ಇಂಜಿನಿಯರಿಂಗ್ ಓದ್ತಿದ್ರೂ ನೋ ಕಾಮನ್‌ಸೆನ್ಸ್: ರೀಲ್ಸ್ ಮಾಡ್ತಾ ರೈಲಡಿಗೆ ಬಿದ್ದು ಯುವತಿ ಸಾವು

By Anusha Kb  |  First Published May 2, 2024, 4:38 PM IST

ರೈಲ್ವೆ ಹಳಿಯ ಮೇಲೆ ರೀಲ್ಸ್ ಮಾಡ್ತಿದ್ದ 20 ವರ್ಷದ ವಿದ್ಯಾರ್ಥಿನಿಯೊರ್ವಳು ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಉತ್ತರಾಖಂಡ್ ರಾಜ್ಯದ ರೂರ್ಕಿಯಲ್ಲಿ ನಡೆದಿದೆ.


ರೂರ್ಕಿ: ರೈಲ್ವೆ ಹಳಿಯ ಮೇಲೆ ರೀಲ್ಸ್ ಮಾಡ್ತಿದ್ದ 20 ವರ್ಷದ ವಿದ್ಯಾರ್ಥಿನಿಯೊರ್ವಳು ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಉತ್ತರಾಖಂಡ್ ರಾಜ್ಯದ ರೂರ್ಕಿಯಲ್ಲಿ ನಡೆದಿದೆ.  ಈಕೆಯ ಜೊತೆ ಇದ್ದ ಇನ್ನಿಬ್ಬರು ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು 20 ವರ್ಷದ ವೈಶಾಲಿ ಕೊರ್ ಎಂದು ಗುರುತಿಸಲಾಗಿದೆ. ರೂರ್ಕಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ವೈಶಾಲಿ ಕೋರ್ ತನ್ನ ಇಬ್ಬರು ಕಾಲೇಜು ಸ್ನೇಹಿತೆಯರ ಜೊತೆ ನಿನ್ನೆ ಸಂಜೆ 8 ಗಂಟೆ ಸುಮಾರಿಗೆ ರೀಲ್ಸ್ ಮಾಡುವುದಕ್ಕಾಗಿ ರಾಹಿಪುರದ ರೈಲ್ವೆ ಕ್ರಾಸಿಂಗ್‌ ಬಳಿ ರೈಲು ಹಳಿಗಳ ಮೇಲೆ ಬಂದಿದ್ದಾಳೆ. ಬಳಿಕ ಹಳಿಗಳ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದಾಗ ದುರಂತ ಸಂಭವಿಸಿದ್ದು, ಯುವತಿ ಸಾವನ್ನಪ್ಪಿದ್ದಾಳೆ. 

ಈಕೆ ತನ್ನ ಚಿಕ್ಕಪ್ಪನ ಜೊತೆ ಪನಿಯಲ ರಸ್ತೆಯ ಶಿವಪುರಂ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದಳು. ಕಾಲೇಜು ಮುಗಿಸಿ ಬಂದ ನಂತರ ಸಂಜೆ ವೇಳೆ ಸ್ನೇಹಿತೆಯರ ಜೊತೆ ರೀಲ್ಸ್ ಮಾಡುವುದಕ್ಕೆ ರೈಲ್ವೆ ಟ್ರ್ಯಾಕ್‌ಗೆ ಬಂದಿದ್ದಾರೆ. ಬಳಿಕ ರೈಲು ಬರುವುದನ್ನು ಕೂಡ ಗಮನಿಸದೇ  ಹಳಿ ಮೇಲೆ ರೀಲ್ಸ್ ಮಾಡುತ್ತಾ ನಿಂತಿದ್ದಾಗ ರೈಲು ಬಂದಿದ್ದು, ಈಕೆಗೆ ಡಿಕ್ಕಿ ಹೊಡೆದುಕೊಂಡು ಮುಂದೆ ಸಾಗಿದೆ. ಪರಿಣಾಮ ವೈಶಾಲಿ ಸಾವನ್ನಪ್ಪಿದರೆ ಈಕೆಯ ಜೊತೆಗಿದ್ದ ಇನ್ನಿಬ್ಬರು ಸ್ನೇಹಿತೆಯರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಘಟನೆ ಬಗ್ಗೆ ವೈಶಾಲಿ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಕೂಡಲೇ ಅವರು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಾಗಲೇ ವೈಶಾಲಿ ಉಸಿರು ಚೆಲ್ಲಿದ್ದಾಳೆ. 

Tap to resize

Latest Videos

ರೈಲ್ವೆ ಬ್ರಿಡ್ಜ್ ಮೇಲೆ ರೀಲ್ಸ್ ಮಾಡಲು ಹೋಗಿ ಇಬ್ಬರು ಬಾಲಕರು ಸಾವು

ಗಂಗನಹರ್ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದ್ ಕುಮಾರ್,  ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಾಥಮಿಕ ವರದಿಗಳ ಪ್ರಕಾರ  ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್‌ನಲ್ಲಿ ರೀಲ್ಸ್ ಮಾಡ್ತಿದ್ದಾಗಲೇ ಈ ಅನಾಹುತ ಸಂಭವಿಸಿದೆ. ಮೃತ ದೇಃವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ಇಂತಹ ಪ್ರಕರಣ ನಡೆದಿರುವುದು ಇದೇ ಮೊದಲೆನಲ್ಲಾ, ರೈಲು ಹಳಿಯ ಮೇಲೆ ರೀಲ್ಸ್ ಮಾಡುವ ವೇಳೆ ರೈಲು ಬಂದಿದ್ದು ತಿಳಿಯದೇ ಈ ಹಿಂದೆಯೂ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.  ಮಕ್ಕಳು ವಿದ್ಯಾವಂತರಾಗಿದ್ದರೂ ಜೀವಕ್ಕೆ ಎರವಾಗುವಂತಹ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಲು ಹೋಗಿ  ಪ್ರಾಣ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ವಿಚಾರವಾಗಿದೆ. 

ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ!

click me!