ಕನ್ನಡದಲ್ಲಿ ಶುಭಕೋರಿದ ಮೋದಿ, ಜ್ವಾಲಾ ತುಳಿಯಲಿದ್ದಾರೆ ಸಪ್ತಪದಿ: ಏ.13ರ ಟಾಪ್ 10 ಸುದ್ದಿ!

By Suvarna News  |  First Published Apr 13, 2021, 4:37 PM IST

ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕನ್ನಡದಲ್ಲಿ ಶುಭಕೋರಿದ್ದಾರೆ. ಕೊರೋನಾ ಹೆಚ್ಚಾಗತ್ತಿರುವ ಕಾರಣ ವಿದೇಶಿ ಲಸಿಕೆ ಬಳಕೆಗೆ ಅನುಮೋದನೆ ನೀಡಲಾಗಿದೆ.  ಭಾರತದ ಮಾಜಿ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಗುಟ್ಟಾ ಮದುವೆ ಡೇಟ್ ಫಿಕ್ಸ್ ಆಗಿದೆ. ಲಾಕ್‌ಡೌನ್ ಕುರಿತು ಏ. 18 ಕ್ಕೆ ಮಹತ್ವದ ಸಭೆ, ಬಿಗ್‌ಬಾಸ್ ಮನೆ ಕತೆ ಸೇರಿದಂತೆ ಏಪ್ರಿಲ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಲಸಿಕೆಗಿಲ್ಲ ಕೊರತೆ, ವಿದೇಶೀ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ!...

Latest Videos

undefined

ವಿದೇಶದಲ್ಲಿ ಉತ್ಪಾದಿಸಲಾದ ಕೊರೋನಾ ಲಸಿಕೆಯ ಬಳಕೆಗೆ ಫಾಸ್ಟ್‌ ಟ್ರ್ಯಾಕ್ಡ್‌ ತುರ್ತು ಬಳಕೆಗೆ ಅನುಮೋದನೆ| ರಷ್ಯಾದ ಸ್ಪುಟ್ನಿಕ್‌ ವಿಯನ್ನು ತುರ್ತು ಬಳಕೆ ಮಾಡಲು ಸನುಮತಿ ಸಿಕ್ಕ ಬೆನ್ನಲ್ಲೇ ಮತ್ತೊಂದು ಮಹತ್ವದ ಆದೇಶ

ವಿಧಾನಸಭಾ ಚುನಾವಣೆ: ಮುರ್ಶಿದಾಬಾದ್‌ನಲ್ಲಿ 14 ಬಾಂಬ್ ಪತ್ತೆ...

ವಿಧಾನಸಭಾ ಚುನಾವಣೆಗೆ 8 ಹಂತದಲ್ಲಿ ಮತದಾನ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಶಂಶರ್‌ಗಂಜ್ ಪ್ರದೇಶದಲ್ಲಿ 14 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಬಾಂಬ್ ನಿಗ್ರಹ ದಳ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ಏಪ್ರಿಲ್ 17 ರಂದು ರಾಜ್ಯದಲ್ಲಿ ಐದನೇ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ಈ ಘಟನೆ ನಡೆದಿವುದು ಆತಂಕ ಸೃಷ್ಟಿಸಿದೆ.

ಕೊರೋನಾ ಮಧ್ಯೆ ಯುಗಾದಿ ಸಂಭ್ರಮ: ಕನ್ನಡದಲ್ಲೇ ಶುಭ ಕೋರಿದ ಪಿಎಂ, ರಾಷ್ಟ್ರಪತಿ!...

ರಾಜ್ಯದಲ್ಲಿ ಚಾಂದ್ರಮಾನ ಯುಗಾದಿ ಸಂಭ್ರಮ ಮನೆ ಮಾಡಿದೆ. ಕೋವಿಡ್ ನಡುವೆಯೂ ಜನರು ಭಕ್ತಿ ಭಾವದಿಂದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯದ ಜನತೆಗೆ ಯುಗಾದಿಯ ಶುಭಾಶಯ ಕೋರಿದ್ದಾರೆ.

ಹಸೆಮಣೆಯೇರಲು ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್‌ ರೆಡಿ; ಮದುವೆ ಡೇಟ್‌ ಫಿಕ್ಸ್‌...

ಭಾರತದ ಮಾಜಿ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಗುಟ್ಟಾ ಹಾಗೂ ನಟ ವಿಷ್ಣು ವಿಶಾಲ್‌ ಮದುವೆ ಡೇಟ್‌ ಫಿಕ್ಸ್ ಆಗಿದೆ. ಈ ತಾರಾ ಜೋಡಿಯ ಮದುವೆ ಯಾವಾಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

7ನೇ ವಾರ ಬಿಗ್‌ ಬಾಸ್‌ ಮನೆಯಿಂದ ಹೊರ ಬರಲು 8 ಜನ ನಾಮಿನೇಟ್‌; ಶಮಂತ್ ಲಕ್ಕಿ?...

ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಲು ಈ ವಾರ 8 ಮಂದಿ ನಾಮಿನೇಟ್ ಆಗಿದ್ದಾರೆ. ಸೈಲೆಂಟ್ ಆಗಿದ್ದರೆ ಮಾತ್ರ ಸೇಫ್ ಆಗಲು ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು..

6 ತಿಂಗಳಲ್ಲಿ ಮಹೀಂದ್ರ ಥಾರ್ ದಾಖಲೆ; ಕೈಗೆಟುಕುವ ದರಲ್ಲಿ ಲಭ್ಯವಿರುವ 4X4 SUV!...

ಮಹೀಂದ್ರ ಬಿಡುಗಡೆ ಮಾಡಿರುವ ಹೊಚ್ಚ ಹೊಸ ಥಾರ್ ಜೀಪ್ ಕೇವಲ 6 ತಿಂಗಳಲ್ಲಿ ದಾಖಲೆ ಬರೆದಿದೆ. ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿರುವ ನೂತನ ಥಾರ್ ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ 4X4 SUV ಕಾರಾಗಿದೆ. 

ಲಾಕ್‌ಡೌನ್ ಆಗುತ್ತಾ.? ಏ. 18 ಕ್ಕೆ ಮಹತ್ವದ ಸಭೆ ಬಳಿಕ ನಿರ್ಧಾರ...

ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಿಎಂ ಬಿಎಸ್‌ವೈ ಏಪ್ರಿಲ್ 18, 19 ರಂದು ಸರ್ವಪಕ್ಷಗಳ ಸಭೆ ಕರೆದಿದ್ಧಾರೆ. ಲಾಕ್‌ಡೌನ್ ಬಗ್ಗೆ ಆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. 

ಬಹುದಿನಗಳ ಬಳಿಕ ಚಿನ್ನ ಅಗ್ಗ, ಗ್ರಾಹಕರಿಗೆ ಆನಂದ: ಹೀಗಿದೆ ಇಂದಿನ ದರ!...

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಏಪ್ರಿಲ್ 13ರ ಗೋಲ್ಡ್ ರೇಟ್]

ಕೊರೋನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಯ್ತಾ?...

ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿ.ಸಿ ಪಾಟೀಲ್ ಬಳಿಕ ಮತ್ತೊರ್ವ MLAಗೆ ಮನೆಯಲ್ಲೇ ಲಸಿಕೆ; ಕೋವಿಡ್ ನಿಯಮ ಉಲ್ಲಂಘನೆ!...

ಕೊರೋನಾ 2ನೇ ಅಲೆಗೆ ದೇಶವೇ ಬೆಚ್ಚಿ ಬಿದ್ದಿದೆ. ಬೆಡ್ ಸಿಗುತ್ತಿಲ್ಲ, ವೈದ್ಯರಿಗೆ ಸಮಯ ಸಾಲುತ್ತಿಲ್ಲ, ಆಸ್ಪತ್ರೆ ಸಿಬ್ಬಂದಿಗಳಿಗೆ ರಜೆಗಳೇ ಇಲ್ಲದೆ ಸೇವೆ ನೀಡುತ್ತಿದ್ದಾರೆ. ಇದರ ನಡುವೆ ಇದೀಗ ಬಿಜೆಪಿ MLA ಮನೆಯಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ವಿವಾದ ಮಾತ್ರವಲ್ಲ ನಿಯಮ ಕೂಡ ಉಲ್ಲಂಘಿಸಿದ್ದಾರೆ.

click me!