ಕಾಳಿ ವೇಷ ಧರಿಸಿ ನೃತ್ಯ ರೂಪಕದಲ್ಲಿ ತೊಡಗಿದ್ದ ಬಾಲಕನಿಂದ ರಾಕ್ಷಸ ವೇಷಧಾರಿ ಬಾಲಕನ ಹತ್ಯೆ

By Anusha Kb  |  First Published May 4, 2024, 8:49 AM IST

ಪೌರಾಣಿಕ ಹಿನ್ನೆಲೆಯ ಭಗವತ್ ಕಥಾ ನಿರೂಪಣಾ ಕಾರ್ಯಕ್ರಮದ ವೇದಿಕೆಯೊಂದು 11 ವರ್ಷದ ಬಾಲಕನ ಸಾವಿಗೆ ವೇದಿಕೆಯಾದಂತಹ ಆಘಾತಕಾರಿ ಘಟನೆ ಕಾನ್ಪುರದಲ್ಲಿ ನಡೆದಿದೆ.


ಕಾನ್ಪುರ: ಪೌರಾಣಿಕ ಹಿನ್ನೆಲೆಯ ಭಗವತ್ ಕಥಾ ನಿರೂಪಣಾ ಕಾರ್ಯಕ್ರಮದ ವೇದಿಕೆಯೊಂದು 11 ವರ್ಷದ ಬಾಲಕನ ಸಾವಿಗೆ ವೇದಿಕೆಯಾದಂತಹ ಆಘಾತಕಾರಿ ಘಟನೆ ಕಾನ್ಪುರದಲ್ಲಿ ನಡೆದಿದೆ. ಪೌರಾಣಿಕ ಪಾತ್ರವಾದ ಕಾಳಿಮಾತೆಯ ವೇಷ ಧರಿಸಿದ 14 ವರ್ಷದ ಬಾಲಕ ಆ ವೇಷದಲ್ಲಿದ್ದಾಗಲೇ 11 ವರ್ಷದ ಬಾಲಕನ ಕತ್ತು ಸೀಳಿದ್ದಾನೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  ಉತ್ತರ ಪ್ರದೇಶದ ಕಾನ್ಸುರದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ. 

ಘಟನೆ ನಡೆದ ಕೂಡಲೇ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಯ್ತಾದರೂ ಗಂಭೀರ ಗಾಯಗೊಂಡಿದ್ದ ಬಾಲಕ ಅಷ್ಟರಲ್ಲೇ  ಪ್ರಾಣ ಬಿಟ್ಟಿದ್ದಾನೆ. ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಳಿ ವೇಷ ಧರಿಸಿದ್ದ 14  ವರ್ಷದ ಬಾಲಕನ್ನು ವಶಕ್ಕೆ ಪಡೆದಿದ್ದಾರೆ. ಕಾನ್ಪುರದ ಬಿಲ್ಹೌರ್ ಪ್ರದೇಶದ ಬಂಭಿಯಾನ್‌ಪುರ ಗ್ರಾಮದ ಶುಭಾಷ್ ಸೈನಿ ಎಂಬುವವರ ಮನೆಯಲ್ಲಿ ಈ ಭಗವತ್ ಕಥಾ ರೂಪಕವನ್ನು ಆಯೋಜಿಸಲಾಗಿತ್ತು.

Tap to resize

Latest Videos

ಕಾರ್ಯಕ್ರಮದ ಭಾಗವಾಗಿ ಭಗವತ್ ಕಥಾದ ಹಲವರು ಪಾತ್ರಗಳನ್ನು ತೋರಿಸುವ ರೂಪಕವನ್ನು ವೇಷ ಧರಿಸಿದ್ದ ಮಕ್ಕಳು ಮಾಡುತ್ತಿದ್ದರು. ಈ ವೇಳೆ ಕಾಳಿ ವೇಷ ಧರಿಸಿದ್ದ 14 ವರ್ಷದ ಬಾಲಕ, ರಾಕ್ಷಸನ ವೇಷ ಧರಿಸಿದ್ದ 11ವರ್ಷದ ಬಾಲಕನ ಮೇಲೆ ತನ್ನ ಕೈಯಲ್ಲಿದ್ದ ಚಾಕುವಿನಿಂದ ದಾಳಿ ಮಾಡಿದ್ದಾನೆ. ಕೂಡಲೇ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆತನನ್ನು ಉಳಿಸಿಕೊಳ್ಳಲಾಗಲಿಲ್ಲ, 

ಹೊಸ ಮನೆಗೆ ಅಡಿಪಾಯ ಹಾಕಲು ನೆಲ ಅಗೆಯುತ್ತಿದ್ದಾಗ 400 ವರ್ಷಗಳಷ್ಟು ಪುರಾತನ ವಿಷ್ಣು, ಲಕ್ಷ್ಮಿ ವಿಗ್ರಹ ಪತ್ತೆ

ರಾಕ್ಷಸನ ಪಾತ್ರವನ್ನು ಮಾಡುತ್ತಿದ್ದ ಮಗುವನ್ನು ಹತ್ಯೆ ಮಾಡಿದಂತೆ ನಟಿಸಲು ತ್ರಿಶೂಲವನ್ನು ಬಳಸುವಂತೆ 14ರ ಬಾಲಕನಿಗೆ ಸೂಚಿಸಲಾಗಿತ್ತು. ಆದರೆ ಆತನಿಗೆ ತ್ರಿಶೂಲ ಸಿಗದ ಹಿನ್ನೆಲೆಯಲ್ಲಿ ಹರಿತವಾದ ಚಾಕು ತಂದಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾಲಕನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾನ್ಪುರದ ಪೊಲೀಸ್ ಅಧಿಕಾರಿ ವಿಜಯ್ ಧುಲ್ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಬಾಲಕನನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 

ಪವಿತ್ರ ಗಂಗಾಜಲವನ್ನು ಅಡುಗೆ ಮನೆಯಲ್ಲಿಟ್ಟರೆ ರೋಗ ದೂರ, ವಾಸ್ತು ಟಿಪ್ಸ್ ಇಲ್ಲಿವೆ!

click me!