ಮೋದಿ ಭೇಟಿಯಾದ ಶರದ್ ಪವಾರ್, 20 ಕೋಟಿ ವೀಕ್ಷಣೆ ಕಂಡ KGF2 ಟೀಸರ್; ಜು.17ರ ಟಾಪ್ 10 ಸುದ್ದಿ!

By Suvarna NewsFirst Published Jul 17, 2021, 5:00 PM IST
Highlights

NCP ಮುಖ್ಯಸ್ಥ ಶರದ್ ಪವಾರ್ ದಿಢೀರ್ ಪ್ರಧಾನಿ ಮೋದಿ ಭೇಟಿಯಾಗಿ ಸಂಚಲನ ಮೂಡಿಸಿದ್ದಾರೆ. ಇತ್ತ ಕಾಂಗ್ರೆಸ್ ಒಳಜಗಳಕ್ಕೆ ರಾಹುಲ್ ಗಾಂಧಿ ಖಡಕ್ ತಿರುಗೇಟು ನೀಡಿದ್ದಾರೆ. ಯಶ್ ನಟನೆಯ ಕೆಜಿಎಫ್ 2 ಟೀಸರ್‌ 20 ಕೋಟಿ ವೀಕ್ಷಣೆ ಕಂಡಿದೆ.ಆಟಗಾರರು ಯಾವಾಗಲೂ ಮಾಸ್ಕ್‌ ಧರಿಸಲು ಆಗಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಒಂದೇ ದಿನಕ್ಕೆ 1 ಲಕ್ಷ ಓಲಾ ಸ್ಕೂಟರ್ ಬುಕಿಂಗ್, ಎಲನ್ ಮಸ್ಕ್‌ಗೆ ಜನಸಂಖ್ಯೆ ಕುಸಿತದ ಚಿಂತೆ ಸೇರಿದಂತೆ ಜು.17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಪ್ರಧಾನಿ ಮೋದಿ ಭೇಟಿಯಾದ ಶರದ್ ಪವಾರ್, ರಾಷ್ಟ್ರ ರಾಜಕಾರಣದಲ್ಲಿ ಸಂಚಲನ!

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ NCP ಮುಖ್ಯಸ್ಥ ಶರದ್ ಪವಾರ್ ಸತತ ಸಭೆ ನಡೆಸಿದ್ದರು. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಜೊತೆ ಮುಂದಿನ ರಾಜಕೀಯ ಹಾದಿ ಹಾಗೂ ಸವಾಲಿನ ಕುರಿತು ಸಭೆ ನಡೆಸಿದ್ದ ಶರದ್ ಪವಾರ್ ಇದೀಗ ದಿಢೀರ್ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸಂಚಲನ ಮೂಡಿಸಿದ್ದಾರೆ.

ಭಯಪಡುವವರು ಪಕ್ಷ ಬಿಡಿ : ರಾಹುಲ್‌ ಕುತೂಹಲಕಾರಿ ಹೇಳಿಕೆ

ಪಂಜಾಬ್‌ ಕಾಂಗ್ರೆಸ್‌ನಲ್ಲಿನ ಒಳಸಂಘರ್ಷ ಹಾಗೂ ಕೆಲ ಮುಖಂಡರು ಪಕ್ಷ ಬಿಟ್ಟ ಬೆನ್ನಲ್ಲೇ ಕುತೂಹಲಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ‘ವಾಸ್ತವ ಸಂಗತಿಯನ್ನು ಮತ್ತು ಬಿಜೆಪಿಯನ್ನು ಎದುರಿಸಲು ಭಯ ಪಡುವವರು ಪಕ್ಷವನ್ನು ತೊರೆಯಬಹುದು. ಕಾಂಗ್ರೆಸ್‌ ಹೊರಗಿನ ಭಯ ರಹಿತ ಮುಖಂಡರನ್ನು ಪಕ್ಷಕ್ಕೆ ಕರೆತರಲಾಗುವುದು’ ಎಂದು ಹೇಳಿದ್ದಾರೆ.

ಆಟಗಾರರು ಯಾವಾಗಲೂ ಮಾಸ್ಕ್‌ ಧರಿಸಲು ಆಗಲ್ಲ: ಸೌರವ್ ಗಂಗೂಲಿ

ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಗೆ ಕೊರೋನಾ ಸೋಂಕು ತಗುಲಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ‘ಆಟಗಾರರು ರಜೆಯಲ್ಲಿದ್ದರು. ಯುರೋ ಕಪ್‌ ಹಾಗೂ ವಿಂಬಲ್ಡನ್‌ನಲ್ಲಿ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿತ್ತು. ಯಾವಾಗಲೂ ಮಾಸ್ಕ್‌ ಹಾಕಿಕೊಂಡೇ ಇರಲು ಅಸಾಧ್ಯ’ ಎಂದು ಸಮರ್ಥಿಸಿಕೊಂಡಿದ್ದಾರೆ. 

ಯಶ್ ನಟನೆಯ ಕೆಜಿಎಫ್ 2 ಟೀಸರ್‌ 20 ಕೋಟಿ ವೀಕ್ಷಣೆ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಟೀಸರ್ ಇದೀಗ 200 ಮಿಲಿಯನ್ ವೀಕ್ಷಣೆ ದಾಖಲಿಸಿದೆ. ಈ ಮೂಲಕ ಅತ್ಯಧಿಕ ವೀಕ್ಷಣೆ ಕಂಡ ಜಾಗತಿಕ ಸಿನಿಮಾಗಳ ನಡುವೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಯಶ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ರಿವೀಲ್ ಮಾಡಿದ್ದು, ಕೆಜಿಎಫ್‌ನ ಹೊಸ ಮೈಲುಗಲ್ಲಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

ನಿನ್ನಂತ ಹೆಂಡ್ತಿ ದೇವರು ಯಾರಿಗೂ ಕೊಡದಿರಲಿ ಅಂತ ನೆಟ್ಟಿಗರು ಸಿಟ್ಟಾಗಿದ್ದೇಕೆ ?

ಫ್ಯಾಮಿಲಿ ಮ್ಯಾನ್ 2 ನಟಿ ಪ್ರಿಯಾಮಣಿ ವೆಬ್ ಸರಣಿಯಲ್ಲಿನ ಸುಚಿ ಪಾತ್ರಕ್ಕಾಗಿ ಪ್ರೇಕ್ಷಕರಿಂದ ಸಿಗುತ್ತಿರುವ ಟೀಕೆ ಬಗ್ಗೆ ಮಾತನಾಡಿದ್ದಾರೆ.

ಕರ್ನಾಟಕದಲ್ಲಿ ಶಾಲೆ ಪ್ರಾರಂಭ ಯಾವಾಗ? ಸುಳಿವು ಕೊಟ್ಟ ಸುರೇಶ್ ಕುಮಾರ್

ಕೊರೋನಾ ಸೋಂಕಿನಿಂದಾಗಿ ಸ್ಥಗಿತಗೊಂಡಿದ್ದ ಶಿಕ್ಷಣ ಕ್ಷೇತ್ರದಲ್ಲಿ ಹಂತ-ಹಂತವಾಗಿ ಕಾರ್ಯಚಟುವಟಿಕೆಗಳು ಶುರುವಾಗುತ್ತಿವೆ.

ಎಲನ್ ಮಸ್ಕ್‌ಗೆ ಜನಸಂಖ್ಯೆ ಕುಸಿತದ ಚಿಂತೆ, 8ನೇ ಮಗು ಹೆಣ್ಣಾಗ್ಬೇಕಂತೆ

 ಸುಮಾರು 58 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರೋ ಟೆಸ್ಲಾ ಸಿಇಒ ಎಲನ್ ಮಸ್ಕ್  ತಮ್ಮ ಅಭಿಮಾನಿಗಳನ್ನು ಹ್ಯಾಪಿ ಆಗಿಡೋದ್ರಲ್ಲಿ ಎತ್ತಿದ ಕೈ. ಸುಮ್ನೆ ಅಲ್ಲ, ಇಷ್ಟೊಂದು ಬ್ಯುಸಿ ಸಿಇಒ ತಮ್ಮೆಲ್ಲ ಕೆಲಸದ ನಡುವೆ ಒಂದಷ್ಟು ಬಿಡುವು ಮಾಡಿ ಫಾಲೋವರ್ಸ್‌ಗಾಗಿ ಏನಾದರೂ ಪೋಸ್ಟ್, ಟ್ವೀಟ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಫ್ಯಾನ್ಸ್ ಟ್ವೀಟ್, ಪ್ರಶ್ನೆಗಳಿಗೂ ಸಾಧ್ಯವಾದಷ್ಟು ಉತ್ತರಿಸುತ್ತಾರೆ.

ಒಂದೇ ದಿನಕ್ಕೆ 1 ಲಕ್ಷ ಬುಕಿಂಗ್; ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್!

ಭಾರಿ ಕುತೂಹಲ ಕೆರಳಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ದೇಶದ ಎಲೆಕ್ಟ್ರಿಕ್ ವಾಹನದಲ್ಲಿ ಹೊಸ ಅಧ್ಯಾಯ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಗರಿಷ್ಠ ಮೈಲೇಜ್, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ. ಒಂದೇ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಸ್ಕೂಟರ್ ಬುಕಿಂಗ್ ಆಗಿದ್ದು, ದಾಖಲೆ ಬರೆದಿದೆ.

click me!