
ಮದುವೆ ದಿನ ವಧು ವರನಿಗೆ ಹೂವಿನ ಮಾಲೆ ಮಾತ್ರ ಅಲ್ಲ ಕೆಲವರು ನೋಟಿನ ಮಾಲೆಯನ್ನು ಹಾಕುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ವರನೋರ್ವ ನೋಟಿನ ಮಾಲೆ ಹಾಕಿ ಹೋಗುತ್ತಿದ್ದ ವೇಳೆ ಕಳ್ಳನೋರ್ವ ಅದರಿಂದ ನೋಟೊಂದನ್ನು ಎಗ್ಗರಿಸಿಕೊಂಡು ಹೋಗಿದ್ದಾನೆ. ಆದರೆ ಮದುವೆ ದಿನ ಎಂಬುದನ್ನು ಯೋಚಿಸದೇ ಮದುಮಗನೇ ಆತನನ್ನು ಬೆನ್ನಟ್ಟಿ ಹೋಗಿ ಹಿಡಿದಿದ್ದು, ಮದುವೆ ದಿನವೇ ಹೀರೋ ಆದ ಮದುಮಗನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಈ ಸಿನಿಮೀಯ ಶೈಲಿಯ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಮೀರತ್‌ನಲ್ಲಿ ಮೀರತ್‌ನ ಟಾಷ್ಟ್ರೀಯ ಹೆದ್ದಾರಿ 58ರಲ್ಲಿ ಸಾಗುತ್ತಿದ್ದ ವೇಳೆ ಮಿನಿ ಗೂಡ್ಸ್ ಟ್ರಕೊಂದರಲ್ಲಿ ಬಂದ ವ್ಯಕ್ತಿಯೊಬ್ಬ ಮದುಮಗನ ಕೊರಳಲ್ಲಿದ್ದ ಕಾಸಿನ ಮಾಲೆಯಿಂದ ನೋಟೊಂದನ್ನು ಎತ್ತಾಕಿಕೊಂಡು ಹೋಗಿದ್ದಾನೆ. ಆದರೆ ಆತನನ್ನು ಬಿಡದೇ ಬೆನ್ನಟ್ಟಿದ ಮದುಮಗ ನೋಟನ್ನು ಆತನ ಕೈನಿಂದ ವಾಪಸ್ ಕಿತ್ತುಕೊಂಡಿದ್ದು, ಆತನಿಗೆರಡು ತದುಕಿದ್ದಾನೆ. ಈ ಸಿನಿಮೀಯ ದೃಶ್ಯಾವಳಿಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೂದು ಬಣ್ಣದ ಸೂಟ್ ಧರಿಸಿ ತಲೆಗೆ ಕೆಂಪು ಬಣ್ಣದ ಪೇಟ ತೊಟ್ಟಿದ್ದು, ದಾರಿಯಲ್ಲಿ ಬೈಕೊಂದರಲ್ಲಿ ಸಿಲಿಂಡರ್ ಸಾಗಿಸುತ್ತಿದ್ದ ವ್ಯಕ್ತಿಯ ಸಹಾಯ ಕೇಳಿ ಆತನ ಬಳಿ ಲಿಫ್ಟ್ ಪಡೆದು ಈ ಮಿನಿ ಗೂಡ್ಸ್ ಗಾಡಿಯನ್ನು ಹಿಂಬಾಲಿಸಿದ್ದಾನೆ. ಅಲ್ಲದೇ ನಿಧಾನವಾಗಿ ಬೈಕ್‌ನಿಂದ ಗೂಡ್ಸ್ ಗಾಡಿಗೆ ಜಂಪ್ ಆದ ಮದುಮಗ ಅದರ ಕಿಟಕಿಯ ಮೂಲಕ ಡ್ರೈವರ್ ಇರುವ ಮುಂಭಾಗದ ಸೀಟಿಗೆ ಇಳಿದಿದ್ದು, ತನ್ನ ಹಣದ ಮಾಲೆಯನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಇದೇ ವೇಳೆ ಗಾಡಿ ಚಾಲಕ ಗೂಡ್ಸ್ ಗಾಡಿಯನ್ನು ನಿಲ್ಲಿಸಿದ್ದರೆ, ಇತ್ತ ಮದುಮಗನಿಗೆ ಕಳ್ಳನನ್ನು ಚೇಸ್ ಮಾಡಲು ಸಹಾಯ ಮಾಡಿದ ಬೈಕ್ ಚಾಲಕ ಗೂಡ್ಸ್ ಗಾಡಿ ಮುಂದೆ ತನ್ನ ಬೈಕ್ ನಿಲ್ಲಿಸಿದ್ದಾನೆ. ಬಳಿಕ ಎಲ್ಲರೂ ಸೇರಿ ಗೂಡ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ಸಿನಿಮೀಯ ಶೈಲಿಯ ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಹಲವರು ರೀತಿಯ ಕಾಮೆಂಟ್ ಮಾಡಿದ್ದಾರೆ. ಮದುಮಗಳು ಆತನ ಬಗ್ಗೆ ಹೆಮ್ಮೆ ಪಡುತ್ತಾಳೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದಯವಿಟ್ಟು ಈತನಿಗೆ ಈ ರೀತಿಯ ಕಮಾಂಡೋ ಟ್ರೈನಿಂಗ್ ಎಲ್ಲಿ ಸಿಕ್ಕಿತ್ತು ಎಂದು ತನಿಖೆ ಮಾಡಿ ಏಕೆಂದರೆ ಸಾಮಾನ್ಯ ಜನರಿಗೆ ಹೀಗೆ ಮಾಡಲು ಸಾಧ್ಯವಾಗದು ಎಂದು ಉತ್ತರ ಪ್ರದೇಶ ಪೊಲೀಸರಿಗೆ ಟ್ಯಾಗ್ ಮಾಡಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಟ್ರಕ್ ಚಾಲಕನನ್ನು ಮನೀಶ್ ಸೆಹ್ಗಲ್ ಎಂದು ಗುರುತಿಸಲಾಗಿದೆ. ಆದರೆ ಆರೋಪಿ ತಾನು ಆತನ ನೋಟನ್ನು ಕದ್ದಿಲ್ಲ, ಅವರು ಕಾರಣವಿಲ್ಲದೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರ ಮುಂದೆ ದೂರಿದ್ದಾನೆ. ಈ ವೀಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ:ಮದುಮಕ್ಕಳ ಮೆರವಣಿಗೆ ವೇಳೆ ರಸ್ತೆ ಮೇಲೆ ಹಣದ ಹೊಳೆ ಹರಿಸಿದ ಬಂಧುಗಳು! ಶಾಕಿಂಗ್ ವಿಡಿಯೋ ವೈರಲ್
ಇದನ್ನು ಓದಿ: ತಪ್ಪಿ ಹೋಗುತ್ತಿದ್ದ ಯುವಕನ ಮದುವೆ ಉಳಿಸಿದ ಭಾರತೀಯ ರೈಲ್ವೆ; ಅಶ್ವಿನಿ ವೈಷ್ಣವ್ ಕೆಲಸಕ್ಕೆ ನೆಟ್ಟಿಗರ ಶ್ಲಾಘನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ