ಮೋದಿಗೆ ಈಗ ಜೇಟ್ಲಿ ನೆನಪು, ಚೆನ್ನೈ ತಂಡದಲ್ಲಿ ಕನ್ನಡ ಕಂಪು; ಜ.22ರ ಟಾಪ್ 10 ಸುದ್ದಿ!

By Suvarna NewsFirst Published Jan 22, 2021, 6:22 PM IST
Highlights

ಪ್ರಧಾನಿ ನರೇಂದ್ರ ಮೋದಿಗೆ ಇದೀಗ ದಿವಂಗತ ಅರುಣ್ ಜೇಟ್ಲಿ ನೆನಪು ಬಹುವಾಗಿ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕೃಷಿ ಕಾಯ್ದೆ. ಇತ್ತ ಟಿಬೆಟ್ ಧರ್ಮ ಗುರು ದಲೈ ಲಾಮಾಗೆ ಭಾರತ ರತ್ನ ನೀಡಲು ಭಾರತೀಯರು ಆಗ್ರಹಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕನ್ನಡಿಗ ರಾಬಿನ್ ಉತ್ತಪ ಸೇರಿಕೊಂಡಿದ್ದಾರೆ. ಹಾಟ್ ನಟನೆ ಕುರಿತು ಸ್ನಿ ಲಿಯೋನ್ ಉತ್ತರ, ಪೆಟ್ರೋಲ್ ಬೆಲೆ ಸೇರಿದಂತೆ ಜನವರಿ 22ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಟಿಬೆಟ್ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ನೀಡಲು ಶೇ.62 ಭಾರತೀಯರ ಬೆಂಬಲ!...

ಪ್ರತಿ ಬಾರಿ ಭಾರತದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಗೆ ನಾಮ ನಿರ್ದೇಶ, ಹೆಸರು ಘೋಷಣೆಗಳ ವೇಳೆ ಸಾಕಷ್ಟು ಚರ್ಚೆಯಾಗುತ್ತವೆ.  ಇದೀಗ ಟಿಬೆಟ್ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ಪ್ರಶಸ್ತಿ ನೀಡಲು ಭಾರತೀಯರು ಆಗ್ರಹಿಸಿದ್ದಾರೆ. ಶೇಕಡಾ 62ರಷ್ಟು ಮಂದಿ ದಲೈ ಲಾಮಾಗೆ ಭಾರತ ರತ್ನ ನೀಡಲು ಬೆಂಬಲ ಸೂಚಿಸಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಜತೆ ನಿಕಟ ಸಂಪರ್ಕ ಹೊಂದಿದ್ದ ಫ್ರಾಡ್ ಯುವರಾಜನಿಗೆ ಬಿಗ್ ಶಾಕ್...

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ನಾಯಕರಗಳ ಹೆಸರು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿದ್ದ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.

ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!...

ಆಧುನಿಕ ಸೂಪರ್ಸಾನಿಕ್ ಯುದ್ಧ ವಿಮಾನಗಳ ಗುಡುಗಿನ ಘರ್ಜನೆಯ ಮಧ್ಯೆ, ಈ ವರ್ಷದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮತ್ತೊಂದು ವಿಶೇಷವಿರಲಿದೆ. ರಷ್ಯಾ ಮೂಲದ ಎರಡು ಆಧುನಿಕ Mi -17 ಹೆಲಿಕಾಪ್ಟರ್‌ಗಳೊಂದಿಗೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ ಕೂಡಾ ಈ ಬಾರಿ ರಾಜಪಥದಲ್ಲಿ ಹಾರಾಟ ನಡೆಸಲಿದೆ. 

ತೆಲಂಗಾಣ ಮೂಲದ ವಿನಯ್‌ ರೆಡ್ಡಿ ಬರೆದ ಬೈಡೆನ್‌ ಭಾಷಣಕ್ಕೆ ವ್ಯಾಪಕ ಪ್ರಶಂಸೆ!...

ಪ್ರಮಾಣವಚನ ಸ್ವೀಕಾರದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಾಡಿದ ಭಾಷಣ| ಬೈಡೆನ್‌ ಮಾಡಿದ ಭಾಷಣವನ್ನು ಬರೆದುಕೊಟ್ಟ ಭಾರತೀಯ ಮೂಲದ ವಿನಯ್‌ ರೆಡ್ಡಿ| ತೆಲಂಗಾಣ ಮೂಲದ ವಿನಯ್‌ ರೆಡ್ಡಿ ಬರೆದ ಬೈಡೆನ್‌ ಭಾಷಣಕ್ಕೆ ವ್ಯಾಪಕ ಪ್ರಶಂಸೆ!

ಚೆನ್ನೈ ಸೂಪರ್‌ ಕಿಂಗ್ಸ್‌ ಕೂಡಿಕೊಂಡ ಕನ್ನಡದ ಕುವರ ರಾಬಿನ್ ಉತ್ತಪ್ಪ..!...

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗಿನಿಂದಲೇ ಬಲಿಷ್ಠ ತಂಡ ಕಟ್ಟಲು ಭರ್ಜರಿ ಸಿದ್ದತೆ ನಡೆಸುತ್ತಿದೆ. ಇದರ ಭಾಗವಾಗಿ ಜನವರಿ 20ರಂದು ಸಿಎಸ್‌ಕೆ ಫ್ರಾಂಚೈಸಿ ಕೆಲ ಆಟಗಾರರಿಗೆ ಗೇಟ್‌ಪಾಸ್‌ ನೀಡಿದೆ.

ಅಷ್ಟೊಂದು ಜನರ ಮಧ್ಯೆ ಹಾಟ್ ಆಗಿ ನಟಿಸೋದೇಗೆ..? ಸನ್ನಿ ಹೇಳಿದ್ದಿಷ್ಟು...

ಬಾಲಿವುಡ್ ನಟಿ ಸನ್ನಿ ಲಿಯೋನ್ ತೆರೆಯ ಮೇಲೆ ಎಷ್ಟೊಂದು ಹಾಟ್ ಆಗಿ ನಟಿಸ್ತಾರಲ್ಲಾ..? ಕ್ಯಾಮೆರಾಗಳು, ಜನರೂ ಎಲ್ಲರೂ ಇದ್ದಾಗ ಈ ರೀತಿ ಇಂಟಿಮೇಟ್ ಸೀನ್ಸ್ ಮಾಡೋದ್ಹೇಗೆ..? ಸನ್ನಿಯ ಉತ್ತರ ಇದು

86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ದೊಡ್ಡರಂಗೇಗೌಡ್ರು ಆಯ್ಕೆ..!...

86ನೇ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನ ಅಂತಿಮಗೊಳಿಸಲಾಗಿದೆ. ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಪೆಟ್ರೋಲ್ ಬೆಲೆಗೆ 'ಬೆಂದ'ಕಾಳೂರು; ಶತಕದತ್ತ ದಾಪುಗಾಲು!...

ಪೆಟ್ರೋಲ್, ಡೀಸೆಲ್ ಬೆಲೆ ಈಗಾಗಲೇ ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪಿದೆ. ಸದ್ಯಕ್ಕೆ ಇಂಧನ ಬೆಲೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಲೇ ಇದೆ. ಇದೀಗ ಬೆಂಗಳೂರು ಪೆಟ್ರೋಲ್, ಡೀಸೆಲ್ ಬೆಲೆಗೆ ಬೆಂದು ಹೋಗುತ್ತಿದೆ. 

ರಾಂಗ್ ಸೈಡ್ ಡ್ರೈವಿಂಗ್ ಮಾಡಿದರೆ ಮಾತಿಲ್ಲ, ಕತೆ ಇಲ್ಲ, ಲೈಸೆನ್ಸ್ ಶಾಶ್ವತವಾಗಿ ರದ್ದು!...

ಕೆಲವೊಂದು ಟ್ರಾಫಿಕ್ ನಿಯಮ ಉಲ್ಲಂಘಿಸಿವುದು ಅತ್ಯಂತ ಅಪಾಯಕಾರಿ. ಉಲ್ಲಂಘಿಸುವವರಿಗೆ ಮಾತ್ರವಲ್ಲ, ಅಮಾಯಕರ ಜೀವಕ್ಕೂ ಅಪಾಯವಾಗಲಿದೆ. ಇದರಲ್ಲಿ ರಾಂಗ್ ಸೈಡ್ ಡ್ರೈವಿಂಗ್ ಕೂಡ ಒಂದಾಗಿದೆ. ಇದೀಗ ರಾಂಗ್ ಸೈಡ್ ಡ್ರೈವಿಂಗ್ ಮಾಡಿದರೆ, ಹೇಳದೆ ಕೇಳದೆ ನಿಮ್ಮ ಲೈಸೆನ್ಸ್ ಕ್ಯಾನ್ಸಲ್ ಆಗಲಿದೆ.

ಅರುಣ್ ಜೇಟ್ಲಿ ಇದ್ದಿದ್ದರೆ ಮೋದಿಗೆ ಇರ್ತಿರಲಿಲ್ಲ ಈ ಸವಾಲು..!...

ಪ್ರಧಾನಿ ನರೇಂದ್ರ ರಾಜಕೀಯ ಇತಿಹಾಸ ನೋಡಿದ್ರೆ ಸೋತ ದಾಖಲೆಯೇ ಇಲ್ಲ. ಮೋದಿ ನಡೆದ ಹಾದಿಯಲ್ಲಿ ಸೋಲಿನ ಯೋಚನೆ ಮಾಡಲು ಸಾಧ್ಯವೇ ಇಲ್ಲ. ಈಗ ನೂತನ ಕೃಷಿ ಕಾಯ್ದೆ ಮೋದಿಗೆ ಸವಾಲಾಗಿದೆ. 

click me!