ಬಿಜೆಪಿಯಲ್ಲಿ CM ರಾಜೀನಾಮೆ ಟ್ರೆಂಡ್, ನಿರ್ಭಯಾ ನ್ಯಾಯಕ್ಕಾಗಿ ಹೆಚ್ಚಾಯ್ತು ಡಿಮ್ಯಾಂಡ್; ಸೆ.11ರ ಟಾಪ್ 10 ಸುದ್ದಿ!

By Suvarna NewsFirst Published Sep 11, 2021, 5:03 PM IST
Highlights

ಗುಜರಾತ್ ಮುಖ್ಯಮಂತ್ರಿ ವಿಜರೂಪಾನಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ 2 ತಿಂಗಳಲ್ಲಿ ನಾಲ್ಕನೇ ಸಿಎಂ ರಾಜೀನಾಮೆ ನೀಡಿದ್ದಾರೆ. ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ತಾಲಿಬಾನ್ ಪ್ರಮಾಣ ವಚನದಿಂದ ಹಿಂದೆ ಸರಿದ ತಾಲಾಬಾನ್ ಕೈ ಬರಿದಾಗಿದೆ. ಆರ್‌ಸಿಬಿ ತಂಡ ಸೇರಿದ ಸ್ಟಾರ್ಸ್, ಡಿಪ್ರೆಷನ್ ಬಗ್ಗೆ ದೀಪಿಕಾ ಮಾತು ಸೇರಿದಂತೆ ಸೆಪ್ಟೆಂಬರ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಮೋದಿ ತವರಲ್ಲಿ ರಾಜಕೀಯ ಬೆಳವಣಿಗೆ; ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ!

ಕರ್ನಾಟಕದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್‌ನಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

33 ಗಂಟೆಗಳ ಸಾವು- ಬದುಕಿನ ಹೋರಾಟ: ಕೊನೆಯುಸಿರೆಳೆದ ಮುಂಬೈನ 'ನಿರ್ಭಯಾ'!

ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿ ನಡೆದ ಭೀಕರ ಅತ್ಯಾಚಾರಕ್ಕೊಳಗಾದ 34 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರು ಘಾಟ್‌ಕೋಪರ್‌ನ ರಾಜಾವಾಢೀ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಮೆರಿಕದ ಎಚ್ಚರಿಕೆಗೆ ಬೆಚ್ಚಿ ಬಿದ್ದ ತಾಲಿಬಾನ್, ಪ್ರಮಾಣ ವಚನ ಕಾರ್ಯಕ್ರಮ ರದ್ದು!

ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯ ಮುಂದುವರೆದಿದೆ. ಪಂಜ್‌ಶೀರ್ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಹೆಣಗಾಟ ನಡೆಸಿದ್ದು. ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಹೋದರನ ಹತ್ಯೆಯನ್ನೂ ನಡೆಸಿದೆ. ಹೀಗಿರುವಾಗ ತಾಲಿಬಾನ್ ಪ್ರಮಾಣ ವಚನ ಕಾರ್ಯಕ್ರಮವೂ ರದ್ದಾಗಿದೆ. 

IPL 2021: RCB ತಂಡ ಕೂಡಿಕೊಂಡ ಬೆಂಕಿ-ಬಿರುಗಾಳಿ..! ಈ ಸಲಾ ಕಪ್‌ ನಮ್ದೇ ನಾ..?

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿಧಾನವಾಗಿ ಐಪಿಎಲ್‌ ಜ್ವರ ಕಾವೇರ ತೊಡಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಮಿಂಚಿನ ಸಂಚಲನ ಶುರುವಾಗಿದೆ.

ಡಿವೋರ್ಸ್ ವದಂತಿ ನಿಜವಾ? ಕೋರ್ಟ್ ಮೆಟ್ಟಿಲೇರಿದ್ರಾ ಸಮಂತಾ-ನಾಗ ಚೈತನ್ಯ ?

ಸೌತ್‌ನ ಪಾಪ್ಯುಲರ್ ಜೋಡಿಯ ದಾಂಪತ್ಯ ಜೀವನ ಸ್ಟಾಪ್ ?ಕಾಲಿವುಡ್‌ನ ಕ್ಯೂಟ್ ಜೋಡಿಯ ವಿಚ್ಛೇದನೆ ವದಂತಿ ನಿಜವಾಯ್ತಾ 

ಹಬ್ಬದ ಪ್ರಯುಕ್ತ ಯಮಹಾ ಸ್ಕೂಟರ್ ಮೇಲೆ ಭರ್ಜರಿ ಆಫರ್!

ಯಮಹಾ ಮೋಟಾರ್ ಇಂಡಿಯಾ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಘೋಷಿಸಿದೆ. ಈ ಆಫರ್ ಸೆಪ್ಟೆಂಬರ್ ತಿಂಗಳಿಗೆ ಮಾತ್ರ ಅನ್ವಯವಾಗಲಿದೆ. ಯಮಹಾ ಯಾವುದೇ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಆಫರ್ ಲಭ್ಯವಿದೆ. ಪ್ರತಿ ಸ್ಕೂಟರ್‌ಗೆ ವಿಶೇಷ ಕೊಡುಗೆ ನೀಡಲಾಗಿದೆ.

ತಂದೆ-ತಾಯಿ ವಿಮಾನ ಹತ್ತಿಸಿ ಕನಸು ನನಸು ಮಾಡಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ನೀರಜ್‌ ಚೋಪ್ರಾ ತಮ್ಮ ತಂದೆ-ತಾಯಿಯನ್ನು ಮೊದಲ ಬಾರಿಗೆ ವಿಮಾನಯಾನ ಮಾಡಿಸುವ ಮೂಲಕ ಬಹುಕಾಲದ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.

ಬದುಕುಳಿಯಬೇಕು ಎನಿಸಲಿಲ್ಲ: ಡಿಪ್ರೆಷನ್ ಬಗ್ಗೆ ದೀಪಿಕಾ ಮಾತು

ದೀಪಿಕಾ ಪಡುಕೋಣೆ, ಫರಾ ಖಾನ್ ಜೊತೆಗೆ, ಕೌನ್ ಬನೇಗಾ ಕರೋಡ್ಪತಿ 13 ರ ಎಪಿಸೋಡ್‌ನಲ್ಲಿ ಕಾಣಿಸಿಕೊಂಡರು. ಸಂಚಿಕೆಯ ಸಮಯದಲ್ಲಿ, ನಟಿ ಖಿನ್ನತೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅವರಿಗೆ ಇದರ ಬಗ್ಗೆ ಹೇಳಿದ್ದಾರೆ.

click me!