ಕೊನೆಯುಸಿರೆಳೆದ ಗಾನ ದೊರೆ ಬಾಲು ಸರ್, ವಿವಾದ ಮೈಮೇಲೆಳೆದ ಗವಾಸ್ಕರ್: ಸೆ.25ರ ಟಾಪ್ 10 ಸುದ್ದಿ!

By Suvarna News  |  First Published Sep 25, 2020, 5:07 PM IST

ದಿಗ್ಗಜ ಗಾಯಕ, ಗಾನ ಗಂಧರ್ವ ಎಸ್‌ಪಿ ಬಾಲಸಬ್ರಹ್ಯಣ್ಯಂ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು. ಎಸ್‌ಪಿಬಿ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಬಹು ನಿರೀಕ್ಷಿತ ಬಿಹಾರ ಚುನಾವಣೆ ಘೋಷಣೆಯಾಗಿದೆ. ಭಾರತ್ ಬಂದ್ ಖಚಿತಪಡಿಸಿದ ರೈತ ಸಂಘಟನೆಗಳು. ಗವಾಸ್ಕರ್ ವಿರುದ್ಧ ಕಿಡಿ ಕಾರಿದ ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ಕೊಂದಿದ್ದು ಯಾರು? ಸೇರಿದಂತೆ ಸೆಪ್ಟೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಮತ್ತೆ ಕನ್ನಡ ನಾಡಿನಲ್ಲಿಯೇ ಹುಟ್ಟಿ ಬನ್ನಿ ಬಾಲು ಸರ್...

Latest Videos

undefined

ಗಾನ ಲೋಕದ ದೊರೆ ಸಹಸ್ರಾರು ಅಭಿಮಾನಿಗಳನ್ನು, ತಮ್ಮ ಅದ್ಭುತ ಕಂಠಸಿರಿಯ ಸಾವಿರಾರು ಹಾಡುಗಳನ್ನು ಬಿಟ್ಟು ಅಗಲಿದ್ದಾರೆ. ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ (74) ಇನ್ನಿಲ್ಲ. ಕೊರೋನಾ ಕಾರಣಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಏನೋ ಹೆದರಿ ಅವರಿಂದ ದೂರವಾಗಿತ್ತು. ಆದರೆ, ಹದಗೆಟ್ಟ ಶ್ವಾಸಕೋಶದ ಆರೋಗ್ಯ ಚೇತರಿಸಿಕೊಳ್ಳಲೇ ಇಲ್ಲ. ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು.

ಗಾನ ಗಂದರ್ಭ ಎಸ್ಪಿಬಿಗೆ ಗಣ್ಯರ ಕಂಬನಿ..!

ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ(74) ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸಹಸ್ರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಎಸ್‌ಪಿಬಿ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ 

3 ಹಂತದಲ್ಲಿ ಬಿಹಾರ ಚುನಾವಣೆ: ನ.10ಕ್ಕೆ ಮತ ಎಣಿಕೆ...

ಬಹು ನಿರೀಕ್ಷಿತ ಬಿಹಾರ ಚುನಾವಣೆ ಘೋಷಣೆಯಾಗಿದ್ದು 3 ಹಂತದಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ ಶಿರಾ ವಿಧಾನಸಭಾ ಉಪ ಚುನಾವಣೆಗೆಕ್ಷೇತ್ರಕ್ಕೆ ಇನ್ನೂ ದಿನಾಂಕ ಘೋಷಣೆಯಾಗಬೇಕಿದೆ.

ಇಲ್ಲಿದೆ ವಿಶ್ವದ ಮೊದಲ ಎಲೆಕ್ಟ್ರಿಕ್‌ ರಸ್ತೆ! ಬಸ್‌ ಓಡುವಾಗಲೇ ಚಾರ್ಜ್ ಆಗುತ್ತೆ...

ಎಲೆಕ್ಟ್ರಿಕ್ ವಾಹನಗಳಿಗಿಂತ  ಇಸ್ರೇಲ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅತ್ಯಂತ ವಿನೂತನವಾದ, ವಿಶ್ವದ ಮೊದಲ ಎಲೆಕ್ಟ್ರಿಕ್‌ ರಸ್ತೆಯನ್ನು ನಿರ್ಮಾಣ ಮಾಡಿದೆ.

ರೈತ ಸಂಘಟನೆಗಳಿಂದ ಭಾರತ್‌ ಬಂದ್‌ : ರಸ್ತೆಗಿಳಿವ ಮುನ್ನ ಎಚ್ಚರ...

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಭಯ ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಂಡಿರುವ ವಿವಾದಿತ ಮೂರು ಕೃಷಿ ಮಸೂದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಶುಕ್ರವಾರ ಭಾರತ್‌ ಬಂದ್‌ಗೆ ಕರೆ ಕೊಟ್ಟಿದೆ. 31 ವಿವಿಧ ರೈತ ಸಂಘಟನೆಗಳು ಕರೆ ಕೊಟ್ಟಿರುವ ಬಂದ್‌ಗೆ ವಿರೋಧ ಪಕ್ಷಗಳೂ ಬೆಂಬಲ ನೀಡಿರುವುದರಿಂದ ದೇಶ ಹಲವು ಭಾಗಗಳಲ್ಲಿ ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಅಯ್ಯಯ್ಯೋ, ಐಪಿಎಲ್ ಕ್ರಿಕೆಟಿಗರ ಪತ್ನಿಯರಿಗೂ ಡ್ರಗ್ಸ್ ಚಟ..!...

ಡ್ರಗ್ಸ್ ಮಾಫಿಯಾ ಕಹಾನಿ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸದ್ಯ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ಸ್ ಭೂತ ಇದೀಗ ಕ್ರಿಕೆಟಿಗರು ಹಾಗೂ ಅವರ ಪತ್ನಿಯರನ್ನು ಸುತ್ತಿಕೊಳ್ಳುವ ಸಾಧ್ಯತೆಯಿದೆ. 

ಕೊಹ್ಲಿ ಅನುಷ್ಕಾ **** ಜತೆ ಅಭ್ಯಾಸ ಮಾಡಿದ್ದಾರೆ ಎಂದ ಗವಾಸ್ಕರ್..! ಕಿಡಿಕಾರಿದ ಅನುಷ್ಕಾ...

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ಮಾಲ್, ರೆಸ್ಟೋರೆಂಟ್, ಥಿಯೇಟರ್.. ವಾವ್ ಈ ಬಾರಿಯ Bigg Boss ಮನೆಯೆಷ್ಟು ಚಂದ..!...

ಈ ಬಾರಿಯ ಬಿಗ್‌ಬಾಸ್ ಮನೆ ಡಿಫರೆಂಟಾಗಿದೆ. ಸ್ಪಾ, ಮಾಲ್, ರೆಸ್ಟೋರೆಂಟ್, ಥಿಯೇಟರ್ ಇರೋ ಲಕ್ಷುರಿ ಬಿಗ್‌ಬಾಸ್ ಮನೆ ವಾವ್ ಎನ್ನುವಂತಿದೆ. ಬನ್ನಿ ನಾವು ನೋಡ್ಕೊಂಡ್ ಬರೋಣ

ಭಾರತದ ರಸ್ತೆಗಳ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ!...

ಭಾರತದಲ್ಲಿ ಹೆದ್ದಾರಿ ಸೇರಿದಂತೆ ಎಲ್ಲಾ ರಸ್ತೆಗಳ ಸ್ವರೂಪ ಬದಲಾಗುತ್ತಿದೆ. ವಿಶ್ವ ದರ್ಜೆ ಮಟ್ಟದ ರಸ್ತೆಗಳು ನಿರ್ಮಾಣವಾಗುತ್ತಿದೆ. ಪ್ರಯಾಣ ಸುಲಭವಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಈ ಬದಲಾವಣೆಗಳಾಗಿದೆ. ಇದರ ನಡುವೆ ಭಾರತದ ರಸ್ತೆ ಕುರಿತು ಕೆಲ ಕುತೂಹಲ ಮಾಹಿತಿ ಬಹಿರಂಗವಾಗಿದೆ. 

ಡ್ರಗ್ಗಿಗಳಿರಲಿ, ಸುಶಾಂತ್ ಸಿಂಗ್‌ರನ್ನು ಕೊಂದಿದ್ದು ಯಾರೆಂದು ಹೇಳಿ: ಶೇಖರ್ ಸುಮನ್...

ಸುಶಾಂತ್ ಸಿಂಗ್ ಸಾವಿನ ವಿಚಾರಣೆ ಮುಂದುವರಿಸುವಂತೆ ಹಿರಿಯ ನಟ ಶೇಖರ್ ಸುಮನ್ ಮನವಿ ಮಾಡಿಕೊಂಡಿದ್ದಾರೆ. ಬಾಲಿವುಡ್‌ ಡ್ರಗ್ಸ್‌ ದಂಧೆಯಿಂದ ಈ ವಿಚಾರ ಮುಚ್ಚಲಾಗುತ್ತಿದ್ಯಾ? 

click me!