ಸರಳ ಗಣತಂತ್ರ ದಿನಾಚರಿಸಿದ ಭಾರತ, ರೈತ ಪ್ರತಿಭಟನೆ ಉಗ್ರ ಸ್ವರೂಪ; ಜ.26ರ ಟಾಪ್ 10 ಸುದ್ದಿ!

By Suvarna News  |  First Published Jan 26, 2021, 5:47 PM IST

ರೈತರ ಪ್ರತಿಭಟನೆ ಹಿಂಸಾ ರೂಪ ಪಡೆದಿದೆ. ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಸಾರಿಗೆ ವಾಹನ, ಪೊಲೀಸ್ ವಾಹನ ಜಖಂ ಗೊಂಡಿದೆ. ಇತ್ತ ಪ್ರತಿಭಟನೆ ನಡುವೆ ಸರಳ ಗಣರಾಜ್ಯೋತ್ಸವ ಆಚರಿಸಲಾಗಿದೆ. ಟ್ರಾಕ್ಟರ್ ಮುಗಚಿ ರೈತನೋರ್ವ ಸಾವನ್ನಪ್ಪಿದ್ದಾನೆ. ಸುಮ್ನೆ ಸಿಹಿ ಮುತ್ತಿನ ಆಫರ್ ನೀಡಿದ ನಿವೇದಿತಾ ಗೌಡ, ಹಳೆ ದಿನ ನೆನಪಿಸಿದ ಕಂಗನಾ ರನಾವತ್ ಸೇರಿದಂತೆ ಜನವರಿ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ರೈತ ಸಂಘಟನೆ; ಪೊಲೀಸ್ ನಿಯಂತ್ರಣಕ್ಕೆ ಸಿಗದ ಪ್ರತಿಭಟನೆ!...

Latest Videos

undefined

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಇಂದು ಆಯೋಜಿಸಿರುವ ರೈತರ ಟ್ರಾಕ್ಟರ್ ರ್ಯಾಲಿ ಇದೀಗ ಹಿಂಸಾರೂಪ ಪಡೆದುಕೊಂಡಿದೆ.ಕೆಲ ಗೊಂದಲ ನಿರ್ಮಾಣವಾದ ಕಾರಣ ಪೊಲೀಸ್ ಬ್ಯಾರಿಕೇಡ್ ಮುರಿದ ಪ್ರತಿಭಟನಾ ರೈತರು ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದಾರೆ. ರೈತ ಪ್ರತಿಭಟನೆ ಕುರಿತ ಅಪ್‌ಡೇಟ್ ಇಲ್ಲಿದೆ.

ಗಣತಂತ್ರದಂದು ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತನ ಕಿಚ್ಚ: ರೈತನ ಕೋಪಕ್ಕೆ ಪೊಲಿಸರು ತತ್ತರ!...

ಗಣರಾಜ್ಯೋತ್ಸವ ದಿನದ ಪರೇಡ್ ಮುಗಿಯುವ ಮುನ್ನವೇ ದೆಹಲಿಯೊಳಗೆ ಟ್ರಾಕ್ಟರ್ ಮೆರವಣಿಗೆ ನಡೆಸಲು ಪ್ರಯತ್ನಿಸಿದ ರೈತ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದ, ತಳ್ಳಾಟ ನಡೆದಿದೆ.

72ನೇ ಗಣರಾಜ್ಯೋತ್ಸವ, ರಾಜಪಥದಲ್ಲಿ ಸರಳ ಆಚರಣೆ!...

72ನೇ ಗಣರಾಜ್ಯೋತ್ಸವ, ಗಣತಂತ್ರದ ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ದಿನ ರೈತರ ಕ್ರಾಂತಿಗೆ ಸಾಕ್ಷಿಯಾಗಿದೆ. ಅತ್ತ ದೆಹಲಿಯಲ್ಲೂ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. 

ಗಣತಂತ್ರ ದಿನದಂದು ವಿಶೇಷ ಪೇಟ ಧರಿಸಿದ ಮೋದಿ, ಈ ರಾಜವಂಶದೊಂದಿಗಿದೆ ಕನೆಕ್ಷನ್!...

ಟ್ರಾಕ್ಟರ್ ಮಗುಚಿ ಬಿದ್ದು ಪ್ರತಿಭಟನಾ ನಿರತ ರೈತ ಸಾವು; ನಿಯಂತ್ರಣ ತಪ್ಪಿದ ರ‍್ಯಾಲಿ!...

ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿ ನಿಯಂತ್ರಣ ತಪ್ಪಿದೆ. ಪೊಲೀಸ್ ಬ್ಯಾರಿಕೇಡ್ ಮುರಿದು, ಸಾರಿಗೆ ವಾಹನಗಳ ಜಖಂ ಮಾಡಿರುವ ಪ್ರತಿಭಟನಾ ನಿರತ ರೈತ ಸಂಘಟನೆಗಳು, ಪೊಲೀಸರ ಮೇಲೆ ದಾಳಿಗೆ ಮುಂದಾಗಿದೆ. ಹಿಂಸಾರೂಪ ಪಡೆದಿರುವ ಟ್ರಾಕ್ಟರ್ ರ‍್ಯಾಲಿಯಲ್ಲಿ ಓರ್ವ ರೈತ ಸಾವನ್ನಪ್ಪಿದ್ದಾನೆ. ಇದು ಮತ್ತೊಂದು ಹೋರಾಟಕ್ಕೆ ದಾರಿಮಾಡಿಕೊಟ್ಟಿದೆ.

ಸುಮ್ನೆ ಬಂದು ಮುತ್ತು ಕೊಡ್ಲಾ ಎಂದು ನಾಚಿಕೊಂಡ ನಿವೇದಿತಾ...

ಬಿಗ್‌ಬಾಸ್ ಚೆಲುವೆ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಫೋಟೋಸ್, ವಿಡಿಯೋಸ್‌ಗಳನ್ನು ಅಪ್ ಮಾಡಿ ಫ್ಯಾನ್ಸ್‌ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ ನಿವೇದಿತಾ.

ಪುತ್ರಿ ವಿವಾಹದಲ್ಲಿ ಭಾವುಕ ಜಮೀರ್ ಕಣ್ಣೀರು... ಮದುವೆ ಕ್ಷಣಗಳು...

ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಪುತ್ರಿ ಝಹರಾ ಖಾನ್ ವಿವಾಹ ಜನವರಿ  21  ರಂದು ನೆರವೇರಿತು. ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ನಟ ಶಿವರಾಜ್ ಕುಮಾರ್ ನವದಂಪತಿಗೆ ಶುಭ ಹಾರೈಸಿದರು.

8 ವರ್ಷಕ್ಕಿಂತ ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್...

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಚಿವ ನಿತಿನ್ ಗಡ್ಕರಿ ಅವರು ಹೊಸ ಪ್ರಸ್ತಾಪಕ್ಕೆ ಅನುಮತಿ ನೀಡಿದ್ದು, ಕೆಲವು ವರ್ಗದ 8 ವರ್ಷಕ್ಕಿಂತ ಹಳೆಯದಾದ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್ ಹೇರಲಾಗುತ್ತದೆ. ಆ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ಬಳಕೆಯನ್ನು ತಡೆಯಲು ವೇದಿಕೆ ಸೃಷ್ಟಿಸಲಾಗುತ್ತಿದೆ.

ಗಣರಾಜ್ಯೋತ್ಸವ: ರಾಮ ಮಂದಿರ ಸ್ಥಬ್ಧಚಿತ್ರ ಪ್ರದರ್ಶನದ ವೇಳೆ ಭಕ್ತಿಯಿಂದ ಎದ್ದು ನಿಂತ ಜನ!...

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ವಿಜಯನಗರ ಕಲಾ ಸಂಸ್ಕೃತಿ ಶ್ರೀಮಂತಿಕೆಯ ಟ್ಯಾಬ್ಲೋ ಸೇರಿದಂತೆ ಆಯಾ ದೇಶಗಳ ಸ್ಥಬ್ಧಚಿತ್ರ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಆದರೆ ಈ ಸ್ಥಬ್ಧ ಚಿತ್ರ ಪ್ರದರ್ಶನದ ವೇಳೆ ರಾಮ ಮಂದಿರ ಟ್ಯಾಬ್ಲೋ ಎಲ್ಲರನ್ನು ಆಕರ್ಷಿಸಿತ್ತು. 

ನ್ಯಾಶನಲ್‌ ಆವಾರ್ಡ್‌ ಸ್ವಿಕರಿಸುವಾಗ ಕಂಗನಾಗೆ ಡಿಸೈನರ್‌ ಡ್ರೆಸ್‌ ಖರೀದಿಸೋಕು ಹಣವಿರಲಿಲ್ಲ...

2008 ರ ಫ್ಯಾಷನ್‌ ಸಿನಿಮಾದ ಪಾತ್ರಕ್ಕಾಗಿ ಗೆದ್ದ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಸಂದರ್ಭದಲ್ಲಿ ಡಿಸೈನರ್ ಡ್ರೆಸ್‌ ಖರೀದಿಸಲು ತನ್ನ ಬಳಿ ಹಣವಿರಲಿಲ್ಲ ಎಂದು ಕಂಗನಾ ರಣಾವತ್‌ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
 

click me!