ಮೋದಿಯವರ ಸಾವು ಬಯಸುವುದು ಅಕ್ಷಮ್ಯ ಅಪರಾಧ: ರಾಜು ಕಾಗೆ ಹೇಳಿಕೆಗೆ ರಾಘವೇಂದ್ರ ತಿರುಗೇಟು

By Girish Goudar  |  First Published May 2, 2024, 4:55 PM IST

ಪ್ರಧಾನಿ ಮೋದಿಯವರ ಸಾವನ್ನು ಬಯಸುವುದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಇದು ಯಾವುದೇ ಯುದ್ಧವಲ್ಲ. ಮೋದಿಯವರ ಸಾವು ಬಯಸುವುದು ಅಕ್ಷಮ್ಯ ಅಪರಾಧವಾಗಿದೆ. ಈ ರೀತಿ ವ್ಯಯಕ್ತಿಕ ಟೀಕೆಗಳು ಮಾಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ ಹೇಳಿಕೆಗೆ ತಿರುಗೇಟು ನೀಡಿದ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ 


ಶಿವಮೊಗ್ಗ(ಮೇ.02):  ಪ್ರಧಾನಿ ಮೋದಿಯವರ ಸಾವನ್ನು ಬಯಸುವುದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಇದು ಯಾವುದೇ ಯುದ್ಧವಲ್ಲ. ಮೋದಿಯವರ ಸಾವು ಬಯಸುವುದು ಅಕ್ಷಮ್ಯ ಅಪರಾಧವಾಗಿದೆ. ಈ ರೀತಿ ವ್ಯಯಕ್ತಿಕ ಟೀಕೆಗಳು ಮಾಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ ಹೇಳಿಕೆಗೆ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದ್ದಾರೆ. 

ಇಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ರಾಘವೇಂದ್ರ ಅವರು, ಸಹಜವಾಗಿ ಚುನಾವಣೆ ಸಂದರ್ಭದಲ್ಲಿ ಆಯಾ ಪಕ್ಷದವರು ಬಂದು ಹೋಗುತ್ತಾರೆ. ಹೀಗಾಗಿ ಅವರು ಕೂಡ ಬಂದು ಹೋಗುತ್ತಾರೆ ಎಂದು ಹೇಳಿದ್ದಾರೆ. 

Tap to resize

Latest Videos

undefined

ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೊಲ್ಲೇನು? ನಾಲಗೆ ಹರಿಬಿಟ್ಟ ಶಾಸಕ ರಾಜು ಕಾಗೆ

ನಮ್ಮ ನಾಯಕರು ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಜಿಯವರು ಕೂಡ ಬಂದಿದ್ದರು. ಉತ್ತಮವಾದ ಸಂಘಟನೆಯಾಗಿದೆ. ನಾವು ಗೆಲುವಿನ ಸನಿಹದಲ್ಲಿದ್ದೆವೆ ಎಂದು ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

click me!