ಮೈಸೂರು ದಸರಾಗೆ ಚಾಲನೆ, ಉಗ್ರನ ಮನವೊಲಿಸಿದ ಭಾರತೀಯ ಸೇನೆ; ಅ.17ರ ಟಾಪ್ 10 ಸುದ್ದಿ!

By Suvarna NewsFirst Published Oct 17, 2020, 5:10 PM IST
Highlights

ಉಗ್ರರ ವಿರುದ್ಧ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಭಾರತೀಯ ಸೇನೆ ಎದುರು ಶರಣಾಗುವ ರೋಚಕ ದೃಶ್ಯ ಭಾರಿ ಸಂಚಲನ ಸೃಷ್ಟಿಸಿದೆ.  ಇತ್ತ ಡಿಜೆ ಹಳ್ಳಿ ಗಲಲಭೆ ಆರೋಪಿಗಳ ಪೈರ ಕಾಂಗ್ರೆಸ್ ನಾಯಕರು ಬ್ಯಾಟ್ ಬೀಸುತ್ತಿದ್ದಾರೆ. ಕೊರೋನಾ ಮಹಾಮಾರಿಯ ಆತಂಕದ ನಡುವೆ ಮೈಸೂರು ದಸರಾ ಉದ್ಘಾಟನೆಗೊಂಡಿದೆ ಅನುಪಮ್ ಕೈರ್ ಮರೆತ ಕರಣ್ ಜೋಹರ್‌ಗೆ ಹಿರಿಯನ ನಟನ ಪ್ರತಿಕ್ರಿಯೆ, ಬೌಂಡರಿ, ಸಿಕ್ಸರ್‌ನಲ್ಲಿ ದಾಖಲೆ ಬರೆದ ಗೇಲ್ ಸೇರಿದಂತೆ ಅಕ್ಟೋಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ನಿನಗೇನೂ ಆಗಲ್ಲ ಕಂದ: ಶರಣಾಗುವಂತೆ ಉಗ್ರನ ಮನವೊಲಿಸಿದ ಭಾರತೀಯ ಸೇನೆ ಯೋಧ!...

ಭಾರತೀಯ ಸೇನೆಯೊಂದು ವಿಡಿಯೋ ಬಹಿರಂಗಪಡಿಸಿದ್ದು, ಇದರಲ್ಲಿ ಜಮ್ಮು ಕಾಶ್ಮೀರದ ಬದ್ಗಾಮ್‌ನಲ್ಲಿ ಉಗ್ರರ ವಿರುದ್ಧ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಭಾರತೀಯ ಸೇನೆ ಎದುರು ಶರಣಾಗುವ ರೋಚಕ ದೃಶ್ಯಗಳಿವೆ. 

ಡಿಜೆ ಹಳ್ಳಿ ಗಲಭೆ: ಪ್ರಮುಖ ಆರೋಪಿ ಪರ ಕೈ ನಾಯಕರ ಬ್ಯಾಟಿಂಗ್?...

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆ ಗಲಭೆಯ ಮೂಲ ಉದ್ದೇಶ ಅಖಂಡ ಶ್ರೀನಿವಾಸ ಮೂರ್ತಿಯವರ ಹತ್ಯೆ ಮಾಡುವುದಾಗಿತ್ತು ಎನ್ನಲಾಗಿದೆ. 

ಮೈಸೂರು ದಸರಾಗೆ ಇಂದು ಚಾಲನೆ; ಈ ಬಾರಿ ಸರಳ, ಸುರಕ್ಷಿತ ದಸರಾ!...

ಕೊರೋನಾ ಮಹಾಮಾರಿಯ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಸರಳ, ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶನಿವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ಬೆಳಗ್ಗೆ 7.45 ರಿಂದ 8.15 ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಪದ್ಮಶ್ರೀ ಡಾ.ಸಿ.ಎನ್‌.ಮಂಜುನಾಥ್‌ ಉದ್ಘಾಟಿಸುವರು.

IPL 2020: ಬೌಂಡರಿ-ಸಿಕ್ಸರ್‌ನಲ್ಲೇ ವಿಶ್ವದಾಖಲೆ ನಿರ್ಮಿಸಿದ ಯೂನಿವರ್ಸಲ್ ಬಾಸ್..!...

ಟಿ20 ಕ್ರಿಕೆಟ್‌ನ ಕಿಂಗ್‌ ಕ್ರಿಸ್‌ ಗೇಲ್‌ ಹೊಸ ದಾಖಲೆ ಬರೆ​ದಿ​ದ್ದಾರೆ. ಬರೀ ಬೌಂಡರಿ, ಸಿಕ್ಸರ್‌ಗಳಿಂದಲೇ ಟಿ20 ಮಾದ​ರಿ​ಯಲ್ಲಿ 41 ವರ್ಷದ ಗೇಲ್‌ 10000 ರನ್‌ ಪೂರೈ​ಸಿ​ದ್ದಾರೆ. 

ಕಂಗನಾ ವಿರುದ್ಧ FIR : ಆದೇಶ ನೀಡಿದ ಬಾಂದ್ರಾ ಕೋರ್ಟ್...

ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಅವರ ಸಹೋದರಿ ರಂಗೋಲಿ ಚಂಡೇಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಾಂದ್ರಾ ಕೋರ್ಟ್ ಆದೇಶ ನೀಡಿದೆ. ಬಾಂದ್ರಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಆದೇಶ ಹೊರಡಿಸಿದೆ.

ಟ್ಯಾಗ್‌ನಲ್ಲಿ ಅನುಪಮ್ ಖೇರ್‌ನನ್ನು ಕೈಬಿಟ್ಟ ಕರಣ್: ಹೀಗಿತ್ತು ಹಿರಿಯ ನಟನ ರಿಯಾಕ್ಷನ್...

ಕುಚ್‌, ಕುಚ್ ಹೋತಾ ಹೇ ಸಿನಿಮಾದ 22 ವರ್ಷಗಳನ್ನು ಸಂಭ್ರಮಿಸಿ ಧರ್ಮ ಪ್ರೊಡಕ್ಷನ್ ಟ್ವೀಟ್ ಮಾಡಿತ್ತು. ಬಹುತೇಕ ನಟ, ನಟಿಯರನ್ನು ಟ್ಯಾಗ್ ಮಾಡಿದ್ದರೂ, ಹಿರಿಯ ನಟನನ್ನೇ ಟ್ಯಾಗ್ ಮಾಡಿರಲಿಲ್ಲ.

ಆತ್ಮನಿರ್ಭರ್ ಭಾರತ: In ಮೊಬೈಲ್ ಸೀರಿಸ್ ಬಿಡುಗಡೆ ಮಾಡುತ್ತಿದೆ ಮೈಕ್ರೋಮ್ಯಾಕ್ಸ್!...

ಭಾರತದ ಮೊಬೈಲ್ ಬ್ರ್ಯಾಂಡ್ ಮೈಕ್ರೋಮ್ಯಾಕ್ಸ್ ಮತ್ತೆ ಬರುತ್ತಿದೆ. ಚೀನಾ ಮೊಬೈಲ್ ಹಾವಳಿಯಿಂದ ಪರದೆ ಹಿಂದೆ ಸರಿದಿದ್ದ ಮೈಕ್ರೋಮ್ಯಾಕ್ಸ್ ಇದೀಗ ಭಾರತೀಯರಿಗಾಗಿ ಇನ್ ಮೊಬೈಲ್ ಸೀರಿಸ್ ಬಿಡುಗಡೆ ಮಾಡಲು ಸಜ್ಜಾಗಿದೆ. 

ಇನ್ಮುಂದೆ LPG ಪಡೆಯಲು ಒಟಿಪಿ ಕಡ್ಡಾಯ!...

ನವೆಂಬರ್‌ 1ರಿಂದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ಪಡೆಯಲು ನೀವು ನಿಮ್ಮ ಮೊಬೈಲ್‌ಗೆ ಬಂದ ಒಟಿಪಿಯನ್ನು ಡೆಲಿವರಿ ಬಾಯ್‌ಗೆ ನೀಡಬೇಕು. ನಂತರವಷ್ಟೇ ನಿಮಗೆ ಸಿಲಿಂಡರ್‌ ಸಿಗಲಿದೆ. ಹೀಗೊಂದು ಹೊಸ ವ್ಯವಸ್ಥೆಯನ್ನು ಕರ್ನಾಟಕದ 6 ಸೇರಿದಂತೆ ದೇಶದ 100 ಸ್ಮಾರ್ಟ್‌ ಸಿಟಿಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಲಾ ಅಡುಗೆ ಅನಿಲ ಪೂರೈಕೆ ಕಂಪನಿಗಳು ಜಾರಿಗೊಳಿಸುತ್ತಿವೆ.

ವೈರಲ್ ಆಗ್ತಿದೆ ಕಪಲ್ ಹಾಟ್ ಫೊಟೋಶೂಟ್..! ಇಲ್ನೋಡಿ ಫೋಟೋಸ್...

ಫೋಟೋಗ್ರಫರ್‌ಗಳು ಜಿದ್ದಿಗೆ ಬಿದ್ದಂತೆ ವೆಡ್ಡಿಂಗ್ ಫೋಟೋಗ್ರಫಿಯಲ್ಲಿ ಸಿಕ್ಕಾಪಟ್ಟೆ ಕ್ರಿಯೇಟಿವಿಟಿ ತೋರಿಸುತ್ತಾರೆ. ಎರ್ನಾಕುಳಂ ಮೂಲಕ ವೆಡ್ಡಿಂಗ್ ಸ್ಟೋರಿಸ್ ಫೋಟೋಗ್ರಫಿ ಈ ಫೋಟೋಶೂಟ್ ಮಾಡಿದ್ದು, ಈ ಶೂಟ್ ವಿವಾದವನ್ನೂ ಸೃಷ್ಟಿಸಿದೆ.

ಉದ್ದೇಶಪೂರ್ವಕವಾಗಿ KSRRC ಬಸ್ ಪ್ರಯಾಣಕ್ಕೆ ಅಡ್ಡಿ; ಪುಂಡರಿಗೆ ಪೊಲೀಸ್ ತಕ್ಕ ಶಾಸ್ತಿ!...

ಹೈವೇಗಳಲ್ಲಿ, ನಗರಗಳಲ್ಲಿ ಸೇರಿದಂತೆ ಹಲೆವೆಡೆ ಬೈಕ್ ವ್ಹೀಲಿಂಗ್, ಇತರರ ಪ್ರಯಾಣಕ್ಕೆ ಅಡ್ಡಿ ಪಡಿಸಿವುದು ಅಪಾಯಕಾರಿ ಸ್ಟಂಟ್ ಮಾಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ರೀತಿ ಕೆಆಸ್‌ಆರ್‌‌ಟಿಸಿ ಬಸ್ ಪ್ರಯಾಣಕ್ಕೆ ಅಡ್ಡಿ ಪಡಿಸಿದ ಪುಂಡರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

click me!