ಬಳ್ಳಾರಿ: ಶನಿವಾರ ಪ್ರತಿಷ್ಠಾಪನೆ ಆಗಲಿರುವ ವಾಲ್ಮೀಕಿ ಪ್ರತಿಮೆ ಸಂಬಂಧ ಬ್ಯಾನರ್ ಕಟ್ಟುವ ವಿಚಾರವಾಗಿ ಬಳ್ಳಾರಿಯಲ್ಲಿ ರಾದ್ಧಾಂತವೇ ನಡೆದು ಹೋಗಿದೆ. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಸಾವಿರಾರು ಬೆಂಬಲಿಗರು ಬಡಿಗೆ, ಕಬ್ಬಿಣದ ರಾಡ್, ಕಲ್ಲು ಹಿಡಿದು ಬಡಿದಾಡಿಕೊಂಡಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆರು ಸುತ್ತುಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಗೋಲಿಬಾರ್ ನಡೆಸಿದ್ದಾರೆ. ಈ ವೇಳೆ ಗುಂಡೇಟಿಗೆ ಓರ್ವಯುವಕ ಬಲಿಯಾಗಿದ್ದಾನೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಬಳ್ಳಾರಿ ಹುಸೇನ ನಗರದ ರಾಜಶೇಖರ (28) ಎಂದು ಹೇಳಲಾಗಿದೆ. ಆತ ತಮ್ಮ ಬೆಂಬಲಿಗ ಎಂದು ಕಾಂಗ್ರೆಸ್ ಶಾಸಕ ನಾರಾ ಭರತರೆಡ್ಡಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಬಿಜೆಪಿ ಶಾಸಕ ಜನಾರ್ದನ ರಡ್ಡಿ ಮನೆ ಬಳಿ ಈ ಘಟನೆ ನಡೆದಿದೆ. ಆದರೆ ಈತ ಬಲಿಯಾಗಿದ್ದು ಪೊಲೀಸರ ಗುಂಡೇಟಿಗೋ? ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರ ಗುಂಡೇಟಿಗೋ ಎಂಬುದು ಗೊತ್ತಾಗಿಲ್ಲ.
11:16 PM (IST) Jan 02
ದ್ರೌಪದಿ' ಯಶಸ್ಸಿನ ನಂತರ, ನಿರ್ದೇಶಕ ಮೋಹನ್ ಜಿ ಅವರ 'ದ್ರೌಪದಿ 2' ಬಿಡುಗಡೆಗೆ ಸಜ್ಜಾಗಿದೆ. ಹೊಯ್ಸಳ ಚಕ್ರವರ್ತಿ ವೀರ ಬಲ್ಲಾಳ III ಮತ್ತು ಮೊಘಲ್ ಆಕ್ರಮಣದ ನೈಜ ಇತಿಹಾಸ ಆಧಾರಿತ ಈ ಐತಿಹಾಸಿಕ ಚಿತ್ರದಲ್ಲಿ, ಚಿರಾಗ್ ಜಾನಿ ಮೊಹಮ್ಮದ್ ಬಿನ್ ತುಘಲಕ್ ಎಂಬ ಕ್ರೂರ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.
10:27 PM (IST) Jan 02
ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಈ ನಡುವೆ, ಪ್ರಭಾವಿ ಜ್ಯೋತಿಷಿ ದ್ವಾರಕಾನಾಥ್ ಅವರು ಜನವರಿ 5 ರಿಂದ 30ರೊಳಗೆ ಡಿಕೆಶಿ ಜೀವನದಲ್ಲಿನ ಬದಲಾವಣೆ ಬಗ್ಗೆ ಹೇಳಿದ್ದಾರೆ.
09:27 PM (IST) Jan 02
ಹುಬ್ಬಳ್ಳಿಯ ನೇಕಾರ ನಗರದಲ್ಲಿ ವಸತಿ ಉದ್ದೇಶಕ್ಕೆ ಅನುಮತಿ ಪಡೆದ ಕಟ್ಟಡವನ್ನು ಅಕ್ರಮವಾಗಿ ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೆರವಿಗೆ ಗಡುವು
09:08 PM (IST) Jan 02
ಬಿಗ್‌ಬಾಸ್ ಷೋ ಬಗ್ಗೆ ಹಲವು ಅಭಿಪ್ರಾಯಗಳಿದ್ದರೂ, ನಿರೂಪಕ ಕಿಚ್ಚ ಸುದೀಪ್ ಅವರಿಗಾಗಿ ನೋಡುವವರೇ ಹೆಚ್ಚು. ಈ ಷೋ ತನಗೆ ತಾಳ್ಮೆಯನ್ನು ಕಲಿಸಿದೆ ಎಂದು ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ, ಇದನ್ನು ಟೀಕಿಸುವವರನ್ನು ಪ್ರಶ್ನಿಸಿದ್ದಾರೆ.
08:29 PM (IST) Jan 02
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಕಾಲೇಜು ಹಂತದಲ್ಲಿ ಚುನಾವಣೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರು ರಚಿಸಿರುವ ಸಮಿತಿಯ ಮೊದಲ ಸಭೆ ಜನವರಿ 13 ರಂದು ನಡೆಯಲಿದ್ದು, ಚುನಾವಣೆ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
08:17 PM (IST) Jan 02
KMF Nandini Likely to Sponsor RCB in IPL 2026: Replaces Amul ಕರ್ನಾಟಕ ಹಾಲು ಒಕ್ಕೂಟವು ಐಪಿಎಲ್ 2026 ಗಾಗಿ ತನ್ನ ನಂದಿನಿ ಬ್ರ್ಯಾಂಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪ್ರಾಯೋಜಕತ್ವದ ಒಪ್ಪಂದದ ಬಗ್ಗೆ ಯೋಚನೆ ಮಾಡಿದೆ.
08:00 PM (IST) Jan 02
ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ವೇಳೆ ನಡೆದ ಹಿಂಸಾಚಾರ ಮತ್ತು ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಆರೋಪದ ಮೇಲೆ ಜಿಲ್ಲಾ ಎಸ್‌ಪಿ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ಅಧಿಕಾರ ಸ್ವೀಕರಿಸಿ 1 ದಿನಕ್ಕೆ ಅಮಾನತ್ತಾಗಿದ್ದಾರೆ.
07:47 PM (IST) Jan 02
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ 167 ಮನೆ ತೆರವು ಕಾರ್ಯಾಚರಣೆ ಬಳಿಕ ಪರಿಹಾರಕ್ಕಾಗಿ 250ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ! ನಿಜವಾದ ಸಂತ್ರಸ್ತರು ಯಾರು? ಈ ಗೊಂದಲದ ಸಂಪೂರ್ಣ ವರದಿ ಓದಿ.
07:38 PM (IST) Jan 02
ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಈ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂದು ಶಾಸಕ ಬಿ. ನಾಗೇಂದ್ರ ಆರೋಪಿಸಿದ್ದು, ಬಳ್ಳಾರಿಯನ್ನು ಮತ್ತೆ 'ರಿಪಬ್ಲಿಕ್ ಆಫ್ ಬಳ್ಳಾರಿ' ಮಾಡಲು ಸಂಚು ರೂಪಿಸಲಾಗಿದೆ ಎಂದು ಗಂಭೀರ ಆರೋಪ
07:19 PM (IST) Jan 02
ಸೈಬರ್ ವಂಚಕರ ವರ್ಚುವಲ್ ಅರೆಸ್ಟ್‌ನಲ್ಲಿದ್ದ 74 ವರ್ಷದ ವೃದ್ಧನನ್ನು ಪೊಲೀಸರು ರಕ್ಷಿಸಿದ್ದಾರೆ. ಮುಂಬೈ ಪೊಲೀಸರ ಸೋಗಿನಲ್ಲಿ ವಂಚಕರು, 10 ಲಕ್ಷ ರೂ. ವರ್ಗಾಯಿಸಲು ಯತ್ನಿಸಿದಾಗ ಬ್ಯಾಂಕ್ ಮ್ಯಾನೇಜರ್ ಅನುಮಾನದಿಂದ ಪೊಲೀಸರಿಗೆ ಮಾಹಿತಿ ನೀಡಿದರು. ಮಧ್ಯಸ್ಥಿಕೆಯಿಂದ ವೃದ್ಧರ ಪ್ರಾಣ, ಹಣ ಎರಡೂ ಉಳಿದಿದೆ.
06:53 PM (IST) Jan 02
ಬಳ್ಳಾರಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಹಲ್ಲೆ ಹಾಗೂ ಕೊಲೆ ಯತ್ನ ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಯು ರಾಜಕೀಯ ವೈಷಮ್ಯದಿಂದ ನಡೆದಿದೆ ಎಂದು ಆರೋಪಿಸಿ, ಅವರು ಪೊಲೀಸರಿಗೆ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.
06:47 PM (IST) Jan 02
ಸಾರ್ವಜನಿಕರ ನಿರಂತರ ಹೋರಾಟ ಮತ್ತು ಪತ್ರಿಕಾ ವರದಿಯ ಫಲವಾಗಿ ಕಮಲನಗರದಲ್ಲಿ ನಾಂದೇಡ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆ ಆರಂಭವಾಗಿದೆ. ಮತ್ತೊಂದೆಡೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳು ಸ್ಥಗಿತಗೊಂಡಿದೆ.
06:30 PM (IST) Jan 02
06:24 PM (IST) Jan 02
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಾರ-ವಾರವೂ ಎಲಿಮಿನೇಶನ್ ಇದ್ದೇ ಇರುತ್ತದೆ. ಕಳೆದ ಬಾರಿ ಮಾಳು ನಿಪನಾಳ ಅವರು ಎಲಿಮಿನೇಟ್ ಆಗಿದ್ದರು, ಆದರೆ ಸ್ಪಂದನಾ ಸೋಮಣ್ಣ ಹೊರಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಸ್ಪಂದನಾ ಯಾಕೆ ಹೊರಹೋಗಲಿಲ್ಲ ಎಂದು ರಕ್ಷಿತಾ ಕಾರಣ ನೀಡಿದ್ದಾರೆ.
06:23 PM (IST) Jan 02
BDA Finalises 45-Acre Land Near Challaghatta for Bengaluru Skydeck ಮೇಜರ್ ಆರ್ಟೀರಿಯಲ್ ರಸ್ತೆ (MAR) ಗೆ ಹತ್ತಿರದಲ್ಲಿರುವ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಪ್ರಾಧಿಕಾರವು 46 ಎಕರೆ ಭೂಮಿಯನ್ನು ಗುರುತಿಸಿದೆ.
06:18 PM (IST) Jan 02
ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಮೇಲೆ ನಡೆದಿದ್ದು ಪೂರ್ವನಿಯೋಜಿತ ದಾಳಿ ಎಂದು ಆರೋಪಿಸಿದ್ದಾರೆ. ತಮ್ಮ ನಿವಾಸದ ಬಳಿ ಪತ್ತೆಯಾದ ಮತ್ತೊಂದು ಬುಲೆಟ್ ಪ್ರದರ್ಶಿಸಿ, ಶಾಸಕ ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
05:17 PM (IST) Jan 02
04:55 PM (IST) Jan 02
ಬಳ್ಳಾರಿ ಫೈರಿಂಗ್ ಮತ್ತು ಕಾರ್ಯಕರ್ತನ ಸಾವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ತರಾಟೆ ತೆಗೆದುಕೊಂಡ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಮತ್ತು ಪರಿಸ್ಥಿತಿ ನಿಯಂತ್ರಿಸುವಂತೆ ಸೂಚನೆ ನೀಡಿದ್ದಾರೆ.
04:54 PM (IST) Jan 02
ಬಿಗ್ ಬಾಸ್ ಮನೆ ಅಂದಮೇಲೆ ಅಲ್ಲಿ ಕಿತ್ತಾಟ, ಪ್ರೀತಿ, ಕುತಂತ್ರಗಳ ಜೊತೆಗೆ ವಿಚಿತ್ರ ವರ್ತನೆಗಳೂ ಸುದ್ದಿಯಾಗುವುದು ಸಾಮಾನ್ಯ. ಆದರೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ 'ಸಹವಾಸ ದೋಷ' ಎಂಬ ಪೋಸ್ಟರ್ ಒಂದು ಭಾರಿ ವೈರಲ್ ಆಗುತ್ತಿದೆ.
04:43 PM (IST) Jan 02
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಮತ್ತು ಸಂಘರ್ಷದ ಕುರಿತು ಸಚಿವ ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ. ತನಿಖೆಯಾಗದೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಕಾನೂನು ಸುವ್ಯವಸ್ಥೆ ಕುರಿತ ಬಿಜೆಪಿಯ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
04:38 PM (IST) Jan 02
BBK 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಟಾಸ್ಕ್ ಆಡೋಕೆ ಬರೋದಿಲ್ಲ ಎಂಬ ಆರೋಪದ ಮಧ್ಯೆ ಗಿಲ್ಲಿ ನಟ ಅವರು ಅಶ್ವಿನಿ ಗೌಡ ವಿರುದ್ಧ ಟಾಸ್ಕ್ ಆಡಿ ಕ್ಯಾಪ್ಟನ್ ಆದರು. ಈಗ ಕಿಚ್ಚ ಸುದೀಪ್ ಅವರು ಬೈತಾರೆ ಎಂದು ಸಹಸ್ಪರ್ಧಿಗಳ ಜೊತೆ ಚರ್ಚೆ ಮಾಡಿದ್ದಾರೆ. ಹಾಗಾದರೆ ಮಾಡಿದ ತಪ್ಪೇನು?
03:43 PM (IST) Jan 02
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಅವರಿಗೆ ಗಿಲ್ಲಿ ನಟನ ವಿಚಾರದಲ್ಲಿ ಪೊಸೆಸ್ಸಿವ್ ಆಗಿದ್ದಾರೆ ಎನ್ನಲಾಗಿತ್ತು. ಈಗ ಧನುಷ್ ಗೌಡ, ರಾಶಿಕಾ ಇನ್ನೊಂದು ಸಾಕ್ಷಿ ನೀಡಿದ್ದಾರೆ. ಹಾಗಾದರೆ ಏನದು?
03:24 PM (IST) Jan 02
ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ವಿಚಾರವಾಗಿ ನಡೆದ ಗಲಭೆಯಲ್ಲಿ ಫೈರಿಂಗ್‌ನಿಂದ ಯುವಕ ಮೃತಪಟ್ಟಿದ್ದಾನೆ. ಈ ಘಟನೆಗೆ ಶಾಸಕ ಭರತ್ ರೆಡ್ಡಿ ಬೆಂಬಲಿಗರೇ ಕಾರಣ ಎಂದು ಆರೋಪಿಸಿರುವ ಮಾಜಿ ಸಚಿವ ಶ್ರೀರಾಮುಲು, ಸಿಬಿಐ ಅಥವಾ ಹೈಕೋರ್ಟ್ ಜಡ್ಜ್ ವಹಿಸಲು ಆಗ್ರಹಿಸಿದ್ದಾರೆ.
03:15 PM (IST) Jan 02
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ, ಗಿಲ್ಲಿ ನಟ, ಸರಿಯಾದ ನಿರ್ಧಾರಗಳನ್ನು ತಗೊಳೋದಿಲ್ಲ, ಪರ್ಸನಲ್ ಆಗಿ ಹೋಗಿ ಮಾತಾಡ್ತಾರೆ, ಕಾವ್ಯ ಪರ ಫೇವರಿಸಂ ಮಾಡ್ತಾರೆ ಎಂಬ ಆರೋಪ ಇದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಗಿಲ್ಲಿ ನಟನ ಆಟದ ಬಗ್ಗೆ ಚರ್ಚೆ ಆಗುತ್ತಿದೆ.
02:50 PM (IST) Jan 02
KEA 2026ನೇ ಸಾಲಿನ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 23 ಮತ್ತು 24ರಂದು ನಡೆಸಲು ದಿನಾಂಕ ಪ್ರಕಟಿಸಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು 'ಸಿಇಟಿ ದಿಕ್ಸೂಚಿ' ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಗಿದ್ದು, ಪಿಜಿಸಿಇಟಿ, ಡಿಸಿಇಟಿ ಸೇರಿದಂತೆ ಇತರೆ ಪರೀಕ್ಷೆಗಳ ವೇಳಾಪಟ್ಟಿಯನ್ನೂ ಸಹ ಘೋಷಿಸಲಾಗಿದೆ.
02:35 PM (IST) Jan 02
ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ. ಈ ಘಟನೆಯು ರಾಜಕೀಯ ಸಮರಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
02:22 PM (IST) Jan 02
BBK 12 Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದು, ಸರಿಯಾದ ನಿರ್ಧಾರಗಳನ್ನು ತಗೊಳ್ಳೋದಿಲ್ಲ, ಕಾವ್ಯ ಶೈವ ಅವರಿಗೆ ಫೇವರ್ ಆಗಿರುತ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಖಾಸಗಿ ಕಂಪೆನಿ HR ಬರೆದ ಬರೆಹ ಇಲ್ಲಿದೆ.
01:33 PM (IST) Jan 02
ಬೆಳಗಾವಿಯ ಚಿಕ್ಕೋಡಿಯಲ್ಲಿ, ಹೊಸ ವರ್ಷದಂದು ವಿವಾಹಿತ ಪ್ರಿಯತಮೆಯನ್ನು ಭೇಟಿಯಾಗಲು ಹೋದ ಯುವಕನೊಬ್ಬ ಆಕೆಯ ಪತಿ ಮತ್ತು ಸಹೋದರರಿಂದ ತೀವ್ರ ಹಲ್ಲೆಗೊಳಗಾಗಿದ್ದಾನೆ. ನಾಲ್ಕು ವರ್ಷಗಳ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಯುವಕನನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ.
01:33 PM (IST) Jan 02
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್ ಒಂದಾಗುತ್ತಾರೆ ಎನ್ನುವಷ್ಟರಲ್ಲಿ ಜಯದೇವ್ ಎಂಟ್ರಿ ಆಯ್ತು, ಈಗ ಭೂಮಿಕಾ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವೀಕ್ಷಕರಿಗೆ ಪ್ರಶ್ನೆ ಇದೆ. ಏನದು?
01:28 PM (IST) Jan 02
ಲಷ್ಕರ್-ಎ-ತೊಯ್ಬಾ ಉಗ್ರ ಟೀ ನಸೀರ್‌ಗೆ ಜೈಲಿನಲ್ಲಿ ನೆರವು ನೀಡಿದ ಪ್ರಕರಣದಲ್ಲಿ ಎನ್‌ಐಎ ಮೂವರು ಹೊಸ ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ. ಸಿಎಆರ್ ಎಎಸ್‌ಐ, ಮನೋವೈದ್ಯ ಹಾಗೂ ಇನ್ನೊಬ್ಬ ಮಹಿಳೆ ಹಣಕಾಸಿನ ನೆರವು, ಮಾಹಿತಿ ಸೋರಿಕೆ ಮತ್ತು ಮೊಬೈಲ್ ಫೋನ್ ಪೂರೈಸಿದ ಆರೋಪವಿದೆ.
01:05 PM (IST) Jan 02
ಡಿಸೆಂಬರ್ 31 ರ ಹೊಸ ವರ್ಷವನ್ನು ಸ್ವಾಗತಿಸುವ ರಾತ್ರಿ ಜರ್ಮನಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಭಾರತದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಜರ್ಮನಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ತೆಲಂಗಾಣದ ಹೃತಿಕ್ ರೆಡ್ಡಿ ಎಂದು ಗುರುತಿಸಲಾಗಿದೆ
01:03 PM (IST) Jan 02
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ, ಹೊಸ ವರ್ಷದಿಂದ ಸರಿಯಾಗಿ ಕೆಲಸ ಮಾಡುವಂತೆ ತಾಯಿ ಹೇಳಿದ ಬುದ್ಧಿಮಾತಿಗೆ ಮನನೊಂದ 24 ವರ್ಷದ ಯುವಕ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಘಟನೆ ಕುಟುಂಬದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.
12:41 PM (IST) Jan 02
ಬೆಂಗಳೂರಿನ ಶೇಷಾದ್ರಿಪುರಂ ಲಿಂಕ್ ರಸ್ತೆಯಲ್ಲಿ ಕೆಪಿಟಿಸಿಎಲ್ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಕಾರೊಂದು ಬಿದ್ದು ನಿವೃತ್ತ ಜಿಎಸ್‌ಟಿ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರು ತಿಂಗಳಿಂದ ನಡೆಯುತ್ತಿರುವ ಕಾಮಗಾರಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ.
12:41 PM (IST) Jan 02
Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ತೇಜಸ್, ನಿತ್ಯಾಗೆ ಮದುವೆ ಆದರೆ ಎಲ್ಲವೂ ಸರಿ ಹೋಗುತ್ತದೆ. ನನ್ನ-ನಿಧಿ ಜೀವನ ಸೆಟಲ್ ಆಗುತ್ತದೆ ಎಂದು ಕರ್ಣ ಅಂದುಕೊಂಡಿದ್ದಾನೆ. ಈಗ ಇನ್ನೊಂದು ಸಮಸ್ಯೆ ಆಗುವ ಥರ ಕಾಣ್ತಿದೆ. ಹಾಗಾದರೆ ಮುಂದೆ ಏನಾಗುವುದು?
12:25 PM (IST) Jan 02
ಕಿಚ್ಚ ಸುದೀಪ್ 'ಮ್ಯಾಕ್ಸ್' ಚಿತ್ರದ ಕಲೆಕ್ಷನ್ ಎಷ್ಟು? ಗಾಯಕಿಯಾಗಿ ಪಾದಾರ್ಪಣೆ ಮಾಡಿದ ಪುತ್ರಿ ಸಾನ್ವಿ ಸುದೀಪ್ ಹಾಡಿದ 'ಮಸ್ತ್ ಮಲೈಕಾ' ಹಾಡು ಹಿಟ್ ಆಯ್ತಾ? ಸಂಪೂರ್ಣ ಮಾಹಿತಿ ತಿಳಿಯಿರಿ.
12:03 PM (IST) Jan 02
Suggestion For Upcoming Kannada Cinema Success: ಹೊಸ ವರ್ಷದಲ್ಲಿ ಹಳೆಯ ತಪ್ಪು ಮರುಕಳಿಸದಿರಲಿ ಎಂಬುದು ಆಶಯ. ಸ್ಯಾಂಡಲ್‌ವುಡ್ ಕ್ರಮಿಸಬೇಕಾದ ಬಹುದೂರದ ಹಾದಿಗೆ ದಿಕ್ಕೂಚಿಯಂತೆ ತಪ್ಪು-ಒಪ್ಪುಗಳ ಈ ಬರಹ.
11:58 AM (IST) Jan 02
ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವಿನ ಬ್ಯಾನರ್ ವಿವಾದ ಗಲಭೆಗೆ ತಿರುಗಿ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಈ ಸಾವು ಖಾಸಗಿ ವ್ಯಕ್ತಿಯ ರಿವಾಲ್ವಾರ್‌ನಿಂದ ನಡೆದಿದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.
11:57 AM (IST) Jan 02
11:37 AM (IST) Jan 02
11:20 AM (IST) Jan 02
Bigg Boss Kannada Season 12 Episode: ಈ ವಾರ ಯಾರು ಮನೆಯ ಕ್ಯಾಪ್ಟನ್ ಆಗುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಇರೋದರಿಂದ ಈ ವಾರ ಕ್ಯಾಪ್ಟನ್ ಆಗೋದು ಬಹಳಷ್ಟು ಪ್ಲಸ್ ಪಾಯಿಂಟ್ ಆಗುವುದು. ಹಾಗಾದರೆ ಯಾರದು?