ಬೆವರು, ಮೂತ್ರ ಸಂಸ್ಕರಿಸಿದ ನೀರಿನಿಂದ ಮಾಡಿದ ಸೂಪ್‌ ಕುಡಿದು ದಿನ ಕಳೆಯುತ್ತಿರುವ ಸುನೀತಾ ವಿಲಿಯಮ್ಸ್‌!

By Santosh Naik  |  First Published Nov 25, 2024, 2:07 PM IST

ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ನಾಸಾ ಗಗನಯಾತ್ರಿಗಳಾದ ಬಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ತಮ್ಮ ಮೂತ್ರ ಮತ್ತು ಬೆವರಿನಿಂದ ತಯಾರಿಸಿದ ನೀರಿನಿಂದ ಬದುಕುಳಿಯುತ್ತಿದ್ದಾರೆ. ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿನ ಸಮಸ್ಯೆಯಿಂದಾಗಿ ಅವರ ವಾಪಸಾತಿ ವಿಳಂಬವಾಗಿದ್ದು, ಕಠಿಣ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.


ನವದೆಹಲಿ (ನ.25): ಭೂಮಿಯಿಂದ 254 ಮೈಲಿ ಎತ್ತರದಲ್ಲಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾ ಗಗನಯಾತ್ರಿಗಳಾದ 61 ವರ್ಷದ ಬಚ್‌ ವಿಲ್ಮೋರ್‌ ಹಾಗೂ 59 ವರ್ಷದ ಸುನೀತಾ ವಿಲಿಯಮ್ಸ್‌ಗೆ ಜೀವ ಉಳಿಸಿಕೊಳ್ಳುವುದೇ ಸವಾಲಾಗಿದೆ. ಅವರ ಸ್ಥಿತಿ ಎಲ್ಲಿಯವರೆಗೆ ಹೋಗಿದೆ ಎಂದರೆ, ತಮ್ಮ ಮೂತ್ರ ಹಾಗೂ ಬೆವರನ್ನು ಸಂಸ್ಕರಣೆ ಮಾಡಿ ಅದರಿಂದ ನೀರನ್ನು ತೆಗೆದುಕೊಳ್ಳಲಾಗುತ್ತಿದೆ. ಅದೇ ನೀರಿನಿಂದ ಮಾಡಿದ ಸೂಪ್‌ಗಳನ್ನು ಇಬ್ಬರು ಸೇವಿಸುತ್ತಿದ್ದಾರೆ ಎಂದು ವರದಿಯಾಗಿದೆ. ಕಳೆದ ಜೂನ್‌ನಲ್ಲಿ ಕೇವಲ 8 ದಿನಗಳ ಬಾಹ್ಯಾಕಾಶ ಯಾನಕ್ಕಾಗಿ ಐಎಸ್‌ಎಸ್‌ಗೆ ತೆರಳಿದ್ದ ಸುನೀತಾ ವಿಲಿಯಮ್ಸ್‌ ಈಗ ಬಾಹ್ಯಾಕಾಶದಲ್ಲಿ ಉಳಿದು ಆರು ತಿಂಗಳಾಗಿದೆ. ಅವರು ಬಾಹ್ಯಾಕಾಶಕ್ಕೆ ಹೋಗಿದ್ದ ಬೋಯಿಂಗ್‌ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಲೀಕ್‌ ಹಾಗೂ ಥ್ರಸ್ಟರ್‌ ಸಮಸ್ಯೆ ಎದುರಾಗಿದ್ದ ಕಾರಣ, ಈ ನೌಕೆಯ ಮೂಲಕ ಗಗನಯಾತ್ರಿಗಳು ಭೂಮಿಗೆ ಬರುವುದು ಅಪಾಯ ಎಂದು ನಾಸಾ ಹೇಳಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಬೋಯಿಂಗ್‌ ಸ್ಟಾರ್‌ಲೈನರ್‌ ಖಾಲಿ ನೌಕೆ ಭೂಮಿಗೆ ವಾಪಾಸಾಗಿತ್ತು.

ಆರಂಭದಲ್ಲಿ ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ಗೆ ತಾಜಾ ಹಣ್ಣುಗಳು, ರೋಸ್ಟ್‌ ಆಗಿರುವ ಚಿಕನ್‌, ಪಿಜ್ಜಾಗಳು ತಿನ್ನಲು ಸಿಗುತ್ತಿದ್ದವು. ಈಗ ಅವರ ಆಹಾರವನ್ನು ನಾಸಾ ಕಡಿಮೆ ಮಾಡಿದೆ. ಅವರಿಗೆ ಹಾಲಿನ ಪೌಡರ್‌, ಡೀಹೈಡ್ರೇಟ್‌ ಮಾಡಲಾದ ಕ್ಯಾಸರೋಲ್ಸ್‌, ಫ್ರೀಜ್‌ ಮಾಡಿ ಡ್ರೈ ಮಾಡಲಾಗಿರುವ ಸೂಪ್‌ಗಳನ್ನು ನೀಡಲಾಗುತ್ತಿದೆ. ಈ ಸೂಪ್‌ಗಳನ್ನು ಇವರ ಮೂತ್ರ ಹಾಗೂ ಬೆವರಿನಿಂದ ಸಂಸ್ಕರಿಸಿ ಬಂದ ನೀರಿನಿಂದಲೇ ತಯಾರಿಸಲಾಗುತ್ತಿದೆ. ಐಎಸ್‌ಎಸ್‌ನಲ್ಲಿ ಅತ್ಯಾಧುನಿಕ ಫಿಲ್ಟ್ರೇಷನ್‌ ಸಿಸ್ಟಮ್‌ ಹೇಗಿದೆಯೆಂದರೆ, ಒಂದು ತೊಟ್ಟು ದ್ರವ ಕೂಡ ವೇಸ್ಟ್‌ ಆಗಲು ಬಿಡೋದಿಲ್ಲ. ಆದರೆ, ಅತ್ಯಂತ ಕಠಿಣ ಡಯಟ್‌ ಅಡ್ಜ್‌ಮೆಂಟ್‌ ಕಾರಣದಿಂದಾಗಿ ಸುನೀತಾ ವಿಲಿಯಮ್ಸ್‌ ಆರೋಗ್ಯದ ಬಗ್ಗೆ ಕಳವಳ ಶುರುವಾಗಿದೆ.

ಸ್ವತಃ ನಾಸಾ ಹೇಳಿರುವಂತೆ ಇಬ್ಬರೂ ಗಗನಯಾತ್ರಿಗಳ ಆರೋಗ್ಯವನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಲಾಗುತ್ತದೆ. ಅವರು ತೆಗೆದುಕೊಳ್ಳುತ್ತಿರುವ ಆಹಾರದಲ್ಲಿ ಇರುವ ಪೌಷ್ಠಿಕಾಂಶಗಳ ಬಗ್ಗೆ ಗಮನ ನೀಡುವ ಮೂಲಕ ದಿನಕ್ಕೆ ಅಗತ್ಯವಿರುವಷ್ಟು ಕ್ಯಾಲೋರಿ ಪಡೆದುಕೊಳ್ಳುವಂತೆ ಮಾಡಿದ್ದಾರೆ. ಎಷ್ಟೇ ಮಾಡಿದರೂ, ಇಬ್ಬರೂ ಗಗನಯಾತ್ರಿಗಳು ಸಣಕಲು ಆಗಿದ್ದಾರೆ ಅನ್ನೋದು ನೋಟದಲ್ಲಿಯೇ ಗೊತ್ತಾಗುವಂತಿದೆ.

Tap to resize

Latest Videos

ಇನ್ನು ತಮ್ಮ ತೂಕನಷ್ಟದ ಬಗ್ಗೆ ಮಾತನಾಡಿದ್ದ ಸುನೀತಾ ವಿಲಿಯಮ್ಸ್‌, ಇಲ್ಲಿನ ಮೈಕ್ರೋಗ್ರ್ಯಾವಿಟಿಯ ಕಾರಣದಿಂದಾಗಿ ಹೀಗಾಗಿದೆ ಎಂದಿದ್ದು, ನಾನು ಮೊದಲಿನಷ್ಟೇ ತೂಕವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಮುಸ್ಲಿಂ ಹುಡುಗರು ಬೇಡವೇ ಬೇಡ; ಡಿವೋರ್ಸ್ ಆದ್ಮೇಲೆ ಸಾನಿಯಾಗೆ ಬುದ್ಧಿ ಹೇಳಿದ ನೆಟ್ಟಿಗರು!

ಗಗನಯಾತ್ರಿಗಳ ವಿಸ್ತ್ರತ ವಾಸ್ತವ್ಯದಿಂದಾಗಿ ನಾಸಾದ ನಿಲ್ದಾಣದಲ್ಲೂ ಅಗತ್ಯವಸ್ತುಗಳ ಕೊರತೆಯಾಗಿದೆ.ಬಾಹ್ಯಕಾಶ ನಿಲ್ದಾಣದಲಲ್ಲಿ 530 ಗ್ಯಾಲನ್‌ ನೀರಿ ಸಂಸ್ಕರಣಾ ಘಟಕವಿದೆ. ಅದರೊಂದಿಗೆ ಎಮರ್ಜೆನ್ಸಿ ಫುಡ್‌ ಸ್ಟಾಕ್‌ ಇದೆ. ಗ್ರ್ಯಾವಿಟಿ ಇಲ್ಲದ ಕಾರಣ ಆಹಾರಗಳು ತೇಲುತ್ತವೆ ಇದನ್ನು ತಪ್ಪಿಸಲು ಲೋಹದ ಪಾತ್ರಗಳೊಂದಿಗೆ ಮ್ಯಾಗ್ನೆಟೈಸ್ಟ್‌ ಟ್ರೇಗಳಲ್ಲಿ ಊಟವನ್ನು ನೀಡಲಾಗುತ್ತದೆ. ಪ್ರತಿ ಗಗನಯಾತ್ರಿ ಪ್ರತಿದಿನ 3.8 ಪೌಂಡ್‌ ಆಹಾರ ಪಡೆಯುತ್ತಾರೆ.

 

ಸುನೀತಾ ವಿಲಿಯಮ್ಸ್‌ ಹೊಸ ಫೋಟೋ ಕಂಡು ನಾಸಾ ದಿಗ್ಭ್ರಮೆ, ಸಣಕಲು ಕಡ್ಡಿಯಾದ ಗಗನಯಾತ್ರಿ!

ಬಾಹ್ಯಾಕಾಶದಿಂದ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಯತ್ನವನ್ನು ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ಗಗನನೌಕೆ ಮಾಡಲಿದೆ. 2025ರ ಫೆಬ್ರವರಿಯಲ್ಲಿ ಇವರು ಭೂಮಿಗೆ ವಾಪಾಸಗಾಲಿದ್ದು, ಇನ್ನೂ ಮೂರು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ವಾಸ ಮಾಡಬೇಕಿದೆ.
 

click me!