ಜಮೀರ್‌ಗೆ ಸಿದ್ದು ಫುಲ್ ಕ್ಲಾಸ್, ಕಂಗನಾ ಅಭಿಮಾನಿ ಅರೆಸ್ಟ್: ಸೆ.11ರ ಟಾಪ್ 10 ಸುದ್ದಿ!

By Suvarna NewsFirst Published Sep 11, 2020, 4:47 PM IST
Highlights

ವಿವಾದದಲ್ಲಿ ಸಿಲುಕಿಕೊಳ್ಳುತ್ತಿರುವ ಶಾಸಕ ಜಮೀರ್ ಅಹ್ಮರ್‌ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ನಿಂತಿರುವ ಗುಲಾಂ ನಬಿ ಆಜಾಧ್ ಏಕಾಂಗಿಯಾಗಿದ್ದಾರೆ. ಬಿಎಸ್ ಯಡಿಯೂರಪ್ಪ ಮನೆಗೆ, ಹೆಚ್ ಡಿ ಕುಮಾರಸ್ವಾಮಿ ದಿಝೀರ್ ಭೇಟಿ ನೀಡಿದ್ದಾರೆ. ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ ಕುರಿತು ಕೇಂದ್ರ ಪರಿಶೀಲನೆ, ಕಂಗನಾ ಅಭಿಮಾನಿ ಅರೆಸ್ಟ್ ಸೇರಿದಂತೆ ಸೆಪ್ಟೆಂಬರ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಮಹಾರಾಷ್ಟ್ರ ಸಿಎಂ, ಸಂಸದನಿಗೆ ಬೆದರಿಕೆ ಕರೆ: ಕಂಗನಾ ಅಭಿಮಾನಿ ಅರೆಸ್ಟ್...!...

ಶಿವಸೇನೆ ಮುಖಂಡ, ಸಂಸದ ಸಂಜಯ್ ರಾವತ್‌ಗೆ ಬೆದರಿಕೆ ಕರೆ ಮಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿಮಾನಿಯನ್ನು ದಕ್ಷಿಣ ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ.

ಕಾಂಗ್ರೆಸ್‌ನಲ್ಲಿ ಗುಲಾಂ ನಬಿ ಈಗ ಏಕಾಂಗಿ; ಬರೆಯಲಿದ್ದಾರೆ ಪುಸ್ತಕ...

ಸತತ 40 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗಾಂ​ಧಿಗಳ ಜೊತೆ ಇದ್ದ ಗುಲಾಂ ನಬಿ ಮೊದಲ ಬಾರಿಗೆ ಪ್ರವಾಹದ ವಿರುದ್ಧ ಈಜುತ್ತಿದ್ದಾರೆ. ಹೀಗಾಗಿ ಪ್ರವಾಹದ ಜೊತೆಗಿರುವ ಕಾಂಗ್ರೆಸ್‌ನ ಅಜಾದ್‌ ಅವರೇ ಬೆಳೆಸಿದ ಯುವ ನಾಯಕರು ಗುಲಾಂ ನಬಿ ಅವರನ್ನು ಬಹಿರಂಗವಾಗಿ ಬಯ್ಯುತ್ತಿದ್ದಾರೆ. 

ಚೀನಾ ಸಂಘರ್ಷ ಬೆನ್ನಲ್ಲೇ ಭಾರತ- ಜಪಾನ್‌ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ...

ಲಡಾಖ್‌ ಗಡಿ ಬಿಕ್ಕಟ್ಟು ಉದ್ವಿಗ್ನ ಸ್ಥಿತಿ ತಲುಪಿರುವಾಗಲೇ, ಚೀನಾದಿಂದ ಕಿರುಕುಳ ಎದುರಿಸುತ್ತಿರುವ ಭಾರತ ಮತ್ತು ಜಪಾನ್‌ ಗುರುವಾರ ರಕ್ಷಣಾ ಸಹಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಅ ಮೂಲಕ ಗಡಿಯಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಚೀನಾಗೆ ಪರೋಕ್ಷ ಸಂದೇಶ ರವಾನಿಸಿವೆ.

ಮೀನುಗಾರರು, ರೈತರಿಗೆ ಕೇಂದ್ರದ ಬಂಪರ್ ನೆರವು...

ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷಿ ಗುರಿಯ ಭಾಗವಾಗಿ, ಮೀನುಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆ ಹಾಗೂ ರಫ್ತು ಹೆಚ್ಚಳ ಮಾಡಲು 20,050 ಕೋಟಿ ರು. ವೆಚ್ಚದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ)ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ.

CPL 2020: ಶಾರುಖ್ ಖಾನ್ ಒಡೆತನದ TKR ಚಾಂಪಿಯನ್...

ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶಾರುಖ್ ಖಾನ್ ಒಡೆತನದ ಟ್ರಿನ್‌ಬಾಗೋ ನೈಟ್‌ ರೈಡರ್ಸ್ ತಂಡ ದಾಖಲೆಯ ದಾಖಲೆಯ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ಮನೆಗೆ ಕರೆಸಿಕೊಂಡು ಜಮೀರ್‌ಗೆ ಸಿದ್ದರಾಮಯ್ಯ ಫುಲ್ ಕ್ಲಾಸ್...!...

ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮರ್‌ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಚ್ಚರಿ ಬೆಳವಣಿಗೆ: ಬಿಎಸ್‌ವೈ ಮನೆಗೆ ಎಚ್‌ಡಿಕೆ, ಉಭಯ ನಾಯಕರ ಭೇಟಿ ರಹಸ್ಯವೇನು.?...

ರಾಜಕೀಯ ಬದ್ಧ ವೈರಿಗಳಾದ ಸಿಎಂ ಬಿಎಸ್ ಯಡಿಯುರಪ್ಪ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮುಖಾಮುಖಿ ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ: ಕೇಂದ್ರದ ಪರಿಶೀಲನೆ...

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್‌ ಇದ್ದ ಕಾರಣ ಆರ್ಥಿಕ ಪರಿಸ್ಥಿತಿ ಬುಡ ಮೇಲಾಗಿದ್ದು, ಇಎಂಐ ಕಟ್ಟಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಲಾವಾಕಾಶ ನೀಡಿತ್ತು. ಆದರೆ, ಇದಕ್ಕೆ ಬಡ್ಡಿ ಕಟ್ಟುವ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪರಿಶೀಲಿಸಲು ಸೂಚಿಸಿದೆ.

'ಎವರು' ಕನ್ನಡ ರೀಮೇಕ್‌ನಲ್ಲಿ ಹರಿಪ್ರಿಯಾ!

ತೆಲುಗಿನಲ್ಲಿ ಸೂಪರ್‌ ಹಿಟ್‌ ಆದ ಕ್ರೈಮ್‌ ಥ್ರಿಲ್ಲರ್‌ ‘ಎವರು’ ಚಿತ್ರವನ್ನು ಕನ್ನಡಕ್ಕೆ ರೀಮೇಕ್‌ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಶಾಲೆ ಪ್ರಾರಂಭಕ್ಕೆ ಕೇಂದ್ರ ಗೈಡ್‌ಲೈನ್ಸ್‌: ಮಹತ್ವ ಮಾಹಿತಿ ನೀಡಿದ ರಾಜ್ಯ ಹಿರಿಯ ಶಿಕ್ಷಣ ಅಧಿಕಾರಿ...

ಲಾಕ್‌ಡೌನ್ ಬಳಿಕ ಮತ್ತೆ ಶಾಲೆ ಪುನರಾರಂಭ ಮಾಡಲು ಕೇಂದ್ರ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೆ ಕರ್ನಾಟಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸುವರ್ಣನ್ಯೂಸ್‌ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

click me!