ಆರ್ ಅಶೋಕ್ ಅವರ ಬಾಯಿ, ನಾಲಿಗೆಗೆ ಸಂಪರ್ಕವಿಲ್ಲವೆಂದು ಎಂ ಲಕ್ಷ್ಮಣ್ ಲೇವಡಿ

By Mahmad Rafik  |  First Published Jun 25, 2024, 10:19 PM IST

2014ರಲ್ಲಿ ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು. ಇಂದು ಅದು 102 ರೂಪಾಯಿ ಆಗಿದೆ. ಡೀಸೆಲ್ ಅಂದು 55 ರೂಪಾಯಿ ಇತ್ತು, ಇಂದು 78 ರೂಪಾಯಿ ಆಗಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂನ್ 25): ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎಕ್ಸೈಜ್ ಡ್ಯೂಟಿ ಇದ್ದಿದ್ದೇ 10 ರೂಪಾಯಿ. ಆದರೆ ಈಗ 45 ರೂಪಾಯಿ ಹಾಕಲಾಗುತ್ತಿದೆ. ಆದರೆ ನಾವು ಪೆಟ್ರೋಲ್ ಮೇಲೆ 3 ರೂಪಾಯಿ ವ್ಯಾಟ್ ಹಾಕಿರುವುದಕ್ಕೆ ಬಿಜೆಪಿಯವರು ಏನೋ ಆಗಿದೆ ಎನ್ನುವಂತೆ ಆಡುತ್ತಿದ್ದಾರೆ. ಆರ್ ಅಶೋಕ್ ಅವರ ಬಾಯಿಗೂ ನಾಲಿಗೆಗೂ ಕನೆಕ್ಷನ್ ಇಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ಆರ್ ಅಶೋಕ್ ಅವರು ಸ್ವಲ್ಪ ಮಾಹಿತಿ ತಿಳಿದುಕೊಂಡು ಮಾತನಾಡಬೇಕು. 2014ರಲ್ಲಿ ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು. ಇಂದು ಅದು 102 ರೂಪಾಯಿ ಆಗಿದೆ. ಡೀಸೆಲ್ ಅಂದು 55 ರೂಪಾಯಿ ಇತ್ತು, ಇಂದು 78 ರೂಪಾಯಿ ಆಗಿದೆ. ಗ್ಯಾಸ್ 440 ಇತ್ತು ಇಂದು 1150 ಆಗಿದೆ, ಪೊಟಾಷ್ ಗೊಬ್ಬರ 550 ಇದ್ದದ್ದು 5500 ಆಗಿದೆ, ಬೇಳೆ 55 ರೂಪಾಯಿ ಇದ್ದದ್ದು 300 ಆಗಿದೆ. ಇದರ ಬಗ್ಗೆ ಮಾತನಾಡಿ ಎಂದು ಆರ್ ಅಶೋಕ್ ಅವರಿಗೆ ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. 

ನಾವು 3 ರೂಪಾಯಿ ವ್ಯಾಟ್ ಜಾಸ್ತಿ ಮಾಡಿದ್ದು ಬೆಲೆ ಏರಿಕೆ ಆಗಿ ಹೋಯ್ತಾ? ಇದು ಬಿಜೆಪಿಯವರ ದಿವಾಳಿತನ ತೋರಿಸುತ್ತದೆ ಎಂದು ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ  ಹಾಲಿನ ದರ 2 ರೂಪಾಯಿ ಏರಿಕೆ ಮಾಡಿರುವುದನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸಮರ್ಥಿಸಿಕೊಂಡಿದ್ದಾರೆ. 

ಮಡಿಕೇರಿಯಲ್ಲಿ ಮಾತನಾಡಿರುವ ಅವರು ಬೆಲೆ ಏರಿಕೆಯನ್ನ ಬಿಜೆಪಿಯವರು ಹೇಳ್ತಾರೋ ಎಲ್ಲ ಸೃಷ್ಟಿ ಮಾಡ್ತಾರೋ ಗೊತ್ತಿಲ್ಲ. ಹಾಲಿನ ದರ ಜಾಸ್ತಿ ಮಾಡಿ ಯಾರಿಗೆ ಕೊಡ್ತೀವಿ ರೈತರಿಗೆ ಅಲ್ವವೇ ಎಂದಿದ್ದಾರೆ. ಬೆಲೆ ಏರಿಕೆಯಿಂದ ನಮಗೆ ಹೊರೆ ಆಗ್ತಿದೆ ಅಂತ ಜನ ಸಾಮಾನ್ಯರು ಹೇಳ್ತಿದ್ದಾರಾ. ಏನು 20 ರೂಪಾಯಿ ಜಾಸ್ತಿ ಮಾಡಿದ್ದೀವಾ, 2 ರೂಪಾಯಿ ಜಾಸ್ತಿ ಮಾಡಿದ್ದು ಅಲ್ವವೆ.? ಅನಿವಾರ್ಯತೆ ಇದ್ದ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಬೇಕಾಗುತ್ತದೆ. ಹಿಂದೆ ಪೆಟ್ರೋಲ್ಗೆ 100 ರೂಪಾಯಿ 30 ರೂಪಾಯಿ, 40 ರೂಪಾಯಿ ಜಾಸ್ತಿಯಾದಾಗ ಯಾರು ಮಾತನಾಡಿಲ್ಲ.

ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ 57 ಸಾವಿರ ಕೋಟಿ ಬೇಕು. 3 ರೂಪಾಯಿ ವ್ಯಾಟ್ ಏರಿಕೆ ಮಾಡಿರೋದ್ರಿಂದ ವಾರ್ಷಿಕವಾಗಿ 500 ಕೋಟಿ ಬರುತ್ತೆ ಅಷ್ಟೇ. ಆದರೆ 500 ಕೋಟಿಯನ್ನ ಗ್ಯಾರೆಂಟಿ ಯೋಜನೆಗಳಿಗೆ 57 ಸಾವಿರ ಕೋಟಿಗೆ ಸರಿದೂಗಿಸಲು ಆಗುತ್ತಾ?. ಬಿಜೆಪಿಯವರು ತಲೆ ಬುಡ ಏನು ಇಲ್ಲದೆ ಮಾತನಾಡುತ್ತಾರೆ. 3 ರೂಪಾಯಿ ಬೆಲೆ ಏರಿಸಿರೋದ್ರಿಂದ ನಮಗೆನಾದ್ರು 60 ಸಾವಿರ ಕೋಟಿ ಬರುತ್ತಾ?. ಬಾಯಿ ತೆಗೆದರೆ ಸುಳ್ಳು ಹೇಳುವ ಜಯಾಮಾನ ಬಿಜೆಪಿಯವರದ್ದು. ಬಿಜೆಪಿಯವರ ಮನೆದೇವರೆ ಸುಳ್ಳು ಎಂದು ಮಡಿಕೇರಿಯಲ್ಲಿ ಸರ್ಕಾರದ ಪರ ಕೆ.ಪಿ.ಸಿ.ಸಿ ವಕ್ತಾರ ಎಂ. ಲಕ್ಷ್ಮಣ್ ಬ್ಯಾಟ್ ಬಿಸಿದ್ದಾರೆ.

click me!