ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಿರುಚಲಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡ ಪ್ರಕರಣ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಸಂಕಷ್ಟ ಎದುರಾಗಿದೆ. ಮೇ 1ರ ಬುಧವಾರ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ರೇವಂತ ರೆಡ್ಡಿ ಅವರಿಗೆ ಸೂಚನೆ ನೀಡಿದ್ದಾರೆ.
ಪಿಟಿಐ ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಿರುಚಲಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡ ಪ್ರಕರಣ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಸಂಕಷ್ಟ ಎದುರಾಗಿದೆ. ಮೇ 1ರ ಬುಧವಾರ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ರೇವಂತ ರೆಡ್ಡಿ ಅವರಿಗೆ ಸೂಚನೆ ನೀಡಿದ್ದಾರೆ.
ಅಮಿತ್ ಶಾ ಅವರ ತಿರುಚಲಾದ ವಿಡಿಯೋವನ್ನು ಶೇರ್ ಮಾಡಲು ಬಳಸಲಾದ ಮೊಬೈಲ್ ಫೋನ್ ಅನ್ನು ಕೂಡ ವಿಚಾರಣೆಗೆ ತರುವಂತೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೇವಂತ ರೆಡ್ಡಿ ಮಾತ್ರವಲ್ಲದೆ ಇನ್ನೂ ನಾಲ್ವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಆ ಎಲ್ಲರೂ ತಿರುಚಲಾದ ವಿಡಿಯೋವನ್ನು ಶೇರ್ ಮಾಡಿದವರೇ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?:
ತೆಲಂಗಾಣದಲ್ಲಿ ಧರ್ಮಾಧಾರಿತವಾಗಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ಅಮಿತ್ ಶಾ ಅವರು ಸಮಾವೇಶವೊಂದರಲ್ಲಿ ಹೇಳಿದ್ದರು. ಆದರೆ ಅದನ್ನು ತಿರುಚಿ, ಎಲ್ಲ ಮೀಸಲಾತಿಯನ್ನೂ ರದ್ದುಗೊಳಿಸಲಾಗುವುದು ಎಂಬರ್ಥ ಬರುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪಸರಿಸಲಾಗಿತ್ತು. ರೇವಂತ ರೆಡ್ಡಿ ಸೇರಿದಂತೆ ಹಲವರು ಅದನ್ನು ಹಂಚಿಕೊಂಡಿದ್ದರು.
ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರಿಗಳೆಂದರೆ ಭಾರೀ ಅಚ್ಚುಮೆಚ್ಚು: ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ!
ಈ ತಿರುಚಿದ ವಿಡಿಯೋ ಸಂಬಂಧ ಕೇಂದ್ರ ಗೃಹ ಸಚಿವಾಲಯದ ಅಧೀನದಡಿ ಬರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ದೂರು ನೀಡಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಇಲಾಖೆ ವಿಶೇಷ ಘಟಕ ಎಫ್‌ಐಆರ್ ದಾಖಲು ಮಾಡಿಕೊಂಡಿತ್ತು. ಈ ಪ್ರಕರಣ ಸಂಬಂಧ ದೇಶಾದ್ಯಂತ ಕೆಲವು ವ್ಯಕ್ತಿಗಳನ್ನು ಬಂಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ತಿರುಚಲಾದ ವಿಡಿಯೋದ ಮೂಲ ಎಲ್ಲಿಂದ ಬಂತು ಎಂಬುದರ ಕುರಿತೂ ಮಾಹಿತಿ ನೀಡುವಂತೆ ಟ್ವೀಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.
Amit Shah in Mysore: ಸಿದ್ದು ಭದ್ರಕೋಟೆಯಲ್ಲಿ ಆಗುತ್ತಾ ಮ್ಯಾಜಿಕ್..? ಲೋಕ ಗೆಲ್ಲೋಕೆ ಚಾಣಕ್ಯ ಸೂತ್ರ..!
ವಿಪಕ್ಷಗಳಿಂದ ಇದೀಗ ನಕಲಿ ವಿಡಿಯೋ ದಾಳಿ: ಮೋದಿ
ಸತಾರಾ: ಚುನಾವಣೆಯಲ್ಲಿ ನಮ್ಮನ್ನು ನೇರವಾಗಿ ಎದುರಿಸಲಾಗದ ಪ್ರತಿಪಕ್ಷಗಳು ತಂತ್ರಜ್ಞಾನದ ದುರ್ಬಳಕೆಯ ಮೂಲಕ ಬಿಜೆಪಿಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿವೆ. ಅದರ ಭಾಗವಾಗಿ ಮುಂದಿನ ತಿಂಗಳು ದೊಡ್ಡ ಘಟನೆ ಸೃಷ್ಟಿಗೆ ತಯಾರಿ ನಡೆದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಕರಾಡ್‌ನಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, 21ನೇ ಶತಮಾನವು ತಂತ್ರಜ್ಞಾನದ ಶತಮಾನವಾಗಿದೆ. ಆದರೆ ಪ್ರತಿಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪ್ರಮುಖವಾಗಿ ಎಐ ಆಧಾರಿತ ಡೀಪ್‌ಫೇಕ್ ತಂತ್ರಜ್ಞಾನದಿಂದ ಜನತೆಗೆ ಸುಳ್ಳುಸುದ್ದಿ ಹಬ್ಬಿಸಿ ದಾರಿ ತಪ್ಪಿಸುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ಜೊತೆಗೆ ಜನತೆಯೂ ಈ ಕುರಿತಾಗಿ ಎಚ್ಚರದಿಂದಿದ್ದು, ಸುಳ್ಳುಸುದ್ದಿ ಇರುವ ವಿಡಿಯೋ ಕಂಡಕೂಡಲೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡುತ್ತೇನೆ. ಎಂದಿದ್ದಾರೆ.
ಜೊತೆಗೆ ಈ ಸಂಚಿನ ಭಾಗವಾಗಿ ಮುಂದಿನ ತಿಂಗಳು ದೊಡ್ಡ ಘಟನೆ ಸೃಷ್ಟಿಗೆ ಯೋಜನೆ ರೂಪಿಸಲಾಗಿದೆ. ನಾನು ಇದನ್ನು ಅತ್ಯಂತ ಗಂಭೀರವಾಗಿ ಹೇಳುತ್ತಿದ್ದೇನೆ. ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಆಟ ಆಡಲಾಗುತ್ತಿದೆ. ಇಂಥ ನಕಲಿ ವಿಡಿಯೋಗಳಿಂದ ಸಮಾಜವನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದರು. ಜನಪರ ಯೋಜನೆಗಳ ಮಾಹಿತಿ ನೇರವಾಗಿ ಜನರನ್ನು ತಲುಪಲಿ ಎಂದು ನಾನು ಸಾಮಾಜಿಕ ಜಾಲತಾಣಗಳನ್ನು ಬಳುಸುತ್ತಿದ್ದೇನೆ. ಆದರೆ ನನ್ನದೂ, ಅಮಿತ್ ಶಾ ಮತ್ತು ನಡ್ಡಾ ಅವರ ಹೇಳಿಕೆಗಳನ್ನು ತಿರುಚಿ ಪ್ರಸಾರ ಮಾಡಲಾಗುತ್ತಿದೆ ಎಂದು ಮೋದಿ ದೂರಿದರು.