Latest Videos

ಬೆಂಗಳೂರು: ಬನ್ನೇರುಘಟ್ಟದಲ್ಲಿ ಕನಸಾಗಿಯೇ ಉಳಿದ ಜಂಗಲ್ ಸಫಾರಿ..!

By Kannadaprabha NewsFirst Published May 24, 2024, 11:39 AM IST
Highlights

ಈಗಾಗಲೇ ನೀವು ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿಯ ಅನುಭವ ಪಡೆದಿರಬಹುದು. ಬಂಡೀಪುರ, ನಾಗರಹೊಳೆಯಂತೆ ಭೌಗೋಳಿಕವಾಗಿ ವನ್ಯ ಜೀವಿಗಳಿಗೆ ಆಶ್ರಯ ತಾಣವಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಅರಣ್ಯದ ಸಾರವನ್ನು ಅನುಭವಿಸಲು ಜಂಗಲ್ ಸಫಾರಿಗೆ ಒತ್ತು ನೀಡಿದರೆ ಹೇಳಿ ಮಾಡಿಸಿದ ಪ್ರವಾಸಿ ತಾಣವಾಗುವುದು ಖಚಿತ. 6 ತಿಂಗಳ ಹಿಂದೆ ಜಂಗಲ್ ಸಫಾರಿ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿತ್ತು. ಆದರೆ ಆ ಪ್ರಸ್ತಾವನೆ ಹಾಗೆಯೇ ಉಳಿದಿದೆ.

ಎಂ.ನರಸಿಂಹಮೂರ್ತಿ

ಬೆಂಗಳೂರು(ಮೇ.24): ದಕ್ಷಿಣ ಬೆಂಗಳೂರು ಸಮೀಪದಲ್ಲೇ ಇರುವ ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿ ಮಾಡುವ ಜನರ ಕನಸುಹಾಗೆಯೇ ಉಳಿದಿದೆ. ಉದ್ಯಾನದಲ್ಲಿ ಹಲವಾರು ಪ್ರಾಣಿಗಳಿವೆ. ಹಾಗಾಗಿ ಬೆಂಗಳೂರಿನ ಜನರಿಗೆ ಬನ್ನೇರು ಘಟ್ಟ ಅತ್ಯುತ್ತಮ ಪ್ರವಾಸಿ ತಾಣವಾಗಿದೆ.

ಈಗಾಗಲೇ ನೀವು ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿಯ ಅನುಭವ ಪಡೆದಿರಬಹುದು. ಬಂಡೀಪುರ, ನಾಗರಹೊಳೆಯಂತೆ ಭೌಗೋಳಿಕವಾಗಿ ವನ್ಯ ಜೀವಿಗಳಿಗೆ ಆಶ್ರಯ ತಾಣವಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಅರಣ್ಯದ ಸಾರವನ್ನು ಅನುಭವಿಸಲು ಜಂಗಲ್ ಸಫಾರಿಗೆ ಒತ್ತು ನೀಡಿದರೆ ಹೇಳಿ ಮಾಡಿಸಿದ ಪ್ರವಾಸಿ ತಾಣವಾಗುವುದು ಖಚಿತ. 6 ತಿಂಗಳ ಹಿಂದೆ ಜಂಗಲ್ ಸಫಾರಿ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿತ್ತು. ಆದರೆ ಆ ಪ್ರಸ್ತಾವನೆ ಹಾಗೆಯೇ ಉಳಿದಿದೆ.

ಗಮನಿಸಿ, ಬನ್ನೇರುಘಟ್ಟ ಝೋ ವೆಬ್ಸೈಟ್‌ ಬದಲಾವಣೆ, ಇಮೇಲ್ ವಿಳಾಸ ಕೂಡ ಬದಲು

ಜಂಗಲ್ ಸಫಾರಿಯನ್ನು ಕೈಗೊಳ್ಳುವುದು ಒಂದು ರೋಮಾಂಚಕ ಮತ್ತು ಸಾಹಸಮಯ ಅನುಭವವಾಗಿದ್ದು, ನಿಸರ್ಗದ ಅಪರಿಚಿತ ಸೌಂದರ್ಯದ ಜೊತೆಗೆ ಪ್ರಾಣಿ ಪಕ್ಷಿಗಳ ವೀಕ್ಷಣೆ ಹಾಗೂ ಅವುಗಳ ಜೀವನಾಕ್ರಮ ಗಳನ್ನು ಕಣ್ಣಾರೆ ಕಂಡಾಗ ಸೃಷ್ಟಿ ವೈಚಿತ್ರ್ಯ ಥೈಲ್ ಅನ್ನು ಹೆಚ್ಚಿಸುತ್ತದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 260 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶ ಹೊಂದಿದ್ದು, ಬನ್ನೇರುಘಟ್ಟ, ಆನೇಕಲ್, ಹಾರೋಹಳ್ಳಿ ಹಾಗೂ ಕೋಡಿಹಳ್ಳಿ ಎಂಬ ನಾಲ್ಕು ವ್ಯಾಪ್ತಿಯಲ್ಲಿ ಅವರಿಸಿದೆ. 126 ಆನೆ, 2 ಹುಲಿ, 50ಕ್ಕೂ ಹೆಚ್ಚು ಚಿರತೆಗಳು, ಕಾಡೆಮ್ಮೆ, ಸೀಳುನಾಯಿ, ನರಿ, ಜಿಂಕೆಗಳು ಸೇರಿದಂತೆ ಹಲವು ವೈವಿಧ್ಯಮಯ ಪ್ರಾಣಿ, ಪಕ್ಷಿ ಸಂಕುಲಗಳ ನೆಲೆಯಾಗಿದೆ. ಸಫಾರಿಗೆ ಅನುಕೂಲಕರ ವಾತಾವರಣವಿದೆ.

ಬೆಂಗಳೂರು: ಬನ್ನೇರುಘಟ್ಟ ಪಾರ್ಕ್‌ನಲ್ಲಿ ನಿಲ್ಲದ ಪ್ರಾಣಿಗಳ ಮಾರಣ ಹೋಮ, ಮತ್ತೆ ಜಿಂಕೆಗಳು ಸಾವು

ಜಂಗಲ್ ಸಫಾರಿ ಸಮಯದಲ್ಲಿ ಕಾಡು ಪ್ರಾಣಿಗಳು ನಿಮ್ಮ ಕಣ್ಣಿಗೆ ಬೀಳಬಹದು, ಬೀಳದೇ ಇರಬಹುದು. ಯಾವುದಕ್ಕೂ ಅದೃಷ್ಟ ಇದ್ದರೆ ಕಾಣಿಸುತ್ತವೆ. ಆದರೆ ಬನ್ನೇರುಘಟ್ಟ ಮತ್ತು ಜಂಗಲ್ ಲಾಡ್ಜ್‌ಗಳು ಮತ್ತು ರೆಸಾಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ರ್ ಗಳು ಶ್ರೀಮಂತರ ನೆಲೆಯಾಗಿದ್ದು, ಸಫಾರಿ ಯೋಜನೆ ಕೈಗೊಂಡರೆ ಪ್ರಾಣಿಗಳ ವೀಕ್ಷಣಾ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೇ ಜೀಪ್ ಸಫಾರಿಯು ದೃಶ್ಯ ವೀಕ್ಷಕರಿಗೆ ದೋಷರಹಿತ ಪ್ರಯಾಣದ ಆಯ್ಕೆಯಾಗಿದೆ ಎಂದು ಪ್ರಾಣಿ ಪ್ರಿಯರ, ಛಾಯಾಗ್ರಾಹಕರ, ವನ್ಯಜೀವಿ ಪ್ರೇಮಿಗಳ ಬನ್ನೇರುಘಟ್ಟ ಜೈವಿಕ ಉದ್ಯಾನ ಹಾಗೂ ಸಫಾರಿ ರಾಷ್ಟ್ರಮಟ್ಟದಲ್ಲಿ ವನ್ಯಜೀವಿ ಸಂರಕ್ಷಣಾ ಕೇಂದ್ರವಾಗಿ ಹೆಸರಿಸಲ್ಪಟ್ಟಿದೆ. ಜೊತೆಗೆ ಜಂಗಲ್ ಸಫಾರಿ ಯೋಜನೆಯಿಂದ ಐತಿಹಾಸಿಕ ಪ್ರವಾಸಿ ತಾಣವಾಗಲಿದೆ ಎಂಬುದು ಪ್ರವಾಸಿಗರ ಮನದಾಳದ ಮಾತಾಗಿದೆ.

ಸಫಾರಿಯಿಂದ ತೊಂದರೆ ಆಗಲ್ಲ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಗೂ ಸಫಾರಿಯಲ್ಲಿ ತುಂಬಾ ಹತ್ತಿರದಿಂದ ಪ್ರಾಣಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜಂಗಲ್ ಸಫಾರಿ ಅರಣ್ಯ ಸಚಿವರು ಹಾಗೂ ಇಲಾಖಾ ಮಟ್ಟದಲ್ಲಿ ಉನ್ನತ ಅಧಿಕಾರಿಗಳು ಸಭೆ ನಡೆಸಿ ಕೈಗೊಳ್ಳುವ ಯೋಜನೆಯಾಗಿದೆ. ಜಂಗಲ್ ಲಾಡ್ಜ್ ನಿಂದ ರಾಗಿ ಹಳ್ಳಿಯವರೆಗೆ ಜಂಗಲ್ ಸಫಾರಿ ನಡೆಸಲು ಅನುಕೂಲಕರವಾಗಿದೆ. ಜಂಗಲ್ ಸಫಾರಿಯಿಂದ ಜೈವಿಕ ಉದ್ಯಾನಕ್ಕೆ ಯಾವುದೇ ರೀತಿಯ ಅನಾನುಕೂಲವಾಗುವುದಿಲ್ಲ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ವಿಶಾಲ್ ಪಾಟೀಲ್ ತಿಳಿಸಿದ್ದಾರೆ. 

click me!