
ಮುಂಬೈ (ಮೇ.3): ತನ್ನ ಮೊಬೈಲ್ ಕದ್ದು ಓಡುತ್ತಿದ್ದ ವ್ಯಕ್ತಿಯನ್ನು ಹಿಡಿಯಲೆಂದು ಓಡಿದ ಪೊಲೀಸ್ ಪೇದೆಗೆ ಕಳ್ಳರ ಗುಂಪು ವಿಷಯುಕ್ತ ಚುಚ್ಚುಮದ್ದು ನೀಡಿದ್ದು, ಆ ಪೊಲೀಸ್ ಪೇದೆ ಮೃತಪಟ್ಟ ಘಟನೆ ಇಲ್ಲಿಯ ಥಾಣೆಯಲ್ಲಿ ನಡೆದಿದೆ.
ವಿಶಾಲ್ ಪವಾರ್ ಮೃತಪಟ್ಟ ಪೇದೆ. ರಾತ್ರಿ ಪಾಳಿಯ ಕೆಲಸಕ್ಕಾಗಿ ತೆರಳಲು ವಿಶಾಲ್, ರೈಲ್ವೇ ಸ್ಟೇಷನ್‌ನಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅಪರಿಚಿತನೊಬ್ಬ ಆತನ ಫೋನ್ ಕದ್ದು ರೈಲ್ವೇ ಹಳಿ ಮೂಲಕ ಓಡಿದ್ದಾನೆ. ಆತನನ್ನು ಹಿಂಬಾಲಿಸಿಕೊಂಡು ಪೇದೆ ಓಡಿದ್ದು, ಸ್ವಲ್ಪ ದೂರದಲ್ಲಿ ಕಳ್ಳರ್ ಗ್ಯಾಂಗ್‌ವೊಂದು ಪೊಲೀಸ್ ಪೇದೆ ಮೇಲೆ ದಾಳಿ ಮಾಡಿ ಆತನಿಗೆ ವಿಷವಿರುವ ಚುಚ್ಚುಮದ್ದನ್ನು ನೀಡಿದ್ದಾರೆ.
ಪತಿ ಸಾಲ ಕಟ್ಟದ್ದಕ್ಕೆ ಪತ್ನಿಯ ಒತ್ತೆ ಇರಿಸಿಕೊಂಡ ಬ್ಯಾಂಕ್!
ಪೇದೆಯನ್ನು ಥಾಣೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳ ಕಾಲ ಜೀವನ್ಮರಣ ಹೋರಾಟದಲ್ಲಿದ್ದ ನಗರದ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ವೇಳೆ ಪೇದೆ ಖದೀಮರ ಬೆನ್ನು ಹತ್ತಿದಾಗ ಗ್ಯಾಂಗ್ ಬಳಿ ಹೋಗಿದ್ದಾನೆ ಈ ವೇಳೆ ವಿಷದ ಚುಚ್ಚುಮದ್ದು ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ