Asianet Suvarna News Asianet Suvarna News

ಡಿಜೆ ಹಳ್ಳಿ ಗಲಭೆ: ಪ್ರಮುಖ ಆರೋಪಿ ಪರ ಕೈ ನಾಯಕರ ಬ್ಯಾಟಿಂಗ್?

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆ ಗಲಭೆಯ ಮೂಲ ಉದ್ದೇಶ ಅಖಂಡ ಶ್ರೀನಿವಾಸ ಮೂರ್ತಿಯವರ ಹತ್ಯೆ ಮಾಡುವುದಾಗಿತ್ತು ಎನ್ನಲಾಗಿದೆ. 

Oct 17, 2020, 12:15 PM IST

ಬೆಂಗಳೂರು (ಅ. 17): ಡಿಜೆ ಹಳ್ಳಿ, ಕೆಜಿ ಹಳ್ಳಿ ಬೆಂಕಿ ತಣ್ಣಗಾದರೂ ಅದರಿಂದ ಆಗಿರುವ ಬೆಳವಣಿಗೆ ಮಾತ್ರ ತಣ್ಣಗಾಗುತ್ತಿಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.  ಆ ಗಲಭೆಯ ಮೂಲ ಉದ್ದೇಶ ಅಖಂಡ ಶ್ರೀನಿವಾಸ ಮೂರ್ತಿಯವರ ಹತ್ಯೆ ಮಾಡುವುದಾಗಿತ್ತು ಎನ್ನಲಾಗಿದೆ.  

'ಡಿಕೆಶಿ ಹಿಂದೆ ಒಕ್ಕಲಿಗ ಸಮುದಾಯ ಹೋಗಲು ಅವರೇನು ಕಿಂದರಿ ಜೋಗಿಯೇ'?

ಅಂದು ಅವರು ಮನೆಯಲ್ಲಿದ್ದಿದ್ದರೆ ಅನಾಹುತವಾಗುತ್ತಿತ್ತು.  ವಿಚಾರಣೆ ವೇಳೆ ಈ ವಿಚಾರ ಹೊರ ಬಿದ್ದಿದ್ದು, ಚರ್ಚೆಯನ್ನು ಹುಟ್ಟು ಹಾಕಿದೆ. ಈ ಗಲಭೆಯ ಹಿಂದಿರುವ ಸಂಪತ್ ರಾಜ್, ಜಾಕಿರ್ ವಿಚಾರಣೆ ಮಾಡಲು ಹಿಂದೇಟು ಹಾಕುತ್ತಿರುವುದಾದರೂ ಏಕೆ? ಎಂಬ ಪ್ರಶ್ನೆ ಹುಟ್ಟಿದೆ. ಈ ಬೆಳವಣಿಗೆ ಬಗ್ಗೆ ರಾಜಕೀಯ ನಾಯಕರು ಹೇಳೋದೇನು? ನೋಡೋಣ ಬನ್ನಿ..!