ಕೊರೋನಾದಿಂದ IPL ಪಂದ್ಯ ಮುಂದೂಡಿಕೆ, ಶೀಘ್ರದಲ್ಲೇ ಸಿಗಲಿದೆ ಲಸಿಕೆ? ಮೇ.3ರ ಟಾಪ್ 10 ಸುದ್ದಿ!

By Suvarna NewsFirst Published May 3, 2021, 5:42 PM IST
Highlights

ಕ್ರಿಕೆಟಿಗರಿಗೆ ಕೊರೋನಾ ವೈರಸ್ ಅಂಟಿಕೊಂಡ ಕಾರಣ ನಿಗದಿತ  ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯವನ್ನೂ ಮುಂದೂಡಲಾಗಿದೆ. ಇತ್ತ ಲಸಿಕೆ ಗೊಂದಲ, ಹೇಳಿಕೆ ಕುರಿತ ಟೀಕೆಗಳಿಗೆ ಸ್ವತಃ ಆದಾರ್ ಪೂನವಾಲ ಸ್ವಷ್ಟನೆ ನೀಡಿದ್ದಾರೆ. ಕೊರೋನಾದಿಂದ ಆಸ್ಪತ್ರೆ ದಾಖಲಾಗಿರುವ ನಟ ಅನಿರುದ್ಧ್ ಧಾವೆ ಆರೋಗ್ಯ ಸ್ಥಿತಿ ಗಂಭೀರ, ವೈದ್ಯಕೀಯ ವಿದ್ಯಾರ್ಥಿಗಳಿಗೂ ಕೋವಿಡ್‌ ಡ್ಯೂಟಿ ಸೇರಿದಂತೆ ಮೇ 3ರ ಟಾಪ್ 10 ಸುದ್ದಿ ವಿವರ ಇಲ್ಲಿದೆ

ವೈದ್ಯಕೀಯ ವಿದ್ಯಾರ್ಥಿಗಳಿಗೂ ಕೋವಿಡ್‌ ಡ್ಯೂಟಿ: NEET-PG ಪರೀಕ್ಷೆ ಮುಂದೂಡಿಕೆ!...

ಕೊರೋನಾ ಪರಿಸ್ಥಿತಿಯಲ್ಲಿ ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲು ಕೇಂದ್ರದ ಮಹತ್ವದ ಕ್ರಮ| ಕೊರೋನಾ ಸಾಂಕ್ರಾಮಿಕವನ್ನು ನಿಭಾಸಲು ಮಾನವ ಸಂಪನ್ಮೂಲದ ಲಭ್ಯತೆಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸಭೆ| ನೀಟ್‌ ಮುಂದೂಡಿಕೆ ಸೇರಿ ಹಲವು ನಿರ್ಧಾರ

ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಅಗತ್ಯ; ಟಾಸ್ಕ್ ಫೋರ್ಸ್ ವರದಿ ಜಾರಿ ಮಾಡುತ್ತಾ ಕೇಂದ್ರ?...

ದೇಶದಲ್ಲಿ ಎದ್ದಿರುವ ಕೊರೋನಾ 2ನೇ ಅಲೆಗೆ ಸಂಪೂರ್ಣ ವ್ಯವಸ್ಥೆ ಬುಡಮೇಲಾಗಿದೆ. ಪ್ರತಿ ದಿನ 4 ಲಕ್ಷ ಪ್ರಕರಣಗಳು ದಾಖಲಾಗುತ್ತಿದೆ. ಇದರ ಬೆನ್ನಲ್ಲೇ ಕೋವಿಡ್ ಟಾಸ್ಕ್ ಫೋರ್ಸ್ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ.  ಈ ವರದಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಅನಿವಾರ್ಯ ಎಂದಿದೆ. 

ಚಾಮರಾಜನಗರ ದುರಂತ : ಇದು ಸಾವೋ-ಕೊಲೆಯೋ - ರಾಹುಲ್ ಆಕ್ರೋಶ...

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟಿದ್ದು ಇದೀಗ ಈ ಘಟನೆ ರಾಷ್ಟ್ರಮಟ್ಟದವರೆಗೆ ಸದ್ದು ಮಾಡಿದೆ. ಈ ಘಟನೆ ಬಗ್ಗೆ ಟ್ವೀಟ್ ಮಾಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. 

18 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ: ರಾಷ್ಟ್ರ ರಾಜಕೀಯದ ಮೇಲೆ ಈ ಪರಿಣಾಮ!...

ವಿಧಾನಸಭೆಯಲ್ಲಿ ಗೆಲುವು ಸಾಧಿಸುವದರೊಂದಿಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆಈಗ 18ಕ್ಕೆ ಏರಿಕೆ ಆಗಿದೆ. ಈ ಮುನ್ನ ಬಿಜೆಪಿ ಸ್ವಂತ ಬಲದಲ್ಲಿ, ಮಿತ್ರಪಕ್ಷಗಳ ಜೊತೆಗೂಡಿ ಒಟ್ಟು 18 ರಾಜ್ಯಗಳಲ್ಲಿ ಅಧಿಕಾರದಲ್ಲಿ ಇತ್ತು. ಪಂಚ ರಾಜ್ಯ ಚುನಾಣೆಯಲ್ಲಿ ಅಸ್ಸಾಂನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಪುದುಚೇರಿ ಹೊಸದಾಗಿ ಬಿಜೆಪಿಯ ತೆಕ್ಕೆಗೆ ಸೇರ್ಪಡೆ ಆಗಿದೆ.

ಐಪಿಎಲ್ 2021: ಲಕ್ಷ್ಮಿಪತಿ ಬಾಲಾಜಿ ಸೇರಿ ಸಿಎಸ್‌ಕೆ 3 ಮಂದಿಗೆ ಕೋವಿಡ್ ಪಾಸಿಟಿವ್..!...

ಕೆಕೆಆರ್ ಬಳಿಕ ಇದೀಗ ಸಿಎಸ್‌ಕೆ ಪಾಳಯದಲ್ಲೂ ಕೊರೋನಾ ಭೀತಿ ಎದುರಾಗಿದ್ದು, ಸಿಎಸ್‌ಕೆಯ ಮೂರು ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. 

ಬ್ರೇಕಿಂಗ್ ನ್ಯೂಸ್: ಇಂದು ನಡೆಯಬೇಕಿದ್ದ ಆರ್‌ಸಿಬಿ-ಕೆಕೆಆರ್ ಪಂದ್ಯ ಮುಂದೂಡಿಕೆ..! ...

ಆರ್‌ಸಿಬಿ ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ನಡುವಿನ ಪಂದ್ಯ ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನಟ ಅನಿರುದ್ಧ ಸ್ಥಿತಿ ಗಂಭೀರ; 2 ತಿಂಗಳ ಕಂದಮ್ಮನ್ನ ಬಿಟ್ಟು ಆಸ್ಪತ್ರೆಗೆ ತೆರಳಿದ ಪತ್ನಿ! ...

ಕೊರೋನಾ ವೈರಸ್‌ಗೆ ನಟ ಅನಿರುದ್ಧ್ ಧಾವೆ ತುತ್ತಾಗಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ.  ಎರಡು ತಿಂಗಳ ಮಗುವನ್ನು ಮನೆಯಲ್ಲಿಯೇ ಬಿಟ್ಟು ಪತ್ನಿ ಶುಭಿ ಆಸ್ಪತ್ರೆ ತೆರಳಿದ್ದಾರೆ. 

ಶಿಯೋಮಿಯ ದುಬಾರಿ 75 ಇಂಚಿನ ಎಂಐ ಕ್ಯೂಎಲ್ಇಡಿ ಟಿವಿ ಬಿಡುಗಡೆ: ಬೆಲೆ 1,19,999 ರೂ.!...

ಬಜೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ತಯಾರಿಕಾ ಕಂಪನಿ, ಚೀನಾ ಮೂಲದ ಶಿಯೋಮಿ ಟಿವಿಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಶಿಯೋಮಿ ಇದೀಗ ದುಬಾರಿಯಾದ ಟಿವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಟಿವಿಯ ಬೆಲೆ 1,19,999 ರೂಪಾಯಿ. ಈ ಟಿವಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ನೋಡುಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.

22 ಕೋಟಿ ಲಸಿಕೆಗೆ ಕೇಂದ್ರ ಮುಂಗಡ ಹಣ ಪಾವತಿಸಿದೆ; ಗೊಂದಲಕ್ಕೆ ಆದಾರ್ ಪೂನವಾಲ ಸ್ಪಷ್ಟನೆ!

ಲಸಿಕೆ ಕೊರತೆ, ಕೋವಿಶೀಲ್ಡ್ ಮುಖ್ಯಸ್ಥ ಅದಾರ್ ಪೂನಾವಾಲ ಹೇಳಿಕೆ ಕುರಿತು ಹಲವು ತಪ್ಪು ಮಾಹಿತಿಗಳು ರವಾನೆಯಾಗಿದೆ. ಪರಿಣಾಣ ಕೇಂದ್ರ ಲಸಿಕೆಗೆ ಆರ್ಡರ್ ಮಾಡೇ ಇಲ್ಲ, ಲಸಿಕೆ ಉತ್ಪಾದನೆ ಹೆಚ್ಚಿಸಿಲ್ಲ, ಭದ್ರತೆ ಸೇರಿದಂತೆ ಹಲವು ಟೀಕೆ ಹಾಗೂ ತಪ್ಪು ಮಾಹಿತಿಗಳು ಹರಿದಾಡುತ್ತಿತ್ತು. ಇದೀಗ ಎಲ್ಲಾ ಎಲ್ಲಾ ಗೊಂದಲ ಹಾಗೂ ಅನುಮಾನಕ್ಕೆ ಸ್ವತಃ ಅದಾರ್ ಪೂನಾವಲ ಸ್ಪಷ್ಟನೆ ನೀಡಿದ್ದಾರೆ.

ಲಕ್ಷಣವಿಲ್ಲದಿದ್ರೂ ಪಾಸಿಟಿವ್, ನೆಗೆಟಿವ್ ಬಂದವರ ಶ್ವಾಸಕೋಶ ಡ್ಯಾಮೇಜ್!...

ಈ ಬಾರಿ ಯಾವುದೇ ಲಕ್ಷಣಗಳಿದ್ದವರ ಶ್ವಾಸಕೋಶವೂ ಹಾನಿಗೀಡಾಗುತ್ತಿದೆ. ಇವರಲ್ಲಿ ಲಕ್ಷಣ ಕಂಡು ಬರುವ ಮೊದಲೇ ಸೇ. 25ರಷ್ಟು ಶ್ವಾಸಕೋಶ ಡ್ಯಾಮೆಜ್ ಆಗುತ್ತಿದೆ. ಕೊರೋನಾದಿಂದ ಹೇಗೆ ಡ್ಯಾಮೇಜ್ ಆಗ್ತಿದೆ ಶ್ವಾಸಕೋಶ? ಇಲ್ಲಿದೆ ವಿವರ.

click me!