ಮಂಡ್ಯ ಜನರ ಅಭಿಮಾನಕ್ಕೆ‌ ಮನಸೋತ ಹಾಟ್‌ ನಟಿ ಸನ್ನಿ ಲಿಯೋನ್..!

By Girish GoudarFirst Published May 17, 2022, 10:51 AM IST
Highlights

*   ರಕ್ತದಾನದ ಮೂಲಕ ಅಭಿಮಾನಿಗಳಿಗೆ ಗೌರವ ಸಲ್ಲಿಸಲು ನಿರ್ಧಾರ
*  ಹಬ್ಬದಂತೆ ಸನ್ನಿ ಬರ್ತಡೇ ಆಚರಿಸಿದ್ದ ಅಭಿಮಾನಿಗಳು
*   ಸನ್ನಿ ಬರ್ತಡೇಯಂದು 40 ಯೂನಿಟ್ ರಕ್ತ ಸಂಗ್ರಹ
 

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ(ಮೇ.17):  ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್(Sunny Leone) ಸದ್ಯ ಅಭಿಮಾನಿಗಳ ಹಾಟ್ ಫೇವರೇಟ್. ಒಂದು ಕಾಲದಲ್ಲಿ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದ ಸನ್ನಿ ಲಿಯೋನ್ ಬಾಲಿವುಡ್(Bollywood) ಎಂಟ್ರಿ ಬಳಿಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ಸ್ಟಾರ್ ಹೀರೋಗಳ ಚಿತ್ರದಲ್ಲಿ ಐಟಂ ಡ್ಯಾನ್ಸ್‌ಗಳಲ್ಲಿ ನಟಿಸುವ ಮೂಲಕ ಜನರ ಮನ ಗೆದ್ದರು. ನಟನೆ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸನ್ನಿ. ದೊಡ್ಡ ಅಭಿಮಾನಿ ಬಳಗವನ್ನೇ ಪಡೆದರು. ಅದರಲ್ಲೂ ಮಂಡ್ಯದ ಅಭಿಮಾನಿಗಳಂತು ಸನ್ನಿ ಮೇಲೆ ವಿಶೇಷ ಪ್ರೀತಿ, ಅಭಿಮಾನ ಹೊಂದಿದ್ದಾರೆ. ಮೇ.13 ಸನ್ನಿ ಲಿಯೋನ್ ಹುಟ್ಟುಹಬ್ಬ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಸ್ವತಃ ಸನ್ನಿ ಲಿಯೋನರನ್ನೇ ಮೂಕವಿಸ್ಮಿತಗೊಳಿಸಿದ್ದಾರೆ.

Latest Videos

 

Omg this is unbelievable.
In honor of you I will also go and donate my blood!!

Thank you so much! You all really make me feel so special! Love you! pic.twitter.com/KeZNgaXxQf

— Sunny Leone (@SunnyLeone)

ಸನ್ನಿ ಬರ್ತಡೇಯಂದು 40 ಯೂನಿಟ್ ರಕ್ತ ಸಂಗ್ರಹ

ಹೌದು, ಸನ್ನಿ ಲಿಯೋನ್ ಹುಟ್ಟುಹಬ್ಬ(Birthday) ಅಂಗವಾಗಿ ಮಂಡ್ಯದ(Mandya) ಕೊಮ್ಮೇರಹಳ್ಳಿಯ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿದ್ದರು. ಜೀವಧಾರೆ ಟ್ರಸ್ಟ್(Jeevadhare Trust) ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 40 ಯುವಕರು ರಕ್ತದಾನ(Blood Donate) ಮಾಡುವ ಮೂಲಕ ನೆಚ್ಚಿನ ನಟಿಗೆ ಶುಭಾಶಯ ಹೇಳಿದರು. ಇದಲ್ಲದೇ ಗ್ರಾಮದ ಮುಖ್ಯ ರಸ್ತೆಯಲ್ಲಿ ಸನ್ನಿಲಿಯೋನರ ಬೃಹತ್ ಫ್ಲೆಕ್ಸ್ ಅಳವಡಿಸಿದ್ದ ಯುವಕರು, 'ಅನಾಥ ಮಕ್ಕಳ ತಾಯಿ. ಅಭಿಮಾನಿಗಳ(Fans) ದೇವತೆ' ಎಂದು ಬರೆದು ಪ್ರೀತಿ ವ್ಯಕ್ತಪಡಿಸಿದ್ದರು. ಬರ್ತಡೇ ಹಿನ್ನೆಲೆ ಕೇಕ್ ಕತ್ತರಿಸಿದ ಅಭಿಮಾನಿಗಳು ಸಾರ್ವಜನಿಕರಿಗೆ ಬಿರಿಯಾನಿ ಹಾಗೂ ಸಿಹಿ ವಿತರಿಸಿ ಸಂಭ್ರಮಿಸಿದರು. 

Mandya: ಚಿಕನ್ ಖರೀದಿಸುವ ಸನ್ನಿ ಲಿಯೋನ್ ಫ್ಯಾನ್ಸ್‌ಗೆ ಭರ್ಜರಿ ಆಫರ್‌: ಕಂಡಿಷನ್ಸ್‌ ಅಪ್ಲೈ..!

ಮಂಡ್ಯ ಜನರ ಪ್ರೀತಿಗೆ ಮನಸೋತ ಸನ್ನಿ ಲಿಯೋನ್

ತನ್ನ ಹುಟ್ಟುಹಬ್ಬಕ್ಕೆ(Birthday) ರಕ್ತದಾನ, ಅನ್ನದಾನದಂತಹ ಕಾರ್ಯಕ್ರಮಗಳನ್ನ ಆಯೋಜಿಸಿದ್ದ ಮಂಡ್ಯ ಅಭಿಮಾನಿಗಳ ಕಾರ್ಯವನ್ನು ನಟಿ ಸನ್ನಿ ಲಿಯೋನ್ ಗಮನಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ(Social Media) ಖಾತೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸನ್ನಿ 

ಇದು ನಂಬಲು ಅಸಾಧ್ಯ. ನಿಮಗೆ ಗೌರವ ಸೂಚಿಸಲು ನಾನೂ ಹೋಗಿ ರಕ್ತದಾನ ಮಾಡುತ್ತೇನೆ. ತುಂಬಾ ಧನ್ಯವಾದಗಳು. ನಿಜವಾಗಿಯೂ ನೀವೆಲ್ಲರೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸುತ್ತೀರಿ. ಲವ್​ ಯೂ’ ಎಂದು ಬರೆದುಕೊಂಡಿದ್ದಾರೆ. ಸನ್ನಿ ಪ್ರತಿಕ್ರಿಯೆಗೆ ಅಭಿಮಾನಿಗಳು ಕೂಡ ಖುಷ್ ಆಗಿದ್ದಾರೆ. ಸನ್ನಿ ಲಿಯೋನ್‌ರ ಸಾಮಾಜಿಕ ಕೆಲಸಗಳನ್ನು ಮೆಚ್ಚಿ ಮಂಡ್ಯದಲ್ಲಿ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.
 

click me!