ಕೋವಿಡ್ ಉಪಕರಣ ತೆರಿಗೆ ಕಡಿತ, ಆರ್ಟಿಕಲ್ 370‌ ಜಾರಿಗೆ ಕಾಂಗ್ರೆಸ್ ಇಂಗಿತ; ಜೂ.12ರ ಟಾಪ್ 10 ಸುದ್ದಿ!

By Chethan KumarFirst Published Jun 12, 2021, 5:30 PM IST
Highlights

ಬ್ಲಾಕ್ ಫಂಗಸ್ ಸೇರಿ ಕೋವಿಡ್ ಉಪಕರಣದ ಮೇಲಿನ ಜಿಎಸ್‍ಟಿ ತೆರೆಗಿ ಕಡಿತಗೊಳಿಸಲಾಗಿದೆ. ಇತ್ತ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಮರು ಜಾರಿ ಮಾಡುವುದಾಗಿ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ಭಾರಿ ವಿವಾದಕ್ಕೀಡಾಗಿದೆ.  ದಿಗ್ಗಜ ವಿಶ್ವನಾಥ್ ಆನಂದ್ ಜತೆ ಕಿಚ್ಚ ಸುದೀಪ್, ಚಹಲ್‌ ಚೆಸ್‌ ಸ್ಪರ್ಧೆ, ವಿವಾದದ ಬೆನ್ನಲ್ಲೇ ಗರ್ಭಿಣಿ ನುಸ್ರತ್ ಜಹಾಂ ಫೋಟೋ ವೈರಲ್ ಸೇರಿ ಜೂನ್ 12ರ ಟಾಪ್ 10 ಸುದ್ದಿ  ವಿವರ ಇಲ್ಲಿವೆ.

GST ಕೌನ್ಸಿಲ್ ಸಭೆ: ಬ್ಲಾಕ್ ಫಂಗಸ್ ಇಂಜೆಕ್ಷನ್, ಕೋವಿಡ್ ಉಪಕರಣ ಮೇಲೆ ತೆರಿಗೆ ಕಡಿತ! ...

ಕೊರೋನಾ ವೈರಸ್ ಚಿಕಿತ್ಸೆಗಾಗಿ ಬಳಸುವ ಉಪಕರಣ, ಔಷಧಿ, ಇಂಜೆಕ್ಷನ್ ಮೇಲಿನ ತೆರಿಗೆ ನಿರ್ಧರಿಸಲು ಕರೆದಿದ್ದ 44ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ದೇಶದಲ್ಲಿ ಹೆಚ್ಚಾಗುತ್ತಿರುವ ಬ್ಲಾಕ್ ಫಂಗಸ್ ಚಿಕಿತ್ಸೆಯ ಚುಚ್ಚು ಮದ್ದಿನ ಮೇಲಿನ GST(ತೆರಿಗೆ)ಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ಮರು ಜಾರಿ: ಸಿಂಗ್ ಹೇಳಿಕೆಗೆ ಬಿಜೆಪಿ ಕಿಡಿ!...

ಸಾಮಾನ್ಯವಾಗಿ ತಮ್ಮ ಹೇಳಿಕೆಗಳಿಂದ ಸದ್ದು ಮಾಡುವ ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಹೆಳಿಕೆ ಮತ್ತೊಮ್ಮೆ ವಿವಾದ ಸೃಷ್ಟಿಸಿದೆ. Clubhouse chatನಲ್ಲಿ ಅವರು ಆರ್ಟಿಕಲ್ 370ರ ವಿಚಾರವಾಗಿ ಪಾಕಿಸ್ತಾನಿ ಪತ್ರಕರ್ತ ಕೇಳಿಗೆ ಪ್ರಶ್ನೆಗೆ ಉತ್ತರಿಸಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 37ನ್ನು ಮತ್ತೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗೆ 1.29 ಕೋಟಿ ಡೋಸ್, ಬಳಕೆ ಮಾಡಿದ್ದು 22 ಲಕ್ಷ ಮಾತ್ರ!...

ಕೊರೋನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಲಸಿಕೆ ಪರಿಣಾಮಕಾರಿಯಾಗಿ ಬಳಕೆ ಮಾಡಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಲು ಮಹತ್ವದ ಸೂಚನೆ ನೀಡಿದೆ. ಇದರ ನಡುವೆ ಖಾಸಗಿ ಆಸ್ಪತ್ರೆಗಳ ಲಸಿಕೆ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ ಹೆಚ್ಚಿನ ಲಸಿಕೆಗಳು ಬಳಕೆಯಾಗದೇ ಉಳಿದುಕೊಂಡಿದೆ.

ದಿಗ್ಗಜ ಆನಂದ್ ಜತೆ ಕಿಚ್ಚ ಸುದೀಪ್, ಚಹಲ್‌ ಚೆಸ್‌ ಸ್ಪರ್ಧೆ..!...

 5 ಬಾರಿ ವಿಶ್ವ ಚಾಂಪಿಯನ್‌, ದಿಗ್ಗಜ ಚೆಸ್‌ ಪಟು ವಿಶ್ವನಾಥನ್‌ ಆನಂದ್‌ ಜೊತೆ ಭಾರತದ ತಂಡದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಭಾನುವಾರ ಆನ್‌ಲೈನ್‌ನಲ್ಲಿ ಪ್ರದರ್ಶನ ಚೆಸ್‌ ಪಂದ್ಯವೊಂದನ್ನು ಆಡಲಿದ್ದಾರೆ. ಚಹಲ್‌ ಕ್ರಿಕೆಟಿಗನಾಗುವ ಮೊದಲು ಚೆಸ್‌ ಪಟುವಾಗಿದ್ದರು. ಕಿರಿಯರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

SIT ಮುಂದೆ ಸಿಡಿ ಗ್ಯಾಂಗ್ ಹಾಜರ್, ಕೇಸ್‌ಗೆ ಸಿಗುತ್ತಾ ಟ್ವಿಸ್ಟ್..?...

ರಮೇಶ್ ಜಾರಕಿಹೊಳಿ ಸೀಡಿ ಕೇಸ್‌ನ ಶಂಕಿತ ಕಿಂಗ್‌ಪಿನ್‌ಗಳು ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಏನೆನೆಲ್ಲಾ ಸಾಧ್ಯತೆಗಳಿವೆ...? ಕೇಸ್‌ಗೆ ಯಾವ ರೀತಿ ಟ್ವಿಸ್ಟ್ ಸಿಗಬಹುದು..? ಇಲ್ಲಿದೆ ಡಿಟೇಲ್ಸ್. 

ಅರ್ಧಕ್ಕೆ ನಿಂತ ಬಿಗ್ ಬಾಸ್‌ ಸೀಸನ್ 8 ಮತ್ತೆ ಶುರುವಾಗುತ್ತಿದೆ?...

ಬಿಗ್ ಬಾಸ್‌ ರಿಯಾಲಿಟಿ ಶೋ ಅರ್ಧಕ್ಕೆ ನಿಂತ ಬೇಸರ ಸ್ಪರ್ಧಿಗಳಿಗೆ ಮಾತ್ರವಲ್ಲ ವೀಕ್ಷಕರಿಗೂ ಇದೆ. ಆದರೀಗ ಎಲ್ಲಿಂದಲೂ ಒಳ್ಳೆ ಸುದ್ದಿ ಕೇಳಿ ಬರುತ್ತಿದೆ......

'ಕ್ಲಬ್‌ಹೌಸ್' ಆ್ಯಪ್‌ನಲ್ಲಿ ಸೆಲೆಬ್ರಿಟಿಗಳನ್ನು ಮಾತನಾಡಿಸಬಹುದು!...

ಸಿನಿಮಾ ತಾರೆಯರ ಜೊತೆ ಮಾತನಾಡಲು ಒಂದೊಳ್ಳೆ ಅವಕಾಶ. ಕ್ಲಬ್‌ಹೌಸ್‌ನಲ್ಲಿ ರೂಮ್ ಕ್ರಿಯೇಟ್ ಮಾಡಿ ಜನರನ್ನು ಚರ್ಚೆಗೆ ಆಹ್ವಾನಿಸಬಹುದು. 

ಪಿಎಫ್‌ ಹಣವನ್ನು ಯಾವಾಗ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ...

ಇಪಿಎಫ್‌ ಖಾತೆಯಲ್ಲಿರೋ ಹಣವನ್ನು ಉದ್ಯೋಗ ತ್ಯಜಿಸಿದ ಎಷ್ಟು ಸಮಯದೊಳಗೆ ಹಿಂಪಡೆಯಬೇಕು ಎಂಬ ಬಗ್ಗೆ ಬಹುತೇಕರಿಗೆ ತಿಳಿದಿರೋದಿಲ್ಲ.ಇಪಿಎಫ್‌ಗೆ ಸಂಬಂಧಿಸಿದ ಇಂಥ ಕೆಲವು ಮಾಹಿತಿಗಳು ಇಲ್ಲಿವೆ.

ಆನೆ ರಂಪಾಟದಿಂದ ಮದುವೆ ಸಮಾರಂಭ ಕ್ಯಾನ್ಸಲ್; ಅಂಬಾನಿ ಮೇಲೇರಿ ಬಂದ ಮಧುಮಗ ಎಸ್ಕೇಪ್!...

ಮದುವೆ ಸಮಾರಂಭದಲ್ಲಿ ವಧ-ವರ ಮಂಟಪಕ್ಕೆ ಆಗಮಿಸಲು ದುಬಾರಿ ಕಾರು, ವಿಂಟೇಜ್ ಕಾರು, ಕುದುರೆ ಮೇಲೇರಿ ಬರುವುದು ಸಾಮಾನ್ಯ. ಇನ್ನು ಕೆಲ ವಿವಾಹ ಮಹೋತ್ಸವದಲ್ಲಿ ಅನೆ ಮೇಲೇರಿ ಬಂದ ಊದಾಹರಣೆಗಳು ಇವೆ. ತಮ್ಮ ತಮ್ಮ ಸ್ಟೇಟಸ್‌ಗೆ ತಕ್ಕಂತೆ ಕೆಲವರು ಈ ರೀತಿ ಪ್ಲಾನ್ ಮಾಡಿಕೊಳ್ಳುತ್ತಾರೆ. ಹೀಗೆ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಧುಮಗ ಆನೆ ಮೇಲೇರಿ ಬಂದು ಅಪಾರ ನಷ್ಟ ಅನುಭವಿಸುವಂತಾಗಿದೆ.

ವಿವಾದದ ಬೆನ್ನಲ್ಲೇ ಗರ್ಭಿಣಿ ನುಸ್ರತ್ ಜಹಾಂ ಫೋಟೋ ವೈರಲ್!...

ಈ ಫೋಟೋದಲ್ಲಿ ನುಸ್ರತ್ ಬೇಬಿ ಬಂಪ್ ಫ್ಲಾಂಟ್ ಮಾಡುತ್ತಿರುವ ದೃಶ್ಯವಿದೆ. ಹೀಗಾಗಿ ಅವರು ಗರ್ಭಿಣಿ ಎಂಬ ವಿಚಾರ ನಿಜ ಎಂದು ಸಾಬೀತಾಗಿದೆ. ನುಸ್ರತ್ ಜೊತೆ ಬಂಗಾಳಿ ನಟಿ ಶ್ರವಂತಿ ಚಟರ್ಜಿ ಕೂಡಾ ಇದ್ದಾರೆ. ಇಷ್ಟೆಲ್ಲಾ ಆದರೂ ನುಸ್ರತ್ ಗಂಡ ನಿಖಿಲ್ ಜೈನ್ ಮಾತ್ರ ಈ ಮಗು ತನ್ನದಲ್ಲ, ನಾವಿಬ್ಬರೂ ಆರು ತಿಂಗಳಿನಿಂದ ದೂರ ಇದ್ದೇವೆ ಎಂದಿದ್ದಾರೆ.

click me!