ಸರ್ಕಾರಿ ನೌಕರರಿಗೆ ಬಂಪರ್, ಸಿಎಂಗೆ ಯತ್ನಾಳ್ ವಾರ್ನಿಂಗ್: ಇಲ್ಲಿದೆ ಅ. 21ರ ಟಾಪ್ 10 ಸುದ್ದಿಗಳು!

By Suvarna NewsFirst Published Oct 21, 2020, 5:55 PM IST
Highlights

ಕೊರೋನಾತಂಕ ನಡುವೆಯೂ ಕರ್ನಾಟಕದಲ್ಲಿ ಆರ್‌ಆರ್ ನಗರ ಹಾಗೂ ಶಿರಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದ್ದು, ರಾಜಕೀಯ ನಾಯಕರ ನಡುವೆ ವಾಕ್ಸಮರಕ್ಕೆ ಮಣೆ ಹಾಕಿದೆ. ಹೀಗಿರುವಾಗಳೆ ಅತ್ತ ಬಿಜೆಪಿ ಶಾಸಕ ಯತ್ನಾಳ್ ಸಿಎಂ ಬದಲಾವಣೆ ಕುರಿತಾಗಿ ನೀಡಿರುವ ಹೇಳಿಕೆ ಪಕ್ಷಕ್ಕೆ ಮುಜುಗರವುಂಡು ಮಾಡಿದೆ. ಹಿರಿಯ ನಾಯಕರು ಶಿಸ್ತು ಕ್ರಮ ಜಾರಿಗೊಳಿಸುವ ವಾರ್ನಿಂಗ್ ನಿಡಿದ್ದರೂ, ಇಂದು ಯತ್ನಾಳ್ ಮತ್ತೆ ಸಿಎಂಗೆ ವಾರ್ನಿಂಗ್ ನಿಡಿದ್ದಾರೆ. ರಾಜ್ಯ ರಾಜಕೀಯ ಸಂಚಲನದ ನಡುವೆಯೇ ಅತ್ತ ಕೇಂದ್ರ ಸರ್ಕಾರ ಸಿ, ಡಿ ಗ್ರೂಪ್ ನೌಕರರಿಗೆ ದಸರಾ ಬೋನಸ್ ಘೋಷಿಸಿದೆ. ಇದು ನೌಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇಷ್ಟೇ ಅಲ್ಲದೇ ಇಂದಿನ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ ನೋಡಿ

ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ದಸರಾ ಉಡುಗೊರೆ: 3,737 ಕೋಟಿ ಬೋನಸ್ ಪ್ರಕಟ!

ಕೇಂದ್ರ ಸರ್ಕಾರ ತನ್ನ ಸಿ ಮತ್ತು ಡಿ ದರ್ಜೆ ನೌಕರರಿಗೆ ಕಳೆದ ಹಣಕಾಸು ವರ್ಷದ ಬೋನಸ್ ಘೋಷಿಸಿದೆ. 30 ಲಕ್ಷ ನೌಕರರಿಗೆ 3,737 ಕೋಟಿ ರೂ, 2019-20ನೇ ಸಾಲಿನ ಬೋನಸ್ ರೂಪದಲ್ಲಿ ಸಿಗಲಿದೆ. ನೌಕರರಿಗೆ ಬೋನಸ್ ನೀಡುವ ಈ ನಿರ್ಧಾರಕ್ಕೆ ಕೇಂದ್ರ ಸಂಪುಟದಿಂದ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ಗುಡ್ ನ್ಯೂಸ್

ರಾಜ್ಯದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರುಗಳಿಗೆ ವರ್ಗಾವಣೆಗಾಗಿ ಒಂದೇ ವಾರದ ಒಳಗಾಗಿ ಶಿಕ್ಷಣ ಇಲಾಖೆಯಿಂದ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಸಿಎಂ ವಿರುದ್ಧ ಮತ್ತೆ ಹರಿಹಾಯ್ದ ಯತ್ನಾಳ್, ಯಡಿಯೂರಪ್ಪಗೆ ಎಚ್ಚರಿಕೆ ಸಂದೇಶ..!

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಸಿಎಂ ಬಿಎಸ್‌ವೈ ವಿರುದ್ಧ ಸಿಡಿದೆದ್ದಿದ್ದು, ಫೇಸ್‌ಬುಕ್‌ನಲ್ಲಿ ಮತ್ತೆ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

3 ವರ್ಷ ಬಿಎಸ್‌ವೈ ರಾಜ್ಯದ ಸಿಎಂ, ಬದಲಾವಣೆ ಮಾತೇ ಇಲ್ಲ: ಗುಡುಗಿದ ಬಿಜೆಪಿ ಸಾರಥಿ!

ಆರ್‌ಆರ್‌ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆ ಹೊಸ್ತಿಲಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಎಂ ಬದಲಾವಣೆ ಸಂಬಂಧ ನೀಡಿದ್ದ ಹೇಳಿಕೆ ಪಕ್ಷಕ್ಕೆ ಭಾರೀ ಮುಜುಗರವುಂಟು ಮಾಡಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂಬ ಮಾತುಗಳೂ ಕೇಳಿ ಬಂದಿದ್ದವು. ಆದರೀಗ ಈ ಸಂಬಂಧ ರಾಜ್ಯ ಬಿಜೆಪಿ ಸಾರಥಿ ನಳಿನ್ ಕುಮಾರ್ ಸ್ಪಷ್ಟನೆ ನೀಡಿದ್ದು, ಮುಂದಿನ ಮೂರು ವರ್ಷ ಸಿಎಂ ಬದಲಾವಣೆ ಮಾತೇ ಇಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

ಕೆ.ಆರ್.ಪೇಟೆಯಂತೆ ಶಿರಾದಲ್ಲಿ ಗೆಲ್ಲಲು ಬಿಜೆಪಿ ಪ್ಲಾನ್: 'ಎವೆರಿ ಡೆ ಈಸ್ ನಾಟ್ ಸಂಡೆ' ಎಂದ ಎಚ್‌ಡಿಕೆ

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ನಡುವೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳ ಸಹ ಜೋರಾಗಿವೆ.

ಸಂಬರಗಿ ಮತ್ತೊಂದು ಸ್ಫೋಟಕ ಹೇಳಿಕೆ : ಕಾಂಗ್ರೆಸ್‌ ಮುಖಂಡರತ್ತ ಈ ಮಾತು

ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್‌ ಧರ್ಮದ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿ ಎಲ್ಲ ವಿದ್ಯಾವಂತರಿಗೆ ಮಾಡಿರುವ ಅವಮಾನ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಟೀಕಿಸಿದ್ದಾರೆ.

ಕೊರೋನಾ ಸೋಂಕು: ದೇಶದಲ್ಲೇ ಕರ್ನಾಟಕ ನಂಬರ್ 2!

ದೇಶದಲ್ಲಿರುವ ಒಟ್ಟಾರೆ ಕೊರೋನಾ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ಸೇರಿ ದೇಶದ 6 ರಾಜ್ಯಗಳಲ್ಲೇ ಶೇ.64ರಷ್ಟುಕೇಸುಗಳಿವೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳದಲ್ಲೇ ಶೇ.50ರಷ್ಟುಪ್ರಕರಣಗಳಿವೆ. ಕರ್ನಾಟಕದ 6 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಅಧಿಕವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಫ್ರೆಂಡ್ಸ್‌ಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ ಮಂದಣ್ಣ; ವಿಡಿಯೋ ವೈರಲ್!

ಸ್ಯಾಂಡಲ್‌ವುಡ್‌ ಬಟ್ಟಲು ಕಣ್ಣಿನ ಚೆಲುವೆ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್‌ ಹಿಟ್‌ ಚಿತ್ರಗಳನ್ನು ನೀಡುತ್ತಾ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ರಶ್ಮಿಕಾ, ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತಾರೆ ಎಂದು ಅಭಿಮಾನಿಗಳಿಗೆ ಅಪ್ಡೇಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ತಮ್ಮ ಆಪ್ತ ಗೆಳೆಯರಿಗೆ ಸರ್ಪ್ರೈಸ್ ಕೊಟ್ಟ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

IPL 2020: ಎಬಿ ಡಿವಿಲಿಯರ್ಸ್ ಭೀತಿಯಲ್ಲಿ ಕೆಕೆಆರ್..!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವಂತೆ ಭಾರತೀಯ ಮತದಾರನ್ನು ಸೆಳೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆಮೊಕ್ರೆಟ್‌ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ಜೊ ಬೈಡನ್‌ ಬೆಂಬಲಿಗರ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ. 

click me!