ಸದ್ದು ಮಾಡುತ್ತಿದೆ ಪಿಗ್ಗಿ ಅವತಾರ, ಮಲ್ಯಗೆ ನೆರವಾಗುತ್ತಾ ಬ್ರಿಟನ್ ಸರ್ಕಾರ? ಮೇ.19ರ ಟಾಪ್ 10 ಸುದ್ದಿ!

By Suvarna NewsFirst Published May 19, 2020, 4:48 PM IST
Highlights

ಕೊರೋನಾ ವಿರುದ್ಧದ ಹೋರಾಟದಲ್ಲಿ ಆರಂಭಿಕ ಯಶಸ್ಸು ಸಿಕ್ಕಿದೆ. ಇದೀಗ ಕೊರೋನಾ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಉದ್ಯಮಿ ವಿಜಯ್ ಮಲ್ಯ ಗಡೀಪಾರು ತಪ್ಪಿಸಿಕೊಳ್ಳಲು ಇನ್ನೊಂದು ದಾರಿ ಲಭ್ಯವಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿನಿಮಾದಲ್ಲಿ ನಟಿಸಲು ಒಕೆ ಎಂದಿದ್ದಾರೆ. ಆದರೆ ಒಂದು ಕಂಡೀಷನ್ ಹಾಕಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಪ್ರಿಯಾಂಕ ಚೋಪ್ರಾ ಹಳೆ ಪೋಟೋ ಮತ್ತೆ ವೈರಲ್ ಆಗಿದೆ. ಮೇ.19ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿದೆ.

ಕೊರೋನಾ ವಿರುದ್ಧ ಲಸಿಕೆಯ ಚಮತ್ಕಾರ, ಮಾನವರ ಮೇಲೆ ಪ್ರಯೋಗ ಯಶಸ್ವಿ!

ವಿಶ್ವಾದ್ಯಂತ ಅಟ್ಟಹಾಸ ಮೂಡಿಸಿರುವ ಕೊರೋನಾ ತಾಂಡವಕ್ಕೆ ಬ್ರೇಕ್ ಹಾಕಲು ಎಲ್ಲಾ ದೇಶದ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಜ್ಞಾನಿಗಳು ಲಸಿಕೆ ತಯಾರಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳ ಹಾಗೂ ಮಾನವರ ಮೇಲೆ ತಯಾರಿಸಿದ ಲಸಿಕೆಯ ಪ್ರಯಗ ಕೂಡಾ ನಡೆದಿದೆ. ಇವೆಲ್ಲದರ ನಡುವೆ ಅಮೆರಿಕಾದಲ್ಲಿ ನಡೆಯುತ್ತಿರುವ ಪ್ರಯೋಗಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರ ಲಭಿಸಿದೆ. ಇಲ್ಲಿನ ಮಾನವರ ಮೇಲೆ ನಡೆದ ಲಸಿಕೆಯು ಅದ್ಭುತ ಪರಿಣಾಮ ನೀಡಿದೆ.

'ಕಾಶ್ಮೀರ ಭಾರತದ ಆಂತರಿಕ ವಿಷಯ: ಪಾಕ್‌ ಜತೆ ಸೇರಿ ಮೇಲೆ ದಾಳಿ ಮಾಡಲ್ಲ'

 ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವಿಷಯವೆಂದು ಬಿಂಬಿಸಲು ಪಾಕಿಸ್ತಾನ ಯತ್ನಿಸುತ್ತಿರುವಾಗಲೇ, ಕಾಶ್ಮೀರ ಭಾರತದ ಆಂತರಿಕ ವಿಚಾರ. ಕಾಶ್ಮೀರದಲ್ಲಿನ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಗೆ ತಾನು ಕೈಜೋಡಿಸುವುದಿಲ್ಲ ಎಂದು ಕುಖ್ಯಾತ ಉಗ್ರಗಾಮಿ ಸಂಘಟನೆ ತಾಲಿಬಾನ್‌ ಘೋಷಿಸಿದೆ.

ಹೈಡ್ರಾಮಾ ಬಳಿಕ ಕೊರೋನಾ ಮೂಲ ತನಿಖೆ ನಿರ್ಣಯಕ್ಕೆ ಚೀನಾ ಬೆಂಬಲ!

ಕೊರೋನಾ ವೈರಸ್‌ ಉಗಮದ ಕುರಿತು ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬರುತ್ತಿರುವಾಗಲೇ, ಭಾರತದ ಅಧ್ಯಕ್ಷತೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಎರಡು ದಿನಗಳ ವಿಡಿಯೋ ಕಾನ್ಫರೆನ್ಸ್‌ ಸಮಾವೇಶ ಸೋಮವಾರದಿಂದ ಆರಂಭಗೊಂಡಿದೆ. ಆದರೆ, ಈ ಸಭೆ ಆರಂಭದಲ್ಲೇ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ.

ಗಡೀಪಾರು ತಪ್ಪಿಸಿಕೊಳ್ಳಲು ಮಲ್ಯಗೆ ಇನ್ನೊಂದು ದಾರಿ!.

ಸಾವಿರಾರು ಕೋಟಿ ರು. ಸಾಲ ಮರುಪಾವತಿ ಮಾಡದೆ ವಂಚನೆ ಎಸಗಿ ಪರಾರಿಯಾಗಿರುವ ಪ್ರಕರಣದಲ್ಲಿ ಬ್ರಿಟನ್ನಿನಿಂದ ಭಾರತಕ್ಕೆ ಗಡೀಪಾರಾಗುವುದನ್ನು ತಪ್ಪಿಸಿಕೊಳ್ಳಲು ‘ಮದ್ಯದ ದೊರೆ’ ವಿಜಯ್‌ ಮಲ್ಯಗೆ ಇನ್ನೊಂದು ಅಡ್ಡದಾರಿಯಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದು- ಬ್ರಿಟನ್‌ ಸರ್ಕಾರದಿಂದ ಅಧಿಕೃತವಾಗಿ ಆಶ್ರಯ ಕೋರುವುದು.

ಕೊರೋನಾಗೆ ದೇಣಿಗೆಯೂ ಕೊಡಲ್ಲ, ಕೊಡೋಕು ಬಿಡಲ್ಲ, ಸ್ವಾರ್ಥಿ ಶಾಸಕನ ಬಣ್ಣ ಬಯಲು..!

ಕೊರೋನಾ ವಿರುದ್ಧ ದೇಶವೇ ಹೋರಾಡುತ್ತಿದೆ. ಆದ್ರೆ ಇಲ್ಲೊಬ್ಬ ಶಾಸಕ ಮಾತ್ರ ಕೊರೋನಾ ವಿರುದ್ಧ ಹೋರಾಟಕ್ಕೆ ದೇಣಿಗೆ ಕೊಡುತ್ತಿಲ್ಲ, ಕೊಡೋರನ್ನು ಬಿಡುತ್ತಿಲ್ಲ. ಪಿಎಂ, ಸಿಎಂ ನಿಧಿಗೆ ದೇಣಿಗೆ ನೀಡದಂತೆ ಹೇಳಿರುವ ಶಾಸಕನ ಸ್ವಾರ್ಥ ಬಣ್ಣ ಬಯಲಾಗಿದೆ.

ಸಿನಿಮಾದಲ್ಲಿ ನಟಿಸಲು ಓಕೆ, ಆದ್ರೆ ಒಂದು ಕಂಡೀಷನ್: ವಿರಾಟ್ ಕೊಹ್ಲಿ

ತನ್ನದೇ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆದರೆ ಒಂದು ಕಂಡೀಷನ್ ಕೂಡಾ ಹಾಕಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಸೋಶಿಯಲ್ ಮೀಡಿಯಾ ಸಂಶೋಧನೆ, ಪ್ರಿಯಾಂಕಾ ಹಳೆ ಅವತಾರ ಜಗಜ್ಜಾಹೀರು!

 ಈ ಪ್ರಿಯಾಂಕಾ ಚೋಪ್ರಾ ಅವತಾರಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಲಾಕ್ ಡೌನ್ ನಡುವೆ ಪ್ರಿಯಾಂಕಾ ಹಳೆ  ಬಿಸಿ ಪೋಟೋಗಳು ವೈರಲ್ ಆಗುತ್ತಿವೆ. ನಿಕ್ ಮದುವೆಯಾದ ಮೇಲೆ ಪ್ರಿಯಾಂಕಾ ಟ್ರೋಲಿನ ದೊಡ್ಡ ಆಹಾರವಾಗಿದ್ದರು. ಈಗ  ಮತ್ತೊಂದಿಷ್ಟು ಪೋಟೋಗಳು ವೈರಲ್

ಲಾಕ್‌ಡೌನ್‌ ಬೇಕು ಆದರೆ ಈ ನಟನ ಜೊತೆ ಮಾತ್ರವಾದರೆ ಓಕೆ; ನಟಿ ಡಿಮ್ಯಾಂಡ್!

ಕಾಲಿವುಡ್‌-ಟಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪೂಜಾ ಹೆಗ್ಡೆ ಈಗ ಬಾಲಿವುಡ್‌ನ ಬೇಡಿಕೆಯ ನಟಿಯಾಗಿದ್ದಾರೆ. ಹೆಚ್ಚಾಗಿ ವಿದೇಶ ಪ್ರಯಾಣ ಮಾಡುವ ಪೂಜಾ ಹೆಗ್ಡೆನೂ 14 ದಿನಗಳ ಕಾಲ ಕ್ವಾರಂಟೈನ್‌ ಆಗಿದ್ದರು ಈ ವೇಳೆ ಅಭಿಮಾನಿಗಳು ಕೇಳಿದ ಒಂದು ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೊಬೈಲ್‌ ಸಿಬ್ಬಂದಿ ಸೋಗಲ್ಲಿ ಕಾನ್ಸ್‌ಟೇಬಲ್‌ಗೆ ಟೋಪಿ!

ಹೆಡ್‌ ಕಾನ್‌ಸ್ಟೇಬಲ್‌ಗೆ ವಂಚಕ ಚಳ್ಳೆಹಣ್ಣು ತಿನ್ನಿಸಿ, ಅವರ ಖಾತೆಯಿಂದ ಹಣ ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕೊರೋನಾದಿಂದ ನಲುಗುತ್ತಿರುವ ಭಾರತದ ಮೇಲೆ ಮತ್ತೊಂದು ಅಟ್ಯಾಕ್!

ಇಡೀ ವಿಶ್ವವೇ ನಲುಗಿದೆ. ಭಾರತದಲ್ಲಿ ಈ ಸೋಂಕು ಒಂದು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕಂಡು ಬಂದಿದೆ. ಚೀನಾದ ವುಹಾನ್‌ನಿಂದ ಹಬ್ಬಿದ ಈ ಮಹಾಮಾರಿಯಿಂದಾಗಿ ಮಾರ್ಚ್ 24 ರಿಂದ ಭಾರತದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಜನರೆಲ್ಲಾ ಮನೆಯಲ್ಲೇ ಉಳಿದಿದ್ದಾರೆ.  ಇದೀಗ ಮತ್ತೊಂದು ಆಘಾತ ಎದುರಾಗಿದೆ.

click me!