ಮಗುವಿನ ಹೇರ್‌ಕಟ್‌ ಮಾಡಲು ಅಮ್ಮನ ಸ್ಮಾರ್ಟ್‌ ಐಡಿಯಾ, ಯಾಕಿಷ್ಟು ಹಿಂಸೆ ಕೊಡ್ತೀರಿ ಎಂದ ನೆಟ್ಟಿಗರು!

By Vinutha PerlaFirst Published Jun 2, 2023, 1:41 PM IST
Highlights

ಮಕ್ಕಳ ಹೇರ್‌ ಕಟ್ ಮಾಡೋದು ಅಂದ್ರೆ ದೊಡ್ಡ ಟಾಸ್ಕ್ ಬಿಡಿ. ಯಾಕಂದ್ರೆ ಮಕ್ಕಳು ಹೇಳಿದ ಹಾಗೆ ಕೇಳೋಲ್ಲ. ಅತ್ತಿತ್ತ ಅಲುಗಾಡ್ತಾನೇ ಇರ್ತಾರೆ. ಹೀಗಾಗಿ ಇಲ್ಲೊಬ್ಬ ಲೇಡಿ ಮಗುವಿನ ಕೂದಲು ಕಟ್ ಮಾಡೋಕೆ ಎಂಥಾ ಟ್ರಿಕ್ ಯೂಸ್ ಮಾಡಿದ್ದಾಳೆ ನೋಡಿ.

ಹೇರ್ ಕಟ್ ಮಾಡೋದು, ನೀಟಾಗಿ ಇಟ್ಕೊಳ್ಳೋದು ಎಲ್ರೂ ಮಾಡಬೇಕಾದ ಕೆಲಸ. ಇಲ್ಲದಿದ್ದರೆ ಕೂದಲು ಅತಿಯಾಗಿ ಉದ್ದವಾದರೆ ಕಿರಿಕಿರಿ ಅನಿಸಲು ಶುರುವಾಗುತ್ತದೆ. ಇನ್ನು ಕೆಲವೊಬ್ಬರು ಡಿಫರೆಂಟ್ ಹೇರ್‌ಸ್ಟೈಲ್‌ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ದೊಡ್ಡವರೇನೋ ತಮಗೆ ಇಷ್ಟಬಂದಂತೆ ನೀಟಾಗಿ ಹೇರ್‌ಸ್ಟೈಲ್ ಮಾಡಿಕೊಳ್ಳುತ್ತಾರೆ. ಆದರೆ ಮಕ್ಕಳು ಶಿಸ್ತುಬದ್ಧವಾಗಿ ಕುಳಿತುಕೊಳ್ಳದ ಕಾರಣ ಅವರ ಹೇರ್ ಕಟ್ ಮಾಡೋದು ಕಷ್ಟ. ಪುಟ್ಟ ಮಕ್ಕಳ ತಲೆಕೂದಲು ಕತ್ತರಿಸುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಮಕ್ಕಳು ಅತ್ತಿತ್ತ ತಿರುಗಾಡುತ್ತಲೇ ಇರುತ್ತಾರೆ. ಇದರಿಂದ ಮಕ್ಕಳ ತಲೆಗೆ ಕತ್ತರಿ ಎಲ್ಲಿ ತಾಗುವುದೋ ಎಂಬ ಭಯ ಮೂಡುತ್ತದೆ. ಆದರೆ ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಟ್ರಿಮರ್‌ನಿಂದ ಸುಲಭವಾಗಿ ಮಕ್ಕಳ ತಲೆಕೂದಲನ್ನು ಕತ್ತರಿಸಬಹುದಾಗಿದೆ.  ಆದರೆ ಇದಕ್ಕೂ ಮಕ್ಕಳು ಗಲಾಟೆ ಮಾಡುತ್ತಾರೆ. 

ಹೀಗಾಗಿಯೇ ಅಮ್ಮಂದಿರು ಮಕ್ಕಳ ಕೂದಲು ಕಟ್‌ (Hair cut) ಮಾಡೋಕೆ ಹಲವು ಟ್ರಿಕ್ ಹುಡುಕ್ತಿರ್ತಾರೆ. ಹಾಗೆಯೇ ಇಲ್ಲೊಬ್ಬ ತಾಯಿ ಪುಟ್ಟ ಮಗುವಿನ ಹೇರ್‌ ಕಟ್ ಮಾಡೋಕೆ ಹುಡುಕಿರೋ ಟ್ರಿಕ್ ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ. ತಾಯಿ ಮಗುವಿನ (Baby) ತಲೆ ಮೇಲೆ ಬೌಲ್ ಇಟ್ಟು ಹೇರ್ ಕಟ್ ಮಾಡುತ್ತಾಳೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. 

ಮಗನ ತಲೆಗೆ ಚಮಚದಿಂದ ಬ್ಯೂಟಿಫುಲ್ ಶೇಪ್ ನೀಡಿದ ಪಪ್ಪಾ... ವೈರಲ್ ವಿಡಿಯೋ

ಬಾಕ್ಸ್‌ನಲ್ಲಿ ಮಗುವನ್ನು ಕುಳ್ಳಿರಿಸಿ ಹೇರ್ ಕಟ್ ಮಾಡುವ ತಾಯಿ
ಸ್ಕ್ವೇರ್ ಬಾಕ್ಸ್‌ನಲ್ಲಿ ತಾಯಿ ಮಗುವನ್ನು ಕುಳ್ಳಿರಿಸಿದ್ದಾರೆ. ಸಂಪೂರ್ಣವಾಗಿ ಮುಚ್ಚಿರುವ ಈ ಬಾಕ್ಸ್‌ನಲ್ಲಿ ಮಗುವಿನ ತಲೆ ಹಾಗೂ ಕೈಯನ್ನು ಮಾತ್ರ ಹೊರಗಿಡಲು ಜಾಗವಿದೆ. ಹೀಗಾಗಿಯೇ ಮಗು ಅತ್ತಿತ್ತ ಅಲುಗಾಡದೆ ಸ್ಟಡೀಯಾಗಿ ಕುಳಿತುಕೊಂಡಿದೆ. ತಾಯಿ ಆರಾಮವಾಗಿ ಮಗುವಿನ ಹೇರ್‌ಕಟ್ ಮಾಡಲು ಸಾಧ್ಯವಾಗುತ್ತಿದೆ. 'ಸ್ಮಾರ್ಟ್‌ ಮಾಮ್‌' ಎಂದು ಶೀರ್ಷಿಕೆ ನೀಡಿ ಟ್ವಿಟರ್‌ನಲ್ಲಿ ಈ ವೀಡಿಯೋ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ತಾಯಿ ಮಗುವಿನ ತಲೆ ಮೇಲೆ ಬೌಲ್ ಇಟ್ಟು ಸುತ್ತಲೂ ಹೇರ್ ಕಟ್ ಮಾಡುವುದನ್ನು ನೋಡಬಹುದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

'ತಾಯಿ ಮಗುವಿನ ಹೇರ್ ಕಟ್ ಮಾಡಲು ಒಳ್ಳೆಯ ಉಪಾಯವನ್ನೇ (Idea) ಕಂಡು ಹಿಡಿದಿದ್ದಾರೆ' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಸ್ಮಾರ್ಟ್‌ ಸೊಲ್ಯೂಶನ್‌, ಆದರೆ ಮಗುವಿಗೆ ಕಷ್ಟವಾಗುತ್ತಿರಬಹುದು' ಎಂದಿದ್ದಾರೆ. 'ಮಗುವಿನ ಪೇಶೆನ್ಸ್‌ ನಾವು ಮೆಚ್ಚಬೇಕಾಗಿದೆ' ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ. 'ಅಯ್ಯೋ ಇದನ್ನು ನೋಡಿ ತಲೆ ಕೆಡುತ್ತಿದೆ' ಎಂದು ಮತ್ತೊಬ್ಬರು ಬೇಸರಪಟ್ಟುಕೊಂಡಿದ್ದಾರೆ. 'ತಾಯಿಯ ಈ ಉಪಾಯ ಮುದ್ದಾಗಿಲ್ಲವೆ, ಯಾಕೆ ಹಾಗೆ ಹೇಳುತ್ತಿದ್ದೀರಿ' ಎಂದು ಇನ್ನೊಬ್ಬರು ಕೇಳಿದ್ದಾರೆ. 'ಈ ಮಗು ಇಷ್ಟೊಂದು ಶಾಂತವಾಗಿ ಕುಳಿತಿದೆಯೆಂದರೆ ಕಾರ್ಟೂನ್ ನೆಟ್​ವರ್ಕ್ ನೋಡುತ್ತಿದೆ ಎಂದರ್ಥ' ಎಂದು ಮತ್ತೊಬ್ಬರು ಹೇಳಿದ್ಧಾರೆ.

ಅಮೆರಿಕಾದಲ್ಲಿ ಈಗ ಒಂದು ಹೇರ್ ಸ್ಟೈಲ್‌ ರೇಟ್ ಎಷ್ಟಿರಬಹುದು ಗೊತ್ತಾ?

'ಈಕೆ ಈ ಐಡಿಯಾವನ್ನು ಚೀನಾದ ಅನಾಥಾಶ್ರಮಗಳಿಂದ ಪಡೆದುಕೊಂಡಿದ್ದಾಳೆ' ಎಂದು ಮತ್ತೊಬ್ಬರು ತಿಳಿಸಿದ್ದಾರೆ. 'ಇದು ಬೌಲ್‌ ಕಟಿಂಗ್' ಎಂದು ಅನೇಕರು ತಮಾಷೆ ಮಾಡಿದ್ದಾರೆ. 'ನನ್ನ ಹೆಂಡತಿ ಈ ವಿಡಿಯೋ ಅನ್ನು ಈಗಷ್ಟೇ ತೋರಿಸಿದಳು, ಹೀಗೆ ಆಕೆ ನನ್ನ ಮೇಲೆ ಪ್ರಯೋಗಿಸದಿದ್ದರೆ ಸಾಕು' ಎಂದು ಮತ್ತೊಬ್ಬರು ತಮಾಷೆಯಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ವಿಡಿಯೋ ಎಲ್ಲರಿಗೂ ಸಖತ್ ಖುಷಿ ನೀಡ್ತಿರೋದಂತೂ ನಿಜ.

Smart mom! 😂pic.twitter.com/3VHLv7eIAU

— Figen (@TheFigen_)
click me!