ಮೋದಿ ಉದ್ಘಾಟಿಸಲಿದ್ದಾರೆ ಸ್ನೇಹದ ಪ್ರತೀಕ, ವಯಸ್ಸಿನಲ್ಲಿ ಸದ್ದು ಮಾಡಿದ ರಶ್ಮಿಕಾ; ಜು.14ರ ಟಾಪ್ 10 ಸುದ್ದಿ!

By Suvarna NewsFirst Published Jul 14, 2021, 4:57 PM IST
Highlights

ಸರ್ಕಾರ ನೋಟು ಮುದ್ರಣ ಘಟಕದಿಂದ 5 ಲಕ್ಷ ರೂಪಾಯಿ ನಾಪತ್ತೆಯಾಗಿದ್ದು, ಕೇಸ್ ದಾಖಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಕೊಂಚ ಇಳಿಕೆಯಾಗವ ಲಕ್ಷಣ ಗೋಚರಿಸಿದೆ. ಲಸಿಕೆ ರಾಜಕೀಯಕ್ಕೆ ಸಚಿವರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಮಂತಾ - ರಶ್ಮಿಕಾ ಮಂದಣ್ಣ: ಸೌತ್‌ ನಟಿಯರ ರಿಯಲ್‌ ವಯಸ್ಸು, ಅನುಷ್ಕಾ ಶರ್ಮಾ ಬಾಡಿಗಾರ್ಡ್ ಸ್ಯಾಲರಿ ಸೇರಿದಂತೆ ಜುಲೈ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಸರ್ಕಾರ ನೋಟು ಮುದ್ರಣ ಘಟಕದಿಂದ 5 ಲಕ್ಷ ರೂಪಾಯಿ ನಾಪತ್ತೆ; ಕೇಸ್ ದಾಖಲು!

 ಗರಿಷ್ಠ ಭದ್ರತೆ, ಹೆಜ್ಜೆ ಹೆಜ್ಜೆಗೂ ಸಿಸಿಟಿವಿ, ಸಿಬ್ಬಂದಿಗಳನ್ನು ಹೊರತು ಪಡಿಸಿ ಇನ್ಯಾರಿಗೂ ಪ್ರವೇಶವಿಲ್ಲ. ಇಂತಹ ಹೈ ಲೆವೆಲ್ ಸೆಕ್ಯೂರಿಟಿ ಇದ್ದರೂ ನಾಸಿಕ್‌ನಲ್ಲಿರುವ ಸರ್ಕಾರದ ನೋಟು ಮುದ್ರಣ ಘಟಕದಿಂದ 5 ಲಕ್ಷ ರೂಪಾಯಿ ನಾಪತ್ತೆಯಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಾಹನ ಸವಾರರಿಗೊಂದು ಗುಡ್‌ ನ್ಯೂಸ್!

ಈಗಾಗಲೇ ಪ್ರತೀ ನಿತ್ಯದ ದರ ಪರಿಷ್ಕರಣೆಯಿಂದ ಭಾರೀ ಪ್ರಮಾಣದ ಏರಿಕೆ ಕಂಡು ಶತಕ ದಾಟಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಈ ತಿಂಗಳ ಅಂತ್ಯಕ್ಕೆ ಕೊಂಚ ಪ್ರಮಾಣ ಇಳಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

ಮೋದಿ ಉದ್ಘಾಟಿಸಲಿದ್ದಾರೆ ಭಾರತ- ಜಪಾನ್‌ ಸ್ನೇಹದ ಪ್ರತೀಕ 'ರುದ್ರಾಕ್ಷ'

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜುಲೈ 15ರಂದು ವಾರಾಣಸಿ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡುವುದರ ಜೊತೆ, ಕೆಲ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ.

ವಿರುಷ್ಕಾ ಬಾಡಿ ಗಾರ್ಡ್ ಸಂಬಳ ಯಾವ CEO ಗೂ ಕಡಿಮೆ ಇಲ್ಲ!

ಟಾಪ್‌ ಸೆಲೆಬ್ರಿಟಿಗಳಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ  ಬಾಡಿಗಾರ್ಡ್‌ ಪ್ರಕಾಶ್ ಸಿಂಗ್ ಉರ್ಫ್‌ ಸೋನು ಅವರ ವರ್ಷದ ಸಂಬಳ ಕೇಳಿದರೆ ಸಾಮಾನ್ಯರಿಗೆ ಶಾಕ್‌ ಆಗುವುದು ಗ್ಯಾರಂಟಿ. ಅನುಷ್ಕಾ ತಮ್ಮ ಬಾಡಿಗಾರ್ಡ್‌ ಸೋನು ಅವರನ್ನು ಕುಟುಂಬವೆಂದು ಪರಿಗಣಿಸಿದ್ದಾರೆ.

ಸಮಂತಾ - ರಶ್ಮಿಕಾ ಮಂದಣ್ಣ: ಸೌತ್‌ ನಟಿಯರ ರಿಯಲ್‌ ವಯಸ್ಸೆಷ್ಟು?

ಹಿರೋಯಿನ್‌ಗಳನ್ನು ನೋಡಿದರೆ ಏಜ್‌ ಇಸ್‌ ಜಸ್ಟ್‌ ಎ ನಂಬರ್‌ ಎಂದು ಅನಿಸುವುದು ಸುಳ್ಳಲ್ಲ. ಸಿನಿಮಾ ನಟಿಯರಿಗೇನು ವಯಸ್ಸೇ ಆಗುವುದಿಲ್ಲವಾ ಎಂಬ ಅನುಮಾನ ಬರುತ್ತದೆ. ಹಾಗೇ ಫ್ಯಾನ್ಸ್‌ಗೆ ತಮ್ಮ ಫೇವರೇಟ್‌ ನಟಿಯರ ನಿಜ ವಯಸ್ಸು ತಿಳಿಯುವ ಕೂತುಹಲ ಕಾಮನ್‌. ಇಲ್ಲಿದೆ ಸೌತ್‌ನ ಟಾಪ್‌ ನಟಿಯರ ರಿಯಲ್‌ ವಯಸ್ಸೆಷ್ಷು ಎಂಬ ಮಾಹಿತಿ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ Bolero Neo! ಹೇಗಿದೆ ಮಹೀಂದ್ರಾ ಕಂಪನಿಯ SUV?

ಕಾರುಗಳ ಉತ್ಪಾದನೆಯಲ್ಲಿ ದೇಶದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಮಹಿಂದ್ರಾ, ಬಹು ನಿರೀಕ್ಷೆಯ ಬೊಲೆರೋ ನಿಯೋ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬ್ರೆಜಾ, ಸೊನೆಟ್, ನೆಕ್ಸಾನ್, ವೆನ್ಯೂ ಸೇರಿದಂತೆ ಹಲವು ಎಸ್‌ಯುವಿಗಳಿಗೆ ತೀವ್ರ ಪೈಪೋಟಿ ಒಡ್ಡಲಿರುವ ಬೊಲೆರೋ ನಿಯೋ ಒಟ್ಟು ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಬೆಲೆ 8.48 ಲಕ್ಷ ರೂ.ನಿಂದ ಆರಂಭವಾಗಲಿದೆ

ವ್ಯಾಕ್ಸಿನ್ Vs ಪಾಲಿಟಿಕ್ಸ್: ರಾಜ್ಯಗಳಿಗೆ ಆರೋಗ್ಯ ಸಚಿವರ ಖಡಕ್ ಕ್ಲಾಸ್‌!

ಲಸಿಕೆ ಅಭಿಯಾನ ವಿಚಾರವಾಗಿ ರಾಜಕೀಯ ಮುಂದುವರೆದಿದೆ. ಹೀಗಿರುವಾಗ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ರಾಜ್ಯಗಳ ಲಸಿಕೆ ಅಭಿಯಾನ ನಿರ್ವಹಣೆ ವಿಚಾರವಾಗಿ ಸವಾಲೆತ್ತಿದ್ದು, ಸರಿಯಾಗಿ ಕರ್ತವ್ಯ ನಿಭಾಯಿಸದ್ದಕ್ಕೆ ಭರ್ಜರಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಒಂದಾದ ಬಳಿಕ ಮತ್ತೊಂದರಂತೆ ಸರಣಿ ಟ್ವೀಟ್‌ ಮಾಡಿರುವ ನೂತನ ಕೇಂದ್ರ ಆರೋಗ್ಯ ಸಚಿವ ರಾಜ್ಯಗಳ ವ್ಯವಸ್ಥೆಯನ್ನು ಟೀಕಿಸಿದ್ದಾರೆ.

ಸ್ಕಾರ್ಪಿಯೋ ಬಾನೆಟ್ ಮೇಲೆ ಕುಳಿತು ಮಂಟಪಕ್ಕೆ ತೆರಳಿದ ವಧು; ಮದವೆ ದಿನವೇ ಬಿತ್ತು ಕೇಸ್!

ಮದುವೆಯನ್ನು ಹೆಚ್ಮು ಸ್ಮರಣೀಯವಾಗಿಸಲು ವಧು, ವರ, ಕುಟಂಬಸ್ಥರು, ಸ್ನೇಹಿತರು ಪ್ರಯತ್ನಿಸುತ್ತಾರೆ. ಇದಕ್ಕೆ ಹಲವು ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾರೆ. ಇನ್ನು ಮಂಟಪಕ್ಕೆ ಆಗಮಿಸುವ ವೇಳೆ ವಿಂಟೇಜ್ ಕಾರು, ಸೂಪರ್ ಕಾರು, ಕುದರೆ, ಆನೆ ಮೇಲೆ ವಧು, ವರರ ಬಂದು ಅಚ್ಚರಿ ನೀಡಿದ ಸಾಕಷ್ಟು ಊದಾಹರಣೆಗಳಿವೆ. ಹೀಗೆ ಇಲ್ಲೊಂದು ಮದುವೆಯಲ್ಲಿ ಇರೋ ವಾಹನದಲ್ಲಿ ಕೊಂಚ ಡಿಫ್ರೆಂಟ್ ಆಗಿ ಮಂಟಪಕ್ಕೆ ತೆರಳಿದ ವಧುವಿಗೆ ಇದೀಗ ಸಂಕಷ್ಟ ಎದುರಾಗಿದೆ.

click me!