ಕಳೆದ ಕೆಲ ದಿನಗಳಲ್ಲಿ ಪಾಕಿಸ್ತಾನ ಹೊತ್ತಿ ಉರಿಯುತ್ತಿದ್ದು, ನಾಗರಿಕ ದಂಗೆ ಶುರುವಾಗಿದೆ. ದಿವಾಳಿ ಅಂಚಿನಲ್ಲಿರುವ ದೇಶದಲ್ಲಿ ಇದೇನಾಗ್ತಿದೆ?
ಪಾಕಿಸ್ತಾನ ಹೊತ್ತಿ ಉರಿಯುತ್ತಿದೆ. ಯಾರನ್ನು ಕಂಡರೆ ಜನ ಭಯ ಪಡಬೇಕಿತ್ತೋ ಅವರ ವಿರುದ್ಧವೇ ಜನ ದಂಗೆ ಎದ್ದಿದ್ದಾರೆ, ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಇಮ್ರಾನ್ ಖಾನ್ ಬೆಂಬಲಿಗರು ಸಿಡಿದೆದ್ದಿದ್ದು, ಪಾಕಿಸ್ತಾನ ಅಕ್ಷರಶಃ ನಲುಗಿ ಹೋಗಿದೆ. ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಈ ರಾಷ್ಟ್ರದಲ್ಲಿ ಇಮ್ರಾನ್ ಖಾನ್ ಬೆಂಬಲಿಗರನ್ನು ಶಮನಗೊಳಿಸಲು ಇದಾಗಲೇ ಸೇನೆ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ವರದಿಯೊಂದರ ಪ್ರಕಾರ ಇದಾಗಲೇ 2.7 ಬಿಲಿಯನ್ ಪಾಕಿಸ್ತಾನದ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎನ್ನುವ ಸುದ್ದಿ ಬರುತ್ತಿದೆಯಾದರೂ, ಅಲ್ಲಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿರುವುದು ಕೂಡ ವರದಿಯಾಗುತ್ತಿದೆ.
ಈ ಪ್ರತಿಭಟನೆಗೆ ಮುಖ್ಯ ಕಾರಣ, ಜೈಲಿನಲ್ಲಿರುವ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ನಾಯಕ ಇಮ್ರಾನ್ ಖಾನ್ ಬೆಂಬಲಿಗರು ನಡೆಸಿದ ಮೆರವಣಿಗೆ. ಇಮ್ರಾನ್ ಖಾನ್ ಅವರು ನವೆಂಬರ್ 24 ರಂದು ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸುವಂತೆ ನೀಡಿದ್ದ ಕರೆಗೆ ಸ್ಪಂದಿಸಿ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ರಾಜಧಾನಿ ಇಸ್ಲಾಮಾಬಾದ್ ಅನ್ನು ಈ ಬೆಂಬಲಿಗರು ಪ್ರವೇಶಿಸುತ್ತಿದ್ದಂತೆಯೇ, ಪ್ರತಿಭಟನಾ ಮೆರವಣಿಗೆ ಹಿಂಸಚಾರಕ್ಕೆ ತಿರುಗಿದೆ. ಸೇನೆಯ ವಿರುದ್ಧವೇ ಪ್ರತಿಭಟನಾಕಾರರು ರೊಚ್ಚಿಗೆದ್ದಿದ್ದಾರೆ. ಈ ಹಂತದಲ್ಲಿ ಪೊಲೀಸರು, ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದ್ದು, ಹತ್ತಾರು ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಇವರಲ್ಲಿ ಸೇನಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಕೂಡ ಸೇರಿದ್ದಾರೆ. ಇದಾಗಲೇ ಕಂಡಲ್ಲಿ ಗುಂಡು ಹಾರಿಸುವ ಆದೇಶವೂ ಹೊರಬಂದಿದೆ.
undefined
ರೀಲ್ಸ್ ಹುಚ್ಚಿಗೆ ಮಹಿಳೆಯರ ಒಳ ಉಡುಪು ಧರಿಸಿ ರಸ್ತೆಗೆ ಬಂದ! ಆಗಬಾರದ್ದು ಆಗೋಯ್ತು... ವಿಡಿಯೋ ವೈರಲ್
ಅಧಿಕೃತ ಅಂಕಿಅಂಶಗಳ ಪ್ರಕಾರ, ಪಿಟಿಐ ನಡೆಸಿದ ಪ್ರತಿಭಟನೆಗಳು ಮತ್ತು ಧರಣಿಗಳನ್ನು ನಿರ್ವಹಿಸಲು ಪಾಕಿಸ್ತಾನ ಸರ್ಕಾರವು ಕಳೆದ 18 ತಿಂಗಳುಗಳಲ್ಲಿ 2.7 ಬಿಲಿಯನ್ ರೂಪಾಯಿ ಖರ್ಚು ಮಾಡಿದೆ. ಈ ಪೈಕಿ, ಪಂಜಾಬ್ ಮತ್ತು ಖೈಬರ್ ಪಖ್ತುನ್ಖ್ವಾ ಮತ್ತು ಇಸ್ಲಾಮಾಬಾದ್‌ನಂತಹ ಪ್ರದೇಶಗಳಲ್ಲಿ ತೀವ್ರಗೊಂಡ ಪ್ರತಿಭಟನೆಯಿಂದ ಕಳೆದ ಆರು ತಿಂಗಳಲ್ಲಿ 1.2 ಶತಕೋಟಿ ಖರ್ಚು ಮಾಡಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಹಲವಾರು ನಗರಗಳಾದ್ಯಂತ 1.5 ಶತಕೋಟಿ ಯಷ್ಟು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯಾಗಿದೆ. ಸೇಫ್ ಸಿಟಿ ಕ್ಯಾಮೆರಾಗಳಲ್ಲಿ ಉಂಟಾದ ನಷ್ಟವು 280 ಮಿಲಿಯನ್ ಮೌಲ್ಯದ್ದಾಗಿದೆ. ಏಕೆಂದರೆ, ಇಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಇವುಗಳನ್ನು ಧ್ವಂಸಗೊಳಿಸಲಾಯಿತು. ಇದರ ಜೊತೆಗೆ 220 ಪೊಲೀಸ್ ವಾಹನಗಳನ್ನು ಪಿಟಿಐ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ.
ಇಮ್ರಾನ್ ಖಾನ್ ಬೆಂಬಲಿಗರ ಮೇಲೆ ಗುಂಡು ಹಾರಿಸಿರುವ ಆರೋಪವೂ ಇರುವ ಕಾರಣ, ಬೆಂಕಿ ಹಚ್ಚಲು ಪ್ರಯತ್ನ ನಡೆಸಲಾಯಿತು. ಒಂದೆಡೆ ಉಗ್ರರ ಕಾಟ, ನಾಲ್ಕೂ ಕಡೆಗಳಿಂದ ಪಾಕ್ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿರುವ ಶತ್ರು ದೇಶಗಳು, ಇನ್ನೊಂದೆಡೆ ಆರ್ಥಿಕವಾಗಿ ಸಂಪೂರ್ಣ ನಷ್ಟ ಹೊಂದಿ ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನಕ್ಕೆ ಈಗ ಮರ್ಮಾಘಾತವಾಗಿದೆ. ಇಮ್ರಾನ್ ಖಾನ್ ಅವರ ವಿರುದ್ಧ ಇದಾಗಲೇ ಹಲವು ಆರೋಪಗಳಿವೆ. ಅವರ ವಿರುದ್ಧದ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಾಮೀನು ನೀಡಿದರೂ ಅಥವಾ ಶಿಕ್ಷೆಯನ್ನು ಅಮಾನತುಗೊಳಿಸಿದರೂ ಅವರು ಬಂಧನದಲ್ಲಿಯೇ ಇದ್ದಾರೆ. ಭ್ರಷ್ಟಾಚಾರದಿಂದ ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಅಧಿಕಾರದ ದುರುಪಯೋಗದವರೆಗೆ ಅವರು ಪ್ರಧಾನಿಯಾಗಿದ್ದ ಸಮಯಕ್ಕೆ ಸಂಬಂಧಿಸಿದ 150 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಆಗ ಬೆಡ್‌ರೂಮ್, ಈಗ ಬಾತ್‌ರೂಮ್! ಫ್ರೆಂಡ್ ಜೊತೆ ನಿವೇದಿತಾ ಖುಲ್ಲಂ ಖುಲ್ಲಾ ವಿಡಿಯೋಗೆ ನೆಟ್ಟಿಗರು ಶಾಕ್...