ಜೋಶುವಾ ಹುಟಗಲುಂಗ್ ವ್ಯಕ್ತಿಯೊಬ್ಬ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಾಶದಿಂದ ಮನೆಯ ಮೇಲೆ ಬಿದ್ದ ಉಲ್ಕಾಶಿಲೆಯಿಂದಾಗಿ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ.
ಇಂಡೋನೇಷ್ಯಾ (ನ.19): ಅದೃಷ್ಟವಿದ್ದರೆ ಒಬ್ಬರು ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಯಾಗಬಹುದು. ಇಂಡೋನೇಷ್ಯಾದಲ್ಲಿ ವಾಸಿಸುವ ಒಬ್ಬರಿಗೂ ಹಾಗೆಯೇ ಆಯಿತು. ಜೋಶುವಾ ಹುಟಗಲುಂಗ್ ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಜಾಕ್‌ಪಾಟ್ ಹೊಡೆಯಿತು. ಇದರಿಂದ ಒಂದೇ ರಾತ್ರಿಯಲ್ಲಿ ಅವರು ಕೋಟ್ಯಾಧಿಪತಿಯಾದರು. ಜೋಶುವಾ ಒಂದು ದಿನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಜೋರಾದ ಶಬ್ದ ಕೇಳಿ ಕೋಣೆಗೆ ಓಡಿ ಬಂದು ನೋಡಿದಾಗ ದೊಡ್ಡ ಕಲ್ಲು ಬಿದ್ದಿರುವುದನ್ನು ಕಂಡರು.
ಆ ಕಲ್ಲನ್ನು ನೋಡಿ ಜೋಶುವಾ ಆಶ್ಚರ್ಯಚಕಿತರಾದರು. ವಾಸ್ತವವಾಗಿ, ಅದು ಸಾಮಾನ್ಯ ಕಲ್ಲಲ್ಲ, ಉಲ್ಕಾಶಿಲೆ. ಈ ಉಲ್ಕಾಶಿಲೆಯೇ ಅವರ ಜೀವನವನ್ನೇ ಬದಲಾಯಿಸಿತು. ಆ ಕಲ್ಲನ್ನು ಅವರು 1.4 ಮಿಲಿಯನ್ ಪೌಂಡ್‌ಗಳಿಗೆ ಅಂದರೆ ಭಾರತೀಯ ಮೌಲ್ಯದಲ್ಲಿ 14 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ.
undefined
ಇಂಡೋನೇಷ್ಯಾದ ಉತ್ತರ ಸುಮಾತ್ರಾದ ಕೋಲಾಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಷ್ಟು ಬೆಲೆಗೆ ಮಾರಾಟವಾದ ಈ ಕಲ್ಲಿನ ವಿಶೇಷತೆ ಏನೆಂದು ನೀವು ಯೋಚಿಸಬಹುದು. ಜೋಶುವಾ ಅವರ ಮನೆಯಲ್ಲಿ ಬಿದ್ದ ಉಲ್ಕಾಶಿಲೆ 2.1 ಕಿಲೋ ತೂಕದ ಅಪರೂಪದ ಕಲ್ಲು. ಇದು 4.5 ಶತಕೋಟಿ ವರ್ಷಗಳಷ್ಟು ಹಳೆಯದು ಎಂದು ತಜ್ಞರು ಹೇಳುತ್ತಾರೆ. ಬಾಹ್ಯಾಕಾಶ ಆಧಾರಿತ ಸಂಸ್ಥೆಯು ಇದು ಅತ್ಯಂತ ಅಪರೂಪದ CM1/2 ಕಾರ್ಬೊನೇಸಿಯಸ್ ಕಾಂಡ್ರೈಟ್ ಎಂದು ಪರಿಗಣಿಸಿದೆ. ಶೇಕಡಾ 85 ರಷ್ಟು ಉಲ್ಕಾಶಿಲೆಗಳು ಈ ವಸ್ತುವಿನಿಂದ ತಯಾರಿಸಲ್ಪಟ್ಟಿವೆ. ಈ CM1/2 ಒಂದು ಅಪರೂಪದ ಮಿಶ್ರಣವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೂರದರ್ಶನ ನಿರೂಪಕಿ ಮಥೀರಾ ಖಾಸಗಿ ವಿಡಿಯೋ ವೈರಲ್
ಅಮೆರಿಕದ ಜಾರೆಡ್ ಕಾಲಿನ್ಸ್ ಈ ಅಪರೂಪದ ಉಲ್ಕಾಶಿಲೆಯನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಶವಪೆಟ್ಟಿಗೆ ತಯಾರಕರಾದ ಜೋಶುವಾ ಭಾರಿ ಮೊತ್ತಕ್ಕೆ ಆ ಕಲ್ಲನ್ನು ಮಾರಾಟ ಮಾಡಿದ್ದಾರೆ. ಈ ಉಲ್ಕಾಶಿಲೆ ತನ್ನ ಮನೆಯಲ್ಲಿ ಬಿದ್ದ ದಿನ, ತಾನು ಮನೆಯ ಹೊರಗೆ ವರಾಂಡಾದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಜೋಶುವಾ ಹುಟಗಲುಂಗ್ ಹೇಳಿದ್ದಾರೆ. ಮುಂದೆ ಮಾತನಾಡಿದ ಅವರು, 'ಇದ್ದಕ್ಕಿದ್ದಂತೆ ಜೋರಾದ ಶಬ್ದ ಬಂತು, ಆಗ ಈ ಕಲ್ಲು ನೆಲದಲ್ಲಿ ಹುದುಗಿತ್ತು. ನನಗೆ ಅಪರೂಪದ ನಿಧಿ ಸಿಕ್ಕಿತು' ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದು ಜೋಶುವಾ ಹೇಳಿಕೊಂಡಿದ್ದಾರೆ.
ಜೋಶುವಾ ಅವರು ಮಾತನಾಡುತ್ತಾ, 'ನಾನು ಶವಪೆಟ್ಟಿಗೆಗಳನ್ನು ಮಾಡಿ ಹೆಚ್ಚು ಸಂಪಾದಿಸಲು ಸಾಧ್ಯವಾಗಲಿಲ್ಲ. ಆದರೆ, ಈಗ ನನ್ನ ಜೀವನ ಪಥವೇ ಬದಲಾಗಿದೆ. ಈ ಹಣದಲ್ಲಿ ನನ್ನ ಸಮುದಾಯಕ್ಕಾಗಿ ಚರ್ಚ್ ನಿರ್ಮಿಸಲು ಅರ್ಧ ಹಣ ಬಳಸುತ್ತೇನೆ. ಮತ್ತು ಹೆಣ್ಣು ಮಗುವಿಗೆ ತಂದೆಯಾಗಬೇಕೆಂಬ ಆಸೆ ಇದೆ. ಈ ಹಣದಲ್ಲಿ ತನ್ನ ಕನಸುಗಳನ್ನು ನನಸಾಗಿಸಿಕೊಳ್ಳಲಿದ್ದೇನೆ' ಎಂದು ಹೇಳಿದರು.
ಇದನ್ನೂ ಓದಿ: ರಾಜಾಜಿನಗರದಲ್ಲಿ ಅಗ್ನಿ ಅವಗಢ; ಧಗಧಗನೆ ಉರಿದ ಎಲೆಕ್ಟ್ರಿಕ್ ಶೋ ರೂಮ್, ಯುವತಿ ಸಜೀವ ದಹನ
ಇದಕ್ಕೂ ಮೊದಲು ಚೀನಾದಲ್ಲಿ ಪತ್ತೆಯಾದ ಇದಕ್ಕಿಂತ ದೊಡ್ಡ ಉಲ್ಕಾಶಿಲೆಯೊಂದು 16 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.