ಹಾಸನ ಜಿಲ್ಲೆಯ ಆಲೂರಿನಲ್ಲಿ ಪ್ರೇಮ ವೈಫಲ್ಯದಿಂದ ಕುಪಿತಗೊಂಡ ಯುವಕನೊಬ್ಬ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ (ನ.27): ಇಬ್ಬರೂ ಒಂದೇ ಜಿಲ್ಲೆಯವರಾಗಿದ್ದು, ಯೌವ್ವನಾವಸ್ಥೆಯಲ್ಲಿ ಪರಸ್ಪರ ಪ್ರೀತಿ ಮಾಡುತ್ತಾ ಲೈಫೇ ಜಾಲಿ ಜಾಲಿ ಎಂದು ಸುತ್ತಾಡಿದ್ದಾರೆ. ಆದರೆ, ಜೀವನ ಎಂದು ಬಂದಾಗ ಪ್ರಿಯತಮನನ್ನು ನಿರಾಕರಿಸಿದ ಯುವತಿ, ನಿನ್ನನ್ನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ನಿರಾಕರಣೆ ಮಾಡಿ ಕೈಕೊಟ್ಟಿದ್ದಾಳೆ. ಇದರಿಂದ ಕುಪಿತಗೊಂಡ ಪ್ರಿಯಕರ ಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಪ್ರೇಮ ವೈಫಲ್ಯದಿಂದ ಹಲ್ಲೆ ಹಾಗೂ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಲ್ಲಿ ಯುವಕ-ಯುವತಿ ಇಬ್ಬರೂ ಪರಸ್ಪರ ಪ್ರೀತಿ ಮಾಡಿ, ಒಟ್ಟಿಗೆ ಸುತ್ತಾಡುತ್ತಾ ಹುಡುಗನ ಜೇಬಿನಲ್ಲಿದ್ದ ಎಲ್ಲ ಹಣ ಖಾಲಿ ಮಾಡುತ್ತಾರೆ. ನಂತರ, ಮದುವೆ ಎಂದು ಬಂದಾಗ ಪ್ರೀತಿಸಿದ ಹುಡುಗನಿಗಿಂತ ಒಳ್ಳೆಯ ಸಂಬಂಧ ಬಂದರೆ ಪ್ರಿಯಕರನನ್ನು ಬಿಟ್ಟು ಹೋಗುತ್ತಾರೆ. ಇಂತಹ ಘಟನೆಗಳಿಗೆ ಸಾಕ್ಷಿ ಆಗುವಂತೆ ಅನೇಕ ಸಿನಿಮಾಗಳು, ಕಥೆಗಳು ಹಾಗೂ ಜೀವನದಲ್ಲಿ ಅನುಭವ ಆದವರೂ ಸಾಕಷ್ಟಿದ್ದಾರೆ. ಇಂತಹ ಘಟನೆಗೆ ಹತ್ತಿರದ ಸಂಬಂಧವಿರುವಂತಹ ಘಟನೆ ಹಾನಸಲ್ಲಿ ನಡೆದಿದೆ.
ಹಾಸನ ಜಿಲ್ಲೆ, ಆಲೂರು ಪಟ್ಟಣದಲ್ಲಿ ಯುವಕ ಯುವತಿ ಇಬ್ಬರೂ ಕೆಲವು ದಿನಗಳಿಂದ ಪರಸ್ಪರ ಪ್ರೀತಿ ಮಾಡಿದ್ದಾರೆ. ಲೈಪು ಜಿಂಗಾಲಾಲ, ಜೀವನವೇ ಜಾಲಿ ಜಾಲಿ ಎಂದು ಎಲ್ಲೆಡೆ ಸುತ್ತಾಡಿದ್ದಾರೆ. ನಂತರ ಮದುವೆ ಎಂದು ಬಂದಾಗ ಪ್ರಯಕರನಿಗೆ ಕೂಕೊಟ್ಟು ಮದುವೆ ನಿರಾಕರಣೆ ಮಾಡಿದ್ದಾಳೆ. ಇದರಿಂದ ಕುಪಿತಗೊಂಡ ಯುವಕ ಮೋಹಿತ್ ಎಂಬಾತ ತನ್ನ ಪ್ರೇಯಸಿ ಗಾನವಿ ಎನ್ನುವವಳಿಗೆ ಸೋಮವಾರ ಸಂಜೆ ಆಲೂರು ಪಟ್ಟಣದಲ್ಲಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ ಆಗಿದ್ದನು. ಇದಾದ ನಂತರ ಸ್ಥಳೀಯರು ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯಕ್ಕೆ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.
ಇದನ್ನೂ ಓದಿ: 13 ವರ್ಷಗಳ ಸೇಡು: ಅಪ್ಪನನ್ನು ಕೊಲೆ ಮಾಡಿದವನನ್ನು ಕೊಚ್ಚಿಹಾಕಿದ ಮಗ!
ನಡು ರಸ್ತೆಯಲ್ಲಿಯೇ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿ ಆಗಿರುವ ಘಟನೆಗೆ ಸಂಬಂಧಿಸಿದಂತೆ ಆಲೂರು ಠಾಣೆಯ ಇನ್ಸ್‌ಪೆಕ್ಟರ್ ಗಂಗಾಧರ್, ಕಾನ್ಸ್‌ಟೇಬಲ್‌ಗಳಾದ ರಾಕೇಶ್, ಸೋಮಶೇಖರ್ ನೇತೃತ್ವದ ತಂಡವು ಆರೋಪಿಯನ್ನು ಹುಡುಕುತ್ತಾ ಹಿಂಬಾಲಿಸಿದ್ದಾರೆ. ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಬೇರ್ಯಾ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮೋಹಿತ್‌ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.