ಕೊಡಗು: ಥೈಲ್ಯಾಂಡ್‌ನಿಂದ ಭಾರತದ ಮೂಲಕ ದುಬೈಗೆ ಗಾಂಜಾ ಸಾಗಾಟ, 7 ಅಂತಾರಾಷ್ಟ್ರೀಯ ಪೆಡ್ಲರ್ಸ್‌ ಅರೆಸ್ಟ್‌

By Girish Goudar  |  First Published Oct 2, 2024, 10:02 PM IST

ಥೈಲ್ಯಾಂಡಿನಿಂದ ಭಾರತ ಅಲ್ಲಿಂದ ದುಬೈಗೆ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಕೇರಳ ಹಾಗೂ ಕೊಡಗಿನ 7 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ ಮೂರುವರೆ ಕೋಟಿ ಮೌಲ್ಯದ 3 ಕೆ.ಜಿ. 31 ಗ್ರಾಂ ತೂಕದ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ. 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಅ.02):  ವಿದೇಶದಲ್ಲಿ ಕೆಫೆ ಮಾಡಿಕೊಂಡು ಕಾಫಿ, ಟೀ, ಊಟ ತಿಂಡಿ ಮಾರಿ ದುಡಿಮೆ ಮಾಡುತ್ತಿದ್ದಾನೆ ಎಂದರೆ ಆತ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಡ್ರಗ್ಸ್ ದಂಧೆಗೆ ಇಳಿದಿದ್ದ. ಅದೂ ಕೂಡ ಥೈಲ್ಯಾಂಡಿನಿಂದ ಭಾರತದ ಮೂಲಕ ದುಬೈಗೆ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಪ್ರಕರಣವನ್ನು ಕೊಡಗು ಪೊಲೀಸರು ಬೇಧಿಸಿದ್ದಾರೆ.

Tap to resize

Latest Videos

undefined

ಥೈಲ್ಯಾಂಡಿನಿಂದ ಭಾರತ ಅಲ್ಲಿಂದ ದುಬೈಗೆ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಕೇರಳ ಹಾಗೂ ಕೊಡಗಿನ 7 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ ಮೂರುವರೆ ಕೋಟಿ ಮೌಲ್ಯದ 3 ಕೆ.ಜಿ. 31 ಗ್ರಾಂ ತೂಕದ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ. 

ಅಬಕಾರಿ ಕಚೇರಿಯಲ್ಲೇ ಅಕ್ರಮ ಗಾಂಜಾ ಪತ್ತೆ: ದಂಗಾದ ಲೋಕಾಯುಕ್ತರು..!

ಕೇರಳ ಮೂಲದ ಮೆಹರೂಫ್ ಮತ್ತು ರಿಯಾಜ್ ಪಿ. ಎಂ, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ರವೂಫ್, ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನ ಅಕನಾಸ್ ಎಂ ಎನ್, ವಿರಾಜಪೇಟೆ ತಾಲ್ಲೂಕಿನ ಬೆಟೋಳಿ ಗ್ರಾಮದ ವಾಜಿದ್ ಸಿ.ಇ, ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನ ಯಾಹ್ಯಾ ಸಿ.ಎಚ್ ಹಾಗೂ ವಿರಾಜಪೇಟೆ ತಾಲ್ಲೂಕಿನ ಗುಂಡಿಗೆರೆಯ ನಾಸೂರುದ್ದೀನ್ ಎಂ. ಯು ಬಂಧಿತರು. ಹೈಡ್ರೋ ಗಾಂಜಾ ಸಾಗಿಸುವ ಕೃತ್ಯಕ್ಕೆ ಬಳಸಿದ್ದ ಕಾರನ್ನು ಕೊಡಗು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಥೈಲ್ಯಾಂಡ್ ನ ಬ್ಯಾಂಕಾಕ್ ನಿಂದ ದುಬೈ ಮತ್ತು ಕೇರಳಕ್ಕೆ ಗಾಂಜಾ ಸಾಗಿಸುತ್ತಿದ್ದರಾದರೂ, ಬೆಂಗಳೂರಿನ ಏರ್ಪೋರ್ಟ್ ನಿಂದ ಕೊಡಗಿನ ಮೂಲಕ ಕೇರಳ ಹಾಗೂ ದುಬೈಗೆ ಸಾಗಿಸುತ್ತಿದ್ದರು. ಆದರೆ ದೇಶದ ಅಂತಾರಾಷ್ಟ್ರೀಯ ಏರ್ಪೋರ್ಟ್ಗಳಿಂದ ಹೈಡ್ರೋ ಗಾಂಜಾ ಸಾಗಾಟ ಆಗುತ್ತಿರುವುದೇ ಅಚ್ಚರಿಯ ಸಂಗತಿ. ಹಾಗಾದರೆ ಏರ್ಪೋರ್ಟ್ಗಳಲ್ಲಿ ಭದ್ರತಾ, ಸೆಕ್ಯೂರಿಟಿ ವೈಫಲ್ಯವಿದೆಯಾ ಎನ್ನುವುದು ಬಲವಾದ ಪ್ರಶ್ನೆ ಮೂಡುವಂತೆ ಮಾಡಿದೆ.

ಹೈಡ್ರೋ ಗಾಂಜಾ ಸಾಗಾಟ ನೋಡಿದ್ರೆ ವೈಫಲ್ಯ ಇರುವುದು ಖಚಿತ ಎನಿಸುತ್ತಿದೆ. ಬ್ಯಾಂಕಾಕ್ ನಲ್ಲಿ ಕೆಫೆ ನಡೆಸುತ್ತಿರುವ ಕೇರಳದ ಮಹಮ್ಮದ್ ಅನೂಫ್, ಕಾಸರಗೋಡಿನ ಮೆಹರೂಫ್ ಮೂಲಕ ಕೊಡಗಿನ ವಿರಾಜಪೇಟೆಯ ರವೂಫ್ ನನ್ನು ಪರಿಚಯಿಸಿಕೊಂಡಿದ್ದನಂತೆ. ರವೂಫ್ ನ ಮೂಲಕ ಬ್ಯಾಂಕಾಕ್ ನಿಂದ ಕೇರಳಕ್ಕೆ ಅಲ್ಲಿಂದ ದುಬೈಗೆ ಹೈಡ್ರೋ ಗಾಂಜಾ ಸಾಗಿಸುತ್ತಿದ್ದರು. ಆದರೆ ಬೆಂಗಳೂರಿನ ಅಂತಾರಾಷ್ಟ್ರೀಯ ಏರ್ಪೋರ್ಟ್ ನಿಂದ ಹೈಡ್ರೋ ಗಾಂಜಾ ಬರುತ್ತಿದ್ದು ಹೇಗೆ ಎನ್ನುವುದೇ ಅಚ್ಚರಿಯ ಪ್ರಶ್ನೆ. 

ಬೆಂಗಳೂರು: ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಯತ್ನ, ಡ್ರಗ್ ಪೆಡ್ಲರ್ ಬಂಧನ..!

ದುಬೈಗೆ ಸಾಗಾಟವಾಗುತ್ತಿದ್ದ ಹೈಡ್ರೋ ಗಾಂಜಾವನ್ನು ಅಲ್ಲಿನ ಸೆಲೆಬ್ರಿಟಿಗಳಿಗೆ ಹಾಗೂ ಡಿಜೆ ಪಾರ್ಟಿಗಳಲ್ಲಿ ಸೇಲ್ ಮಾಡುತ್ತಿದ್ದರಂತೆ. ವಿರಾಜಪೇಟೆಯ ರವೂಫ್ ಬ್ಯಾಂಕಾಕ್ ಗೆ ಹೋಗಿ ಸೆಪ್ಟೆಂಬರ್ 23 ರಂದು ರಾತ್ರಿ 11.30 ಕ್ಕೆ ಬೆಂಗಳೂರು ಏರ್ಪೋರ್ಟಿಗೆ ಗಾಂಜಾ ತಂದಿದ್ದನಂತೆ. ಬಳಿಕ ಅಲ್ಲಿಂದ ಕಾರಿನ ಮೂಲಕ ಕೊಡಗಿನ ಪೊನ್ನಂಪೇಟೆಗೆ ಸಾಗಿಸಿ ಅಲ್ಲಿ ಗಾಂಜಾ ಇರಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ ಒಂದೆಡೆ ಇದ್ದರೆ ಅನುಮಾನ ಬರಬಹುದೆಂದು ಖತರ್ನಾಕ್ಗಳು ಜಿಲ್ಲೆಯಲ್ಲಿ ಸುತ್ತಾಡುತ್ತಿದ್ದರಂತೆ. ಮುಂದೆ ಏನು ಮಾಡಬೇಕೆಂದು ಕೇರಳದ ಮೆಹರೂಫ್ನ ನಿರ್ದೇಶನಕ್ಕೆ ಆರೋಪಿಗಳು ಕಾಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಆಧರಿಸಿದ ಮಡಿಕೇರಿ ಪೊಲೀಸರು ಸೆಪ್ಟೆಂಬರ್ 28 ರಂದು ಮಧ್ಯರಾತ್ರಿ ದಾಳಿ ಮಡಿಕೇರಿ ಸಮೀಪದಲ್ಲಿ ಕೊಡಗಿನ ಐವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದರಿಂದ ಅಂತಾರಾಷ್ಟ್ರೀಯ ಪೆಡ್ಲರ್ಗಳು ಪತ್ತೆಯಾಗಿದ್ದಾರೆ. ಜೊತೆಗೆ ಪ್ರಮುಖ ಪೆಡ್ಲರ್ ಆದ ಕೇರಳದ ಮೆಹರೂಫ್ ಕೇರಳದಿಂದ ಥೈಲ್ಯಾಂಡಿಗೆ ಪುನಃ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. 

ಈ ವಿಷಯ ತಿಳಿಯುತ್ತಿದ್ದಂತೆ ಕೊಡಗಿನ ಪೊಲೀಸರು ಎಚ್ಚೆತ್ತುಕೊಂಡು ಕೊಚ್ಚಿ ವಿಮಾನ ನಿಲ್ದಾಣದಿಂದಲೇ ಮೆಹರೂಫ್ ನನ್ನು ಬಂಧಿಸಿದ್ದಾರೆ. ಸಿನಿಮೀಯ ಮಾದರಿಯಲ್ಲಿ ಸತತ 72 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

click me!