ಎಂದು ತಿಳಿದಿರುವ ಆನಂದ್ ದಂಪತಿ ಗೌತಮ್ಗೆ ಪಾನೀಯದಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾರೆ. ಇದಾಗಲೇ ಇದೇ ರೀತಿಯ ಪ್ರಯೋಗ ಭೂಮಿಕಾ ಮೇಲೆ ಮಾಡಿಯಾಗಿತ್ತು. ಆಗ ಭೂಮಿಕಾ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಳು. ಇಷ್ಟಾದರೂ ಗೌತಮ್ಗೆ ಅದರ ಅರಿವೇ ಇರಲಿಲ್ಲ. ಆದರೆ ಈಗ ಕಾಲ ಸ್ವಲ್ಪ ಡಿಫರೆಂಟ್ ಆಗಿದೆ. ಪತ್ನಿಯ ಮೇಲೆ ಅವನಿಗೂ ಪ್ರೀತಿ ಮೊಳಗಿದೆ, ಆದರೆ ಹೇಳಿಕೊಳ್ಳೋ ಧೈರ್ಯ ಇಲ್ಲವಷ್ಟೇ. ಇದೇ ಕಾರಣಕ್ಕೆ ಆನಂದ್ ದಂಪತಿ ಮದ್ಯ ಬೆರೆಸಿದ ಪಾನೀಯ ಕೊಟ್ಟಿದ್ದು, ಅದನ್ನು ಗೌತಮ್ ಕುಡಿದಿದ್ದಾನೆ.
ಹನಿಮೂನೋ, ಆಫೀಸ್ ಟೂರೋ? ಮಧುಚಂದ್ರಕ್ಕೂ ಸೂಟು ಬೂಟು ಬೇಕಾ? ಗೌತಮ್ ಕಾಲೆಳೆದ ಫ್ಯಾನ್ಸ್
ಮಾಮೂಲಿನಂತೆ ಇಬ್ಬರೂ ಬೇರೆ ಬೇರೆ ಮಲಗಲು ಹೋಗಿದ್ದಾರೆ. ಭೂಮಿಕಾ ತಾನು ಕೆಳಗೆ ಮಲಗುವುದಾಗಿ ಹೇಳಿದ್ದಾಳೆ. ಅಷ್ಟರಲ್ಲಿ ಮದ್ಯದ ಅಮಲಿನಲ್ಲಿ ಪ್ರೀತಿಯ ಅಮಲೂ ಸೇರಿರೋ ಗೌತಮ್, ಭೂಮಿಕಾಗೆ ಐ ಅಷ್ಟೇ ಹೇಳಿದ್ದಾನೆ. ಮುಂದೆ ಹೇಳಲಿಲ್ಲ. ಅಷ್ಟಕ್ಕೇ ಭೂಮಿಕಾ ನಾಚಿ ನೀರಾಗಿದ್ದಾಳೆ. ಮುಂದಿನ ಎರಡು ಶಬ್ದಗಳೂ ಹೇಳಿ ಬೇಗ ಅಂತಿದ್ದಾರೆ ಅಭಿಮಾನಿಗಳು.
ಅದೇ ಇನ್ನೊಂದೆಡೆ, ಗೌತಮ್ ಚಿಕ್ಕಮ್ಮ ಈ ಜೋಡಿಯ ಕೊಲೆ ಮಾಡಿಸುವ ಪ್ಲ್ಯಾನ್ ಮಾಡಿದ್ದರಿಂದ ಇನ್ನೇನು ಆಗಬಹುದು ಎನ್ನುವ ಆತಂಕವೂ ಅಮೃತಧಾರೆ ಅಭಿಮಾನಿಗಳನ್ನು ಕಾಡುತ್ತಿದೆ. ಮಗ ಗೌತಮ್ ಮತ್ತು ಸೊಸೆ ಭೂಮಿಕಾ ಎಂದಿಗೂ ಒಂದಾಗಬಾರದು ಎಂದು ಬಯಸ್ತಿರೋ, ಸದಾ ಕುತಂತ್ರ ರೂಪಿಸುತ್ತಿರುವ ಅತ್ತೆ ಶಕುಂತಲಾ ದೇವಿ ಈಗ ಇಬ್ಬರನ್ನೂ ಹನಿಮೂನ್ಗೆ ಕಳಿಸುವ ಪ್ಲ್ಯಾನ್ ಮಾಡಿದ್ದಾಳೆ. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಬಂದು ಧಮ್ಕಿ ಹಾಕಿ ಹೋಗಿದ್ದಾರೆ. ಆ ಜಮೀನು ಇರುವುದು ಚಿಕ್ಕಮಗಳೂರಿನಲ್ಲಿ. ಆ ಜಮೀನಿನ ವಿವಾದದ ಬಗ್ಗೆ ಗೌತಮ್ಗೆ ಯಾವುದೇ ಮಾಹಿತಿ ಇಲ್ಲ. ಇದನ್ನು ತಿಳಿಸದಂತೆ ಭೂಮಿಕಾಗೂ ಮನೆಯವರು ಹೇಳಿದ್ದಾರೆ. ಇದನ್ನೇ ದಾಳವಾಗಿಸಿಕೊಂಡ ಶಕುಂತಲಾ ಇಬ್ಬರನ್ನೂ ಹನಿಮೂನ್ ನೆಪದಲ್ಲಿ ಚಿಕ್ಕಮಗಳೂರಿಗೆ ಕಳಿಸುವ ಪ್ಲ್ಯಾನ್ ಮಾಡಿದ್ದಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್.
ಮತ್ತೊಂದೆಡೆ, ಗೌತಮ್ ಮತ್ತು ಭೂಮಿಕಾ ಇಲ್ಲದ ವೇಳೆ ಏನೋ ಪ್ಲ್ಯಾನ್ ಮಾಡಿದ್ದಾನೆ ಜೈದೇವ್. ತನ್ನನ್ನು ಅಪಹರಿಸಿರುವಂತೆ ನಾಟಕವಾಡಿ, ಅದನ್ನು ಪತ್ನಿಯ ಮೊಬೈಲ್ಗೆ ವಿಡಿಯೋ ಕಳಿಸಿದ್ದಾನೆ. ಇದನ್ನು ನೋಡಿ ಮಲ್ಲಿ ಗಾಬರಿಯಾಗಿದ್ದಾಳೆ. ಕೊನೆಗೆ ಜೈದೇವ್ ಕಪಾಟಿನಲ್ಲಿ ಇಟ್ಟಿರೋ ಫೈಲ್ ಒಂದನ್ನು ತಂದುಕೊಡುವಂತೆ ಮಲ್ಲಿಗೆ ಹೇಳಿದ್ದಾರೆ. ಇದು ಮೋಸದಾಟ ಎಂದು ಅರಿಯದ ಮಲ್ಲಿ ಫೈಲ್ ತೆಗೆದಿದ್ದಾಳೆ. ಅದೇ ವೇಳೆ ಭೂಮಿಕಾ ಹೇಳಿದಮಾತು ಅವಳಿಗೆ ನೆನಪಾಗಿದೆ. ಹನಿಮೂನ್ಗೆ ಹೋಗುವ ಸಂದರ್ಭದಲ್ಲಿ ಭೂಮಿಕಾ ಮಲ್ಲಿಗೆ, ನೀನು ತುಂಬಾ ಎಚ್ಚರದಿಂದ ಇರು. ಏನೇ ಒಂದು ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನನ್ನನ್ನು ಒಂದು ಮಾತು ಕೇಳು ಎಂದಿರುತ್ತಾಳೆ. ಅದು ನೆನಪಾಗಿದೆ.
ಮನೆ ಎರಡು ಭಾಗವಾಗಿದ್ಯಲ್ಲಾ... ಟಾಯ್ಲೆಟ್ ಹೇಗೆ ಯೂಸ್ ಮಾಡ್ತೀರಾ? ಸೃಜನ್ ಪ್ರಶ್ನೆಗೆ ಭಾಗ್ಯ ಹೇಳಿದ್ದೇನು?