ನಾಳೆ ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್, ಬಾಲಕಿ ಬಲಿಪಡೆದ ಡ್ಯಾನ್ಸ್; ಜೂ.22ರ ಟಾಪ್ 10 ಸುದ್ದಿ!

By Suvarna NewsFirst Published Jun 22, 2021, 4:48 PM IST
Highlights

ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಬಿಗ್‌ಬಾಸ್ 8 ಮತ್ತೆ ಆರಂಭವಾಗುತ್ತಿದೆ. ಕೊರೋನಾ 3ನೇ ಅಲೆ ನಿಯಂತ್ರಿಸಲು ತಜ್ಞರ ಜೊತೆ ಮಹತ್ವದ ಸಭೆ ನಡೆಸಲಾಗಿದೆ. ಇತ್ತ ಚೀನಾಗೆ ಸ್ಯಾಮ್ಸಂಗ್ ಶಾಕ್ ನೀಡಿ ಉತ್ಪಾದನಾ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಿದೆ. ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಆಯೋಜಿಸದಂತೆ ಮನವಿ, ಬಾಲಕಿಯ ಬದುಕಿಗೆ ಅಂತ್ಯ ಹಾಡಿದ ಡ್ಯಾನ್ಸ್ ವಿಡಿಯೋ ರೆಕಾರ್ಡ್ ಸೇರಿದಂತೆ ಜೂನ್ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಚೀನಾಗೆ ಶಾಕ್: ಸ್ಯಾಮ್‌ಸಂಗ್‌ ಡಿಸ್‌ಪ್ಲೇ ಉತ್ಪಾದನಾ ಘಟಕ ಯುಪಿಗೆ ಶಿಫ್ಟ್! ...

ಜಗತ್ತಿನ ಪ್ರಮುಖ ಎಲೆಕ್ಟ್ರಾನಿಕ್‌ ಉತ್ಪಾದನಾ ಸಂಸ್ಥೆಗಳ ಪೈಕಿ ಒಂದಾದ ಸ್ಯಾಮ್‌ಸಂಗ್‌ ಚೀನಾದಲ್ಲಿದ್ದ ತನ್ನ ಡಿಸ್‌್ಪಪ್ಲೇ ತಯಾರಿಕಾ ಘಟಕವನ್ನು ಉತ್ತರ ಪ್ರದೇಶದ ನೋಯ್ಡಾಗೆ ಸ್ಥಳಾಂತರಿಸುವ ಕೆಲಸವನ್ನು ಪೂರ್ಣಗೊಳಿಸಿದೆ. ನೋಯ್ಡಾದಲ್ಲಿ ಘಟಕದ ಕಾಮಗಾರಿ ಈಗಾಗಲೇ ಮುಕ್ತಾಯವಾಗಿದೆ ಎಂದು ಕಂಪನಿ ಭಾನುವಾರ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದೆ.

ಡ್ಯಾನ್ಸ್ ವಿಡಿಯೋ ರೆಕಾರ್ಡ್ ವೇಳೆ ದುಪ್ಪಟ್ಟ ಕೊರಳಿಗೆ ಸುತ್ತಿ 11 ವರ್ಷದ ಬಾಲಕಿ ಸಾವು!...

ಚಿಗುರೊಡೆಯುವ ಮುನ್ನವೇ ಬಾಲಕಿ ಬಂದು ಅಂತ್ಯವಾಗಿದ್ದು ದುರಂತ.  ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕೊರಳಿಗೆ ದುಪ್ಪಟ್ಟ ಸುತ್ತಿಕೊಂಡು 11 ವರ್ಷದ ಬಾಲಕಿ ಮೃತಪಟ್ಟ ಘಟನೆ ಗುದರಾತ್‌ನ ಸೂರತ್‌ನಲ್ಲಿ ನಡೆದಿದೆ. 

ಇಂಗ್ಲೆಂಡ್‌ನಲ್ಲಿ ಮಹತ್ವದ ಐಸಿಸಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಬಾರದು: ಕೆವಿನ್ ಪೀಟರ್‌ಸನ್...

ಅತ್ಯಂತ ಮಹತ್ವವಿರುವ, ಚಾಂಪಿಯನ್ನರನ್ನು ನಿರ್ಧರಿಸಿರುವ ‘ಏಕೈಕ ಪಂದ್ಯ’ಗಳನ್ನು ಇಂಗ್ಲೆಂಡ್‌ನಲ್ಲಿ ಮಾತ್ರ ನಡೆಸಬಾರದು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್‌ ಪೀಟರ್‌ಸನ್‌ ಅಭಿಪ್ರಾಯಿಸಿದ್ದಾರೆ. 

ನಾಳೆ ಬಿಗ್‌ಬಾಸ್‌ 8 ಸೆಕೆಂಡ್‌ ಇನ್ನಿಂಗ್ಸ್‌ ಶುರು!...

ಲಾಕ್‌ಡೌನ್‌ ಕಾರಣಕ್ಕೆ ಅರ್ಧದಲ್ಲಿ ಮೊಟಕುಗೊಂಡಿದ್ದ ಬಿಗ್‌ ಬಾಸ್‌ ಸೀಸನ್‌ 8ನೇ ಆವೃತ್ತಿ ಬುಧವಾರ (ಜೂ.23) ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮತ್ತೆ ಆರಂಭವಾಗಲಿದೆ. 

ಮತ್ತೆ ಗೂಗಲ್ ಎಡವಟ್ಟು: ಕನ್ನಡದ ವರನಟ ಡಾ. ರಾಜ್‌ಗೆ ಅಪಮಾನ!...

ಭಾರತದ ಕೊಳಕು ಭಾಷೆ ಯಾವುದೆಂದು ಹುಡುಕಿದರೆ ಕನ್ನಡ ಎಂದು ತೋರಿಸಿ, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿ ಬಳಿಕ ಕ್ಷಮೆ ಯಾಚಿಸಿದ್ದ ಗೂಗಲ್ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಕೊರೋನಾ ಕಾಲದಲ್ಲೂ ಭಾರತಕ್ಕೆ ಭರ್ಜರಿ ಹೂಡಿಕೆ, 4.8 ಲಕ್ಷ ಕೋಟಿ ಎಫ್‌ಡಿಐ!...

ಕೋವಿಡ್‌ ಅಲೆಯಿಂದಾಗಿ ವಿಶ್ವದ ಬಹುತೇಕ ದೇಶಗಳು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಇಳಿಕೆಯನ್ನು ದಾಖಲಿಸಿದ್ದರೆ, ವಿಶ್ವದ ಹೊಸ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲುಡುತ್ತಿರುವ ಭಾರತದಲ್ಲಿ 2020ನೇ ಸಾಲಿನಲ್ಲಿ 64 ಶತಕೋಟಿ ಡಾಲರ್‌ (ಅಂದಾಜು 4.80 ಲಕ್ಷ ಕೋಟಿ ರು.) ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ

ಕೋವಿಡ್ 3ನೇ ಅಲೆ: ಉನ್ನತ ಮಟ್ಟದ ತಜ್ಞ ಸಮಿತಿ ಸಭೆಯ ಮುಖ್ಯಾಂಶಗಳು...

ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆತಂಕ ಶುರುವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ 92 ಪುಟಗಳ ಸುದೀರ್ಘ ವರದಿ ಸಲ್ಲಿಸಿದೆ. 

ಯುದ್ಧ ವಿಮಾನ ಏರಿದ ಕಣಿವೆ ರಾಜ್ಯದ ಮೊದಲ ಮಹಿಳಾ ಫೈಟರ್ ಪೈಲಟ್..! ...

ಜಮ್ಮು ಕಾಶ್ಮೀರ ಎಂದಾಗ ಮುಷ್ಕರ, ಕಲ್ಲು ತೂರಾಟ, ಹಿಂಸೆ ಎಂದಷ್ಟೇ ನೆನಪಾಗೋದು ಸಹಜ. ಆದರೆ ಅಲ್ಲಿನ ಪುಟ್ಟ ಗ್ರಾಮದಿಂದ ಬಂದ ಯುವತಿ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ. ಬರೀ 23 ವರ್ಷಕ್ಕೆ ಯುದ್ಧ ವಿಮಾನ ಹತ್ತಿ ದೇಶ ಸೇವೆಗೆ ಸಜ್ಜಾಗಿದ್ದಾರೆ.

ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯ ದಿಲ್ಲಿ ಚಲೋ: ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ...

ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವದ ಬಗ್ಗೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಇಂದು (ಮಂಗಳವಾರ) ದೆಹಲಿಯಲ್ಲಿ ರಾಹುಲ್​ ಗಾಂಧಿಯನ್ನ ಭೇಟಿಯಾದರು.

click me!