ಮೂಳೆ ಶಸ್ತ್ರಚಿಕಿತ್ಸೆಗೆ 'ಮೆಹಂದಿ ಕೋನ್' ಔಷಧಿ ಬಳಸಿದ ಹಾಸನ ವೈದ್ಯರು

By Sathish Kumar KH  |  First Published Jun 25, 2024, 9:49 PM IST

ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೆ ಮೆಹಂದಿ ಕೋನ್ ಅನ್ನು ಔಷಧಿಯಾಗಿ ಬಳಕೆ ಮಾಡಿದ್ದಾರೆ, ಈಗ ಸಾಮಾಜಿಕ ಜಾಲತಾಣದಲ್ಲಿ ವೈದ್ಯರು ಬರೆದುಕೊಟ್ಟ ಚೀಟಿಯನ್ನು ಮೆಹಂದಿ ಕೋನ್ ಹೆಸರಿರುವುದು ವೈರಲ್ ಆಗುತ್ತಿದೆ.  


ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಜೂ.25):
ಹಾಸನ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಗೆ ಮೆಹಂದಿ ಕೋನ್ ತರುವಂತೆ ಪ್ರಿಸ್ಕ್ರಿಪ್ಷನ್ ಚೀಟಿ ಬರೆದುಕೊಟ್ಟಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಹೆಂದಿ ಕೋನ್ ನಿಂದ ಯಾವ ಚಿಕಿತ್ಸೆ ನೀಡುತ್ತಾರೆ ಎಂಬ ಪ್ರಶ್ನೆ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ, ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೆ ಹಾಸನದ ವೈದ್ಯರು ಮೆಹಂದಿ ಕೋನ್ ಅನ್ನು ಔಷಧಿಯಾಗಿ ಬಳಕೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ಹಿಮ್ಸ್ ನ ಸರ್ಜರಿ ವಿಭಾಗದ ವೈದ್ಯರು ಪ್ರಿನ್ಕ್ರಿಪ್ಷನ್ ಚೀಟಿಯಲ್ಲಿ ಒಂದು ಮೆಹೆಂದಿ ಕೋನ್ ಹಾಗೂ ಎರಡು ಕ್ರೇಪ್ ಬ್ಯಾಂಡೇಜ್ ತರುವಂತೆ ಬರೆದುಕೊಡಲಾಗಿತ್ತು. ಕಾಲು ಮೂಳೆ ಮುರಿದು ಬ್ಯಾಂಡೇಜ್ ಹಾಕಿಕೊಂಡಿದ್ದ ರೋಗಿ ಅದನ್ನು ಹುಡುಕಿಕೊಂಡು ಮೆಡಿಕಲ್ ಶಾಪ್, ಬ್ಯಾಂಗಲ್ ಸ್ಟೋರ್ ಅಲೆಯುತ್ತಿದ್ದಾಗ ಸಾಮಾಜಿಕ ಹೋರಾಟಗಾರ್ತಿ ಸುನೀತಾ ಹೆಬ್ಬಾರ್ ಅವರಿಗೆ ದೊರಕಿದ್ದರಿಂದ ಅವರು ಆ ಚೀಟಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಬೇಸರವನ್ನೂ ಹೊರ ಹಾಕಿದ್ದರು.

Latest Videos

undefined

ಕ್ರೋಧಿನಾಮ ಸಂವತ್ಸರದಲ್ಲಿ ಪಂಚ ಭೂತಗಳ ಉಪಟಳ; ಇಬ್ಬರು ಪ್ರಧಾನಿಗಳ ಸಾವಿನ ಭವಿಷ್ಯ ನುಡಿದ ಕೋಡಿಶ್ರೀ

ಈ ಬಗ್ಗೆ  ಹಿಮ್ಸ್ ವೈದ್ಯರ ಪ್ರಶ್ನಿಸಿದಾಗ ಹಿಮ್ಸ್ ಆರ್ ಎಂ ಒ ಡಾ: ಪ್ರವೀಣ್ ವಿವರಣೆ ನೀಡಿದ್ದಾರೆ. ಪ್ರಿಸ್ಕ್ರಿಪ್ಷನ್ ನಲ್ಲಿ ಮೆಹಂದಿ ಕೋನ್ ಬರೆದಿರುವುದನ್ನು ಡಾಕ್ಟರ್ ಗಳು ವೆರಿಕೋಸ್ ವೈನ್ಸ್ ಎಂಬ ಕಾಯಿಲೆಯ ಶಸ್ತ್ರಚಿಕಿತ್ಸೆಯಲ್ಲಿ ಇನ್ಕಾಂಪೀಟೆಂಟ್ ಪರ್ಫೋರೇಟರ್ (incompetent perforators) ಇದನ್ನು ಗುರುತು ಮಾಡುವುದಕ್ಕಾಗಿ ಬಳಸಲಾಗುವುದು. ಒಂದುವೇಳೆ ಈ ಜಾಗವನ್ನು ಆಪರೇಷನ್ ಗೂ ಮುನ್ನ ದಿನನಿತ್ಯ ಬಳಸುವ ಪೆನ್ನಿನ ಇಂಕ್ ನಲ್ಲಿ ಗುರುತು ಮಾಡಿದಲ್ಲಿ, ಶೇ 100ಕ್ಕೆ 100 ರಷ್ಟು ಅಳಿಸಿ ಹೋಗುವುದು ಖಚಿತ. ಏಕೆಂದರೆ ಶತ್ರಚಿಕಿತ್ಸೆಯ ಸಮಯದಲ್ಲಿ ಹಾಗೂ ಅದಕ್ಕೆ ಮುನ್ನ ಆಪರೇಷನ್ ಮಾಡುವ ಜಾಗವನ್ನು ಬೀಟಾಡಿನ್ (betadine) ಮತ್ತು ಸ್ಪಿರಿಟ್ ನಿಂದ ಸ್ಕ್ರಬ್ /ಶುಚಿ ಗೊಳಿಸಲಾಗುವುದು.

ಸರ್ಕಾರಿ ನೌಕರರ ವರ್ಗಾವಣೆಗೆ ಹೊಸ ಮಾರ್ಗಸೂಚಿ ಪ್ರಕಟ; ಮುಂದಿನ 15 ದಿನ ವರ್ಗಾವಣೆ ಪರ್ವ

ಆದ್ದರಿಂದ ಸ್ಥಳೀಯ ವಸ್ತುಗಳು – ಮೇಹಂದಿ/ಹೆನ್ನಾ ಇವುಗಳಿಂದ ಗುರುತಿಸಿದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಉಳಿಯುತ್ತದೆ ಹಾಗು ಸ್ಕ್ರಬ್ಬಿಂಗ್( scrubbing with betadine and spirit ) ನಿಂದ ಅಳಿಸಿ ಹೋಗುವುದಿಲ್ಲ. ಗುರುತು ಮಾಡಿರುವ ಜಾಗದಲ್ಲಿ ಡಾಕ್ಟರ್ಗಳು ಸುಲಭವಾಗಿ ಪರ್ಫೋರೆಟಾರ್ಗಳನ್ನು (perforator) ಹುಡುಕುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ, ಈ ಪ್ರಿಸ್ಕ್ರಿಪ್ಷನ್ ನಲ್ಲಿ ಇರುವ ಮೆಹಂದಿಯನ್ನು ವೈದ್ಯಕೀಯ ಕಾರಣಗಳಿಗಾಗಿ ಉಪಯೋಗಿಸಲಾಗುವುದು ಎಂದು ಹಿಮ್ಸ್ ಆಸ್ಪತ್ರೆ ಆರ್‌ಎಂಒ ಡಾ.ಪ್ರವೀಣ್ ಸ್ಪಷ್ಟನೆ ನೀಡಿದ್ದಾರೆ.

click me!