ರಾತ್ರಿ 8 ಗಂಟೆಗೆ ಮೋದಿ ಭಾಷಣ, ದಿಢೀರ್ ಸನ್ನಿ ಲಿಯೋನ್ ವಿದೇಶ ಪ್ರಯಾಣ; ಮೇ.12ರ ಟಾಪ್ 10 ಸುದ್ದಿ!

By Chethan Kumar  |  First Published May 12, 2020, 5:10 PM IST

ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಇಂದು 2541 ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಒಟ್ಟು 70 ಸಾವಿರ ಗಡಿದಾಟಿದೆ. ಇತ್ತ  ಕೊರೋನಾ ವೈರಸ್ 3ನೇ ಹಂತದ ಲಾಕ್‌ಡೌನ್ ಅಂತಿಮ ಹಂತದಲ್ಲಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶದ ಜನರನ್ನುದ್ದೇಶಿ ಮಾತನಾಡಲಿದ್ದಾರೆ. ಹಾಟ್ ಸುಂದರಿ ಸನ್ನಿ ಲಿಯೋನ್ ರಾತ್ರೋರಾತ್ರಿ ವಿದೇಶ ಹಾರಿದ್ದಾರೆ. ಐಪಿಎಲ್ ಟೂರ್ನಿ ರದ್ದಾಗೋ ಭೀತಿಯಲ್ಲಿ ಬಿಸಿಸಿಐ, ಆರ್‌ಬಿಐ ಬಳಿ 653 ಟನ್ ಚಿನ್ನ ಸೇರಿದಂತೆ ಮೇ.12ರ ಟಾಪ್ 10 ಸುದ್ದಿ ಇಲ್ಲಿವೆ.
 


ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಮಾತು!...

Latest Videos

undefined

ಮಂಗಳವಾರ ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮಂದಿ ದೇಶವನ್ನುದ್ದೆಶಿಸಿ ಭಾಷಣ ಮಾತನಾಡಲಿದ್ದು, ಯಾವ ವಿಚಾರಚವಾಗಿ ಮಾತನಾಡುತ್ತಾರೆ ಎಂಬುವುದು ಭಾರೀ ಕುತೂಹಲ ಮೂಡಿಸಿದೆ. ಈ ಸಂಬಂಧ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಪ್ರಧಾನಿ ಮೋದಿ ಲಾಲ್‌ಡೌನ್ ಸಂಬಂಧ ದೇಶವನ್ನುದ್ದೆಶಿಸಿ ಮಾತನಾಡಬಹುದೆಂದು ಅಂದಾಜಿಸಲಾಗಿದೆ.

ದೇಶದಲ್ಲಿ 70000 ಗಡಿ ದಾಟಿದ ಸೋಂಕು, ಒಂದೇ ದಿನ ದಾಖಲೆಯ 174 ಸಾವು!

ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಕೊರೋನಾ ವೈರಸ್‌ ಹಾವಳಿ ಅಧಿಕವಾಗಿದ್ದು, ಸೋಮವಾರ ಮತ್ತೆ ಹೊಸದಾಗಿ 2541 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 70 ಸಾವಿರದ ಗಡಿ ದಾಟಿ 70480ಕ್ಕೆ ಹೆಚ್ಚಳಗೊಂಡಿದೆ. ಭಾನುವಾರ 5426 ಮಂದಿಯಲ್ಲಿ ಕೊರೋನಾ ಕಂಡುಬಂದಿತ್ತು. 

ಸ್ವಂತ ಕಾರಿಲ್ಲ: ಆದ್ರೂ ಮಹಾರಾಷ್ಟ್ರ ಸಿಎಂ ಠಾಕ್ರೆ ಬಳಿ ಇದೆ ಇಷ್ಟು ಆಸ್ತಿ!...

ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಧುಮುಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಮ್ಮ ಮತ್ತು ಕುಟುಂಬದ ಆಸ್ತಿ ಮೌಲ್ಯ ಘೋಷಿಸಿದ್ದಾರೆ.


ದಾವೂದ್‌ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್‌ ಉಗ್ರ ಸಂಚು!...

ಪಾಕಿಸ್ತಾನ ಮೂಲದ ಲಷ್ಕರ್‌-ಎ- ತೊಯ್ಬಾ ಉಗ್ರ ಸಂಘಟನೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಜೊತೆಗೂಡಿ ಜಮ್ಮು- ಕಾಶ್ಮೀರ ಮತ್ತು ದೇಶದ ಇತರ ಭಾಗಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

IPL 2020 ಸಂಪೂರ್ಣ ರದ್ದಾದರೆ BCCIಗೆ ಆಗುವ ನಷ್ಟವೆಷ್ಟು? ಇಲ್ಲಿದೆ ವಿವರ!...

ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡೆಗಳು ರದ್ದಾಗಿದೆ. ಭಾರತ ಹಾಗೂ ಸೌತ್ ಆಫ್ರಿಕಾ ಸರಣಿ, ಬಳಿಕ ಐಪಿಎಲ್ ಟೂರ್ನಿ, ಆಸ್ಟ್ರೇಲಿಯಾ ಪ್ರವಾಸ ಸೇರಿದಂತೆ ಹಲವು ಟೂರ್ನಿಗಳು ಬಹುತೇಕ ರದ್ದಾಗಿದೆ. ಆದರೆ ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. 2020ರಲ್ಲಿ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐ ಆಪಾರ ನಷ್ಟ ಅನುಭವಿಸಲಿದೆ. ಈ ನಷ್ಟ ಸರಿದೂಗಿಸುವುದು ಅಷ್ಟೇ ದೊಡ್ಡ ಸವಾಲು. 

ಮಕ್ಕಳೊಂದಿಗೆ ವಿದೇಶಕ್ಕೆ ಹಾರಿದ ಸನ್ನಿ ಲಿಯೋನ್; ಹೇಗೆ ಸಾಧ್ಯವಾಯ್ತು?...

ಕೊರೋನಾ ವೈರಸ್‌ಗೆ ಹೆದರಿ ಮಕ್ಕಳನ್ನು ರಕ್ಷಿಸಿಕೊಳ್ಳಲು ರಾತ್ರೋರಾತ್ರಿ ಭಾರತದಿಂದ ವಿದೇಶಕ್ಕೆ ಹಾರಿದ ಹಾಟ್‌ ಸುಂದರಿ ಸನ್ನಿ ಲಿಯೋನ್‌ ಆಂಡ್ ಫ್ಯಾಮಿಲಿ...

ಆರ್‌ಬಿಐ ಬಳಿ 653 ಟನ್‌ ಚಿನ್ನ ಸಂಗ್ರಹ: ಅರ್ಧ ವಿದೇಶದಲ್ಲಿ!...

ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) 2019-20ನೇ ಆರ್ಥಿಕ ಸಾಲಿನಲ್ಲಿ 40.45 ಟನ್‌ ಚಿನ್ನ ಖರೀದಿಸಿದೆ. ಈ ಮೂಲಕ ಆರ್‌ಬಿಐ ಸಂಗ್ರಹದಲ್ಲಿರುವ ಒಟ್ಟು ಚಿನ್ನದ ಪ್ರಮಾಣ 653.01 ಟನ್‌ಗೆ ಏರಿಕೆಯಾಗಿದೆ.

ಭರ್ಜರಿ ಆಫರ್; 6.7 ಲಕ್ಷ ರೂ. ಡಿಸ್ಕೌಂಟ್ ಘೋಷಿಸಿದ ಇಂಡಿಯನ್ ಮೋಟರ್‌ಸೈಕಲ್!...

ಕ್ರೂಸರ್ ಬೈಕ್‌ಗಳಲ್ಲಿ ಅತ್ಯಂತ ಜನಪ್ರಿಯ ಬೈಕ್ ಆಗಿರುವ ಇಂಡಿಯನ್ ಮೋಟಾರ್‌ಸೈಕಲ್ ಭರ್ಜರಿ ಆಫರ್ ಘೋಷಿಸಿದೆ. ಕೆಲ ಮಾಡೆಲ್ ಬೈಕ್ ಮೇಲೆ ಗರಿಷ್ಠ  6.7 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಭಾರತದ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ನೀಡಿರುವ ಇಂಡಿಯನ್ ಮೋಟರ್‌ಸೈಕಲ್, ನಿಯಮಿತ ಅವಧಿಗೆ ಸೀಮಿತಗೊಳಿಸಿದೆ. ಇದು BS4 ಬೈಕ್‌ಗಳ ಕೆಲ ಮಾಡೆಲ್ ಮೇಲೆ ಮಾತ್ರ. 

ಮುಂಬೈ ಸಮುದ್ರ ತೀರದಲ್ಲಿ ಬಾಯ್‌ಫ್ರೆಂಡ್‌ ಜತೆ ಪೂನಂ, ಲಾಕ್ ಡೌನ್ ನಡುವೆ ಇದೆಂಥಾ ಉಸಾಬರಿ!...

ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಪೋಟೋ ಶೇರ್ ಮಾಡಿ ಕಿಚ್ಚು ಹೊತ್ತಿಸುವ ಬಾಲಿವುಡ್ ಬೆಡಗಿ ಪೂನಂ ಪಾಂಡೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.  ನಟಿಯನ್ನು ಅರೆಸ್ಟ್ ಮಾಡಲಾಗಿದೆ ಎಂಬ ಸುದ್ದಿಯೂ ಹರಿದಾಡಿದ್ದು ಇಲ್ಲ ನಾನು ಮನೆಯಲ್ಲೇ ಸೇಫ್ ಆಗಿದ್ದೇನೆ ಎಂದು ಸೋಶಿಯಲ್ ಮೀಡಿಯಾ ಮುಖೇನ ಬಂದು ಹೇಳಿದ್ದಾರೆ. 

ಕೆಲವರು ಮಾಡೋ ತಪ್ಪಿಗೆ ದೇಶಕ್ಕೆಲ್ಲಾ ಲಾಕ್‌ಡೌನ್ ಶಿಕ್ಷೆ..!...

ಕೊರೋನಾ ತಡೆಗಾಗಿ ಸರ್ಕಾರಿ ಮೂರು ಬಾರಿ ಲಾಕ್‌ಡೌನ್ ಹೇರಿದೆ. ಏನೆಲ್ಲಾ ಕ್ರಮ ಕೈಗೊಳ್ಳಬಹುದೋ ಅದನ್ನೆಲ್ಲಾ ಕೈಗೊಂಡಿದೆ. ಮೂರು ಲಾಕ್‌ಡೌನ್‌ನಿಂದ ಜನ ಸಂಕಷ್ಟದಲ್ಲಿದ್ದು ಇದನ್ನು ತೆರವುಗೊಳಿಸಲು ಸರ್ಕಾರ ಚಿಂತಿಸುತ್ತಿದೆ. ಅದರೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ. 

click me!