ಮರುಕಳಿಸಿತು ಹಾಕಿ ಗತವೈಭವ, ಗಾಯಗೊಂಡ ನಟಿ ಶಾನ್ವಿ ಶ್ರಿವಾಸ್ತವ; ಆ.2ರ ಟಾಪ್ 10 ಸುದ್ದಿ!

By Suvarna NewsFirst Published Aug 2, 2021, 4:59 PM IST
Highlights

ಮಹಿಳೆಯರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶ ಮಾಡಿದೆ. ಈ ಮೂಲಕ ಭಾರತದ ಹಾಕಿ ಗತವೈಭವ ಮತ್ತೆ ಮರುಕಳಿಸಿದೆ. ಬಸವರಾಜ ಬೊಮ್ಮಾಯಿ ಸಂಪಟ ಸೇರುವ ಸಂಭಾವ್ಯರ ಪಟ್ಟಿ ರೆಡಿಯಾಗಿದೆ. ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ನಟಿ ಶಾನ್ವಿ ಶ್ರೀವಾಸ್ತವ ಗಾಯಗೊಂಡಿದ್ದಾರೆ.5 ಕೋಟಿ ವಹಿವಾಟಿಗೆ ಸ್ವಯಂ ಪ್ರಮಾಣಪತ್ರ ಸಾಕು, ವಿಪಕ್ಷಗಳಿಗೆ ಮೋದಿ ಸಡ್ಡು ಸೇರಿದಂತೆ ಆಗಸ್ಟ್ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

43 ಕೇಂದ್ರ ಸಚಿವರ ‘ಜನ ಆಶೀರ್ವಾದ ಯಾತ್ರೆ’: ವಿಪಕ್ಷಗಳಿಗೆ ಮೋದಿ ಸಡ್ಡು!

 ಹೊಸ 43 ಸಚಿವರನ್ನೇ ಮುಂದಿಟ್ಟುಕೊಂಡು ದೇಶವ್ಯಾಪಿ ‘ಜನ ಆಶೀರ್ವಾದ ಯಾತ್ರೆ’ ನಡೆಸಲು ಪಕ್ಷ ನಿರ್ಧರಿಸಿದೆ. ಈ ಕಾರ್ಯಕ್ರಮವನ್ನು ಸಚಿವರ ಪರಿಚಯದ ಕಾರ್ಯಕ್ರಮದ ಜೊತೆಗೆ, 2024ರ ಲೋಕಸಭಾ ಚುನಾವಣೆಗೆ ಸಿದ್ಧತೆಯಾಗಿ ಬಳಸಲೂ ಪಕ್ಷ ನಿರ್ಧರಿಸಿದೆ.

ಕರ್ನಾಟಕ ಸಂಪುಟ ವಿಸ್ತರಣೆ : 3 ಹಳಬ ಔಟ್, 6 ಹೊಸಬರು ಇನ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ರಚನೆಗೆ ತೆರೆಮರೆಯಲ್ಲಿ ಸಾಕಷ್ಟುಕಸರತ್ತು ನಡೆದಿದ್ದು, ಕಳೆದ ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ ಯಾರು ಮುಂದುವರೆಯುತ್ತಾರೆ ಹಾಗೂ ಹೊಸಬರು ಯಾರು ಸೇರ್ಪಡೆಯಾಗಬಹುದು ಎಂಬುದು ಇಂದು ಸ್ಪಷ್ಟವಾಗುವ ಸಂಭವವಿದೆ.

ಸಂಪುಟ ಕಸರತ್ತು ಇಂದು ಫೈನಲ್: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸಂಪುಟ ರಚನೆಗೆ ಸಂಬಂಧಿಸಿದಂತೆ ಬಹುತೇಕ ಸೋಮವಾರ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. ಸೋಮವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ಹೊತ್ತಿಗೆ ನೂತನ ಸಚಿವರ ಪಟ್ಟಿಅಂತಿಮಗೊಳ್ಳಬಹುದು ಎಂದು ತಿಳಿದುಬಂದಿದೆ.

ಟೋಕಿಯೋ ಒಲಿಂಪಿಕ್ಸ್‌: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಹಾಕಿ ತಂಡ

ಗುರ್ಜಿತ್ ಕೌರ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಟೋಕಿಯೋ ಒಲಿಂಪಿಕ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತೀಯ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ರಾಣಿ ರಾಂಪಾಲ್‌ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ.

ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ನಟಿ ಶಾನ್ವಿ ಶ್ರೀವಾಸ್ತವಗೆ ಗಾಯ!

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಶಾನ್ವಿ ಶ್ರೀವಾಸ್ತವ ಕೆಲವು ದಿನಗಳಿಂದ 'ಬ್ಯಾಂಗ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯಸಿಯಾಗಿದ್ದಾರೆ. ಡಾರ್ಕ್ ಕಾಮಿಡಿ ಚಿತ್ರ ಇದಾಗಿದ್ದು, ಶಾನ್ವಿ ಕೊಂಚ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಸಾಹಸ ಸನ್ನಿವೇಶ ಚಿತ್ರೀಕರಣದಲ್ಲಿ ಶಾನ್ವಿಗೆ ಪೆಟ್ಟಾಗಿದೆ. 

5 ಕೋಟಿ ವಹಿವಾಟಿಗೆ ವಾರ್ಷಿಕ ರಿಟರ್ನ್ಸ್‌ ವೇಳೆ ಸ್ವಯಂ ಪ್ರಮಾಣಪತ್ರ ಸಾಕು!

ವಾರ್ಷಿಕ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸಿ ಜಿಎಸ್‌ಟಿ ತೆರಿಗೆ ಕಟ್ಟುವ ಉದ್ಯಮಿಗಳು ಇನ್ನು ಮುಂದೆ, ಲೆಕ್ಕ ಪರಿಶೋಧಕರಿಂದ (ಚಾರ್ಟೆಡ್‌ ಅಕೌಂಟೆಂಟ್‌) ಕಡ್ಡಾಯ ಲೆಕ್ಕ ಪರಿಶೋಧನೆ ವರದಿ ಸಲ್ಲಿಸುವ ಬದಲು ಸ್ವಯಂ ಪ್ರಮಾಣಪತ್ರ ಒದಗಿಸಿದರೆ ಸಾಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಪ್ರಕಟಿಸಿದೆ.

ಬಿಎಸ್‌ ಸಂತೋಷ್ ಭೇಟಿಯಾದ ಸಿಎಂ: ದಿಲ್ಲಿಯಲ್ಲಿ ಸಂಪುಟ ಸರ್ಕಸ್

ಸಚಿವ ಸಂಪುಟ ರಚನೆ ಸಂಬಂಧ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಡೆಲ್ಟಾ ಪ್ಲಸ್‌ ಆತಂಕ ಬೇಡ, ಅಪಯಕಾರಿ ವೈರಸ್‌ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR!

ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ದಿಢೀರ್ ಹೆಚ್ಚಾಗಿದೆ. ಕಳೆದ 6 ದಿನಗಳಿಂದ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಇದೀಗ 3ನೇ ಅಲೆ ಆತಂಕ ಹೆಚ್ಚಾಗುತ್ತಿದೆ. ಇದರ ನಡುವೆ ಡೆಲ್ಟಾ ಪ್ಲಸ್ ವೈರಸ್ ಕಾಟವೂ ಹೆಚ್ಚಾಗುತ್ತಿದೆ. ಡೆಲ್ಟಾ ಪ್ಲಸ್ ಆತಂಕಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ಅಧ್ಯಯನ ವರದಿ ಸಮಾಧಾನ ತಂದಿದೆ. 

click me!