ಮಲೆನಾಡಿಗೆ ಶ್ರೀಲಂಕಾ ಬ್ಯೂಟಿ, ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಭೇಟಿ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊಹಮ್ಮದ್ ಸಿರಾಜ್ ದಾಳಿಯಿಂದ ಟೀಂ ಇಂಡಿಯಾ ಗೆಲುವಿಗೆ 328 ರನ್ ಗುರಿ ಸಿಕ್ಕಿದೆ. ಮೂರು ದಿನದಲ್ಲಿ ರಾಮಮಂದಿರ ನಿರ್ಮಾಣಕ್ಕೆ 100 ಕೋಟಿ ರೂಪಾಯಿ ದೇಣಿಗೆ ಸಿಕ್ಕಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಅಕ್ರಮ, ಹೆಚ್ ಡಿ ಕುಮಾರಸ್ವಾಮಿಗೆ ಸುಪ್ರೀಂ ಸಂಕಟ ಸೇರಿದಂತೆ ಜನವರಿ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಬೈಡೆನ್ ಜೊತೆ ಟೀಂ ಇಂಡಿಯಾ, ದೊಡ್ಡ ದೊಡ್ಡ ಹುದ್ದೆಗಳಿಗೆ ಭಾರತೀಯರೇ ಯಾಕೆ..?...
undefined
ಜ.20ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್ ಅವರ ಸರ್ಕಾರದಲ್ಲಿ ಇಬ್ಬರು ಕನ್ನಡಿಗರು ಸೇರಿ ಭಾರತೀಯ ಮೂಲದ 20 ಮಂದಿ ಸ್ಥಾನ ಪಡೆಯಲಿದ್ದಾರೆ. ಅವರ ಪೈಕಿ 17 ಮಂದಿಗೆ ಉನ್ನತ ಹುದ್ದೆ ದೊರೆಯಲಿದೆ.
ರಾಮಮಂದಿರಕ್ಕೆ ಮೂರೇ ದಿನದಲ್ಲಿ 100 ಕೋಟಿ: ದೇಶಾದ್ಯಂತ ಭರ್ಜರಿ ದೇಣಿಗೆ!...
ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರಕ್ಕೆ ಭಕ್ತರಿಂದ ಭರ್ಜರಿಯಾಗಿ ದೇಣಿಗೆ ಹರಿದು ಬರಲಾರಂಭಿಸಿದೆ. ದೇಣಿಗೆ ಸಂಗ್ರಹ ಆರಂಭವಾದ ಮೂರೇ ದಿನಗಳಲ್ಲಿ ಅಂದಾಜು 100 ಕೋಟಿ ರು. ಹಣ ಸಂಗ್ರಹವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಸಿರಾಜ್ ಬಿರುಗಾಳಿ; ಬ್ರಿಸ್ಬೇನ್ ಟೆಸ್ಟ್ ಗೆಲ್ಲಲು ಟೀಂ ಇಂಡಿಯಾಗೆ 328 ರನ್ ಗುರಿ...
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲಲು ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 328 ರನ್‌ಗಳ ಗುರಿ ನೀಡಿದ ಆತಿಥೇಯ ಆಸ್ಟ್ರೇಲಿಯಾ ತಂಡ. ಈ ಪಂದ್ಯ ಗೆದ್ದು ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುತ್ತಾ ಭಾರತ ಎನ್ನುವುದನ್ನು ಕಾದು ನೋಡಬೇಕಿದೆ.
ಶಿವಮೊಗ್ಗದಲ್ಲಿ ಜಾಕ್ವೆಲಿನ್; ಮಲೆನಾಡು ಹುಡುಗರ ನಿದ್ದೆಗೆಡಿಸಿತ್ತು ಈ ಹಾಟ್ ಪೋಸ್...
ಮಳೆನಾಡಿನ ದುಬಾರಿ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಶ್ರೀಲಂಕಾ ಸುಂದರಿ. ಸಿನಿಮಾ ಶೂಟಿಂಗ್ ಅಲ್ವಂತೆ....
ಕೋಲಾರದ ಐಫೋನ್ ಘಟಕ ಪುನರಾರಂಭ, ನಿರುದ್ಯೋಗಿಗಳ ನೂಕುನುಗ್ಗಲು...
ಕೋಲಾರದಲ್ಲಿ ಗಲಭೆಯಿಂದ ಮುಚ್ಚಲ್ಪಟ್ಟಿದ್ದ ಐ ಫೋನ್ ಬಿಡಿಭಾಗಗಳ ಕಂಪನಿ ಇದೀಗ ಮತ್ತೆ ಆರಂಭವಾಗಿದೆ. ಉದ್ಯೋಗ ಪಡೆಯಲು ನಿರುದ್ಯೋಗಿಗಳ ನೂಕುನುಗ್ಗಲು ಉಂಟಾಗಿದೆ.
ಪೆಟ್ರೋಲ್, ಡೀಸೆಲ್‌ನಿಂದ ಕೇಂದ್ರಕ್ಕೆ ಬಂಪರ್ ಆದಾಯ!...
ಪೆಟ್ರೋಲ್, ಡೀಸೆಲ್‌ನಿಂದ ಕೇಂದ್ರಕ್ಕೆ ಬಂಪರ್ ಆದಾಯ!| ಏಪ್ರಿಲ್-ನವೆಂಬರ್‌ನಲ್ಲಿ 63 ಸಾವಿರ ಕೋಟಿ ಹೆಚ್ಚು ಗಳಿಕೆ| ಅಬಕಾರಿ ಸುಂಕ ಏರಿಕೆಯಿಂದ ಶೇ.48 ಆದಾಯ ಹೆಚ್ಚಳ
ಬ್ರೇಕ್ ಫೇಲ್; 3 KM ರಿವರ್ಸ್ ತೆರಳಿ ಟ್ರಕ್ ನಿಲ್ಲಿಸಿ ದುರಂತ ತಪ್ಪಿಸಿದ ಚಾಲಕ!...
ಸರಕು ತುಂಬಿದ ಟ್ರಕ್, ಎಲ್ಲವೂ ಸರಿ ಇದೆ ಆದರೆ ಬ್ರೇಕ್ ಮಾತ್ರ ಇಲ್ಲ. ಆದರೆ ಚಾಲಕ ತನ್ನ ಉಪಾಯದಿಂದ 3 ಕಿ.ಮೀ ರಿವರ್ಸ್ ಗೇರ್‌ನಲ್ಲಿ ತೆರಳಿ ಬಹುದೊಡ್ಡ ಅಪಾಯವನ್ನು ತಪ್ಪಿಸಿದ ಘಟನೆ ನಡೆದಿದೆ.
ಸೆಕ್ಸ್ ವೇಳೆ ಆಕೆ ಹಂದಿ ಥರಾ ಕಿರುಚೋದೇಕೆ? ಇದು ಸಮಸ್ಯೆನಾ?...
ಕೆಲವರು ಸೆಕ್ಸ್ ಸಂದರ್ಭದಲ್ಲಿ ಸುಖ ತಡೆಯಲಾಗದೆ ಚೀತ್ಕಾರ ಮಾಡುತ್ತಾರೆ, ನರಳುತ್ತಾರೆ. ಲಂಡನ್‌ನ ಅಂಥ ಒಬ್ಬಾಕೆಯ ಕತೆ ಮಜವಾಗಿದೆ.
ಅರುಣಾಚಲ ಪ್ರದೇಶದಲ್ಲಿ ಸದ್ದಿಲ್ಲದೆ ಹಳ್ಳಿ ನಿರ್ಮಿಸಿದ ಚೀನಾ: ಸ್ಯಾಟಲೈಟ್ ಫೋಟೋ ವೈರಲ್...
ಚೀನಾ ಜೊತೆಗೆ ನಡೆಯುತ್ತಿರುವ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ನಡುವೆ ಅರುಣಾಚಲ ಪ್ರದೇಶದಲ್ಲಿ ಬಹುದೊಡ್ಡ ಸಂಕಷ್ಟವೊಂದು ತಲೆ ಎತ್ತುತ್ತಿರುವುದು ಬೆಳಕಿಗೆ ಬಂದಿದೆ. ಅರುಣಾಚಲ ಪ್ರದೇಶದಲ್ಲಿ ಸದ್ದಲ್ಲದೇ ಸುಮಾರು 101 ಮನೆಗಳಿರುವ ಚೀನಾ ಹಳ್ಳಿಯೊಂದನ್ನು ನಿರ್ಮಿಸಿದ್ದು, ಸದ್ಯ ಇವುಗಳ ಸ್ಯಾಟಲೈಟ್ ಫೋಟೋ ವೈರಲ್ ಆಗುತ್ತಿದೆ.
ಸುಪ್ರೀಂ ಬಿಗ್ ಶಾಕ್: ಕುಮಾರಸ್ವಾಮಿಗೆ ಎದುರಾಯ್ತು ಸಂಕಷ್ಟ..!...
ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ.