ಕೊರೋನಾ ಹೊಸ ಮಾರ್ಗಸೂಚಿ ಪ್ರಕಟ, ಭಾರತಕ್ಕೆ ಮತ್ತೊಂದು ಪದಕ ಖಚಿತ; ಜು.31ರ ಟಾಪ್ 10 ಸುದ್ದಿ!

By Suvarna NewsFirst Published Jul 31, 2021, 4:47 PM IST
Highlights

ನೆರೆ ರಾಜ್ಯಗಳಿಂದ ಕರ್ನಾಟಕದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಹಳಬರಿಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗುತ್ತಿದೆ. ಕಮಲ್‌ಪ್ರೀತ್ ಕೌರ್ ಒಲಿಂಪಿಕ್ಸ್ ಪದಕದ ಆಸೆ ಮೂಡಿಸಿದ್ದಾರೆ. ಹುಟ್ಟೂರಿನಲ್ಲಿ ಸರ್ಕಾರಿ ಶಾಲೆ ದತ್ತು ಪಡೆದ ಸುದೀಪ್, ಪರೀಕ್ಷೆಯಲ್ಲಿ 94% ಅಂಕ ಹೊಸ ಮನೆ ಬುಕ್ ಮಾಡಿದ ಚೆಲುವೆ ಸೇರಿದಂತೆ ಜುಲೈ 31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ಇಳಿಮುಖವಾಗಿದ್ದ ಕೊರೋನಾ ಕೇಸುಗಳ ಸಂಖ್ಯೆ ಮತ್ತೆ ದಿಢೀರ್ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಬೊಮ್ಮಾಯಿ ಸಂಪುಟದ ಬಿಗ್ ಎಕ್ಸ್ಲೂಸಿವ್ : ಹಳಬರಿಗೆಲ್ಲಾ ಮಂತ್ರಿಗಿರಿಯಿಂದ ಕೊಕ್

ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಸಂಪುಟ ವಿಸ್ತರಣೆ ಮಾತ್ರ ಇನ್ನೂ ಕೂಡ ಜಿಜ್ಞಾಸೆಯಲ್ಲೇ ಮುಂದುವರಿದಿದೆ. ಹಳಬರೋ ಹೊಸಬರೋ ಎನ್ನುವ ಗೊಂದಲದಲ್ಲಿಯೇ ಮುಂದುವರಿಯುತ್ತಿದೆ. ಒಂದು ಕಡೆ ಹೊಸಬರಿಗೆ ಅವಕಾಶ ನೀಡಬೇಕೆಂಬ ಚರ್ಚೆ ನಡೆದರೆ ಇನ್ನೊಂದು ಕಡೆ ಹಳಬರಿಗೂ ಆದ್ಯತೆ ನೀಡಿದರೆ ಮುಂದಿನ ಚುನಾವಣಾ ದೃಷ್ಟಿಯಿಂದ ಅನುಕೂಲವೆನ್ನಲಾಗುತ್ತಿದೆ.

ಕುಂದ್ರಾ ವಿರುದ್ಧ ಈಗ ಮತ್ತೊಂದು ಗಂಭೀರ ಆರೋಪ

ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿಪತಿ ರಾಜ್‌ ಕುಂದ್ರಾ ವಿರುದ್ಧ ಈಗ 3000 ಕೋಟಿ ರು.ಗಳ ವಂಚನೆ ಆರೋಪ ಕೇಳಿಬಂದಿದೆ. 

ಟೋಕಿಯೋ 2020: ಫೈನಲ್‌ ಪ್ರವೇಶಿಸಿ ಒಲಿಂಪಿಕ್ಸ್ ಪದಕದ ಆಸೆ ಮೂಡಿಸಿದ ಕಮಲ್‌ಪ್ರೀತ್ ಕೌರ್

ಭಾರತದ ತಾರಾ ಡಿಸ್ಕಸ್‌ ಥ್ರೋ ಮಹಿಳಾ ಅಥ್ಲೀಟ್‌ ಕಮಲ್‌ಪ್ರೀತ್‌ ಕೌರ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ

ಶಿವಮೊಗ್ಗದ 133 ವರ್ಷದ ಹಳೇ ಸರ್ಕಾರಿ ಶಾಲೆ ದತ್ತು ಪಡೆದ ಸುದೀಪ್‌!

ಹುಟ್ಟೂರಿನಲ್ಲಿ ಸರ್ಕಾರಿ ಶಾಲೆ ಹಾಗೂ ಪ್ರಥಮ ದರ್ಜೆ ಮಹಿಳಾ ಕಾಲೇಜು ದತ್ತು ಪಡೆದುಕೊಂಡ ನಟ ಕಿಚ್ಚ ಸುದೀಪ್. 

ಪಾನ್‌ ಮಸಾಲಾ ಗ್ರೂಪ್‌ ಮೇಲೆ ದಾಳಿ : 400 ಕೋಟಿ ಕಪ್ಪುಹಣ ಹಣ ಪತ್ತೆ

ಉತ್ತರ ಭಾರತ ಮೂಲದ ಪಾನ್‌ ಮಸಾಲಾ ತಯಾರಿಕಾ ಸಮೂಹದ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ, ಯಾವುದೇ ದಾಖಲೆ ಇಲ್ಲದೇ 400 ಕೋಟಿ ರು.ಗಿಂತಲೂ ಅಧಿಕ ಮೊತ್ತದ ವಹಿವಾಟು ನಡೆಸಿರುವುದನ್ನು ಪತ್ತೆ ಹಚ್ಚಿದೆ.

ವಿದೇಶಕ್ಕೆ ಆ.31ರವರೆಗೂ ವಿಮಾನಯಾನ ನಿಷೇಧ

ಕೋವಿಡ್‌ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಲಾಗಿದೆ.

ಮಳೆ-ಪ್ರವಾಹಕ್ಕೆ ಉತ್ತರ ಕನ್ನಡದಲ್ಲಿ 737.54 ಕೋಟಿ ನಷ್ಟ

ಜಿಲ್ಲೆಯಲ್ಲಿ ಉಂಟಾದ ನೆರೆಯಿಂದ ಹೆಸ್ಕಾಂ, ಸಣ್ಣ ನೀರಾವರಿ, ರಾಷ್ಟ್ರೀಯ ಹೆದ್ದಾರಿ ಒಳಗೊಂಡು ವಿವಿಧ ಇಲಾಖೆಗಳಿಂದ ಸೇರಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, 737.54 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

CBSE 12th ಪರೀಕ್ಷೆಯಲ್ಲಿ 94% ಅಂಕ: ಹೊಸ ಮನೆ ಬುಕ್ ಮಾಡಿದ ಚೆಲುವೆ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಇಲ್ಲೊಬ್ಬ ಯುವತಿ 94% ಅಂಕ ಗಳಿಸಿದ್ದು ಚಂದದ್ದೊಂದು ಮನೆ ಕೂಡಾ ಬುಕ್ ಮಾಡಿದ್ದಾರೆ.

click me!