ಬಾಟಲ್‌ಗೆ 5 ಲಕ್ಷಕ್ಕೆ ಸೇಲ್ ಆಗುವ ಭಾರತದ ಒಂದೇ ಒಂದು ಅತ್ಯಂತ ದುಬಾರಿ ವಿಸ್ಕಿ ಬ್ರಾಂಡ್ ಇದು

By Anusha KbFirst Published May 2, 2024, 10:00 AM IST
Highlights

ವಿಸ್ಕಿಯಲ್ಲಿ ಚೀಪರ್‌ ಕಳ್ಳಬಟ್ಟಿಯಿಂದ ಹಿಡಿದು ಲಕ್ಷಾಂತರ ರೂ ಬೆಲೆಯ ಬ್ರಾಂಡೆಡ್‌ ವಿಸ್ಕಿಗಳು ಲಭ್ಯವಿದೆ. ಹಲವು ಬ್ರಾಂಡೆಡ್‌ ವಿಸ್ಕಿಗಳಿಗೆ ಲಕ್ಷಾಂತರ ರೂ ಬೆಲೆ ಇದೆ. ಆದರೆ ಹೀಗೆ ಲಕ್ಷಾಂತರ ರೂ ಬೆಲೆಗೆ ಸೇಲ್ ಆಗುವ ಭಾರತದ ಒಂದೇ ಒಂದು ಅತ್ಯಂತ ದುಬಾರಿ ಬ್ರಾಂಡ್ ಬಗ್ಗೆ ಇಲ್ಲಿದೆ ಡಿಟೇಲ್‌...

ನವದೆಹಲಿ: ವಿಸ್ಕಿಯಲ್ಲಿ ಚೀಪರ್‌ ಕಳ್ಳಬಟ್ಟಿಯಿಂದ (ಅನಧಿಕೃತ) ಹಿಡಿದು ಲಕ್ಷಾಂತರ ರೂ ಬೆಲೆಯ ಬ್ರಾಂಡೆಡ್‌ ವಿಸ್ಕಿಗಳು ಲಭ್ಯವಿದೆ. ಹಲವು ಬ್ರಾಂಡೆಡ್‌ ವಿಸ್ಕಿಗಳಿಗೆ ಲಕ್ಷಾಂತರ ರೂ ಬೆಲೆ ಇದೆ. ಆದರೆ ಹೀಗೆ ಲಕ್ಷಾಂತರ ರೂ ಬೆಲೆಗೆ ಸೇಲ್ ಆಗುವ ಭಾರತದ ಒಂದೇ ಒಂದು ಅತ್ಯಂತ ದುಬಾರಿ ಬ್ರಾಂಡ್ ಬಗ್ಗೆ ಇಲ್ಲಿದೆ ಡಿಟೇಲ್‌...

ರಾಂಪುರ ಸಿಗ್ನೇಚರ್ ರಿಸರ್ವ್ ಸಿಂಗಲ್ ಮಾಲ್ಟ್ ವಿಸ್ಕಿ ಭಾರತದ ಅತ್ಯಂತ ದುಬಾರಿ ಎನಿಸಿರುವ ಏಕೈಕ ವಿಸ್ಕಿಯಾಗಿದ್ದು ಇದರ ಪ್ರತಿ ಬಾಟಲಿಗೆ 5 ಲಕ್ಷ ರೂಪಾಯಿ ಇದೆ. ರಾಮ್‌ಪುರ ಡಿಸ್ಟಿಲರಿ ಸಂಸ್ಥೆ ಇದನ್ನು ತಯಾರು ಮಾಡುತ್ತದೆ. ಪ್ರಸ್ತುತ ರಾಮ್‌ಪುರ ಡಿಸ್ಟಿಲರಿ ರಾಡಿಕೋ ಖೈತಾನ್ ಸಂಸ್ಥೆಯಾಗಿ ಬದಲಾಗಿದೆ. ಈ ರಾಡಿಕೋ ಖೈತಾನ್ ಸಂಸ್ಥೆ ತಯಾರಿಸಿದ ಈ ಅಲ್ಟ್ರಾ ಲಕ್ಸುರಿ ಎನಿಸಿರುವ ರಾಂಪುರ್ ಸಿಗ್ನೇಚರ್ ರಿಸರ್ವ್ ವಿಸ್ಕಿ ಜೊತೆ ಹಲವು ವೈವಿಧ್ಯಮಯವಾದ ಪ್ರೀಮಿಯಂ ಸ್ಪಿರಿಟ್‌ಗಳನ್ನು  ಹೈದರಾಬಾದ್ ಡ್ಯೂಟಿ ಪ್ರೀನಲ್ಲಿ(ಸಂಸ್ಥೆ) ಮಾರಾಟ ಮಾಡಲಾಗುತ್ತದೆ. 

ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ವಿಶ್ವದ ಬೆಸ್ಟ್‌ ಸಿಂಗಲ್‌ ಮಾಲ್ಟ್‌ ವಿಸ್ಕಿ ಗೌರವ ಪಡೆದ ಭಾರತದ Godawan Century!

400 ಬಾಟಲಿಗಳಿಗೆ ಸೀಮಿತವಾಗಿ ಬಿಡುಗಡೆಯಾಗಿದ್ದ ಈ ಐಷಾರಾಮಿ ಬ್ರಾಂಡ್‌ನ ವಿಸ್ಕಿ ಬಾಟಲ್‌ಗಳಲ್ಲಿ ಈಗ ಕೇವಲ ಎರಡು ಮಾತ್ರ  ಮಾರಾಟಕ್ಕೆ ಲಭ್ಯವಿದೆ ಎಂದು ಕಂಪನಿ ಹೇಳಿದೆ. ತಯಾರಾದ 400 ಬಾಟಲಿಗಳ ರಾಂಪುರ ಸಿಗ್ನೇಚರ್ ರಿಸರ್ವ್‌ನ ಕೊನೆಯ ಎರಡು ಬಾಟಲಿಗಳು ಹೈಡರಾಬಾದ್ ಡ್ಯೂಟಿ ಪ್ರೀ ವೆಬ್ಸೈಟ್‌ನಲ್ಲಿ ಲಭ್ಯವಿದೆ ಎಂದು ಘೋಷಿಸಲು ನಾವು ಥ್ರಿಲ್ ಆಗಿದ್ದೇವೆ. ಇದು ಕೇವಲ ವಿಸ್ಕಿಯನ್ನು ಪ್ರತಿನಿಧಿಸುವುದಿಲ್ಲ, ಇದು ಭಾರತೀಯ ಕರಕುಶಲತೆ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತದೆ, ಇದು ಉತ್ಸಾಹಿಗಳು, ಸಂಗ್ರಹಿಸುವವರು ಮತ್ತು ಪ್ರಯಾಣಿಕರನ್ನು ರಾಡಿಕೊ ಖೈತಾನ್ ನ ಬ್ರಾಂಡ್‌ಗಳ ಅತೀ ಉತ್ಕೃಷ್ಟವಾದ ಗುಣಮಟ್ಟವನ್ನು ಅನುಭವಿಸಲು ಆಹ್ವಾನಿಸುತ್ತದೆ ಎಂದು ರಾಡಿಕೊ ಖೈತಾನ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಖೈತಾನ್ ಹೇಳಿದ್ದಾರೆ. 

ಐಪಿಎಲ್‌ ಗೆ ಕಿಕ್‌ ಹೆಚ್ಚಿಸಲು, 120 ರಿಂದ 4 ಸಾವಿರ ಬೆಲೆಯ ಟಾಪ್‌ 10 ಬೆಸ್ಟ್ ವಿಸ್ಕಿ ಮತ್ತು ಬಿಯರ್

ಬಲು ಐಷಾರಾಮಿ ಆಗಿರುವ ಈ ರಾಂಪುರ್ ಸಿಗ್ನೇಚರ್ ರಿಸರ್ವ್ ಜೊತೆಗೆ, ರಾಡಿಕೋ ಖೈತಾನ್ ಸಂಸ್ಥೆ ಹೈದರಾಬಾದ್ ಡ್ಯೂಟಿ-ಫ್ರೀ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವೈವಿಧ್ಯಮಯವಾದ ಪ್ರೀಮಿಯಂ ಸ್ಪಿರಿಟ್‌ಗಳನ್ನು ಕೂಡ ಹೊಂದಿದ್ದು, ಇದರಲ್ಲಿ ಮುಖ್ಯವಾಗಿ ವಿಶಿಷ್ಟವಾದ ರಾಂಪುರ್ ಅಸವಾ ಇಂಡಿಯನ್ ಸಿಂಗಲ್ ಮಾಲ್ಟ್ ವಿಸ್ಕಿ, ಶ್ರೀಮಂತ ಮತ್ತು ಸಂಕೀರ್ಣವಾದ ರಾಂಪುರ್ ಡಬಲ್ ಕ್ಯಾಸ್ಕ್ ಇಂಡಿಯನ್ ಸಿಂಗಲ್ ಮಾಲ್ಟ್ ವಿಸ್ಕಿ,  ಜೈಸಲ್ಮೇರ್ ಇಂಡಿಯನ್ ಕ್ರಾಫ್ಟ್ ಜಿನ್ ಮತ್ತು ಗೋಲ್ಡ್ ಎಡಿಶನ್ ಮತ್ತು ರೆಗಲ್ ರಾಯಲ್ ರಣಥಂಬೋರ್ ಹೆರಿಟೇಜ್ ಕಲೆಕ್ಷನ್ ವಿಸ್ಕಿಯನ್ನು ಒಳಗೊಂಡಿದೆ.

ರಾಡಿಕೋ ಖೈತಾನ್ ಭಾರತದಲ್ಲಿ ಐಎಂಎಫ್‌ಎಲ್‌ನ ಅತ್ಯಂತ ಹಳೆಯ ಮತ್ತು ದೊಡ್ಡ ತಯಾರಕರಲ್ಲಿ ಒಂದಾಗಿದೆ. ಇದನ್ನು ಮೊದಲು  ರಾಂಪುರ್ ಡಿಸ್ಟಿಲರಿ ಕಂಪನಿ ಎಂದು ಕರೆಯಲಾಗುತ್ತಿತ್ತು. 1943ರಲ್ಲಿ ವಿಸ್ಕಿ ತಯಾರಿಕೆ ಆರಂಭಿಸಿದ ರಾಡಿಕೋ ಖೈತಾನ್ ಕೆಲ ವರ್ಷಗಳಲ್ಲೇ  ಇತರ ಸ್ಪಿರಿಟ್ ತಯಾರಕರಿಗೆ ಪ್ರಮುಖ ಬೃಹತ್ ಸ್ಪಿರಿಟ್ ಪೂರೈಕೆದಾರ ಮತ್ತು ಬಾಟಲ್ ಪೂರೈಕೆದಾರನಾಗಿ  ಹೊರಹೊಮ್ಮಿತು.  1998 ರಲ್ಲಿ ಕಂಪನಿಯು ತನ್ನದೇ 8 ಪಿಎಂ ವಿಸ್ಕಿ ಎಂಬ ಹೊಸ ಬ್ರಾಂಡ್ ಅನ್ನು ಆರಂಭಿಸಿತ್ತು.

ರಾಡಿಕೊ ಖೈತಾನ್ ತನ್ನ ಸಂಪೂರ್ಣ ಬ್ರ್ಯಾಂಡ್ ಅನ್ನು ನೈಸರ್ಗಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಭಾರತದ ಕೆಲವೇ ಕೆಲವು ಮದ್ಯ ಡಿಸ್ಟಿಲರಿ ಕಂಪನಿಗಳಲ್ಲಿ ಒಂದಾಗಿದೆ. ವಿದೇಶಗಳಿಗೆ ಅಲ್ಕೋಹಾಲಿಕ್ ಪಾನೀಯಗಳನ್ನು ರಪ್ತು ಮಾಡುವ ಭಾರತದ ಬೃಹತ್ ರಪ್ತುದಾರ ಸಂಸ್ಥೆ ಎನಿಸಿರು ರಾಡಿಕೊ ಸಂಸ್ಥೆಯ ವಿಸ್ಕಿಗಳು ಇಂದು  102 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ.
 

click me!