ಸಾಲಗಾರ ಮಲ್ಯ ವಾಪಸ್, ಅಭಿಮಾನಿಗಳಲ್ಲಿ ರಮ್ಯಾ ರಿಕ್ವೆಸ್ಟ್: ಜೂ.4ರ ಟಾಪ್ 10 ಸುದ್ದಿ!

By Suvarna NewsFirst Published Jun 4, 2020, 4:46 PM IST
Highlights

ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ಕೆಂಗೆಟ್ಟ ಕಾರ್ಮಿಕರಿಗೆ ವಲಸೆ ಎಂದು ಪದ ಬಳಕೆ ಮಾಡುವುದು ಸರಿಯಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ. ಇತ್ತ ಸೋಂಕಿತರ ಚಿಕಿತ್ಸೆಗೆ ಅಮೆರಿಕ ಇದೇ ವಾರ 100 ವೆಂಟಿಲೇಟರ್ ಉಚಿತವಾಗಿ ಭಾರತಕ್ಕೆ ನೀಡುತ್ತಿದೆ.  ಲಂಡನ್‌ನಲ್ಲಿ ಹಾಯಾಗಿದ್ದ ಸಾಲಗಾರ ವಿಜಯ್ ಮಲ್ಯರನ್ನು ಕೊನೆಗೂ ಭಾರತಕ್ಕೆ ವಾಪಾಸ್ ಕರೆತರಲಾಗುತ್ತಿದೆ. ಡಿಕೆ ಶಿವಕುಮಾರು ಪುತ್ರಿ ಮದುವೆ, ಅಭಿಮಾನಿಗಳಲ್ಲಿ ರಮ್ಯಾ ಮನವಿ ಸೇರಿದಂತೆ ಜೂನ್ 04ರ ಟಾ್ 10 ಸುದ್ದಿ ಇಲ್ಲಿವೆ.

ಈ ಒಂದು ಪದ ಬಳಕೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಕೆಂಡಾಮಂಡಲ

ಕೊರೋನಾ ಸಂಕಷ್ಟ ಎಲ್ಲರನ್ನು ಕಾಡಿದೆ.  ಕೆಲಸ ಅರಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದವರು ಪುನಃ ತಮ್ಮ ತಾಯ್ನಾಡಿಗೆ ತೆರಳಲು ಹರಸಾಹಸ ಮಾಡುತ್ತಿದ್ದಾರೆ. ಈ ಕಾರ್ಮಿಕರನ್ನು ವಲಸೆ ಕಾರ್ಮಿಕರು ಎಂದು ಕರೆಯಲಾಗಿದೆ. ಆದರೆ ಈ ವಲಸೆ ಕಾರ್ಮಿಕರು ಎಂಬ ಪದ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರಿಗೆ ಹಿಡಿಸಿಲ್ಲ.

ಭಾರತಕ್ಕೆ ವಾರದಲ್ಲಿ ಅಮೆರಿಕದಿಂದ 100 ವೆಂಟಿಲೇಟರ್‌!

ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಮುಂದಿನ ವಾರ 100 ವೆಂಟಿಲೇಟರ್‌ಗಳನ್ನು ಉಚಿತವಾಗಿ ಭಾರತಕ್ಕೆ ಕಳುಹಿಸಿಕೊಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಸಿದ್ಧಾರ್ಥನ ಮಗನ ವರಿಸೋ ಡಿಕೆಶಿ ಮಗಳು ಸಾವಿರ ಕೋಟಿ ಒಡತಿ...!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಅಮರ್ಥ್ಯ‌ ಹೆಗ್ಡೆಗೆ ಮದುವೆ ಮಾಡಲು ಇತ್ತೀಚೆಗೆ ಉಭಯ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಗುಡ್ ಟೈಮ್ಸ್ ಎಂಡ್; ಕೈ ಕೊಟ್ಟ ಪ್ಲಾನ್, ಕೊನೆಗೂ ಭಾರತಕ್ಕೆ ಸಾಲಗಾರ ಮಲ್ಯ!

ಕೊರೋನಾ ಕಾಲದಲ್ಲಿ ಮತ್ತೊಂದು ಸುದ್ದಿ ಬಂದಿದೆ. ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಟೋಪಿ ಹಾಕಿ ಲಂಡನ್ ನಲ್ಲಿ ಹಾಯಾಗಿದ್ದ ಒಂದು ಕಾಲದ ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ.

ಗರ್ಭೀಣಿ ಆನೆ ಕೊಂದ ಸುದ್ದಿ ಕೇಳಿ ಮರುಗಿದ ಕೊಹ್ಲಿ, ರೋಹಿತ್; ಜನತೆಗೆ ಮನವಿ ಮಾಡಿದ ಕ್ರಿಕೆಟರ್ಸ್!

ಕೇರಳದಲ್ಲಿ ಆಹಾರ ಹುಡುಕಿ ಅಲೆದಾಡಿದ ಗರ್ಭಿಣಿ ಅನೆಗೆ ಸ್ಫೋಟಕವಿಟ್ಟ ಪೈನಾಪಲ್ ನೀಡಿ ಕೊಂದ ಘಟನೆಗೆ ಇಡೀ ದೇಶವೇ ಕಣ್ಣೀರಿಟ್ಟಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒತ್ತಾಯ ಕೇಳಿಬರುತ್ತಿದೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ಜನತೆಯಲ್ಲಿ ಕೈಮುಗಿದು ಮನವಿಯೊಂದನ್ನು ಮಾಡಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟಲ್ಲಿ ವಿಮಾನ ಹತ್ತುವವರು ಈ ವಿಡಿಯೋ ನೋಡಲೇಬೇಕು..!

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊರೊನಾ ಕಟ್ಟೆಚ್ಚರಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಹೊಸ ಅವಿಷ್ಕಾರ ಮಾಡಲಾಗಿದೆ. ಪ್ರಯಾಣಿಕರ ಬೋರ್ಡಿಂಗ್ ಪಾಸ್‌ನಿಂದ ಹಿಡಿದು ವಿಮಾನ ಹತ್ತುವವರೆಗೂ ಎಲ್ಲಾ ಸೇವೆಗಳನ್ನು ಸ್ವಯಂ ಚಾಲಿತವಾಗಿ ಮಾಡುವ ವ್ಯವಸ್ಥೆ ಇದೆ. ಏರ್‌ಪೋರ್ಟ್ ಸಿಬ್ಬಂದಿ ಕಾಂಟ್ಯಾಕ್ಟ್‌ ಲೆಸ್ ವ್ಯವಸ್ಥೆ ಮಾಡಲಾಗಿದೆ. 

ಒಂದೊಳ್ಳೆ ಕೆಲಸಕ್ಕೆ ಅಭಿಮಾನಿಗಳಲ್ಲಿ ರಮ್ಯಾ ಮನವಿ...

ಫೇಸ್ ಬುಕ್ ನಲ್ಲಿ ಪ್ರತ್ಯಕ್ಷವಾದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮಾನವನ ಘೋರ ಕೆಲಸಕ್ಕೆ ಬಲಿಯಾದ ಆನೆಯ  ಸಾವಿಗೆ ನ್ಯಾಯ ಕೇಳಿದ್ದಾರೆ. ಕೆಪಿಸಿಸಿ ಸೋಶಿಯಲ್ ಮೀಡಿಯಾ ವಿಂಗ್ ನೋಡಿಕೊಳ್ಳುತ್ತಿದ್ದ ರಮ್ಯಾ ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಿಂದಲೇ ನಾಪತ್ತೆಯಾಗಿದ್ದರು. 

365ರೂಪಾಯಿಗೆ 365 ದಿನ ವ್ಯಾಲಿಡಿಟಿ; ಭರ್ಜರಿ ಆಫರ್ ಘೋಷಿಸಿದ BSNL!...

ಲಾಕ್‌ಡೌನ್ ಸಡಿಲಿಕೆಯಾಗಿ ಇದೀಗ ಭಾರತ ಅನ್‌ಲಾಕ್ 1 ಹಂತ ಪ್ರವೇಶಿಸುತ್ತಿದೆ. ಇತ್ತ ಭಾರತೀಯ ದೂರ ಸಂಚಾರ ನಿಗಮ ಲಿಮಿಟೆಡ್(BSNL)ಭರ್ಜರಿ ಆಫರ್ ಘೋಷಿಸಿದೆ. 356 ರೂಪಾಯಿಗೆ ಒಂದು ವರ್ಷ ವ್ಯಾಲಿಟಡಿಟಿ, ಡಾಟಾ, ವಾಯ್ಸ್ ಕಾಲ್ ಸೇರಿದಂತೆ ಹಲವು ಆಫರ್ ಲಾಂಚ್ ಮಾಡಿದೆ. BSNL ನೂತನ ಆಫರ್ ವಿವರ ಇಲ್ಲಿದೆ.

ಸರ್ಕಾರಿ ಬ್ಯಾಂಕುಗಳ ವಿಲೀನ ಆಯ್ತು, ಈಗ ಖಾಸಗೀಕರಣ? ಯಾವೆಲ್ಲ ಬ್ಯಾಂಕ್?

ಹಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮೂಲಕ ಅವುಗಳನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ, ಇದೀಗ ಕೆಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸಿದೆ.

ಸ್ಟಾರ್‌ಗಳ ಸಿನಿಮಾವನ್ನೇ ಹಿಂದಿಕ್ಕಿದ ಸಾಯಿ ಪಲ್ಲವಿ 'ಲವ್‌ ಸ್ಟೋರಿ'; ಮಾರಾಟದ ಮೊತ್ತ ಕೇಳಿ ಶಾಕ್?...

ಟಾಲಿವುಡ್‌ ಸ್ಟಾರ್ ನಟರ ಸಿನಿಮಾ ಮಾರಟದ ಬೆಲೆಗಳನ್ನು ಹಿಂದಿಕ್ಕುತ್ತಿದೆ ಮಲ್ಲರ್‌ ಬ್ಯೂಟಿ ಸಾಯಿ ಪಲ್ಲವಿ ಸಿನಿಮಾ, ಮಾರಾಟದ ಮೊತ್ತ ಎಷ್ಟು ಗೊತ್ತಾ ? 

click me!