ಪ್ರತಿ ದಿನ ಮಾಡುವ ಈ ಎಡವಟ್ಟು ಹೃದಯಾಘಾತಕ್ಕೆ ಮೂಲ ಕಾರಣ

By Web DeskFirst Published Sep 28, 2018, 4:00 PM IST
Highlights

ಹೃದಯಾಘಾತ ಎನ್ನುವುದು ಆಧುನಿಕ ಪ್ರಪಂಚದಲ್ಲಿ ಯಾರಿಗೆ ಯಾವಾಗ ಹೇಗೆ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಹೃದಯಾಘಾತದ ಮುನ್ಸೂಚನೆ ಮೊದಲೆ ಸಿಗುತ್ತದೆಯೇ? ಇಲ್ಲೊಂದು ಸಮೀಕ್ಷಾ ಉತ್ತರ ಇದೆ.

ಹೃದಯಾಘಾತ ಎನ್ನುವುದು ಆಧುನಿಕ ಪ್ರಪಂಚದಲ್ಲಿ ಯಾರಿಗೆ ಯಾವಾಗ ಹೇಗೆ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಹೃದಯಾಘಾತದ ಮುನ್ಸೂಚನೆ ಮೊದಲೆ ಸಿಗುತ್ತದೆಯೇ? ಇಲ್ಲೊಂದು ಸಮೀಕ್ಷಾ ಉತ್ತರ ಇದೆ.

ಗೊತ್ತಿಲ್ಲದ ಆಗುವ ಹೃದಯಾಘಾತ ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರಿಗೆ ಹೆಚ್ಚು.  ಶೇ. 25 ರಷ್ಟು ಹೃದಯಾಘಾತ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕಾಡುತ್ತದೆ ಎಂಬುದು ಸಾಬೀತಾಗಿದೆ. ಹಾಗಾದರೆ ಈ ರೀತಿ ಸೈಲಂಟ್ ಆಗಿ ಎದುರಾಗುವ ಹಾರ್ಟ್ ಅಟ್ಯಾಕ್ ಗೆ ಮೂಲ ಕಾರಣ ಏನು?

ಹಾರ್ಟ್ ಅಟ್ಯಾಕ್ ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್

ದೈಹಿಕವಾಗಿ ಸರಿಯಾಗಿಲ್ಲದಿರುವಿಕೆ, ಕಿರಿಕಿರಿ, ಕಡಿಮೆ ನಿದ್ರೆ, ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರೂ ಗ್ಯಾಸ್ ಟ್ರೀಕ್ ಎಂದು ಉಪೇಕ್ಷೆ ಮಾಡುವುದು ಒಂದು ರೀತಿಯ ಎಚ್ಚರಿಕೆಯ ಸೂಚನೆಗಳೇ ಆಗಿವೆ. ನಿರಂತರ ಧೂಮಪಾನ ಮತ್ತು ಮದ್ಯ ಸೇವನೆ ಸಹ ಹೃದಯಾಘಾತದ ಸಾಧ್ಯತೆ ಹೆಚ್ಚು ಮಾಡುತ್ತದೆ.

ಗಟಗಟ ಅಂತಾ ಎಣ್ಣೆ ಹೊಡಿತೀರಾ?: ಯುವಕರೇ ಹುಷಾರ್?

 ಹಾಗಾದರೆ  ನಮ್ಮ ಜೀವನದಲ್ಲಿ ಯಾವ ಬದಲಾವಣೆ ಮಾಡಿಕೊಳ್ಳಬಹುದು?

*ಹೃದಯಕ್ಕೆ ಪೂರಕವಾದ ಆಹಾರ ಸೇವನೆ ಮಾಡವೇಕು.  ಹಣ್ಣುಗಳು ತರಕಾರಿ ಸೇವನೆ ಹೆಚ್ಚು ಮಾಡಿದರೆ ಪೂರಕ ಆಹಾರಗಳು ಲಭ್ಯವಾಗುತ್ತವೆ.

* ಧೂನಪಾನ ತ್ಯಜಿಸಿ ಕುಡಿತಕ್ಕೆ ಕಡಿವಾಣ ಹಾಕಿ

* ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳುವುದು. ದಿನಕ್ಕಿ ಕನಿಷ್ಠ 30 ನಿಮಿಷವಾದರೂ ವ್ಯಾಯಾಮ ಮಾಡಲೇಬೇಕು.

* ನಿಯಮಿತವಾಗಿ ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

*ಕೊಬ್ಬು, ರಕ್ತದೊತ್ತಡ, ಮತ್ತು ಸಕ್ಕರೆ ಖಾಯಿಲೆಯಿಂದ ದೂರ ಇರುವಂತ ಆಹಾರ ಸೇವನೆ ಮಾಡಿಬೇಕು.

click me!