ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಗದಗ ಜಿಲ್ಲೆಯ ನರಗುಂದದ ಬಳಿ ಕುರ್ಲಗೇರಿಯಲ್ಲಿ ನಡೆದಿದೆ. ಆರೋಪಿ ಫೈರೋಜ್ ಕಾಲಿಗೆ ಗುಂಡೇಟು. ಗದಗನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಸ್ಥಳ ಮಹಜರು ನಡೆಸಲು ಕರೆತಂದಿದ್ದ ವೇಳೆ ನಡೆದಿರುವ ಘಟನೆ
ಗದಗ (ಏ.29): ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಗದಗ ಜಿಲ್ಲೆಯ ನರಗುಂದದ ಬಳಿ ಕುರ್ಲಗೇರಿಯಲ್ಲಿ ನಡೆದಿದೆ.
ಆರೋಪಿ ಫೈರೋಜ್ ಕಾಲಿಗೆ ಗುಂಡೇಟು. ಗದಗನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಸ್ಥಳ ಮಹಜರು ನಡೆಸಲು ಫೈರೋಜ್ ಮತ್ತವನ ಗ್ಯಾಂಗ್ ಕರೆದುಕೊಂಡು ಬಂದಿದ್ದ ಪೊಲೀಸರು. ಸ್ಥಳ ಮಹಜರು ನಡೆಸುವ ವೇಳೆ ಪಿಎಸ್ಐ ಶಿವಾನಂದ ಪಾಟೀಲರಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಲು ಮುಂದಾಗಿದ್ದ ಆರೋಪಿ. ಹಲ್ಲೆ ಮಾಡಿದ ಫೈರೋಜ್ ಕಾಲಿಗೆ ಗುಂಡೇಟು ನೀಡಿದ ಪೊಲೀಸರು.
ಘಟನೆ ಹಿನ್ನೆಲೆ: ನಗರಸಭೆ ಮಾಜಿ ಉಪಾಧ್ಯಕ್ಷೆ ಮನೆಯಲ್ಲಿ ಮರ್ಡರ್: ಚಾಕುವಿನಿಂದ ಇರಿದು ಮಲಗಿದ್ದ ನಾಲ್ವರ ಹತ್ಯೆ!
ಏಕಾಏಕಿ ನಡೆದ ದಾಳಿಯಿಂದ ಘಟನೆಯಲ್ಲಿ ಪಿಎಸ್ ಐ ಶಿವಾನಂದ ಪಾಟೀಲರಿಗೆ ತಲೆಗೆ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಪೊಲೀಸರಿಂದ ಗುಂಡೇಟು ತಿಂದು ಗಾಯಗೊಂಡಿರೋ ಆರೋಪಿ ಫೈರೋಜ್ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ತಿಂಗಳು ಏ.19ರಂದು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳು. ಪ್ರಕರಣದ ಎ 2 ಆರೋಪಿ ಫೈರೋಜ್. ಇಂದು ಮಹಜರು ನಡೆಸುವ ವೇಳೆ ಪೊಲೀಸರ ಮೇಲೆ ಅಟ್ಯಾಕ್ ಮಾಡಿರುವ ಖದೀಮ.