2018 ರಲ್ಲಿ ಅವರು ಸಿಎಂ ಆಗಿದ್ದಾಗ ಎಷ್ಟು ಪರ್ಸೆಂಟ್ ವ್ಯಾಟ್ ಜಾಸ್ತಿ ಮಾಡಿದ್ದರು. ಇವತ್ತು ರಾಜ್ಯದಲ್ಲಿ 29 ಪರ್ಸೆಂಟ್ ವ್ಯಾಟ್ ಇದೆ, ನೀವು ಸಿಎಂ ಆಗಿದ್ದಾಗ ಹಾಕುತ್ತಿದ್ದ ವ್ಯಾಟ್ 35 ಪರ್ಸೆಂಟ್ ಇತ್ತು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂನ್ 25) : ಕುಮಾರಸ್ವಾಮಿಯವರು ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವರಾಗುತ್ತಿದ್ದಂತೆ ಸಂಡೂರಿನಲ್ಲಿ ದೇವದಾರಿ ಅರಣ್ಯದಲ್ಲಿ ಗಣಿಗಾರಿಕೆ ಸಹಿ ಮಾಡಿದ್ದಾರೆ. ಇದು ಅವರಿಗೆ ರಾಜ್ಯದ ಪರಿಸರದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಎಂ. ಲಕ್ಷ್ಮಣ್ ಟೀಕಿಸಿದ್ದಾರೆ. ಮಡಿಕೇರಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಡೂರಿನಲ್ಲಿ ಈ ಗಣಿಗಾರಿಕೆಗೆ ಸಹಿ ಮಾಡಿರುವುದರಿಂದ 500 ಹೆಕ್ಟೇರ್ ಪ್ರದೇಶದ ಅರಣ್ಯ ನಾಶವಾಗಲಿದೆ. ಇಲ್ಲಿಂದ ಕುದುರೆಮುಖ ಉಕ್ಕು ಕಾರ್ಖಾನೆಗೆ ಸರಬರಾಜು ಮಾಡುವುದಕ್ಕೆ ಸಹಿ ಮಾಡಿದ್ದಾರೆ. ನಿಮಗೆ ಪರಿಸರದ ಬಗ್ಗೆ ಕಾಳಜಿ ಇದೆಯಾ ಕುಮಾರಸ್ವಾಮಿಯವರೇ, ಬಳ್ಳಾರಿಯನ್ನು ಗಣಿಧಣಿಗಳು ಈಗಾಗಲೇ ಹಾಳು ಮಾಡಿದ್ದಾರೆ. ಸುಪ್ರೀಕೋರ್ಟ್ ಇಲ್ಲಿ ಯಾವುದೇ ಗಣಿ ನಡೆಸದಂತೆ ಹೇಳಿದೆ. ಆದರೆ ದೇವದಾರಿಯಲ್ಲಿ ಗಣಿ ನಡೆಸಲು ಸಹಿ ಮಾಡಿದ್ದೇಕೆ, ಈಗಾಗಲೇ ಛತ್ತೀಸಘಡದಿಂದ ಕುದುರೆ ಮುಖಕ್ಕೆ ಸರಬರಾಜು ಆಗುತ್ತಿದೆ. ಇದರಿಂದ ನಿಮಗೆ ಸಮಸ್ಯೆ ಏನು ಕುಮಾರಸ್ವಾಮಿ ಅವರೇ ಎಂದು ಲಕ್ಷ್ಮಣ್ ಪ್ರಶ್ನಿಸಿದ್ದಾರೆ.
ಅಲ್ಲಿ ಗಣಿಗೆ ಅವಕಾಶ ನೀಡಿದರೆ 1.5 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ. ಇದು ನಿಮಗೆ ಪರಿಸರದ ಮೇಲೆ ಕಾಳಜಿಯೇ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಖಾಸಗಿ ಕಂಪೆನಿಗಳಿಗೆ ಮಾರಿರುವ ನವರತ್ನ ಕಾರ್ಖಾನೆಗಳ ಬಗ್ಗೆ ನೀವು ಮಾತನಾಡುತ್ತೀರಿ. ಆದರೆ ಆ ಕಂಪನಿಗಳ ಮುಚ್ಚಿದ್ದು ಬಿಜೆಪಿಯವರು. ಖಾಸಗಿಯವರಿಗೆ ಸೇಲ್ ಆಗಿರುವ ಕಂಪನಿಗಳ ಬಗ್ಗೆ ಮಾತನಾಡಬಹುದು. ಅದನ್ನು ನರೇಂದ್ರಮೋದಿಯವರ ಬಗ್ಗೆ ಕೇಳಿಕೊಂಡು ಬನ್ನಿ. ಅದಾದ ಮೇಲೆ ಅವುಗಳ ಬಗ್ಗೆ ಕೇಳಿಕೊಂಡು ಬನ್ನಿ ಎಂದು ಲಕ್ಷ್ಮಣ್ ಟೀಕಿಸಿದ್ದಾರೆ.
ಕುಮಾರಸ್ವಾಮಿ ಅವರು ಬಿಜೆಪಿ ಸೇರಿದ ಕೂಡಲೇ ರಾಜ್ಯದಲ್ಲಿ 3 ರೂಪಾಯಿ ವ್ಯಾಟ್ ಜಾಸ್ತಿ ಮಾಡಿರುವುದಕ್ಕೆ, ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಯ್ತು, ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ 2018 ರಲ್ಲಿ ಅವರು ಸಿಎಂ ಆಗಿದ್ದಾಗ ಎಷ್ಟು ಪರ್ಸೆಂಟ್ ವ್ಯಾಟ್ ಜಾಸ್ತಿ ಮಾಡಿದ್ದರು. ಇವತ್ತು ರಾಜ್ಯದಲ್ಲಿ 29 ಪರ್ಸೆಂಟ್ ವ್ಯಾಟ್ ಇದೆ, ನೀವು ಸಿಎಂ ಆಗಿದ್ದಾಗ ಹಾಕುತ್ತಿದ್ದ ವ್ಯಾಟ್ 35 ಪರ್ಸೆಂಟ್ ಇತ್ತು. ಈಗ ನಾವು 3 ರೂಪಾಯಿ ನೀವು ಮಾತನಾಡುತಿದ್ದೀರಾ ಎಂದು ತಿರುಗೇಟು ನೀಡಿದರು.
ಇಡೀ ದೇಶದ ಯುವಜನರ ಕನಸನ್ನು ನುಚ್ಚುನೂರು ಮಾಡಲಾಗಿದೆ. 7 ವರ್ಷಗಳಲ್ಲಿ 70 ಬಾರಿ ವಿವಿಧ ಪರೀಕ್ಷೆಗಳ ಪೇಪರ್ ಲೀಕ್ ಆಗಿವೆ. ಪರೀಕ್ಷೆಗಳನ್ನು ವ್ಯಾಪಾರ ಮಾಡುತ್ತಿದ್ದೀರಾ ನೀವು. 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಏನಾಗಬೇಕು. ದುಡ್ಡಿಗೋಸ್ಕರ ಇಡೀ ದೇಶವನ್ನು ಮಾರಾಟ ಮಾಡುತ್ತಿದ್ದೀರಾ. ಮೋದಿಯವರದ್ದು ಚಾಯ್ ಪೇ ಚರ್ಚಾ ಅಂತೆ, ಈ ನೀಟ್ ಬಗ್ಗೆ ಚರ್ಚೆ ಮಾಡಿ ಮೋದಿಯವರೇ. ಪಾರ್ಲಿಮೆಂಟ್ ನಲ್ಲಿ ಇದರ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿ. ಈ ಭಾಗದ ಸಂಸದರು ಇದರ ಬಗ್ಗೆ ಚರ್ಚೆ ಮಾಡಲಿ, ನೀಟ್ ಪರೀಕ್ಷೆ ಬರೆದಿರುವ ಈ ಭಾಗದ ವಿದ್ಯಾರ್ಥಿಗಳಿಗಾದರೂ ಅನುಕೂಲ ಆಗಲಿ ಎಂದು ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಡಿಸಿಎಂ ದಂಗಲ್ ; ಸಿದ್ದು ಬಣದವರ ಬಡಿದಾಟಕ್ಕೆ ಮೆತ್ತಗಾದ ಡಿಕೆಶಿ.. ಹೆಚ್ಚಾಗುತ್ತಾ ಡಿಸಿಎಂ ಸ್ಥಾನ?